ಉಮರನ ಒಸಗೆ – ೫೫

ಕಡೆಗೊರ್‍ವನಿಂತು ಬಿಸುಸುಯ್ದನಾ ಸಭೆಯೊಳಗೆ : "ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ; ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ; ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ." *****

ಕಾಡಲು ಬೇಡಲು

ಕಾಡಲು ಬೇಡಲು ಸುಮ್ಮನೆ ಹಾಡಲು ಅತ್ತಿಗೆ ಬೇಕು ನನಗತ್ತಿಗೆ ಬೇಕು ಅಣ್ಣನ ಹತ್ತಿರ ವಕಾಲತು ಮಾಡಲು ಅತ್ತಿಗೆ ಬೇಕು ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು ಅತ್ತಿಗೆ ಬೇಕು ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು ಅತ್ತಿಗೆ...

ಮಲೆದೇಗುಲ – ೧

ಸಕಲ ಸಂದೇಹಗಳು ಬಳಲಿ ಬಳಿಗೈತಂದು ಬಿಡುವ ಬಯಸುವ ತವರೆ, ಮಲೆಯ ದೇಗುಲವೆ, ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ- ದೊಡೆವಽಶಾ೦ತಿಯು ಮದ್ದೆ, ಮುನಿಹೃದಯಫಲವೆ, ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ ತೋರಿ ತಿರಿವೀ ಭವದ ನಿಶ್ಚಲಕೇ೦ದ್ರವೇ. ಋಜುಅನೃಜು ಋತಅನೃತ ಲೇಸುಕೇಡೆಂಬ ಬೆಲೆ-...