ಅರುಣಗೀತ

Published on :

-೧- ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ ‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ! ಕುಚುಕದ ಅರೆಮರೆಗೆ ಊರ್ವಶೀವಕ್ಷ! ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ ಮಿಂಚಿ ಹೊಂಚುವ ಕಣ್ಣು, ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ ತಿನ್ನಲಿರಿಸಿದ ಹಣ್ಣು; ಒಂದರಿಂದೊಂದಕ್ಕೆ ಗೆರೆಯೆಳೆದ ಪಕ್ಷಕ್ಕೆ ಕೋಟಿ ಚಕ್ರವ್ಯೂಹ, ಜ್ಯಾಮಿತಿಯ ಉಸಿರು ಕಟ್ಟಿಸುವ, ಸಾಧಿಸಬರದ ಅಗಣಿತ ಪ್ರಮೇಯ. ಕ್ಷುದ್ರಗಳ ಮುಕ್ಕಿ ಸೊಕ್ಕಿದ ಬುದ್ಧಿ ಇಲ್ಲಿ. ಪೂರ ಕಕ್ಕಾಬಿಕ್ಕಿ, ಉಸಿರು ಕಟ್ಟಿದೆ ಹುಚ್ಚುನೆರೆಯಲ್ಲಿ ಸಿಕ್ಕಿ. ಯಾವುದೋ ಚಿಕ್ಕೆ ಮತ್ತಾವುದಕ್ಕೋ ಓಡಿ ಸುತ್ತು ಹಾಕುತ್ತ, ಯಾವ […]

ಗರ್ಭಗುಡಿಯ ಶಿಶು ಚೇತನ

Published on :

ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು ಬಾನ ಬೆಳಗುವ ಚಂದಿರನಂತೆ. ಅಣಿಮಾ ಮಹಿಮಾಳಾಗಿ ಸೀತೆಯಂತೆ ಬೆಳೆದು ನಿಂತಾಗ ಚೆಲುವಿಕೆ ಜವನಿಕೆಗೆ ಸಿರಿಕಳಸ ವಿಟ್ಟಂತೆ ನೀಳ ಕುಂತಳದಲ್ಲಿ ಹೂ ಮುಡಿವ ಆಶೆ ನೀಲಿ ನಯನಗಳಿಗೆ ಕಾಡಿಗೆ ತೀಡುವಾಸೆ ನನ್ನಲ್ಲಿ ಈಗಲೇ ಕನಸು ಅರಳುತಿದೆ […]

ಮೂಲಾತ್ಮ

Published on :

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು ಆಗುವುದು ಆಗುವುದು ಏನೇನೊ ಮನಕೆ ಭೋಗವನು ಚಣಕಾಲ ತಳ್ಳೆ ಪದತಲಕೆ ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು ಹದವನರಿಯದೆ ಎಲ್ಲೊ ಸುಳಿಯುತಿತ್ತು ಬಯಲಾಯ್ತು ಬಯಲಾಯ್ತು ಬಟ್ಟಬಯಲಾಯ್ತು ಸೃಷ್ಟಿಕರ್ತನ ಗುಟ್ಟು ತಿಳಿಯಲನುವಾಯ್ತು ಮುದವಾಯ್ತು ಮುದವಾಯ್ತು ಏನೊ ಮುದವಾಯ್ತು ಮಧುರ ಭಾವದ ಒಂದು ಸ್ಪರ್ಶವಾಯ್ತು ೧೦ ಬದಲಾಯ್ತು ಬದಲಾಯ್ತು ವಿಶ್ವ ಬದಲಾಯ್ತು ಇದುವೆ ಅವನೆಂಬ ನುಡಿ ಸತ್ಯವಾಯ್ತು ಅಳವಲ್ಲ ಅಳವಲ್ಲ ಬಣ್ಣಿಸಲು ಇದನು […]

ಲಲಿತಾಂಗಿ

Published on :

ತುಂಬು ಜವ್ವನದಬಲೆ ಪತಿರಹಿತೆ ಶೋಕಾರ್ತೆ ಕಾಡುಮೇಡನು ದಾಟಿ ಭಯದಿಂದ ಓಡಿಹಳು ಒಬ್ಬಳೇ ಓಡಿಹಳು ಅಡಗಿಹಳು ಗುಹೆಯಲ್ಲಿ ಬಾಲೆ ಲಲಿತಾಂಗಿ. ಹುಲಿಕರಡಿಯೆಲ್ಲಿಹವೊ ವಿಷಸರ್ಪವೆಲ್ಲಿಹವೊ ಎಂದಾಕೆ ನಡುಗಿಹಳು ನಡುಗಿ ಗುಹೆಯನ್ನು ಬಿಟ್ಟು ಮುಂದೆ ಮುಂದೋಡಿಹಳು ಮೈಮರೆತು ಓಡಿಹಳು ಬಾಲೆ ಲಲಿತಾಂಗಿ. ಹಿಂದೆ ನೋಡಿದರತ್ತ ರಾವುತರು ಬರುತಿಹರು ವೇಗದಿಂದಟ್ಟಿಹರು ಹಗಲೆಲ್ಲ ಹಗಲೆಲ್ಲ ಓಡಿಹಳು ಚೀರುತ್ತ ಬೀಳುತ್ತ ಏಳುತ್ತ ಬಾಲೆ ಲಲಿತಾಂಗಿ. ದೀನ ರಕ್ಷಕನೆಂಬ ಬಿರುದಿಂದು ದೇವಂಗೆ ಎಂತು ಸಲುವದೊ ಕಾಣೆ ಆರಿಂದು ದೇವಿಯನು ಚೆಲುವೆಯನು […]

ಪೂಜಾರಿ

Published on :

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು ಕಿರುಬಾಗಿಲ ಬೆಳಕಂಡಿಗಳು. ಬಂದವರೆಲ್ಲರು ಕಾಯಿಗಳೊಡೆವರು ಹೊರಗಡೆ ಕರ್ಪೂರ ಹಚ್ಚುವರು | ತಂದಿಹ ಮುಡುಪನು ದೇವರು ಕೊಳ್ಳಲು ಹೊರಗಡೆ ತಪ್ಪದೆ ಬಿಟ್ಟಿಹರು. ಸಂಕಟಪಟ್ಟವರೊಬ್ಬರೆ ಬಂದರೆ ಸಂಜೆಯಲೇಕಾಂತದಲಿ | ಬಿಂಕವ ಬಿಟ್ಟಾ ದೇವರು ನುಡಿವನು ಅಂಜಿಕೆ ಕಳೆವನು […]

ದೇವಯಾನಿ

Published on :

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ ಕೆಂಪು ಮೀರಲು ಅಲರ ಕಂಸ ಎಲರ ಕಂಪ ಉಸಿರು ಕಂಪು ಜರಿಯಲು ತಂಪಿನೆಲರು ಕಂಪಿನೆಲರು ಮುಂಗುರುಳನು ತಿದ್ದಲು ಮನದಿ ಪೊಸತು ರಾಗವೇರಿ ಸುಖಕೆ ಪುಳಕವೇರಲು ನಡೆದಳಂದು ನಿಂದಳಂದು ಬೆಚ್ಚನುಸಿರು ಸುಯ್ಯುತಾ ಕಚನ ನೆನೆದು ನೆನೆದು […]

ತತ್ವಜ್ಞಾನಿ

Published on :

ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು. “ಅಯ್ಯೋ ! ಹೋದನೆ ನಮ್ಮಯ ಸಾಬಿ ! ಎಲ್ಲರ ಮೆಚ್ಚಿನ ಜಟಕಾ ಸಾಬಿ ! ಬೀಡಿಯ ಕುಡಿಯದ ಒಳ್ಳೆಯ ಸಾಬಿ !” ಎಂದೆಲ್ಲಾ ಜನ ಹಲುಬುತ್ತಿರಲು ಊರೇ ಸಾಬಿಯ ಮಾತಾಗಿರಲು ಕಣ್ಮರೆಯಾದನು ಜಟಕಾ ಸಾಬಿ […]

ಬಾಡದ ಹೂವು

Published on :

ಅರಳುತಿಹ ಮೊಗ್ಗೊಂದು ಅರಳದೆಯೆ ಉರುಳಿದುದು ಕಣ್ಣೀರನಿಡುತಿಹಳು ಹಡೆದ ತಾಯಿ ಕಾಲನಾಟವೊ ಇಲ್ಲ ಕರುಬು ಕೂರಸಿ ಕೃತಿಯೊ ಎಳೆಹೂವಿನಾತ್ಮವನು ಅಳಿಸಿದುದು ಇಂತು? ಸುತ್ತ ಮುತ್ತಿಹ ಕ್ರೌರ್ಯಕಾನನದ ದಟ್ಟದಲಿ ಶತ್ರುಗಳು ಮೆಟ್ಟುತಿರಲದನು ಕೆಳಗೆ ಎತ್ತಿಮೇಲಕೆ ಮೊಗವ ಸುತ್ತ ಕಂಪನು ಬೀರಿ ಜಗವ ತಣಿಯಿಸುವಾಸೆ ತುಂಬಿಬಂದಿರಲು ನೆತ್ತಿ ಮೇಲೆತ್ತಿತ್ತು.  ಮೊಗ್ಗು ಅರಳುತಲಿತ್ತು, ಹಿಗ್ಗಿನಲಿ ಸುತ್ತೆಲ್ಲ ನೋಡುತಿತ್ತು.   ೧೦ ಎನಿತೆನಿತೊ ದುಗುಡಗಳ ನಡುವೆ ಸುಖವನು ತರುವೆ ಜಗಕೆ ಶಾಂತಿಯನೀವೆ ಎಂದು ಕುಣಿದಿತ್ತು. ಮೃದುತೆ ದಳಗಳು ತೆರೆದು […]

ಕುರುಬರ ಕುರಿತು ( ನೃತ್ಯ ರೂಪಕ )

Published on :

– ೧ – ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ ಮೂಕರಾದವರ ವಾಕ್ಯಕೆ || ನಮ್ಮ ಹಿರಿಮೆಯ ಸ್ಮರಣೆಯು ಮುಗ್ದ ಜನರ ಕರುಣೆಯು ಜನದ ನಡತೆಯೆ ಕನ್ನಡಿ ಜಗದಸ್ವಾಸ್ಥ್ಯದ ಮುನ್ನುಡಿ || – ೨ – ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ ಕಾಯುವವ ಕೊಲ್ವನಲ್ಲ ಕುರುಬನೆಂದರೆ || […]