ಕವಿತೆ

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು ಬೆಳ್ಳಿಯ ಕೋಲ್ ಮಿಂಚು ಬೆಳ್ಳಿ ಕುದುರೆ ಏರಿ ಬಂದಾನೆ ನನ್ನ ಸರದಾರ||ಽಽಽಽ ಮನಸು ಲಲ್ಲೆಯಾಡಕೊಂಡ್ಯಾವೆ ಅವನ ನೋಡಿ||ಽಽಽಽ ಅಂಬರದ ಹೊಂಬೆಳಕಲ್ಲಿ ಇಬ್ಬನಿಯ ತಂಪಲ್ಲಿ ಜೊತೆಗೂಡಿ […]

ದೀಪವಾಗು ಗೆಳೆಯ

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ […]

ಹೇ ರಾಮ್!

ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ…. ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ […]

ಅಪ್ಪ ಕೊಡಿಸಿದ ಅಂಗಿ

ಅದು ನನ್ನದಲ್ಲದ ಅಂಗಿ ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ. ಬಯಸಿದ್ದು ಕನವರಿಸಿದ್ದು ಅದಕ್ಕಾಗೇ ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು ಅಮ್ಮನ ತಕರಾರು. ಮುನಿಸಿಕೊಂಡೆ, ಮಾತು […]

ಸತ್ತವರಿಂದ ನಾವು ಬಯಸುವುದೇನನ್ನು?

ಬಸ್ಸಿನ ತುಂಬ ನೂಕು ನುಗ್ಗಲಿತ್ತು ಅಂಗಡಿ ಬೀದಿಗಳಲ್ಲೂ ಹಾಗೆಯೇ ಹಗಲಿಗೆ ಹೆಗಲು ತಾಗಿಸಿ ಅಲ್ಲೆಲ್ಲ ನೀವು ನಿಂತಿದ್ದಿರೆಂಬುದು ಗೊತ್ತು ಚಹದಂಗಡಿಯಲ್ಲಿ ಮೇಜಿನೆದುರು ಅಕಸ್ಮಾತ್ ಕೇಳುವಿರಿ ಬೆಂಕಿ ಮತ್ತದೇ […]

ಸುದ್ದವ್ವ

ಸುದ್ದವ್ವ ಈ ಊರವಳಲ್ಲ ವಲಸೆ ಬಂದ ಹುಡುಗಿ ಇಲ್ಲಿ ನಿಂತವಳೂ ಅಲ್ಲ ಊರೂರಲೆಯುವ ಚಪಲಿ; ಅವಳಿಗೆ ಮಿಂಡನೆ ತಂದೆ ರಂಡೆಯೆ ತಾಯಿ ಹುಟ್ಟಿದ ಕೂಡಲೆ ಫಟ್ಟನೊಡೆದುವಂತೆ ಮೈಯೆಲ್ಲ […]

ಗಾಳಿ ಬೀಸಲು

ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ […]

ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ ರಕ್ತ ಬಂತು ನಿನ್ನ ನೆನಪಾಗಿ ಹಿತ್ತಲದ ನಂದಿ ಬಟ್ಟಲು ಹೂಗಳು ಗಂಧ ಯಾಕೋ ಪರಿಮಳ ಸೂಸಲು ಕಣ್ಣುಗಳು […]

ಅರ್‍ಥವಾಗುತ್ತಿಲ್ಲ

ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ […]