ಸಾಹಿತ್ಯದ ಸ್ವಯಂಪ್ರಜ್ಞೆ
ಸಾಹಿತ್ಯ ಸೃಷ್ಟಿ ಒಂದು ಕಾಯಕವೇ ಅಥವಾ ಸ್ಫೂರ್ತಿಯೇ? ಸ್ಫೂರ್ತಿಯಾಗಿದ್ದರೆ ಅದರ ಅರ್ಥವೇನು? ಇಂಥ ಪಶ್ನೆಗಳಿಗೆ ಬಹುಶಃ ಉತ್ತರವಿಲ್ಲ. ಬರೆಯುವ ಮೊದಲು ಹಲವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ; ಹಲವರು ಮಾಡಿಕೊಂಡಿರುವುದಿಲ್ಲ. ಶಿವರಾಮಕಾರಂತರು ನಾವು ಯಾವುದನ್ನು ಅನುಭಾವ್ಯ...