ಮಲಯ ಪರ್ವತ ಮಧುರ ಬನದಲಿ
ಯಾರು ನಿನ್ನನು ಕರೆದರು
ಕಣ್ಣು ಕಾ೦ಚನ ಶಿವನ ಲಾಂಛನ
ದೇವ ಗುರುಗಳು ಬಂದರು
ಕಾಡು ಕಂದರ ಶಿಖರ ಸುಂದರ
ಹಸಿರು ಹೂವಿನ ದೇವರು
ಮೇಲೆ ಗಗನದ ಹನಿಯು ತೋರಣ
ಕಾಯ ಹರುಷವ ತಂದರು
ಹೊನ್ನ ಮುಕುಟಾ ಹಸಿರು ಬಾವುಟಾ
ವೀರಪೀಠದಿ ಮರೆವರು
ಮಾತು ಮಂತ್ರಾ ಶಬ್ದ ವೇದಾ
ನೋಟ ನಿಜಗುಣವಾದರು
ನನ್ನ ಬದುಕಿನ ಉರಿವ ಚಿಂತೆಯು
ಇಂದು ಶೀತಲವಾಯಿತು
ವೀರಸೋಮೇಶ್ವರನ ನಂದನ
ಯೋಗಮಂಚವ ತೂಗಿತು
*****
ಧ್ವನಿಸುರುಳಿ : ಗುರುಗಾನ ತರಂಗ
ಹಾಡಿದವರು : ನಂದಿತಾ
ಸ್ಟುಡಿಯೊ : ಅಶ್ವಿನಿ