#ವ್ಯಕ್ತಿ

ಇನ್ನೊಮ್ಮೆ ಅಡಿಗರು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್ಯಕ್ಕೆ ಅಡಿಗರ ಕೊಡುಗೆ ಎಂಬ ವಿಷಯವಾಗಿ ಇಂಗ್ಲಿಷ್ನಲ್ಲಿ ಲೇಖನ ಬರೆದಿದ್ದು, ಅದರ ಕನ್ನಡ ಭಾಷಾಂತರ (ಜಿ. ಎನ್. ರಂಗನಾಥ ರಾವ್) ಹಲವೆಡೆ […]

#ವ್ಯಕ್ತಿ

ಮಾವೊ : ನೂರು ವರ್ಷದ ನೆನಪು

0

ಚೀನಾದಲ್ಲಿ ಅದ್ಭುತ ಬದಲಾವಣೆ ತಂದು ಸಮತಾ ಸಮಾಜದ ತಾತ್ವಿಕ ತಿರುಳಿಗೆ ಜೀವ ಕೊಟ್ಟ ಧೀಮಂತ ನಾಯಕ ಮಾವೋತ್ಸೆತುಂಗ್ ಅವರ ಜನ್ಮ ಶತಾಬ್ದಿಯ ವರ್ಷ ೧೯೯೪. ಜನ್ಮ ಶತಾಬ್ದಿಯ ಸನ್ನಿವೇಶ ವಿಚಿತ್ರವಾಗಿದೆ. ಚೀನಾದಲ್ಲಿ ಮಾರುಕಟ್ಟೆ ಆರ್ಥಿಕ ನೀತಿ ಅನುಷ್ಠಾನಕ್ಕೆ ಬಂದಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಸೋವಿಯತ್ ಯೂನಿಯನ್ ವಿಘಟನೆ ಗೊಂಡಿದೆ. ಪ್ರಪಂಚದಲ್ಲಿ ಮಾರ್ಕ್ಸ್‌ವಾದದ ಕತೆ ಮುಗಿಯಿತೆಂದು ಅನೇಕರಿಗೆ ಭ್ರಮಾತ್ಮಕ […]

#ವ್ಯಕ್ತಿ

ತಸ್ಲೀಮಾ ಪ್ರಕರಣ

0

ಬಾಂಗ್ಲಾದೇಶದ ಬೀದಿಗಳಲ್ಲಿ ಬೆಂಕಿ ಬಿದ್ದಿದೆ. ಈ ಬೆಂಕಿ ನಕಾರಾತ್ಮಕ ಉರಿಯನ್ನು ಹರಡುತ್ತ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರ ಪ್ರಾಣವನ್ನು ಕೇಳುತ್ತಿದೆ. ಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಸಿದ್ಧರಾದ ಧಾರ್ಮಿಕ ಮೂಲಭೂತವಾದಿಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ಅಂತಿಮ ಗುರಿ ಪ್ರಾಣವೇ ಆಗಿರುತ್ತದೆ. ಬೀದಿಯಲ್ಲಿ ಬೆಂಕಿ ಹಾಕಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಯಸುವವರು ಬೇರೇನನ್ನೂ ಕೇಳಲು ಸಾಧ್ಯವಿಲ್ಲ. ಬೀದಿಯಲ್ಲಿ ಬದುಕು […]

#ವ್ಯಕ್ತಿ

ಕಪ್ಪು ಜನರ ವಿಜಯ

0

ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು ಬಣ್ಣವನ್ನು ಕಳಂಕವೆಂಬಂತೆ ಕಾಣುವ ನಮ್ಮ ದೇಶವನ್ನು ಒಳಗೊಂಡಂತೆ ಜಗತ್ತಿನ ಸ್ವಾತಂತ್ರ್ಯ ಪ್ರಿಯರೆಲ್ಲ ಈ ಕಪ್ಪು ವಿಜಯಕ್ಕೆ ಸಂಭ್ರಮಿಸುತ್ತಿದ್ದಾರೆ. ಬಿಳಿಯರ ಆಳ್ವಿಕೆ ಕೊನೆಗೊಂಡದ್ದಕ್ಕಾಗಿ ಖುಷಿಪಡುತ್ತಿದ್ದಾರೆ. ತಮ್ಮ ಹೋರಾಟದ ಫಲವಾಗಿ […]

#ವ್ಯಕ್ತಿ

ಬಂಡಾಯದ ‘ನೀಲಾಂಜನ’ ಚಂದ್ರಲೇಖ

0

‘ಆಕೆಯನ್ನು ಬೇರೆ ಯಾವೊಬ್ಬ ಮಹಿಳೆಯೊಂದಿಗೂ ಗುರ್ತಿಸಲು ಸಾಧ್ಯವಿಲ್ಲ’. ಹೊಸ ವರ್ಷದ ಸೂರ್ಯೋದಯಾಕ್ಕೆ ಕೆಲ ತಾಸುಗಳ ಮುಂಚೆ (೨೦೦೬ರ ಡಿ.೩೦ರ ರಾತ್ರಿ) ತಮ್ಮ ಬದುಕಿಗೆ ಮತ್ತು ಬದುಕಿನಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದ ನೃತ್ಯಕ್ಕೆ ಕೊನೆಯ ನಮಸ್ಕಾರ ಹೇಳಿದ ನೃತ್ಯಗಾರ್‍ತಿ ಚಂದ್ರಲೇಖ ಅವರ ಬಗ್ಗೆ ಹಿರಿಯ ಪತ್ರಕರ್ತ ಖುಷ್ವಂತ್‍ಸಿಂಗರ ಉದ್ಗಾರವಿದು. ಖುಷ್ಟಂತ್ ಮಾತು ಉತ್ಪ್ರೇಕ್ಷೆಯದಲ್ಲ. ಕೇವಲ ನೃತ್ಯಗಾರ್‍ತಿ ಮಾತ್ರವಾಗಿದ್ದರೆ ಖುಷ್ವಂತ್ […]

#ವ್ಯಕ್ತಿ

ಅಮರ ಕಲಾವಿದ ಸಪ್ದರ

0

ಹೊಸ ವರ್ಷದ ಹರುಷವನ್ನು ಸ್ವಾಗತಿಸುತ್ತಾ, ಸ್ವಾದಿಸುತ್ತಾ ದೆಹಲಿಯ ಸಮೀಪದ ಸಾಹಿ ಬಾಬಾದಲ್ಲಿ ಜನನಾಟ್ಯ ಮಂಚ ತಂಡದ ‘ಹಲ್ಲಾ ಬೋಲಾ’ ನಾಟಕದ ಹಾಸ್ಯಮಯ ದೃಶ್ಯ ವೀಕ್ಷಿಸುತ್ತಾ ಕಲೆಯ, ಅಭಿನಯದ ಸವಿ ಸವಿಯುತ್ತಲಿದ್ದ ಪ್ರೇಕ್ಷಕರ ಮಧ್ಯೆ ಒಮ್ಮೆಲೇ ಕ್ರೂರ ಮೃಗಗಳಂತೆ ದಾಳಿಯಿಟ್ಟ ಕೆಲ ಧಾಂಡಿಗರ ಅನಾಗರಿಕ ವರ್ತನೆ. ಅಲ್ಲೆಲ್ಲಾ ಹರಡಿ, ಮಾನವೀಯತೆ ಕಾಲಲ್ಲಿ ತುಳಿದ ಸಮಾಜಘಾತುಕ ಗೂಂಡಾಗಳಿಗೆ ಬಲಿಯಾಗಿ, […]

#ವ್ಯಕ್ತಿ

ಕೆಂಡದ ಕರುಳು ಕಪಿಲ್‍ದೇವ್

0

ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ ಬಯಸಿದ್ದ ಕಪಿಲ್, ಮನೋಜ್ ಪ್ರಭಾಕರ್ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಸೇರಿಕೊಳ್ಳುವುದು ಅನಿವಾರ್ಯವಾದರೆ ಆಡಲು ಸಿದ್ಧವಿರುವುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ಜಿ. ಆರ್. ವಿಶ್ವನಾಥ್ ಅವರಿಗೆ ತಿಳಿಸಿದ ನಂತರ […]

#ವ್ಯಕ್ತಿ

ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

0

೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ ಚುನಾವಣೆ ಕನ್ನಡ ಜನರಿಗೆ ಹಾಗಾಗಿರಲಿಲ್ಲ. ಕಳೆದ ಮೈತ್ರಿ ಸರ್ಕಾರ ಬಹಳ ಚೆನ್ನಾಗಿತ್ತು. ಆದರೆ ಅವರಿತ್ತ ಸೂಚನೆಗಳು ಸಮರ್ಪಕವಾಗಿರಲಿಲ್ಲ ಮತ್ತು ಕನ್ನಡ […]

#ವ್ಯಕ್ತಿ

ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು

0

ಬೆಂಗಳೂರಿನ ಉದ್ದಗಲಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್‍ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿದ್ದ ನಿಟ್ಟೂರರ ವ್ಯಕಿತ್ವದ ಕುರಿತು ಕೆಲವು ಟಿಪ್ಪಣಿಗಳು. ಬುದ್ಧ ಎನ್ನುವ ಮನುಷ್ಯನ ಮುಗುಳು ನಗೆಗೆ ಸಾಮ್ರಾಜ್ಯಗಳನ್ನು ಆಳುವ ಕತ್ತುಗಳು ಹಾಗೂ ಕತ್ತಿಗಳು ತಲೆ ಬಾಗುತ್ತಿದ್ದವು. ಗಾಂಧಿ ಎನ್ನುವ ನರಪೇತಲ […]

#ವ್ಯಕ್ತಿ

ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ

0

ಚಿತ್ರದುರ್ಗ ಎಂದ ಕೂಡಲೇ ಆಲ್ಲಿನ ಕಲ್ಲಿನ ಕೋಟೆ, ಒನಕೆ ಓಬವ್ವ ಹಾಗೂ ಮದಕರಿ ನಾಯಕ ನೆನಪಾಗುತ್ತಾರೆ. ದುರ್ಗದ ರಾಜಕೀಯದ ಒಳಸುಳಿ ಕಣ್ಣಲ್ಲಿ ಚಿತ್ರಗಳಾಗುತ್ತವೆ. ಆಮೇಲೆ? ಇನ್ನೂ ಇವೆ: ಎಲೆ ಮರೆಯ ಮರದಂತೆ ದುರ್ಗದ ಕೀರ್ತಿ ಪತಾಕೆಯನ್ನು ಸಾಕಷ್ಟು ಮಂದಿ ಎತ್ತಿ ಹಿಡಿದಿದ್ದಾರೆ. ಅಂತಹವರಲ್ಲಿ ಮುಲ್ಕಾ ಗೋವಿಂದ ರೆಡ್ಡಿ ಪ್ರಮುಖರು. ಆರು ದಶಕಗಳಿಗೂ ಹೆಚ್ಚು ಕಾಲ ರಾಜ್ಯ […]