ಎಷ್ಟು ವರ್ಣಿಸಲೋ ಗುರುವೇ ಈ
ನಿನ್ನ ಮಹಿಮೆ
ನುಡಿಯಲಾಗದು ತೋರಲಾಗದು ಈ
ನಿನ್ನ ಗರಿಮೆ
ನೀಲಾಂಬರದವರೆಗೆ ಪಸರಿಸಿದೆ ನೀನೀ
ವಿಶಾಲ ವಿಶಾಲ
ಗಗನದೆತ್ತರಕ್ಕೂ ಬೆಳೆದಿದೆ ಎತ್ತೆತ್ತ
ನಿನ್ನ ಜಾಲ
ಕೈ ಹಿಡಿದು ಎನ್ನ ನಡೆಸಲು
ನಿ ಬರಲಾಗದೆ!
ಭವಸಾಗರದಿಂದ ಮೇಲೆತ್ತಲೂ
ನಿ ಬರಬಾರದೆ!
ಹಗಲಿರುಳು ನಿನ್ನ ಧ್ಯಾನ
ನನ್ನಲ್ಲಿ ಮೆರೆಯಲಿ
ನಿನ್ನ ರೂಪದ ಸತ್ ಮಾಯೆ
ಮಾಣಿಕ್ಯ ವಿಠಲನಾಗಲಿ
*****