ಫ್ರಾನ್ಸಿಸ್ ಬೇಕನ್‌ನ “Of Studies” ಅಧ್ಯಯನ ಕುರಿತ ಮಾಹಿತಿ ಕೈಪಿಡಿ

ಫ್ರಾನ್ಸಿಸ್ ಬೇಕನ್‌ನ “Of Studies” ಅಧ್ಯಯನ ಕುರಿತ ಮಾಹಿತಿ ಕೈಪಿಡಿ

ಭಾಗ -೨

Studies serve for delight, for ornament, and for ability ಇದು ಪ್ರಸಿದ್ಧ ತತ್ವಜ್ಞಾನಿ, ರಾಜ ನೀತಿಜ್ಞ, ಮುತ್ಸದ್ದಿ, ಪ್ರಬಂಧಕಾರ ವಿಚಾರವಾದಿ ಎಂದೆಲ್ಲ ಹೆಸರಾದ ಪ್ರಾನ್ಸಿಸ್ ಬೇಕನ್‌ನ ಪ್ರಬಂಧದಲ್ಲಿ ಬರುವ ಮೊದಲ ಸಾಲು. ಅತಿ ಕಡಿಮೆ ಶಬ್ದಗಳಲ್ಲಿ ಅಧಯನದ ಅಪೂರ್ವತೆಯನ್ನು ಸ್ಪಷ್ಟಪಡಿಸುವ ಸಾಲು. ಬೇಕನ್ ಒಬ್ಬ ಅತ್ಯಪೂರ್ವ ಜ್ಞಾನಿ. ಇಂಗ್ಲೀಷ ಕ್ರಾಂತಿಕಾರಿ ಅಭಿವ್ಯಕ್ತಿಯ ಪ್ರಭಾವಕ್ಕೆ ಒಳಗಾಗಿದ್ದ. ಆದರೆ ನ್ಯಾಯಾಲಯದಲ್ಲಿ ಒಳ್ಳೆಯ ಕೆಲಸದಲ್ಲಿದ್ದ ಆತ ಲಂಚಸ್ವೀಕಾರದ ಕಾರಣ ಕೆಲಸದಿಂದ ತೆಗೆದೊಗೆಯಲ್ಪಟ್ಟ. ಹಾಗಾಗೇ ಅಲೆಗ್ಸಾಂಡರ್ ಪೋಪ್ ಆತನ ಜಾಣ್ಮೆಯನ್ನು ಗುರುತಿಸಿ ತನ್ನ ಕೃತಿ Greatness of Thought and Mediocrity of conduct ಎಂಬ ಕೃತಿಯಲ್ಲಿ ಬೇಕನ್‌ನನ್ನು “The wisest, brightest, meanest of mankind ಎಂದು ವಿಶ್ಲೇಷಿಸಿದ್ಧಾನೆ. ಇಂಗ್ಲೀಷ ಪ್ರಬಂಧ ಸಾಹಿತ್ಯದಲ್ಲಿ “Father of essay” ಎಂದು ಹೆಸರುಗಳಿಸಿದ ಬೇಕನ್ ತನ್ನ ಪ್ರಬಂಧಗಳಲ್ಲಿ ನಾಗರಿಕ ಮತ್ತು ನೈತಿಕ ವಿಚಾರಗಳ ಪ್ರಸ್ತಾಪಿಸುತ್ತಾನೆ. ಆತನ ಪ್ರಾಪಂಚಿಕ ಜಾಣ್ಮೆ, ತಾತ್ವಿಕ ನೆಲೆಗಟ್ಟಿನ ಅದ್ಬುತ ವಿಚಾರಗಳು ಯುವ ಪೀಳಿಗೆಯ ಹಿಡಿದಿಟ್ಟು ಕೊಳ್ಳುವಲ್ಲಿ ಸಶಕ್ತವಾಗಿವೆ. ಆತನ ಪ್ರಬಂಧದಲ್ಲಿ ಬರುವ ಸಾಲು “Reading maketh a full man: conference a ready man and writing an exact man” ಹಾಗೂ “Men fear death as children fear to go in the dark” ಮುಂತಾದ ಹೇಳಿಕೆಗಳು ಇಂದಿನ ಆಡು ಭಾಷೆಯಲ್ಲಿ ಗಾದೆಗಳಂತೆ ಬಳಸಲಾಗುತ್ತದೆ.

ಬೇಕನ್‌ನ”Of Studies” ಪ್ರಬಂಧ “What to read and How to read” ಎಂಬ ವಿಚಾರವನ್ನು ಚೆನ್ನಾಗಿ ನಿರೂಪಿಸುತ್ತದೆ. ಅಧ್ಯಯನದಿಂದ ಗರ್ವಮೂಡಿಸಿಕೊಂಡ ವ್ಯಕ್ತಿಯ ಹಮ್ಮು ಬಿಮ್ಮುಗಳ ಕುರಿತು ಆತ ವೈಂಗ್ಯವಾಗಿ ಹೇಳುತ್ತಾನೆ. ಅದರಿಂದ ಹೇಗೆ ಕಲಿಕೆಗೆ ಅಪಮಾನವೆಂದು ತಿಳಿಸುತ್ತಾ ಮೂರು ಹಂತಗಳಲ್ಲಿ ವಿಸ್ತರಿಸುತ್ತಾನೆ. ಮೊದಲಿಗೆ ಕಲ್ಪನಾಮಯ ರೋಚಕಮೂಲದ ಕಲಿಕೆ. ಇದರಿಂದ ವಿಷಯವಸ್ತುವಿನ ಆಳಜ್ಞಾನಕ್ಕಿಂತ ಮೇಲ್ಪದರದ ಪದಪುಂಜಗಳು ನುಡಿಗಟ್ಟುಗಳೇ ಆಕರ್ಷಿಸಿ ತಳ ಜ್ಞಾನ ಅಪರಿಚಿತವಾಗುವ ಅಪಾಯವಿದೆ.

ಎರಡನೆಯದಾಗಿ ವಾದಮೂಲದ ಕಲಿಕೆ- ಸಾಮಾನ್ಯವಾಗಿ ತನ್ನ ಅರಿವಿನ ಆಳಬಿಟ್ಟು ಬೇರೆ ಒಪ್ಪಿಕೊಳ್ಳದ ಜ್ಞಾನಿ ತಾನಂದುಕೊಂಡ ವಿಚಾರಗಳ ಪ್ರತಿಪಾದನೆಗೆ ತೊಡಗುವುದು. ಮೂರನೇಯದಾಗಿ ಮದ್ಯಯುಗೀನ ಜ್ಞಾನಪುನರುಜ್ಜೀವನದ ಶಾಸ್ತ್ರೀಯ ಕಲಿಕೆ.

ಜ್ಞಾನಿಯ ವಿರೂಪಗಳನ್ನು ಆತ ವರ್ಣಿಸುತ್ತಾನೆ. ಜ್ಞಾನಿ ತನ್ನನ್ನೇ ತಾನು ಮೆಚ್ಚಿಕೊಳ್ಳುತ್ತ, ಸುತ್ತಲಿನ ಸಾಮಾನ್ಯರೊಡನೆ ಬೆರೆಯದೆ, ಪೃಕೃತಿಯ ಶ್ರೇಷ್ಟತೆಯನ್ನು ಅರಿಯದೇ, ಭ್ರಮಾ ಜಗತ್ತಿನಲ್ಲಿ ಕಲ್ಪನೆಯ ಗೂಡು ಕಟ್ಟಿಕೊಂಡು ತಾನೇನೋ ಅಪೂರ್ವವಾದ ಸಾಧನೆಯ ಹಾದಿಯಲ್ಲಿ ಎಂಬಂತೆ ಪೋಸುಕೊಡುತ್ತಾ ವಿಮುಖ ಬಾಳು ನಡೆಸುವುದನ್ನು ತಾರ್ಕೀಕವಾಗಿ ವಿಶ್ಲೇಷಿಸುತ್ತಾನೆ.

ಪ್ರಬಂಧ ಅಧ್ಯಯನದ ಅಗತ್ಯ ಮತ್ತು ಮಹತ್ವವನ್ನು ನಿಖರವಾಗಿ ಸ್ಪಷ್ಟವಾಗಿ ನಿರೂಪಿಸುತ್ತದೆ. ಓದುವಿಕೆ ನಮ್ಮ ವ್ಯಕ್ತಿತ್ವವನ್ನು ಹೇಗೆ ಸಶಕ್ತಗೊಳಿಸುತ್ತದೆ. ವ್ಯಕ್ತಿತ್ವ ಅಧ್ಯಯನದ ಅನುಭವಗಳಿಂದ ಹೇಗೆ ಪರಿಪೂರ್ಣಗೊಳ್ಳುತ್ತದೆ, ನಮ್ಮಲ್ಲಿ ಹುದುಗಿರುವ ಸಾಮರ್ಥ್ಯಗಳ ಸರಿಯಾಗಿ ಪೋಷಿಸಲ್ಪಟ್ಟಾಗ ಅದು ಅರಳಲು ಸಾಧ್ಯವೆಂದು ಆತ ಅಭಿಪ್ರಾಯಪಡುತ್ತಾನೆ. ಅದೊಂದು ಆನಂದ, ಆಭರಣ, ಅಲ್ಲದೇ ಸಾಮರ್ಥ್ಯವೂ ಆಗಿರುವುದೇ ಅದರ ವೈಶಿಷ್ಟ್ಯತೆ. ಅಧ್ಯಯನ ಒಂದು ಎಂದೂ ಬಸವಳಿಸದ ಆನಂದದ ಮೂಲ, ತೃಪ್ತಿಯ ಉತ್ತುಂಗವನ್ನು ತಲುಪಿಸುವ ಕ್ರಿಯೆ. ಸಹಜವಾಗಿ ಜಗತ್ತಿನ ಶ್ರೇಷ್ಟ ಜ್ಞಾನಿಗಳ ಅನುಭವಗಳ ಸಾರ ಹೊಂದಿದ ಸಾಹಿತ್ಯದ ಓದು ನಮ್ಮಲ್ಲಿ ಮಾನಸಿಕ ಮತ್ತು ಭೌದ್ಧಿಕ ಸಾಮರ್ಥ್ಯವನ್ನು ಉದ್ದಿಪನಗೊಳಿಸುವುದು. ಬದುಕಿನ ನಿರ್ಧಾರಗಳನ್ನು ನಿರ್ದಿಷ್ಟವಾಗಿ ಏಕಬಲದಿಂದ ಹರಿತ ವೇಗದಿಂದ ತೆಗೆದುಕೊಳ್ಳಬಲ್ಲ ಬಲವನ್ನು ಬೆಳೆಸುತ್ತದೆ. ಓದುವಿಕೆಯಿಂದ ಜ್ಞಾನ ಆ ಮೂಲಕ ನಮ್ಮ ಸಂಭಾಷಣೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬಹುದು. ಮಾತು, ಸಂವಹನ ರೀತಿಗಳು ನಮ್ಮ ಜ್ಞಾನದ ಪ್ರತಿಬಿಂಬಗಳು. ಆತ ಮುಂದೆ ಹೇಳುವ ಸಂಗತಿ ಎಂದರೆ ಯಾವುದೇ ಸಂಗತಿಗಳ ಸಹಸಮವರ್ತನೆಗೆ, ಮೊದಲು ವಿಷಯದ ಸಂಘಟನೆ ಹಾಗೂ ಪೂರ್ವ ಯೋಜನೆ ಅಗತ್ಯ. ಅದರ ಸಾಕಾರಗೊಳಿಸುವ ಪ್ರಯತ್ನಿಸುವ ಅತಿ ಸೂಕ್ಷ್ಮ ಪರಿಕಲ್ಪನೆಯ ಮನಸ್ಸು ಮತ್ತು ಶೀರ್ಘ ಯೋಚನೆಗಳು ಜ್ಞಾನದ ಸ್ವತ್ತು.

ಇಲ್ಲಿಂದ ಮುಂದೆ ಬೇಕನ್‌ನ ಅಧ್ಯಯನದ ಕುರಿತ ವಿಚಾರಗಳು ಇನ್ನೊಂದು ಮುಖದಲ್ಲಿ ತೆರೆದುಕೊಳ್ಳುತ್ತದೆ. ಆನಂದಕ್ಕಾಗಿ ಮಾಡಿದ ಅತಿಯಾದ ಓದು ಆಲಸ್ಯವನ್ನು ಬೆಳೆಸುವುದು, ಆಭರಣವಾಗಿ ಬಳಸಿದ ಓದು ಸುಳ್ಳು ತೋರಿಕೆಯೂ ಆಗಬಹುದು. ಸಾಮರ್ಥ್ಯದ ನೆಲೆಯಲ್ಲಿ ಪಂಡಿತ ಅದನ್ನು ತನ್ನ ಅಸ್ತ್ರವಾಗಿ ಬಳಸಕೊಳ್ಳಬಹುದು. ಜ್ಞಾನ ಸ್ವಭಾವದಲ್ಲಿ ಪರಿಪೂರ್ಣತೆಯ ತಂದುಕೊಡುತ್ತದೆ. ಅನುಭವದಿಂದ ಪರಿಪೂರ್ಣರಾಗುತ್ತೇವೆ. ಎಲ್ಲರಲ್ಲೂ ಕೆಲವು ಸಾಮರ್ಥ್ಯಗಳು ಸಹಜವಾಗಿರುತ್ತವೆ. ಸಾಮಾನ್ಯ ಸಾಮರ್ಥ್ಯಗಳು ನೈಸರ್ಗಿಕವಾಗಿ ಪಲ್ಲವಿಸಿದ ಸಸಿಗಳಂತೆ. ಸರಿಯಾಗಿ ಪೋಷಿಸಲ್ಪಟ್ಟಾಗ ಪ್ರಪುಲ್ಲವಾಗಿ ಅರಳಬಲ್ಲವು. ಇದು ಸಮರ್ಥ ಅಧಯಯನದಿಂದ ಇನ್ನಷ್ಟು ಉತ್ಪನ್ನಗೊಂಡು ಸಂಪನ್ನಗೊಳ್ಳಬಹುದು. ಇಲ್ಲವಾದಲ್ಲಿ ಬಹಳ ಸಲ ಜನ್ಮತಃ ಬಂದ ಪ್ರತಿಭೆಗಳು ಮೂಲೆಗುಂಪಾಗಿ ಬಿಡುತ್ತವೆ ಎನ್ನುತ್ತಾನೆ ಬೇಕನ್.

ಪ್ರಬಂಧದ ಉದ್ದಕ್ಕೂ ಬಳಸುವ ಪ್ರೇರೇಪಿಸುವ ಸಾಲುಗಳು ಮನ ಸೆಳೆಯುತ್ತವೆ
Crafty men contemn studies, simple men admire studies, and wise men use them” ತನ್ನ ಕೌಶಲ್ಯದಲ್ಲಿ ಪಾರಂಗತನಾದ ಕುಶಲಕರ್ಮಿ ಅಧ್ಯಯನವನ್ನು ಕೀಳಾಗಿ ಕಾಣುತ್ತಾನೆ, ಅದೇ ಸಾಮಾನ್ಯ ಅದನ್ನು ಮೆಚ್ಚಿಕೊಳ್ಳುತ್ತಾನೆ. ಆದರೆ ಬುದ್ಧಿವಂತ ಅದರ ಬಳಕೆಗೆ ಮುಂದಾಗುತ್ತಾನೆ ಎಂಬುದು ಬೇಕನ್‌ನ ವಾದ. ಅಧ್ಯಯನದಿಂದ ವ್ಯಕ್ತಿಯಲ್ಲಿ ಪ್ರತಿಯೊಂದನ್ನು ಕುರುಡಾಗಿ ಒಪ್ಪಿಕೊಳ್ಳದ ಜಾಣ್ಮೆ ಬೆಳೆಯುತ್ತದೆ. ಅದನ್ನು ತುಲನೆ ಮಾಡುವ ಒರೆಹಚ್ಚುವ, ಕೌಶಲ್ಯ ಬೆಳೆಯುತ್ತದೆ.

ಅದಕ್ಕಾಗಿ ಬೇಕನ್ ಪುಸ್ತಕಗಳ ಆಯ್ಕೆಯ ಕುರಿತು ಬರೆಯುತ್ತಾನೆ. “Some books are to be tasted, others to be swallowed, and some few to be chewed and digested” ಕೆಲವು ಪುಸ್ತಕಗಳು ಬರಿಯ ಬಾಹ್ಯ ರುಚಿಗಾಗಿ ಅದನ್ನು ಮಾತ್ರ ತೃಪ್ತಗೊಳಿಸಬಲ್ಲವು. ಕೆಲವು ನುಂಗಿ ಬಿಡುವಂತಹುದು. ಇನ್ನು ಕೆಲವು ಅಗಿ ಅಗಿದು ಜೀರ್ಣಸಿಕೊಳ್ಳುವಂತಹುದು. ಅಂದರೆ ಪುಸ್ತಕಗಳು ಒಮ್ಮೆ ಹಿಡಿದರೆ ಓದಿ ಮುಗಿಸುವವರೆಗೂ ಹಿಡಿದಿಡುತ್ತವೆ, ಹಂತಹಂತದಲ್ಲೂ ಆಸಕ್ತಿಯನ್ನು ಕೆರಳಿಸುತ್ತವೆ. ಕೆಲವು ಅರ್ದಕ್ಕೆ ನಮ್ಮ ಓದನ್ನು ನಿಲ್ಲಿಸಿ ಬಿಡುತ್ತವೆ.

ಅದೂ ಅಲ್ಲದೇ ಆತ ಅತೀ ಸಂಕ್ಷಿಪ್ತವಾಗಿ, ಸೂಕ್ಷ್ಮವಾಗಿ ಅಧ್ಯಯನದ ವಿಶಾಲ ಅರ್ಥವ್ಯಾಪ್ತಿಯನ್ನು ಕಡಿಮೆ ಪದಗಳಲ್ಲಿ ಹೀಗೆ ಹೇಳುತ್ತಾನೆ “Reading maketh a full man, conference a ready man and writing an exact man” ಅದ್ಯಯನದ ವಿವಿಧ ನೆಲೆಯಲ್ಲಿ ಇತಿಹಾಸ ಜ್ಞಾನವನ್ನು, ಕವಿತೆ ಚಾತುರ್‍ಯವನ್ನು, ಗಣಿತ ಸೂಕ್ಷ್ಮತೆಯನ್ನು, ಕ್ಲೀಷ್ಟತೆಯನ್ನು, ನೈಸರ್ಗಿಕ ತತ್ವಜ್ಞಾನ ಆಳವನ್ನು, ನೈತಿಕತೆ ಧೀರತೆಯನ್ನು ಬೆಳೆಸುತ್ತದೆ.

ಪ್ರಬಂಧದ ಕೊನೆಯಲ್ಲಿ ಪ್ರಬಂಧಕಾರ ಬೇಕನ್ ನ ನಿಲುವು ಸ್ಪಷ್ಟವಾಗಿ ನ್ಯಾಯ ನಿರ್ಣಯದ ಕೊನೆಯ ಅಂಕದಂತೆ ಮೂಡಿಸುತ್ತಾನೆ “Takes upon himselp the duty of handling out prescriptions for various disease of the mind” ಬೇರೆ ಬೇರೆ ಖಾಯಿಲೆಗೆ ಅನುರೂಪವಾಗಿ ಅದೇ ಔಷಧ, ವ್ಯಾಯಾಮಗಳು ಹೇಗೆ ಅಗತ್ಯವೋ ಹಾಗೆ ಆಯಾ ಜ್ಞಾನಕ್ಕೇ ಆಯಾ ವಿಷಯಗಳ ಅಧ್ಯಯನದ ಅಗತ್ಯ ಮತ್ತು ಮಹತ್ವವನ್ನು ಪ್ರಸ್ತಾಪಿಸುತ್ತಾನೆ ಬೇಕನ್.
ಹೀಗೆ ಒಟ್ಟಾರೆಯಾಗಿ ಅಧ್ಯಯನ ಶೀಲರಿಗೆ ಅತ್ಯಪೂರ್ವ ಮಾಹಿತಿ ಕೈಪಿಡಿಯಾಗಿ ಓದುಗರ ಮನಗೆದ್ದ ಸತ್ವಯುತ ಪ್ರಬಂಧ “Of Studies”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿಹನು ನನ್ನ ಪತಿ
Next post ಮಹಾತ್ಮರು

ಸಣ್ಣ ಕತೆ

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…