ಶೆರಿಡನ್ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್ಣನೆ
ಎಲಿಜತನ್ ಕಾಲ ಇಂಗ್ಲೀಷ ನಾಟಕದ ಸುವರ್ಣಯುಗ. ಆದರೆ ಮುಂದೆ ಪ್ಯೂರಿಟನ್ರ ಕಾಲದಲ್ಲಿ ನಾಟಕಗಳಿಗಾಗಲಿ, ಕಲೆಗಾಗಲಿ ಮಾನ್ಯತೆ ಹೊರಟುಹೋದ ಕಾರಣ ನಾಟಕಗಳು ತಮ್ಮ ಚರಿಷ್ಮಾ ಕಳೆದುಕೊಂಡವು. ನಾಟಕಗಳು ಜನಸಾಮಾನ್ಯರ ಮನಸ್ಸನ್ನು ನೈತಿಕವಾಗಿ ಭ್ರಷ್ಟಗೊಳಿಸುವುದೆಂಬ ನಿಲುವು ಹೊತ್ತ...