ಹಾಯ್ಕೆಗಳು

Published on :

೧. ಒಣಧೂಳಿನ ಕವಲುದಾರಿಯಲ್ಲಿ ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು ಸಂಕಟದ ಸುಳಿಯಲಿ ತಬ್ಬಿಬ್ಬು ಅವನು ಎಂದು ಬಂದನೋ ಬಾರನೋ ಒಂದೂ ತಿಳಿಯದೆ. ೨. ಒಂದು ದಾರಿಯಲಿ ನಡೆದ ಅಕ್ಕನಂತೆ ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ. ೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ ರುಚ‌ಇಲ್ಲ ಸಿಹಿ‌ಇಲ್ಲ ಬರೀ ಚಪ್ಪೇ ಸೀಬೆ ಹಸಿರು ಕೋಗಿಲೆ […]

ಹಾಯ್ಕಗಳು

Published on :

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು ಚಮಚ ನೀರು ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ. ಓಣಿಯಲಿ ನಡುರಾತ್ರಿ ಹೆಜ್ಜೆ ಸಪ್ಪಳಗಳು ನಾಯಿಗಳು ತುಂಬ ಊಳಿಡುತ್ತವೆ. ಮಗು ಗಲಗಲ ತೊದಲಿತು ಎದೆಯಲಿ ದೇವಸ್ಥಾನದ ಗಂಟೆಗಳು ಮೊಳಗಿದವು. ಅಮವಾಸ್ಯೆಯ ನಂತರ ಚಂದ್ರ ಹುಟ್ಟುತ್ತಾನೆ ಕಲ್ಲು ಸಂದಿಯಿಂದ ಕಪ್ಪೆಗಳು […]

ಝೆನ್ ಹಾಯಿಕುಗಳು

Published on :

ಬುದ್ಧ ಬೇರಾಗು ನನ್ನಲ್ಲಿ ಸಿದ್ಧಿ ತೇರಾಗು. ಝೆನ್‌ಗೆ ಬೇಕೆ? ತುತ್ತೂರಿ ಪೀಪಿ ಶಂಖನಾದ, ಖಡ್ಗ? ನಿಂತಿರುವ ನೋಡಿ ಮುಗ್ಧ ಹುಡುಗ ಓದಿ ಝೆನ್ ಅವನ ಮೊಗದ ತುಂಬಾ! ನನ್ನ ಹೃದಯ ವೀಣೆಯ ಝೆನ್ ತಂತಿಯ ಝೆನ್ ಝೇಂಕಾರ ಅದು ನನ್ನ ಸಾಕಾರ. ಕವಿತೆ ಬರೆದರೆ ಕವಿತೆ ಚಿಟ್ಟೆ ಗೂಡ ಬಿಟ್ಟು ಹಾರೀತು ಪ್ರೀತಿ ತೋರಿದರೆ ಗೂಡ ಕಟ್ಟೀತು ಎದೆ ಆಳದಲ್ಲಿ. ಹಸುರೆಲೆಯ ಹಸಿರು ವಾಗ್ದಾನದಲಿ ಉನ್ಮತ್ತ ಇಬ್ಬನಿ ಬಿಸಿಲು ಮಂಚದಲಿ […]

ಹಾಯಿಕು-ಹಂದರ

Published on :

ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ ಬದುಕು ಸಾವಿನ ಭವ್ಯ ಸತ್ಯ ಕ್ರಿಮಿಕೀಟದೊಂದಿಗೆ ಕೆರೆಯ ನೀರಿನಲಿ ತೇಲುತಿದೆ ನನ್ನ ಭಾವ ಪ್ರತಿಬಿಂಬ ಹಸಿರು ಹುಲ್ಲು ಜಾರುತ್ತ ಬರುತ್ತಿದೆ ಬೆಟ್ಟದ ಜಾರು ಬಂಡೆಯಲ್ಲಿ ಸೂರ್ಯೋದಯ ಸೂರ್ಯಾಸ್ತಮದಲಿ ಸಾಗುತಿದೆ ಪಕ್ಷಿಗಳ ಬಾಳ ಚಕ್ರ ಬೆಳದಿಂಗಳಲಿ ಕೋರೆಹುಳು ಕನಸಕಾಣುತಿದೆ ಕಾಮನ ಬಿಲ್ಲಿನ ರೆಕ್ಕೆಗಾಗಿ […]

ಬುದ್ಧನ ಹಯವೇ! ನಿನಗೆ ವಂದನೆ!

Published on :

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು ಭವಕ್ಕೆ ಬೇಕು ಬುದ್ಧತ್ವದ ಹಣ್ಣು. ಭೋಧಿ ವೃಕ್ಷದ ಎಲೆ ಎಲೆಯಲ್ಲಿ ಬುದ್ಧನ ಅಭಯಹಸ್ತ ಸೆಲೆ ಸೆಲೆಯಲ್ಲಿ ಶಾಖೆ ಶಾಖೆಯಲಿ ಬುದ್ಧನ ತೋಳತೆಕ್ಕೆ […]

ಅಂತರಂಗದ ಅಕ್ಷರಮಾಲೆ

Published on :

ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ ಮನದ ಸತ್ಯವೇ ಬೆಲ್ಲ ಎಲ್ಲಿದ್ದರೂ ತಿಳಿ, ತಿಳಿವನ್ನು ತಿಳಿಗೊಳದಿನಿಂದು ಏನು ಮಾಡಿದರೇನು `ನಾನು ಎಂಬುದ ತಿಳಿ ಇಂದು. ಐರಾವತವನ ನೇರು, ಐದು ವೇದದ ಸಾರ ತಿಳಿದು ಒಂದೇ ಒಂದು ಸತ್ಯವೆಂದು ತಿಳಿ ಓ ಜಸ್ಸು […]

ಝೇಂಕಾರ ಪಲ್ಲವಿ

Published on :

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ. ಭೂಮಿಯ ಬಿರುಕಲಿ, ನೋವಿನ ನಂಜಲಿ ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ ಬಾ!  ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ. ಬಿದಿರಿನ ಕೊಳಲಲಿ, ಉಸಿರಿನ ಹಸಿರಲಿ ಪದರಿನ ಒಳ ಆಳದಿ, ಗರಿಗೆದರಿದ ಎದೆಯಲಿ ಬುದ್ಧ!  ನಿನ್ನ […]

ಹಾಯ್ಕುಗಳು

Published on :

ನೋವು ನನ್ನೆದೆಯೊಳಗೆ… (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! ಅದು ಮೇಣವೆಂದು ಗೊತ್ತಿಲ್ಲವೆ ? ನಿಟ್ಟಿಸುರು ಬಿಟ್ಟರೆ ಮುಗಿಯಲಿಲ್ಲ ಆತಂಕ ಹೋಗಿ ಹೂವಿನ ಸುತ್ತ ಸುತ್ತಿರಿ ನಸುಕಿನಲಿ ಎದ್ದು ನಗಾಡಿತು ರಂಗೋಲಿ ಜೋರಾದ ಮಾತುಗಳು ಕೇಳಿ ಬಂಡೆಯ ಎದೆ ಮೇಲಿನ ಅಕ್ಷರಗಳು ಮಾತನಾಡಿಸಲು ಬಂದು ಸುಮ್ಮನಾದವೇಕೆ ? ಬದುಕು ನುಚ್ಚುನೂರಾಯಿತೆ ಇರಲಿ, […]