
ಮೇಲೆ ಮುಗಿಲು ಕೆಳಗೆ ಕಡಲು ನಡುವೆ ಎಂಥ ಮಾಯೆ ಗುಡುಗು ಮಿಂಚು ಮಳೆ ಜೀವ ಕಳೆ ಜಗದ ಬೆಲೆ ಎಲ್ಲ ಇದರ ಹೆಗಲ ಮೇಲೆ *****...
ಅಂಬರದಿ ಎಷ್ಟೇ ತಾರೆಗಳು ಬಂದರೂ ಚಂದ್ರಿಕೆ ನೀನೊಬ್ಬಳು ಬರದಿರೆ ಹರಿಸಲಾರವು ಭುವಿಗೆ ಹಾಲು ಬೆಳಕಿನ ಹೊನಲು. *****...
ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು ಬೆಳ್ಳಿಯ ಮೋಡವು ಹಸುರಿನ ಬೆಟ್ಟವ ಚುಂಬಿಸುತಿರುವ ಗಿ...
“ಎಲ್ಲವೂ ಮುಳುಗಿಹೋಯಿತೆ?” ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು...
ವರದಕ್ಷಿಣೆ ತೆಗೆದುಕೊಂಡರೆ ಮಾವನತ್ರ ಪ್ರದಕ್ಷಿಣೆ ಹಾಕುತ್ತೀರಾ ಮಾವನ ಮಗಳತ್ರ *****...
ಕಾಯುವುದೊಂದು ಕಾಯಕ ಹಾಲು ಕಾಯುವುದು ಊಟಕ್ಕೆ ಕಾಯುವುದು ಬಸ್ಸಿಗಾಗಿ ಕಾಯುವುದು ಹಣ ದೊರೆಯುವುದೆಂದು ಚಳಿ ಬೇಗ ಮುಗಿಯಲೆಂದು ಮಳೆ ಚೆನ್ನಾಗಿ ಸುಲಿಯಲೆಂದು ಕೊನೆಗೆ ಅವರಿವರನ್ನು ಕಂಡು ಮನಸ್ಸಿನಲ್ಲೇ ಕಾದು ಹೋಗುವುದು. ಇದೆಲ್ಲದಕ್ಕಿಂತ ಚೆನ್ನ ನಿನ್...
ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ? ತಡೆಗಟ್ಟಿ ತನ್ನ...
ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿ...
ಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು. *****...
ಚಿಲುಮೆ ಕ್ಲಬ್ ಹೌಸ್ ಪ್ರಸ್ತುತ ಪಡಿಸುವ “ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ ನಮ್ಮೊಂದಿಗೆ : ಎ. ಎನ್ ರಮೇಶ್ ಗುಬ್ಬಿ 2022ರ ಮಾರ್ಚ್ 19 ಶನಿವಾರ ಸಾಯಂಕಾಲ 7:30 ಗಂಟೆಗೆ ಬನ್ನಿ ಪಾಲ್ಗೊಳ್ಳಿ ಕಾರ್ಯಕ್ರಮದ ಲಿಂಕ್ 👇 https://ww...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
















