ಉಮರನ ಒಸಗೆ – ೬೩
ಆಹ! ಕುಂದಿನಿಸಿಲ್ಲದೆನ್ನೆಂದು, ನೀ ಬಾರ. ಆಗಸದಿ ಕುಂದುವಡೆದಿಂದು ಪುಟ್ಟುತಿಹಂ ಇನ್ನೇಸುದಿನವೆನ್ನ ಕಾಣ್ಬನವನೀ ವನದಿ? ಬೇಗ ನಾನವನಿಂದೆ ಮರೆಯಾಗಿ ಪೋಪೆಂ. *****
ಆಹ! ಕುಂದಿನಿಸಿಲ್ಲದೆನ್ನೆಂದು, ನೀ ಬಾರ. ಆಗಸದಿ ಕುಂದುವಡೆದಿಂದು ಪುಟ್ಟುತಿಹಂ ಇನ್ನೇಸುದಿನವೆನ್ನ ಕಾಣ್ಬನವನೀ ವನದಿ? ಬೇಗ ನಾನವನಿಂದೆ ಮರೆಯಾಗಿ ಪೋಪೆಂ. *****
ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್ವರುಂ ದುಃಖಮಯದೀ ಜಗದ ಬಾಳ ಮರುಮಗಳ ಕಾಣುವಂತಾದೊಡಾಗಳಿದೆಲ್ಲಮಂ ಮುರಿದು ಮನಕೊಪ್ಪುವಂತಿದನು ನಿರವಿಸುವೆಮಲ್ತೆ? *****
ಪೋಪುದೆ ಗುಲಾಬಿಯೊಡನಯ್ಯೊ! ಮಧುಮಾಸಮದು; ಮುಗಿವುದೇ ಯವ್ವನದ ಪರಿಮಳಿತ ಲಿಖಿತಂ! ಒನದಿ ಪಾಡುವ ಬುಲ್ಬುಲಂಗಳಕ್ಕಟ! ತಾವ ದೆತ್ತಣಿಂ ಬಂದು ಮೇಣೆತ್ತ ಪೋದಪುವೋ! *****
ಬೇಲೀ ಮಗಿನ ಗಂಡ ನಾನು ಮೊಟರದಾಯ್ವರಾ ಹೆಣ್ತಿತಂಗಿ ಮಾರಕಂಡು ಕಾರಮೋಟಾರಾ ಮೋಟರ ಮೇನೆ ಕೂತಕಂಡು ಬೇಕಾದ ಮಜಮಾಡ್ತೇ || ***** ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು […]
ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****
ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ? ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು, ಆ ಮಧುವಿನಿಂಪೆನ್ನ ತಪವನಳಿಸಿದುವು. *****
ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ್ ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್ ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ. *****
ಆಹ! ದ್ರಾಕ್ಷಿಯನೆನ್ನ ಬಡಜೀವಕೀಂಟಿಸುತೆ ಅದರಿನೀ ಹರಣಮುಡುಗಿದ ತನುವ ತೊಳೆದು ಅದರೆಲೆಯಿನಿದಕೆ ಹೊದಕೆಯ ಹೊದಿಸಿ ನಲವಿಂದೆ ತನಿಗಂಪುದೋಟದೊಳಗೆನ್ನ ಪೂಳಿರಿಸು. *****
ಈ ತೆರದಿ ಘಟಜನಂ ಹರಟುತ್ತಲಿರಲಾಗ ಳವರೊಳೊರ್ವಂ ಮೂಡುವಿಂದುವಂ ಕಾಣಲ್ ಒರ್ವನೊರ್ವನ ತಟ್ಟುತಿಂತೆಂದರ್ : “ಅಣ್ಣಣ್ಣ! ಅತ್ತ ಕೇಳಡ್ಡೆ ಹೊತ್ತವನು ಬಹ ಕಿರುಕು.” *****
ಕಡೆಗೊರ್ವನಿಂತು ಬಿಸುಸುಯ್ದನಾ ಸಭೆಯೊಳಗೆ : “ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ; ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ; ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ.” *****