(ಕೆಲವು ಸಾಲುಗಳು) ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು. ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು. ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ ಕಾಲಪಥಿಕನಾ ಕಿವಿಗೆ...
ಅನ್ನ ಬ್ರಹ್ಮ ಅನ್ನ ಬ್ರಹ್ಮ| ನಿನ್ನಿಂದಲೇ ನಮ್ಮ ಜನ್ಮ| ಒಡಲ ಅಗ್ನಿಯೊಡನೆ ನೀನು ಸುಡಲು ಚೈತನ್ಯ ಜನ್ಯ|| ನಿನ್ನ ಪ್ರಸಾದವೇ ಪರಮ ಶಕ್ತಿ| ನಿನ್ನಿಂದಲೇ ಬೆಳೆಯುವುದು ಯುಕ್ತಿ| ನಿತ್ಯ ನಿನ್ನ ಸ್ಮರಿಸಿ ಸ್ವೀಕರಿಸುವುದೇ ಸೂಕ್ತಿ||...
ಬೆರಳು ಕತ್ತರಿಸಿ ಕರುಳ ಕದ್ದವರು ಮರುಳು ಮಾಡಿದರು ಮಾತನ್ನು ನಡೆದ ಕಡೆಯೆಲ್ಲ ನೆರಳ ನೆಟ್ಟವರು ಮಸುಕು ಮಾಡಿದರು ಮನಸನ್ನು. ಬೆರಳು ಕೊಟ್ಟವರೆ ಕರುಳ ಕೇಳುವ ಕಾಲ ಬಂತೆ ಈಗ! ಬೆರಳು-ಕರುಳುಗಳ ರಾಜಕೀಯದಲಿ ಬತ್ತಿಹೋಯಿತೆ ರಾಗ!...
(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು...
ಕಾಣುವ ಕಣ್ಣಿಗೆ ಎಲ್ಲಾ ಬೆರಗು ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು ದಿನ ದಿನ ಮೂಡುವ ನಸುಕಿನ ಬೆಳಕಿನ ದಿನ ದಿನ ಮಾಯುವ ಸಂಜೆಯ ಥಳಕಿನ ರಾತ್ರಿಯ ಭವ್ಯಾಕಾಶದ ಗಹನ ಕೋಟಿ ದೀಪಗಳ ದೀಪಾರಾಧನ ಮಳೆಬಿಸಿಲ...
ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ...
ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ...