ಅಬ್ದುಲ್ ಹಮೀದ್ ಪಕ್ಕಲಡ್ಕ

#ಸಣ್ಣ ಕಥೆ

ನಿರಾಳ

0

ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು ರೂಪಾಯಿ ಮಾತ್ರ ಉಳಿದಿದೆ. ಇದರಲ್ಲಿ ಮನೆಗೆ ಹಿಂತಿರುಗಿ ಹೋಗಲು ಬಸ್ಸಿಗೆ ಸುಮಾರು ಹದಿನೆಂಟು ರೂಪಾಯಿ ಬೇಕು. ಮತ್ತೆ ಉಳಿಯುವುದು ಬರೇ ಒಂಭತ್ತು ರೂಪಾಯಿ. ಇದರಲ್ಲಿ ಚಹಾ, ತಿಂಡಿ […]

#ಸಣ್ಣ ಕಥೆ

ಕನಸುಗಳಿಗೆ ದಡಗಳಿರುದಿಲ್ಲ

0

ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ – ಮನ ಒಮ್ಮೆ ಪುಲಕಿತವಾಯಿತು. ಯಾವಾಗಲೂ ಹೀಗೆ ಆಗದ ಮನ ಇವತ್ತೇಕೆ ಹೀಗೆ ಸ್ಥಿಮಿತ ಕಳಕೊಳ್ಳುತ್ತದೆ ಎಂದು ಅವಳಿಗೆ ಆಶ್ಚರ್ಯವಾದರೂ ಇದಕ್ಕೂ ಒಂದು ಕಾರಣ ಇದೆ ಎಂದು ಅವಳು ಮಾತ್ರ ತಿಳಿದಿದ್ದಳು. ಹಳೆಯ […]

#ಸಣ್ಣ ಕಥೆ

ಕಳಕೊಂಡವನು

0

ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ ಮೇಲೆತ್ತಿ ಆ ಊರಿನ ಮೇಲೆ ಕಣ್ಣಾಡಿಸಿದ, ಅವನಿಗೆ ಆಶ್ಚರ್ಯ ಕಾದಿತ್ತು. ಇದು ನನ್ನ ಹುಟ್ಟೂರೇ ಎಂಬ ಸಂಶಯ ಅವನನ್ನು ಕಾಡತೊಡಗಿತು. ಸುಮಾರು ಐವತ್ತು ವರ್ಷದ ನಂತರ ಅವನು […]

#ಸಣ್ಣ ಕಥೆ

ಅವರು ನಮ್ಮವರಲ್ಲ

0

ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ. ಏನಪ್ಪಾ, ಇವತ್ತು ಬೆಳಿಗ್ಗೇನೇ ಏನು ಗ್ರಹಚಾರ ಕಾದಿದೆಯೋ ಎಂದು ಮನದಲ್ಲೇ ಭಯ ಪಟ್ಟುಕೊಂಡು, ನೋಟು ಬುಕ್ ಹಾಗೂ ಪೆನ್ನು ಹಿಡಿದು ಸಾಹೇಬರ ರೂಂ ಹೊಕ್ಕಿದೆ. ಸಾಹೇಬರು ಫೋನಿನಲ್ಲಿ […]

#ಸಣ್ಣ ಕಥೆ

ದಿನಚರಿಯ ಪುಟದಿಂದ

0

ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು ಇಲ್ಲಿ ನಿಲ್ಲುವುದಿಲ್ಲವಾದರೂ, ೫ ನಿಮಿಷಕ್ಕೊಮ್ಮೆಯಂತೆ ಸರ್ವೀಸ್ ಲೋಕಲ್ ಬಸ್ಸುಗಳು ಓಡಾಡುತ್ತಿರುತ್ತವೆ. ಈ ಸಣ್ಣ ಪೇಟೆ ದಾಟಿಯೇ ಕಾರ್ಕಳ, ಬಜ್ಪೆ, ಬೆಳ್ತಂಗಡಿ, ವೇಣೂರುಗಳಿಗೆ ಬಸ್ಸು, ವಾಹನಗಳು ಹೋಗಬೇಕಾಗಿರುವುದರಿಂದ ಸ್ವಲ್ಪ […]

#ಸಣ್ಣ ಕಥೆ

ತಿಥಿ

1

“ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ ಕಸುಬುಗಾರಿಕೆಯನ್ನು ಪುನಃ ಶುರುಮಾಡಿದೆಯೋ, ನಿನ್ನ ಚರ್ಮ ಸುಲಿದು ಈ ಜೈಲಿನ ಕಂಬಿಗೆ ಅಂಟಿಸುತ್ತೇನೆ. ಹುಷಾರ್! ಬಟ್ಟೆಯ ಕಟ್ಟನ್ನು ಪುರಂದರನ ಮುಖಕ್ಕೆ ಜೋರಾಗಿ ಬಿಸಾಡಿ ಜೈಲಿನ ಹಂಚು ಬಿದ್ದು […]

#ಸಣ್ಣ ಕಥೆ

ಒಲವೆ ನಮ್ಮ ಬದುಕು

0

“The best of you is he who behaves best towards the members of his family” (The Holy Prophet) ವಾರದ ಸಂತೆ. ಬೆಳಿಗ್ಗೆ ೯ ಗಂಟೆ ಅಗುವುದರೊಳಗೆ ಪೇಟೆ ಇಡೀ ಜನಜಂಗುಳಿಯಿಂದ ತುಂಬ ತೊಡಗಿತು. ಜನರ ನೂಕು ನುಗ್ಗಲಿನಿಂದಾಗಿ ರಸ್ತೆ ಮೇಲೆ ವಾಹನಗಳು ಚಲಿಸಲು ಪರದಾಡುತ್ತಿದ್ದವು. ಹಳ್ಳಿಗಳಿಂದ ಬಂದ ರೈತರು […]

#ಸಣ್ಣ ಕಥೆ

ಒಂದು ಹಿಡಿ ಪ್ರೀತಿ

0

ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು ಮುದಿ ದಂಪತಿಗಳು. “ನೋಡೇ ಪಾರೂ, ತೋಟದಲ್ಲಿ ಹುಲ್ಲು ಹಾಗೂ ಬೇಡದ ಗಿಡಗಳು ತುಂಬಿ ಹೋಗಿವೆ. ಕಾಲಿಡಲು ಭಯವಾಗುತ್ತಿದೆ. ಹೀಗಾದರೆ ತೋಟದಲ್ಲಿ ಸ್ಪ್ರಿಂಕ್ಲರ್ ಚಾಲು ಮಾಡುವುದು ಹೇಗೆ? ಹೇಗೂ […]

#ಸಣ್ಣ ಕಥೆ

ಮತ್ತೆ ಬಂದ ವಸಂತ

ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ – ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ – ಗೆಳತಿಯರಾಗಿರೋಣ’. ಅವಳ ಮಾತು ಅವನಿಗೆ ಅರ್ಥವಾಯಿತೋ, ಅಲ್ಲ ಕೇಳುವ ವ್ಯವಧಾನ ಇರಲಿಲ್ಲವೋ ಆವನಂತೂ ಆ ಬಗ್ಗೆ ಏನೂ ಅನ್ನಲಿಲ್ಲ. ಬಹುಶಃ ಅವಳ ಮಾತನ್ನು ಅವನು ಸರಿಯಾಗಿ ಕೇಳಿಸಿಕೊಳ್ಳಿಲಿಲ್ಲವೋ? ಅವಳಂತೂ […]

#ಸಣ್ಣ ಕಥೆ

ನಿರೀಕ್ಷೆ

0

ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ ಹತ್ತಿರದ ಸಣ್ಣ ಮೈದಾನದ ಕಲ್ಲು ಬೆಂಚಿನ ಮೇಲೆ ಅವನು ಯಾವಾಗಲೂ ಸಂಜೆ ಹೊತ್ತು ಕುಳಿತಿರುತ್ತಾನೆ. ಬೆಂಚಿನ ಮೇಲೆ ತನ್ನ ಕಾಲುಗಳನ್ನು ಅರ್ಧ ಮಡಚಿ, ಹಣೆಯನ್ನು ಮೊಣಕಾಲಿನ ಸಂಧಿಗೆ […]