ಮೆಟ್ಟಲಿಳಿದು ಬಳುಕಿ ಬರುವಳು ಈ ಕಾಲದ ಚೆಲುವೆ ಸದ್ಯತೆಯ ಸೃಷ್ಟಿಸುವ ಶೃಂಗಾರದಲ್ಲಿ ಎಲ್ಲರೂ ಕಾದಿರಲು ರಂಗದ ಮುಂದೆ ಇವಳು ಇಡೀ ಲೋಕದ ತಲೆ ತಿರುಗುವಂತೆ ನರ್ತಿಸಲಿದ್ದಾಳೆ ಒಂದು ದಿನ ಅದೇ ಕೊನೆಯ ದಿನ ತಬಲೆಯವ ಕಾಯುವ ಸಿತಾರಿನವ ಕಾಯುವ ಸಭಿಕರಿಗೇನು...

ದಾರುಣತೆ ವಿಪ್ಲವದ ಮೊದಲಿತ್ತು ಜತೆಯಿತ್ತು ಆಮೇಲೆಯೂ ಇತ್ತು ವಿಪ್ಲವಕ್ಕೊಂದು ಕಾರಣವಾಗಿ ಇತ್ತು ಆಮೇಲೊಂದು ನೆನಪಾಗಿಯೂ ಇತ್ತು ಒಂದು ಆಕರ್ಷವಾಗಿ ಮತ್ತೊಂದು ದುಃಸ್ವಪ್ನ ವಾಗಿ ಕಾಡುತ್ತ ಇದ್ದುವು ವ್ಯಾಘ್ರದ ವ್ರಣದಂತೆ ಇದ್ದ ಮೂವರಲ್ಲೇ ಆಗಬೇಕು ಈ ...

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ ಕಾರ್ಯವ ಹುಡುಕುವುದು ಕಾರಣ ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲ...

ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...

ಭೂಗೋಲದ ಮೇಲೆ ಅವ ಎದ್ದು ನಿಂತು ಆಚೀಚೆ ವಾಲುತ್ತಾನೆ ಕೆಲವು ಆಧುನಿಕ ಆಟಿಕೆಗಳಂತೆ ಕುಸಿದು ಬಿದ್ದರು ಮತ್ತೆ ಎದ್ದು ನಿಲ್ಲುತ್ತಾನೆ ಭೂಮಿ ಸುಮ್ಮನಿದೆ ನೀನೆಲ್ಲಿ ಹೊದರು ಹೋಗುವಿ ಎಷ್ಟು ದೂರ ಎಂಬಂತೆ ಅವ ಮೆಟ್ಟಲೇರುತ್ತಾನೆ ಮೆಟ್ಟಲಿಳಿಯುತ್ತಾನೆ ಎ...

ನಿಯಂತ್ರಿಸು ಮನಸ್ಸನ್ನು ನಿಯಂತ್ರಿಸಿದಷ್ಟೂ ಅದರ ಶಕ್ತಿ ವರ್ಧಿಸೋದು ಇದೊಂದು ತತ್ವ ಜಗ್ಗಿದ ಕುದುರೆ ಜಿಗಿಯುವ ಹಾಗೆ ಮುಂದು ಮುಂದಕ್ಕೆ ಆದರೂ ಓಡುವುದು ಕುದುರೆ ನೀನು ಓಡುವುದಿಲ್ಲ ಓಡುವ ಅನುಭವ ಮಾತ್ರ ನಿನಗೆ ಬಯಲು ಬೆಟ್ಟ ಇಳಿಜಾರು ಕಣಿವೆ ಎಲ್ಲ ...

ಗಾಳಿಯಲಿ ಬರೆಯುವೆನು ನೀರಲ್ಲಿ ಬರೆಯುವೆನು ಚಿರಂತನ ಸತ್ಯಗಳ ಬರೆಯುತ್ತಲೇ ಅವು ಅಳಿಸಿದರೆ ತಾನೆ ಶಾಶ್ವತೆಗೆ ಸಾಕ್ಷಿ ಕಲ್ಲಲ್ಲಿ ಬರೆದವು ಕೋಟೆ ಗೋಡೆಗಳಾದುವು ಮರದಲ್ಲಿ ಬರೆದುವು ಬಾಜರ ಕಂಭಗಳಾದುವು -ಅಂದನು ದೀರ್ಘತಮಸ್ ಮರ್ತ್ಯದಲ್ಲಿರಿಸುವುದು ಮನ...

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ತಲುಪಲು ದಿನಗಳು ವಾರಗಳು ಮಾಸಗಳು ಬೇಕು ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ ಅಥವಾ...

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ? ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ ಸಾಗುವುದು ಇತಿಹಾಸ ನನ...

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ ಪ್ರಾಕೃತದ ಸ್ಮೃತಿಯಂತೆ ಹೋದಲ್ಲಿ ಬರುವ ತಾಳೆ ಮರವೇ ದಾರಿಯುದ್ದಕ್ಕೂ ಜತೆಗಾರ ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ ಕೇವಲ ಗೆರೆಗಳ...