ಪಾಪಿಯ ಪಾಡು – ೧೧

ಪಾಪಿಯ ಪಾಡು – ೧೧

ಈ ಸಮಯಕ್ಕೆ, ಮುಂದೆ ಕೋಸೆಟ್ಟಳ ಜೀವಮಾನದಲ್ಲಿ ವಿಶೇಷ ವಾಗಿ ಸಂಬಂಧಿಸುವ ಬಾಲಕನೊಬ್ಬನು ಪ್ಯಾರಿಸ್ ನಗರದಲ್ಲಿ ಬೆಳೆಯುತ್ತಿದ್ದನು. ಇವನ ಹೆಸರು ಮೋರಿಯಸ್ ಪಾಂಟ್ ಮರ್ಸಿ ಎಂದು. ಇವನು ಎಂ. ಜಿಲ್ಲೆ ನಾರ್ಮಂಡ್ ಎಂಬ ವೃದ್ಧನ ದೌಹಿತ್ರನು. ಈ ಹುಡುಗನ ತಾಯಿಯು ಸತ್ತುಹೋಗಿದ್ದಳು. ಹುಟ್ಟಿದಂದಿನಿಂದ ತಂದೆಯ ವಿಷಯವನ್ನೇ ಇವನು ಅರಿಯನು. ಹೇಗೆಂದರೆ, ಇವನ ತಂದೆಯೂದ ಎಂ. ಪಾಂಚ್ ಮರ್ಸಿಯು ಫ್ರೆಂಚ್ ರೆವೊಲ್ಯೂಷನ್ ಎಂಬ ಫ್ರಾನ್ಸ್ ದೇಶದ ರಾಜ್ಯವಿಪ್ಲವದಲ್ಲಿ ನೆಪೋಲಿಯನ್ನನ ಸಕ್ಷವಾಗಿ ಯುದ್ಧ ಮಾಡಿದ್ದನು. ಅವನ ತಾತ ನಾದರೋ ರಾಜ ಸುಭತ್ವವನ್ನೇ ಪ್ರಬಲವಾಗಿ ಅನುಮೋದಿ ಸುತ್ತಿದ್ದನು. ಪಾಂಟ್ ಮರ್ಸಿಯು, ನೆಪೋಲಿಯನ್ನನ ಯುದ್ದ ಪ್ರಕರಣಗಳನೇಕಗಳಲ್ಲಿ ಯುದ್ಧ ಮಾಡಿ ಪ್ರಸಿದ್ದಿಗೆ ಬಂದಿದ್ದನು. ಇದರ ಪ್ರತಿಫಲವಾಗಿ ಇವನಿಗೆ ಬ್ಯಾರನ್ ‘ ಎಂಬ ರಾಜ ಕೀಯ ಪದವಿಯು ದೊರೆತಿದ್ದಿತು. ವಾಟರ್ಲೂ ಕದನದಲ್ಲಿ ಇವನಿಗೆ ಬಹಳ ಗಾಯವಾಗಿ ಹೆಣಗಳ ರಾಶಿಯ ಕೆಳಗೆ ಸಿಕ್ಕಿಬಿ ದ್ವಿದ್ದನು. ಆ ರಾತ್ರಿ, ಯುದ್ಧರಂಗದಲ್ಲಿ ಒಬ್ಬ ಸೇನೆಯ ಕಳ್ಳನ್ನು, ಸಿಕ್ಕಿದುದನ್ನು ದೋಚಿಕೊಂಡು ಹೋಗಲು ಹೆಣಗಳ ನಡುವೆ ಸಂಚರಿಸುತ್ತಿದ್ದನು. ಅವನು ಅಲ್ಲಿ ಹರಿಯುತ್ತಿದ್ದ ರಕ್ತ ಪ್ರವಾಹ ದಲ್ಲಿಯೇ ನಡೆಯುತ್ತ ಭಯಂಕರವಾದ ಹೆಣಗಳ ರಾಶಿಯ ನಡುವೆ ಬರುತ್ತಿರುವಾಗ ತಟ್ಟನೆ ನಿಂತನು.

ಇವನ ಮುಂದೆ ಸ್ವಲ್ಪ ದೂರದಲ್ಲಿ ಆ ಮನುಷ್ಯರ ಮತ್ತು ಕುದುರೆಗಳ ರಾಶಿಯ ತಳದಿಂದ, ನೀಡಿದ ತೋಳು ಅಂಗೈ ತೆರೆ ದಿದ್ದುದು ಬೆಟ್ಟಿಂಗಳ ಬೆಳಕಿನಲ್ಲಿ ಕಂಡುಬಂದಿತು.

ಈ ಕೈಯ ಒಂದು ಬೆರಳಿನಮೇಲೆ, ಏನೋ ಥಳಥಳನೆ ಹೊಳೆಯುತ್ತಿದ್ದಂತೆ ಕಂಡಿತು. ಅದು ಒಂದು ಚಿನ್ನದ ಉಂಗುರ.

ಆ ಕಳ್ಳನು ಕೆಳಕ್ಕೆ ಬಗ್ಗೆ ಒಂದು ಕ್ಷಣಮಾತ್ರ ಹಾಗೆಯೇ ನಿಂತಿದ್ದನು. ಅವನು ಪುನಃ ಮೇಲಕ್ಕೆ ಎದ್ದಾಗ ಆ ಬೆರಳಿನಲ್ಲಿ ಉಂಗುರವೇ ಇರಲಿಲ್ಲ. ಈ ಸಮಯಕ್ಕೆ ತಟ್ಟನೆ ಅವ ನಿಗೆ ಏನೋ ಧಕ್ಕೆ ಬಡಿದಂತಾಯಿತು. ಹಿಂದಣಿಂದ ಯಾರೋ ಅವನನ್ನು ಹಿಡಿದುಕೊಂಡಂತೆ ತೋರಿತು. ಹಿಂದಕ್ಕೆ ತಿರುಗಿದನು. ಹಿಂದೆ ಅವನು ನೋಡಿದ ಆ ಕೈಯೇ ಅವನ ನಿಲುವಂಗಿಯ ಒಂದು ಕಡೆಯ ಅಂಚನ್ನು ಬಲವಾಗಿ ಹಿಡಿದಿತ್ತು. ಸತ್ಯವಂತ ನಾಗಿದ್ದರೆ ಅವನಿಗೆ ಬಹಳ ಭಯವಾಗುತ್ತಿತ್ತು. ಇವನಾದರೋ ನಗುವುದಕಾರಂಭಿಸಿದನು.

‘ಓಹೋ ! ಸತ್ಯ ಮನುಷ್ಯನು ತಾನೇ ! ಸಿಪಾಯಿ ಗಿಂತಲೂ ದೆವ್ವವನ್ನು ಕಂಡರೆ ನನಗೆಷ್ಟೋ ಸಂತೋಷ ! ‘ ಎಂದು ಕೊಂಡನು. ಹೇಗಾದರೂ, ಆ ಕೈಯು ಸಡಿಲವಾಗಿ ಕಳಚಿ ಅವನನ್ನು ಬಿಟ್ಟುಬಿಟ್ಟಿತು. ಆಗ ನಿಶಾಚರನು, ‘ ಆಹಾ ! ಈ ಸತ್ತ ಮನುಷ್ಯನ ಬದುಕಿ ಬಂದಿರುವನೇ ? ಆಗಲಿ ನೋಡೋಣ,’ ಎಂದು ಹಿಂದಕ್ಕೆ ಬಂದನು.

ಅವನು ಮತ್ತೆ ಬಗ್ಗಿ, ಹೆಣಗಳ ರಾಶಿಯಲ್ಲಿ ತಡಕುತ್ತ, ಅವನ ಕೈಗೆ ಅಡ್ಡಿಯಾಗಿ ಸಿಕ್ಕಿದುದನ್ನೆಲ್ಲವನ್ನೂ ಆಚೆಗೆ ನೂಕಿ, ಆ ಕೈಯನ್ನು ಹಿಡಿದು ತೋಳನ್ನೆತ್ತಿ, ಆ ಶರೀರವನ್ನು ಹೊರಕ್ಕೆ ಎಳೆದುಕೊಂಡನು. ಆ ಶರೀರವ ಒಬ್ಬ ಮೆಲು ದರ್ಜೆಯ ಅಧಿಕಾರಿಯಾಗಿದ್ದಿತು. ಭಯಂಕರವಾದ ಕತ್ತಿಯ ಪಟ್ಟಿನಿಂದ ಆ ಮುಖದ ಆಕಾರವೇ ಕೆಟ್ಟು ಹೋಗಿತ್ತು. ಅದರಿಂದ ಅಲ್ಲಿ ರಕ್ತವಲ್ಲದೆ ಮತ್ತೇನೂ ಕಾಣುತ್ತಿರಲಿಲ್ಲ. ಹೇಗಾದರೂ ಅವನ ಯಾವ ಅಂಗವೂ ಮುರಿದಿದ್ದಂತೆ ಕಾಣಲಿಲ್ಲ. ಏನೋ ಅಕಸ್ಮಿಕ ಸಂಭವದಿಂದ, ಇತರ ಹೆಣಗಳ ಶರೀರಗಳು ಇವನ ಮೇಲೆ ಬಿಲ್ಲಿ ನಂತೆ ಬಾಗಿ ಬಿದ್ದಿದ್ದ ಕಾರಣ ಇವನ ಶರೀರವು ಜಜ್ಜಿ ಹೋಗದೆ ಸರಿಯಾಗಿರಲವಕಾಶವಾಗಿತ್ತು. ಅವನ ಕಣ್ಣುಗಳು ಮುಚ್ಚಿದ್ದುವು. ಆ ಸಂಚಾರಿಯ ಅಧಿಕಾರಿಯ ಜೇಬಿಗೆ ಕೈಯಿಟ್ಟು ತಡಕಲು ಅದರಲ್ಲಿ ಒಂದು ಗಡಿಯಾರವು ಸಿಕ್ಕಿತು, ಅದನ್ನು ತೆಗೆದುಕೊಂಡು ಅವನ ಒಳ ಅಂಗಿಯನ್ನು ಶೋಧಿಸಿ ನೋಡಲು, ಅದರಲ್ಲಿ ಒಂದು ಹಣದ ಚೀಲವು ಸಿಕ್ಕಿತು. ಅದನ್ನೂ ತೆಗೆದು ತನ್ನ ಜೇಬಿಗೆ ಸೇರಿಸಿದನು. ಆಗತಾನೆ ಅಧಿಕಾರಿಯು ಕಣ್ಣನ್ನು ತೆರೆದು, ಬಲಹೀನ ಸ್ವರದಿಂದ, ‘ನಿನಗೆ ಒಳ್ಳೆಯದಾಗಲಿ,’ ಎಂದನು.

ಅವನನ್ನು ಹಿಡಿದೆತ್ತಿದ ಮನುಷ್ಯನು ಅವನ ದೇಹವನ್ನು ಒರಟೊರಟಾಗಿ ಎಳೆದುದರಿಂದ ರಾತ್ರಿಯ ತಂಗಾಳಿಯಿಂದಲೂ, ಅವನು ನಿರಾತಂಕವಾಗಿ ನಿರ್ಮಲಿ ವಾಯುವನ್ನು ಉಚವಚ್ಛ್ವಾಸಿಸಿ ದುದರಿಂದ ಅವನಿಗೆ ಸ್ವಲ್ಪ ಚೇತನವುಂಟಾಯಿತು.

ಆ ಸಂಚಾರಿಯು ಅವನಿಗೆ ಉತ್ತರವನ್ನೇ ಹೇಳಲಿಲ್ಲ. ತಲೆ ಯನ್ನು ಮಾತ್ರ ಮೇಲಕ್ಕೆ ಎತ್ತಿದನು. ಜನರ ನಡಿಗೆಯ ತಬ್ಬವು ಮೈದಾನದ ಮೇಲಣಿಂದ ಕೇಳಿಸುತ್ತಿದ್ದಿತು. ಬಹುಶಃ ಅದು. ಸಮೀಪಕ್ಕೆ ಬರುತ್ತಿದ್ದ ಕಾವಲು ಸಿಪಾಯಿಗಳ ಹೆಜ್ಜೆಯ ಸದ್ದಾಗಿರಬಹುದು. ಆ ಅಧಿಕಾರಿಯ ಸ್ವರದಲ್ಲಿ ಇನ್ನೂ ನರಳುವ ಚಿಹ್ನೆಗಳು ತೋರಿಬಂದುವು. ಅವನ್ನು, ‘ಯುದ್ದದಲ್ಲಿ ಯಾರು ಗೆದ್ದರು ? ‘ ಎಂದು ಗೊಣಗಿದನು.

ಇಂಗ್ಲಿಷರು,’ ಎಂದು ಆ ಕಳ್ಳನು ಹೇಳಿದನು. ಅದಕ್ಕೆ ಅಧಿಕಾರಿಯು, ‘ ನನ್ನ ಜೇಬುಗಳಲ್ಲಿ ಹುಡುಕು. ಒಂದು ಹಣದ ಚೀಲವೂ ಒಂದು ಗಡಿಯರವೂ ಸಿಕ್ಕುವವು. ಅವುಗಳನ್ನು ತೆಗೆದುಕೋ ‘ ಎಂದನು. ಈ ಕೆಲಸವನ್ನು ಅವನು ಮೊದಲೇ ಮಾಡಿದ್ದನು. ಆದರೂ ಮತ್ತೆ ಅವನ ಆಜ್ಞೆಯನ್ನು ನಡೆಯಿಸಿ ದಂತೆ ನಟಿಸಿ, ಹುಡುಕಿ, ‘ ಜೇಬುಗಳಲ್ಲಿ ಏನೂ ಇಲ್ಲ,’ ಎಂದನು. ಅದಕ್ಕೆ ಅಧಿಕಾರಿಯು, ‘ ಅಯ್ಯೋ ! ಯಾರೋ ಅವುಗಳನ್ನ ಪಹರಿಸಿರುವರು. ಇದ್ದಿದ್ದರೆ ಅವುಗಳನ್ನು ನೀನೇ ತೆಗೆದುಕೊಳ್ಳಬಹುದಾಗಿತ್ತು,’ ಎಂದನು. ಕಾವಲಿನ ಸಿಪಾಯಿಗಳ ಹೆಜ್ಜೆಯ ಶಬ್ಬವು ಬರಬರುತ್ತ ಇನ್ನೂ ಸ್ಪಷ್ಟವಾಗಿ ಕೇಳಿಬಂತು.

ಆಗ ಆ ಸಂಚಾರಿಯು, ” ಯಾರೋ ಬರುತ್ತಿರುವರು, ಎಂದು, ಹೊರಡಲುದ್ಯುಕ್ತನಾದನು. ಅಧಿಕಾರಿಯು ಬಹಳ ನೋವಿನಿಂದ ಒಂದು ತೋಳನ್ನೂರಿ ಎದ್ದು ಅವನನ್ನು ಹಿಡಿದು ನಿಲ್ಲಿಸಿ, ‘ ನೀನು ನನ್ನ ಪ್ರಾಣವನ್ನುಳಿ ಸಿರುವೆ, ನಿನ್ನ ಹೆಸರೇನು ?’ ಎಂದೆನು.

‘ ಥೆನಾರ್ಡಿಯರ್‌,’ ಎಂದು ಉತ್ತರವು ಬಂತು, ಆಗ ಆ ಅಧಿಕಾರಿಯು, “ಆ ಹೆಸರನ್ನು ನಾನೆಂದಿಗೂ ಮರೆಯುವುದಿಲ್ಲ ; ನೀನು ನನ್ನ ಹೆಸರನ್ನು ಜ್ಞಾಪಕದಲ್ಲಿಟ್ಟುಕೊ, ನನ್ನ ಹೆಸರು ಪಾಂಟ್ ಮರ್ಸಿ,’ ಎಂದನು.

ಪಾಂಟ್‌ಮರ್ಸಿಯು ಜೀವಿಸಿದ್ದನು. ಅವನ ಹೆಂಡತಿಯು ಒಬ್ಬ ಮಗನನ್ನು ಹೆತ್ತ ಸ್ವಲ್ಪ ದಿನಗಳಲ್ಲಿಯೇ ಸತ್ತುಹೋಗಿದ್ದಳು. ಪಾಂಟ ಮರ್ಸಿಯ ಮಾವನು ತನ್ನ ಮಗಳ ಮಗನಾದ ಮೇರಿಯಸ್ಸನನ್ನು ತನ್ನ ಪೋಷಣೆಗೆ ಕೊಡಬೇಕೆಂತಲೂ, ಹಾಗೆ ಕೊಡದಿರುವ ಭಾಗದಲ್ಲಿ ತಾನು ಅವನನ್ನು ತನ್ನ ದೌಹಿತ್ರ ನೆಂದು ಭಾವಿಸುವುದಿಲ್ಲವಾದುದರಿಂದ ತನಗೂ ಅವನಿಗೆ ಯಾವ ಸಂಬಂಧವೂ ಇರುವುದಿಲ್ಲವೆಂತಲೂ, ಹಠ ಹಿಡಿದು, ಖಂಡಿತವಾಗಿ ಹೇಳಿದನು, ಮಗುವಿನ ಮುಂದಣ ಅನುಕೂಲತೆಗಾಗಿ), ತಂದೆಯು ಆ ಮಗುವನ್ನು ಅವನ ತಾತನ ವಶಕ್ಕೆ ಒಪ್ಪಿಸಿದ್ದನು. ಈ ಹುಡುಗನು ತಂದೆಯ ವಿಷಯವೇನನ್ನೂ ಅರಿಯದೆಯೂ ತಿಳಿಯಬೇಕೆಂಬ ಕುತೂಹಲವಿಲ್ಲದೆಯೂ ದೊಡ್ಡವನಾದನು.

ಅವನಿಗೆ ಹದಿನೆಂಟು ವರ್ಷಗಳ ವಯಸ್ಸಾದಾಗ, ಪಾಂಟ್ ಮರ್ಸಿಯು ಮರಣಾವಸ್ಥೆಯಲ್ಲಿರುವನೆಂತಲೂ, ಅವನು ಮೇರಿ ಯಸ್ಸನನ್ನು ನೋಡಲಪೇಕ್ಷಿಸುತ್ತಿರುವನೆಂತಲೂ ಬರೆದ ಒಂದು ಪತ್ರವು ಬಂತು. ಆ ಮಾರನೆಯ ದಿನವೇ ಮೆರಿಯಸ್ಸನು ಹೊರಟು ತನ್ನ ತಂದೆಯು ವಾಸಿಸುತ್ತಿದ್ದ ಹಳ್ಳಿಗೆ ಬಂದನು. ಆದರೆ ಕಾರ್ಯವು ಮೀರಿಹೋಗಿತ್ತು. ಅವನ ತಂದೆಯು ಸತ್ತು ಹೋಗಿದ್ದನು. ತನ್ನ ಮಗನಿಗಾಗಿ ಪಾಂಟ’ ಮರ್ಸಿಯು ಇಟ್ಟಿ ದ್ದುದು ಒಂದು ಕಾಗದ ಮಾತ್ರವೇ ! ಅದರಲ್ಲಿ ಈ ಮುಂದೆ ಹೇಳುವ ಮೇರೆಗೆ ಬರೆದಿತ್ತು:

‘ನನ್ನ ಮಗನಿಗೆ – ಚಕ್ರವರ್ತಿಯು ವಾರ್ಟ ಯುದ್ಧ ರಂಗದಲ್ಲಿ ನನಗೆ ಬ್ಯಾರನ್ ಪದವಿಯನ್ನನುಗ್ರಹಿಸಿದನು. ನಾನು ನನ್ನ ರಕ್ತವನ್ನು ಬಸಿದು ಸಂಪಾದಿಸಿದ ಈ ಬಿರುದನ್ನು ಕುರಿತು ಪ್ರಭುತ್ವ ಪಕ್ಷದವರು ಒಪ್ಪದಿರುವ ಕಾರಣ ನನ್ನ ಮಗನು ಇದನ್ನು ವಹಿಸಿ ತನ್ನ ಹಕ್ಕನ್ನು ಸ್ಪಿರಸಡಿಸಿಕೊಳ್ಳಲಿ. ಅವನು ಆ ಪದವಿಗೆ ಅರ್ಹನಾಗಿರುವಂತೆ ನಡೆದುಕೊಳ್ಳಬೇಕೆಂಬುದನ್ನು ನಾನು ಹೇಳಬೇಕಾದುದಿಲ್ಲ. ಅಲ್ಲದೆ, ಆ ಕಾಗದದ ಹಿಂದುಗಡೆಯಲ್ಲಿ, ‘ಇದೇ ವಾರ್ಟ ಯುದ್ದದಲ್ಲಿ ಒಬ್ಬ ಅಧಿಕಾರಿಯು ನನ್ನ ಪ್ರಾಣವನ್ನುಳಿಸಿದನು. ಆತನ ಹೆಸರು ಥೆನಾರ್ಡಿಯರ್, ಸ್ವಲ್ಪ ದಿನಗಳ ಹಿಂದೆ ಆತನು ಪ್ಯಾರಿಸ್ ನಗರದ ಶಾಖಾ ನಗರಗಳಾದ ಚೆಲ್ಲಿಸ್ ಎಂಬ ಊರಿನಲ್ಲಿಯೋ ಅಥವಾ ಮಾಂಟ್ ಫಿಯರ್ ಮೆಯಿಲ್‌ ಎಂಬ ಊರಿನಲ್ಲಿ ಒಂದು ಚಿಕ್ಕ ಸತ್ತ್ರವನ್ನಿಟ್ಟು ಕೊಂಡಿದ್ದನೆಂದು ತೋರುವುದು. ನನ್ನ ಮಗನು ಥೆನಾರ್ಡಿಯರ ನನ್ನು ಸಂಧಿಸಿದುದೇ ಆದರೆ ಅವನಿಗೆ, ತನ್ನ ಕೈಯಿಂದ ಆದಷ್ಟು ಉಪಕಾರವನ್ನು ಮಾಡಲಿ, ‘ ಎಂಬ ಆಜ್ಞೆಯ ಇತ್ತು.

ತನ್ನ ತಂದೆಗಾಗಿ ಈ ಕಾವ್ಯವನ್ನು ಮಾಡಬೇಕೆಂದಿಲ್ಲ ದಿದ್ದರೂ, ಮನಷನ ಹೃದಯದಲ್ಲಿ ಸ್ವಾಭಾವಿಕವಾದ, ಸಾವಿನ ಸಂದರ್ಭದಲ್ಲಿ ಹುಟ್ಟುವ ಗೌರವದಿಂದ ಮೇರಿಯಸ್ಥನು ಈ ಕಾಗದವನ್ನು ತೆಗೆದಿಟ್ಟುಕೊಂಡನು.

ಮೇರಿಯಸ್ಸನು ಎಳೆಯ ಮಗುವಾಗಿದ್ದಾಗ ಪ್ಯಾರಿಸ್ ನಗರದಲ್ಲಿದ್ದ ಒಂದು ಪ್ರಾರ್ಥನಾಲಯಕ್ಕೆ (Church) ಅವನನ್ನು ಕರೆದುಕೊಂಡು ಬರುವ ಪದ್ಧತಿಯಿತ್ತು. ಇವನ ತಂದೆಯದ ಎಂ. ಪಾಂಟ್ ಮರ್ಸಿಯು ಆ ಸಮಯಕ್ಕೆ ಸರಿಯಾಗಿ, ತನ್ನ ಮಗನನ್ನು ನೋಡುವ ಉದ್ದೇಶದಿಂದ ಅಲ್ಲಿಗೆ ಬಂದು, ತನ್ನ ಮಗನಿಗೆ ತಿಳಿಯದಂತೆ ಇದ್ದು ಹೋಗುತ್ತಿದ್ದನೆಂದು ಆ ಪ್ರಾರ್ಥನಾಲಯದ ಪಾರುಪತ್ಯಗಾರನು ಆಕಸ್ಮಿಕವಾಗಿ ಮೇರಿಯಸ್ಸನಿಗೆ ತಿಳಿಸದೇ ಇದ್ದಿದ್ದರೆ, ಇವನಿಗೆ ತನ್ನ ತಂದೆಯ ವಿಷಯವೊಂದೂ ಜ್ಞಾಪಕ ವಿರುತ್ತಿರಲಿಲ್ಲ.

ಮೇರಿಯಸ್ಸನು ಎಂದಾದರೂ ಐಶ್ವರ್ಯವಂತನಾಗಿಯೂ ಸುಖಿಯಾಗಿಯ ಆಗಬೇಕೆಂಬ ಉದ್ದೇಶದಿಂದ, ಅವನ ತಂದೆಯು ತನ್ನ ಮಗನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡು ಸಂತೋಷ ಪಡ ಬೇಕೆಂಬ ಆಸೆಯನ್ನೂ ತೊರೆದಿದ್ದನೆಂದು ಆ ಪಾರುಪತ್ಯಗಾರನು ಮೇರಿಯಸ್ಸನಿಗೆ ಹೇಳಿದ್ದುದು ಮಾತ್ರವಲ್ಲದೆ, ಪಾಂಟ್ ಮರ್ಸಿಯು ನೆಪೋಲಿಯನ್ ಚಕ್ರವರ್ತಿಯ ಮುಖ್ಯ ಸೇನಾಪತಿಗಳಲ್ಲಿ ಒಬ್ಬ ನೆಂತಲೂ, ಸೈನ್ಯದಲ್ಲಿ ಹೆಸರುವಾಸಿಯನ್ನು ಪಡೆದಿದ್ದನೆಂತಲೂ ಹೇಳಿದನು.

ಆ ದಿನ ಮೊದಲಾಗಿ, ಮೇರಿಯಸ್ಕನು ತನ್ನ ತಂದೆಯ ವಿಷ ಯವಾದ ಲೇಖನಗಳಿಗಾಗಿ ವಿಧವಿಧ ವರ್ತಮಾನ ಪತ್ರಿಕೆಗಳ ಕಟ್ಟುಗಳನ್ನು ಹುಡುಕಿ ನೋಡಲಾರಂಭಿಸಿದನು. ಸ್ವಲ್ಪ ಕಾಲ ದಲ್ಲಿಯೇ ಅವನು ಆ ಮಹಾ ವೀರನನ್ನು ಗೌರವಿಸಿ ಪೂಜಿಸುವ ಪಿತೃಭಕ್ತನಾದುದಲ್ಲದೆ ಫ್ರಾನ್ಸ್ ದೇಶದ ಪ್ರಚಾಪ್ರತಿನಿಧಿ ಪ್ರಭು ತ್ವದ ಪಕ್ಷಪಾತಿಯಾದನು. ಇವನ ತಾತನಿಗೆ ಇದು ತಿಳಿದ ಕೂಡಲೇ ಆತನು ಇವನಿಗೆ ಮನೆಯನ್ನು ಬಿಟ್ಟು ಹೋಗುವಂತೆ ಆಜ್ಞೆ ಮಾಡಿದನು.

ಸುಖವೈಭವದಲ್ಲಿ ಬೆಳೆದಿದ್ದ. ಅವನು ಅಲ್ಲಿಂದ ಮುಂದೆ ಗತಿಯಿಲ್ಲದೆ ಕಷ್ಟ ಕೆಲಸಮಾಡಿ ಜೀವಿಸಬೇಕಾಯಿತು. ಹೇಗೋ ಜೀವನ ಮಾಡಿಕೊಂಡು ನಾಲ್ಕು ವರ್ಷಗಳ ಕಾಲದಲ್ಲಿ ಒಬ್ಬ ನ್ಯಾಯವಾದಿ (Lawyer) ಯಾಗುವ ಯೋಗ್ಯತೆಯನ್ನು ಸಂಪಾದಿಸಿದನು. ಈ ಕಾಲದ ಸುಮಾರಿನಲ್ಲಿ, ಇವನು ಲಕ್ಸಂಬರ್ಗ್‌ ತೋಟದಲ್ಲಿ ನಿತ್ಯವೂ ಸಂಚಾರ ಹೋಗುತ್ತಿದ್ದಾಗ ಅಲ್ಲಿ ಒಂದು ಕಲ್ಲು ಬೆಂಚಿನಮೇಲೆ ಪ್ರತಿ ದಿನವೂ ಒಬ್ಬ ಮುದುಕನೂ ಒಬ್ಬ ಸುಂದರಿಯಾದ ಕನೆಯ ಕುಳಿತಿದ್ದುದು ಇವನ ಗಮನಕ್ಕೆ ಬಿತ್ತು. ಈ ಮುದುಕನೇ ಜೀನ್’ ವಾಲ್ಜೀನನು. ಈಗ ಇವನು ಅಲ್ಟಿ ಮಸ್‌ ಫಾಚೆಲ್ ವೆಂಟ್ ಎಂದು ಹೆಸರಿಟ್ಟುಕೊಂಡಿದ್ದನು. ಆ ಕನ್ಯೆಯೇ ಕೋಸೆಟ್ಟಳು. ಅಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳು ಇವನ ಬಿಳಿಯ ಕೂದಲನ್ನು ನೋಡಿ ಇವನಿಗೆ ಮಾ. ಲೆಬ್ಲಾಂಕ್, ಎಂದರೆ ಮಹಾರಾಜ ಶ್ರೀ ಬಿಳಿಯಪ್ಪನವರು, ಎಂದು ಹೆಸರಿಟ್ಟರು. ಮೇರಿಯಸ್ಯನೂ ಕೋಸೆಟ್ಟಳೂ ಒಬ್ಬರನ್ನೊಬ್ಬರು ಒಂದು ಮಾತನಾಡದಿದ್ದರೂ ಅವರಲ್ಲಿ ಪರಸ್ಪರ ಮೊಹವು ಮಾತ್ರ ಬೇರೂರಿತ್ತು. ಮೇರಿಯಸ್ಸನು ಅವಳನ್ನು ನೋಡಿ ಸಂತೋಷ ಪಡುವ ಉದ್ದೇಶದಿಂದ ಮಾತ್ರವೇ ಪ್ರತಿನಿತ್ಯವೂ ತಪ್ಪದೆ ಆ ತೋಟಕ್ಕೆ ಹೋಗುತ್ತಿದ್ದನು. ಕಟ್ಟಕಡೆಗೆ ಅವನು, ತಾನು ಮೋಹಿಸಿರುವ ಕನೈಯು ಎಲ್ಲಿ ವಾಸಿಸುತ್ತಿರುವಳೆಂಬುದನ್ನು ನೋಡುವುದಕ್ಕಾಗಿ, ಅವರಿಬ್ಬರನ್ನೂ ಹಿಂಬಾಲಿಸಿ ಅವರ ಮನೆಗೆ ಹೋದನು. ಇದು ತಪ್ಪಾಯಿತು. ಇದರಿಂದ ಜೀನ್ ವಾಲ್ಜೀ ನನ ಮನಸ್ಸಿಗೆ ಭಯವುಂಟಾಯಿತು. ಅವನು ಕೋಸೆಟಳನ್ನು ಕರೆದುಕೊಂಡು ಆ ನಗರದ ಬೇರೆ ಬೀದಿಗೆ ಹೊರಟುಹೋದನು. ಅವನ ವಿಳಾಸವು ಯಾರಿಗೂ ತಿಳಿದಿರಲಿಲ್ಲ. ಮೇರಿಯಸ್ಸನು ನಿರಾಶನಾದನು. ಅನೇಕ ವಾರಗಳ ವರೆಗೆ ಅವನು ಮತ್ತೇನನ್ನೂ ಗಮನಿಸಿದೆ ಅವರನ್ನೇ ಹುಡುಕುತ್ತ ಬೀದಿ ಬೀದಿಯನ್ನೂ ಅಲೆದನು. ಅವನಿಗೆ ಸಿಕ್ಕಿದ ಸೂಚನೆಯು ಒಂದು ಕರ ವಸ್ತ್ರವು ಮಾತ್ರವೆ. ಅದನ್ನು ಒಂದು ದಿನ ಅವರು ಕಲ್ಲು ಬೆಂಚಿನ ಮೇಲೆ ಮರೆತು ಹೋಗಿದ್ದರು. ಅದರ ಮೇಲೆ ಯು. ಎಫ್. ಎಂಬ ಎರಡಕ್ಷರಗಳ ಗುರುತಿದಿ ತು. ಇದರಿಂದ ಅವಳ ಹೆಸರು ಅರಸೂಲ ಎಂದು ಮೊದಲಾಗಬಹುದೆಂದು ಫಕ್ಕನೆ ನಿರ್ಧರಿಸಿದನು.

ಈ ಕಾಲದಲ್ಲಿ, ಮೇರಿಯಸ್ಸನು ಬಡವರ ಗುಂಪಿನಲ್ಲಿ ಒಂದು ಬಾಡಿಗೆಯ (garret) ಕೊಠಡಿಯಲ್ಲಿ ವಾಸಮಾಡಿಕೊಂಡಿದ್ದನು. ಈ ಮನೆಯ ಇನ್ನೊಂದು ಭಾಗದಲ್ಲಿ ವಾಸಮಾಡಿಕೊಂಡಿದ್ದ ಜಾಂಡ್ರೆಟ್ ಎಂಬ ಸಂಸಾರದವರನ್ನು ಸ್ವಲ್ಪವೂ ಗಮನಿಸಿಯೇ ಇರಲಿಲ್ಲ. ಒಂದು ದಿನ ಆ ಸಂಸಾರದ ಯಜಮಾನನಿಂದ ಇವನಿಗೆ ಒಂದು ಪ್ರಾರ್ಥನಾ ಪತ್ರವು ಬಂತು. ಅದನ್ನು ಆ ಯಜಮಾನನ ಒಬ್ಬ ಹೆಣ್ಣು ಮಗಳು ತಂದು ಇವನಿಗೆ ಕೊಟ್ಟಳು. ಅವಳು ಹೊಟ್ಟೆ ಒಟ್ಟೆಗಳಿಗೆ ಗತಿಯಿಲ್ಲದೆ ಹಸಿವಿನಿಂದ ಕೃಶಳಾಗಿ ಹರಕು ಬಟ್ಟೆಗಳನ್ನಟ್ಟಿದ್ದುದನ್ನು ನೋಡಿ ಮೇರಿಯಸ್ಸನ ಎದೆಯೊಡೆಯು ವಂತಾಯಿತು. ಇವನು ಪ್ಯಾರಿಸ್ ನಗರದ ಓಣಿಗಳಲ್ಲಿದ್ದ ಪಾಪಿಗಳ ಪಾಡನ್ನು ಸಮೀಪದಲ್ಲಿದ್ದು ನೋಡಿದುದು ಇದೇ ಮೊದಲು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ
Next post ತೇರ ಕೋಲು (ಆಕಳು ಕಂಡಿರೇನೊಂದ)

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…