
ಜೀತ
ಕವನ: ಕಾವ್ಯಸಾಗರ, ಆಂತರ್ಯ, ಸಿಂಗಾರ, ಕೂರಂಬು
ಕಥಾ ಸಂಕಲನ: ಸುರಗಿ
ಮಕ್ಕಳ ಕಥಾ ಸಂಕಲನ: ಬೆಳ್ಳಿ ಬೆಳಕು, ಬೆಳ್ಳಿ ಚುಕಕ್ಕಿ, ಬೆಳ್ಳಕ್ಕಿ ಗೂಡು, ದುರ್ಯೋಧನನಿಗೆ ಗೊತ್ತೇ ಆಗಲಿಲ್ಲ
ಇತರೆ: ಮಹಾಬಲೇಶ್ವರ ಭಟ್ಟರು (ವ್ಯಕ್ತಿ ವಿಶೇಷ), ಮಹಾಬಲ (ಟಿ. ಮಹಾಬಲೇಶ್ವರ ಬಟ್ಟರ ಅಭಿನಂದನಾ ಗ್ರಂಥ), ಆಧುನಿಕ ವಚನಗಳು ಭಾಗ - ೧
ಭೀಮನಾಯಕನ ಮನೆಯಲ್ಲಿ ಗದ್ದಲವೋ ಗದ್ದಲ. ಹೆಣ್ಣುಮಕ್ಕಳ ಕೂಗಾಟ, ಅಳುವುದು, ಮಕ್ಕಳ ಚೀರಾಟದಿಂದ ಮನೆಯು ತುಂಬಿತ್ತು. ಅತ್ತು ಅತ್ತು ಎಲ್ಲರ ಮುಖವೂ ಊದಿ ಹೋಗಿತ್ತು. ಊರಿನ ದೊಡ್ಡ ಸಾಹುಕಾರನ ಕಾಲು ಹಿಡಿದುಕೊಂಡು “ನಮ್ಮಪ್ಪನ ಹೆಣ ಬಿಟ್ಟುಬಿಡ್ರಪ್ಪೋ, ಹೆಣಾನ ಸುಡುಗಾಡಿಗೆ ಒಯ್ಯಲು ಬಿಡ್ರಪ್ಪೋ” ಎಂದು ಹೊಯ್ಕೊಳ್ಳುತ್ತಿದ್ದರು; ಭೀಮನಾಯಕನ ಮಕ್ಕಳು. ಭೀಮನಾಯ್ಕನು ಸಾಹುಕಾರ ನಾಗಪ್ಪನ ಹತ್ತಿರ ಐವತ್ತು ವರ್ಷಗಳಿಂದ ಜೀತದಾಳಾಗಿದ್ದ. […]