Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ

Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ

ಗ್ರೀಕ ದಂತಕಥೆಗಳಲ್ಲಿ ಬರುವ Hippolytus ಮತ್ತು Phaedra ಅಪರೂಪದ ಪಾತ್ರ ಚಿತ್ರಣಗಳು. ಗ್ರೀಕ ನಾಟಕಕಾರ Euripides ಕೂಡ ಈ ಪಾತ್ರಗಳ ಆಧರಿಸಿ ಎರಡು ನಾಟಕಗಳ ರಚಿಸಿದ. ಆತನ ನಾಟಕಗಳು ಸೇಡನ್ನು ವೈಭವೀಕರಿಸುತ್ತವೆ. ಗ್ರೀಕ ಪರಂಪರೆಯಲ್ಲಿ ಬರುವ ಪ್ರೇಮದೇವತೆ Aphrodite ಸಚ್ಚಾರಿತ್ರ್ಯ ದೇವತೆಯಾದ Artimis ಜೊತೆ ವೈಮನಸ್ಸು ಏರ್ಪಟ್ಟು, ಅದರ ಕಾರಣ Artimis ದೇವತೆಯ ಆರಾಧಕ ಸಜ್ಜನ Hippolytus Aphroditeನ ಉರಿಗಣ್ಣಿಗೆ ಬಲಿಯಾಗುತ್ತಾನೆ. ಆ ಶಕ್ತಿಗಳ ಸೇಡಿಗೆ ಈ ಮಾನವ ಜೀವಿಗಳು ಪರಿತಪಿಸುವ ಚಿತ್ರಣವನ್ನು ಯುರಿಪಿಡಿಸ್ ನಾಟಕ ಪ್ರತಿಫಲಿಸಿದೆ.

ಗ್ರೀಕ ದಂತಕಥೆಗಳ ಈ ಪಾತ್ರಗಳನ್ನೆ ಆಧರಿಸಿ ನಾಟಕ ರಚಿಸಿದ ೧೭ನೇ ಶತಮಾನದ ಪ್ರಮುಖ ಪ್ರೆಂಚ ನಾಟಕಕಾರರಲಿ Jean Baptist Recine ಒಬ್ಬ. Jean Baptist Recine ನಲ್ಲಿ ಅದೇ ಪಾತ್ರಗಳು ತಮ್ಮ ಸ್ವಂತ ಮೋಹ ದಾಹಗಳೆಂಬ ಮಾನಸಿಕ ವೈಪರೀತ್ಯಗಳಿಗೆ ಬಲಿಯಾಗುವ ವಸ್ತುನಿಷ್ಟ ಪಾತ್ರಗಳು. ಆತನ Phaedra ನಾಟಕದ ಪಾತ್ರಗಳು ಭಾವೋದ್ವೇಗದ ಬಲಿಪಶುಗಳು ಹೊರತು ಅದೃಷ್ಟ ಅಥವಾ ದೈವದಿಂದ ಉಂಟಾದ ನಿರ್ದಯತೆ ಅವುಗಳ ಪಾಡಲ್ಲ. ತನ್ನ ಸ್ವಂತ ಅಧರ್ಮದ ಅನೈತಿಕ ವಾಂಛೆಗಳ ಫಲಶ್ರುತಿಗೆ ಪಡೆದ ಎರವಲು ಅದು.

ರೇಸಿನ್‌ನ ನಾಟಕದ ಮೊದಲ ಅಂಕ Hippolytus ತನ್ನ ಗುರು Theramenesನೊಂದಿಗೆ ಸಂಭಾಷಣೆಯೊಂದಿಗೆ ಸಾಗುತ್ತದೆ. ತಂದೆ Troazenನ ರಾಜ Theseus ದಂಡಯಾತ್ರೆಗೆ ಹೊರಟು ಆರು ತಿಂಗಳಾದರೂ ವಾಪಸ್ಸು ಬಂದಿಲ್ಲ. ಅದಕ್ಕಾಗೆ ತಂದೆಯನ್ನು ಹುಡುಕಿ ಬರುವ ಇರಾದೆಯನ್ನು ವ್ಯಕ್ತಪಡಿಸುತ್ತಾನೆ ಅಷ್ಟೇ ಅಲ್ಲ ತನ್ನ ಮಲತಾಯಿ Phaedra ಬಂದ ನಂತರ ಎಲ್ಲವೂ ಮೊದಲಿನಂತೆ ಇಲ್ಲ ಎಂಬ ನೋವನ್ನು Hippolytus ತೋಡಿಕೊಳ್ಳುತ್ತಾನೆ ಕೂಡ. ರಾಜ Theseusನ ವೈರಿಕುಟುಂಬದ ಒಂಟಿ ಪಳಿಯುಳಿಕೆ Ariciaಳನ್ನು ಪ್ರೀತಿಸುತ್ತಿದ್ದಾನೆ ಆತ. ಆಕೆಯ ಇಡೀ ಕುಟುಂಬವನ್ನು ರಾಜ ಪುಡಿಗೈದಿದ್ದಾನೆ. ಹಾಗಾಗಿ ಆಕೆಯೊಂದಿಗೆ ತನ್ನ ವಿವಾಹ ಅಸಾಧ್ಯವೆಂದು ಗೊತ್ತು. ಅದಕ್ಕಾತ ತಂದೆಯ ಆಗಮನಕ್ಕೆ ಮೊದಲೇ ನಗರ ಬಿಡಲು ಯೋಚಿಸುತ್ತಾನೆ ಆದರೆ ಅದೇ ಸಮಯಕ್ಕೆ Theseus ಜೀವಂತನಾಗಿಲ್ಲ ಎಂಬ ಸುದ್ದಿ ತಿಳಿಯುತ್ತಲೇ Aricia ಸಂತಸಗೊಳ್ಳುತ್ತಾಳೆ. ತನ್ನ ಪ್ರೇಮದ ಒಪ್ಪಿಗೆಯನ್ನು ನೀಡುತ್ತಾಳೆ. ಆದರೆ ಅವಳಿಗಿಂತ ಆನಂದ ಪಡುವ ಹೆಣ್ಣಾಗಿ ಹೆಣ್ಣು ಕುಲಕ್ಕೆ ಕಳಂಕದ ಖನಿಯಾಗಿ Phaedra ಪತಿ ಮರಣವನ್ನು ಸಂತೋಷಿಸುತ್ತಾಳೆ. ಮೊದಲೇ Hippolytusನಲ್ಲಿ ಮೋಹಭರಿತಳಾದ ರಾಣಿ ಇದ್ದ ಅಡ್ಡಿ ದಾಟಿಹೋಯಿತೆಂದು ತಿಳಿದು ತನ್ನ ಮಲಮಗನ ಬಗ್ಗೆ ತನ್ನ ಒಡಲಲ್ಲಿ ಅವಿತಿದ್ದ ಆಶೆಯನ್ನು ವ್ಯಕ್ತಪಡಿಸಿ ತೀರಿದ ರಾಜನ ಮುಂದಿನ ಉತ್ತರಾಧಿಕಾರಿಯಾಗಿ ತನ್ನನ್ನು ಪರಿಗ್ರಹಿಸುವಂತೆ ಅಂಗಲಾಚುತ್ತಾಳೆ. ರಾಜನಿಗೆ ಸೇರಿದ ತಾನು ಆತನ ಮರಣದ ಕಾರಣ ಆತನ ರಾಜ್ಯದ ಜೊತೆ ತನ್ನನ್ನು ಪರಿಗ್ರಹಿಸುವಂತೆ ಕೇಳಿಕೊಳ್ಳುತ್ತಾಳೆ. ಅದರೆ ತಾಯಿಯ ಸ್ಥಾನದಲ್ಲಿದ್ದ ಆಕೆಯ ವಿಚಿತ್ರ ಬಯಕೆಯನ್ನು ಕೇಳಿದ Hippolytus ವಿಚಲಿತನಾಗುತ್ತಾನೆ. ಆಕೆಯನ್ನು ತನ್ನ ಮಲತಾಯಿಯೆಂದು ಎಚ್ಚರಿಸುತ್ತಾನೆ. ಅಸಂಬಧ್ಧ ಮೋಹ ಪ್ರಲೋಭಕ್ಕೆ ಗ್ರೀಕ ಪ್ರೇಮದೇವತೆ Aphroditeಯ ಪ್ರೇರಣೆಯೇ ಕಾರಣ ಎಂಬಂತೆ ವೀಪರೀತದ ಬಯಕೆಗೆ ಒಳಗಾದ Phaedra ಅನೈತಿಕ ಭಾವನೆ ಅಸಹ್ಯಕಾರಕವೆನಿಸುತ್ತದೆ ಆತನಿಗೆ. ಆಕೆ ಅಲವತ್ತುಕೊಳ್ಳುತ್ತಾಳೆ. ಬೇಯುತ್ತಾಳೆ. ನೋಯುತ್ತಾಳೆ. ಇಲ್ಲವಾದಲ್ಲಿ ಖಡ್ಗದಿಂದ ತನ್ನನ್ನು ಕತ್ತರಿಸಿ ಹಾಕುವಂತೆ ಹೇಳುತ್ತಾಳೆ.

ಪ್ರೇಮ ತಿರಸ್ಕೃತಗೊಂಡ Phaedra ಭಾವನೆಗಳ ಸುಳಿಯೊಳಗೆ ವಿಲವಿಲನೆ ಒದ್ದಾಡುವ ರಾಣಿ ನೋವಿನ ಹಾಸಿಗೆಯಲ್ಲಿ ನರಳುತ್ತಿರುವಾಗಲೇ ಆಪ್ತ ಸೇವಕಿ Oenone ರಾಜ Theseus ಥಿಸಸ್ ರಾಜ್ಯಕ್ಕೆ ಮರಳುತ್ತಿರುವ ಸುದ್ದಿಯನ್ನು ಹೊತ್ತು ಬರುತ್ತಾಳೆ. ನಗರಕ್ಕೆ ಆಗಮಿಸಿದ ರಾಜ Phaedraಳಲ್ಲಿಯ ವಿಚಿತ್ರ ವರ್ತನೆಗೆ ಅನ್ಯಮನಸ್ಕತನಕ್ಕೆ ಕಾರಣ ಕೇಳುತ್ತಾನೆ. ಬೆದರಿದ ಆಕೆ Hippolytus ತನ್ನ ವಿರುದ್ದ ತನ್ನ ವಿಚಾರವನ್ನು ಅರುಹುತ್ತಾನೆಂದು ಗ್ರಹಿಸಿ ಭಯಭೀತಳಾಗಿ ಮುಗ್ಧ Hippolytus ಮೇಲೆ ಆಪಾದನೆ ಮಾಡುತ್ತಾಳೆ. ತನ್ನ ಮೇಲೆ ಆತನಿಗೆ ಕೆಟ್ಟ ಆಕಾಂಕ್ಷೆ ಇದೆಯೆಂದು ದೋಷಾರೋಪಮಾಡಿ ತಾನು ಬಚಾವಾಗುತ್ತಾಳೆ. ಅದರೆ ಸಭ್ಯ ಸದ್ಗುಣವಂತ Hippolytus ತನ್ನ ತಂದೆಯ ಮನಸ್ಸಿಗೆ ನೋವುಂಟುಮಾಡಲು ಬಯಸದೇ ತಾನು ನಗರ ಬಿಟ್ಟು ಹೋಗುವ ಇರಾಧೆಯನ್ನು ವ್ಯಕ್ತಪಡಿಸುತ್ತಾನೆ. ತಂದೆಯಂತೆ ಸಾಧನೆಗೈಯುವ ಬಯಕೆ ಇದೆಯೆಂದು ಸುಳ್ಳು ಹೇಳುತ್ತಾನೆ, ಆದರೆ ದುರ್ಬೋಧನೆಗೆ ಒಳಗಾಗಿ ಕ್ರೋಧಾವಿಷ್ಟನಾದ ದೊರೆ ವಿಚಾರಹೀನನಾಗಿ Hippolytus ಮಾತನ್ನು ಆಲಿಸದೇ ಮಗನನ್ನು ನಿಂದಿಸುತ್ತಾನೆ. ಆಗ ತಾನು ಪ್ರೀತಿಸುತ್ತಿರುವುದು Aricia ಎಂದು ಹೇಳಿದರೂ ಅದನ್ನು ನಂಬದ ದೊರೆ ಮಗನನ್ನು ಶಪಿಸುತ್ತಾನೆ. ಆ ಕಾರಣ Hippolytus ಅಪಮೃತ್ಯುವಿಗೆ ಗುರಿಯಾಗಿ ಮರಣ ಹೊಂದುತ್ತಾನೆ.

ಪತಿ Theseusನನ್ನು ಮೋಸಗೊಳಿಸಿ ಮಲಮಗನಲ್ಲಿ ಆಕರ್ಷಿತಳಾದ Phaedra ಮಾತನ್ನು ಕುರುಡಾಗಿ ನಂಬಿದ ದೊರೆ ಸ್ವಂತ ಮಗನ ಸಮಾಧಿ ತೋಡುವುದು. ಅಪ್ರೋರ್ಡಯಟ್ ನ ಶಾಪಕ್ಕೆ ಒಳಗಾಗಿ Hippolytus ಬಲಿಪಶುವಾಗುವುದು. ಒಡತಿಯ ಅಸಂಗತ ಬಯಕೆಗಳ ನಡುವೆಯೂ ಪ್ರಿಯ ಒಡತಿಯ ಬಯಕೆ ಇಡೇರಿಸಲು ಸೇವಕಿ ಪಡುವ ಪ್ರಯತ್ನ ಎಲ್ಲವೂ ಮಾನವನ ವ್ಯಕ್ತಿತ್ವದ ಒಂದೊಂದು ಹಾಳೆಗಳು. ಕರುಣಾರಾಹಿತ್ಯವಾದ ವಿಧಿ, ಅದರ ಇದಿರು ಮನುಷ್ಯನ ಅಸಮರ್ಥತೆ ಬಿಂಬಿಸುವುದು ಇವು ರೇಸಿನ್‌ನ ಆದ್ಯತೆ.

ಕೊನೆಯ ಭಾಗದಲ್ಲಿ ತನ್ನ ಸ್ವಂತ ಮಗನ ಸಾವಿಗೆ ಕಾರಣನಾದ ದೊರೆಗೆ ತಪ್ಪಿನ ಅರಿವಾಗುತ್ತದೆ. Phaedraಳ ಮೋಸ ತಿಳಿದು ಬರುತ್ತದೆ. ಕೊನೆಯಲ್ಲಿ ಆಕೆ ತಾನು ವಿಷವುಂಡು ರಾಜನಿಗೆ ಸತ್ಯ ಅರುಹಿ ಸಾಯುತ್ತಾಳೆ. ತನ್ನಿಂದಾದ ತಪ್ಪಿಗೆ ರಾಜ Ariciaಳನ್ನು ತನ್ನ ಮಗಳೆಂದು ಸ್ವೀಕರಿಸಿ ತಪ್ಪನ್ನು ಭಾಗಶಃ ಕಡಿಮೆ ಮಾಡಿಕೊಳ್ಳ ಬಯಸುತ್ತಾನೆ. ಇಲ್ಲಿಯೇ Theseusನ ಪ್ರಾಮಾಣಿಕ ಪಶ್ಚಾತ್ತಾಪ ವ್ಯಕ್ತಗೊಳ್ಳುತ್ತದೆ. ದುರಂತಗಳ ಪ್ರಪಾತದ ಕಣಿವೆಯಲ್ಲಿ ಆಶಾವಾದದ ಬೆಳಕು ಗೋಚರಿಸುತ್ತದೆ.

ಅಸತ್ಯ, ಅನೀತಿ, ದುರಾಚಾರಗಳ ಮೂರ್ತರೂಪದಂತೆ ಚಿತ್ರಿಸಲ್ಪಟ್ಟರೆ, ನಿಷ್ಟೆ, ಪ್ರಾಮಾಣಿಕತೆ, ಸದಾಚಾರ, ಸತ್ಯ ನೀತಿಗಳಿಗೆ ಸಾಕ್ಷಿಯಾಗುತ್ತಾನೆ. ಹೆಣ್ಣು ಕುಲ ಕಳಂಕಿನಿಯಾಗಿ ಚಿತ್ರಸಿಲ್ಪಟ್ಟರೂ ವಿಧಿಯ ಕೈಯಲ್ಲಿನ ದಾಳವಾಗಿ ಬೇಯುವುದು ಇಲ್ಲಿ ಸ್ಪಷ್ಟ. ಸಂಕಷ್ಟದ ಕಾರಣಗಳು, ದೈವ ಮತ್ತು ಅದೃಷ್ಟದ ಆಟ, ಮನುಷ್ಯ ಮತ್ತು ದೈವದ ನಡುವಿನ ಸಂಬಂಧ, ಶುದ್ಧ ಪ್ರೇಮ ಮತ್ತು ವ್ಯಾಮೋಹ ಮುಂತಾದ ಸಂಗತಿಗಳು ವಿವಿಧ ಕೋನಗಳಲ್ಲಿ ಚಿತ್ರಸಲ್ಪಟ್ಟಿವೆ. ಗಂಡ- ಹೆಂಡತಿ, ಪ್ರೇಮಿ-ಪ್ರಿಯಕರ, ಹೆತ್ತವರು-ಮಕ್ಕಳು, ಒಡೆಯ-ಸೇವಕ, ಮನುಷ್ಯ-ದೇವರು ಹೀಗೆ ಇವರುಗಳ ಸಂಬಂಧದ ಮೂಲದಲ್ಲಿ ಇರ ಬೇಕಾದ ನಿಷ್ಟೆಯ ವಿವಿಧ ಆಯಾಮಗಳನ್ನು ಅತ್ಯಂತ ಸಮಂಜಸವಾಗಿ ಸಾಮಾಜಿಕ ರೂಢಮೂಲ ಸಿದ್ಧಾಂತದ ಅನ್ವಯತೆಯ ಮೇಲೆ ನಾಟಕ ಕಟ್ಟಲ್ಪಟ್ಟಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗನ ಕನಸು
Next post ಪಾಠ ಕೇಳುವ ಪ್ರಾಣಗಳು

ಸಣ್ಣ ಕತೆ

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys