ಅರ್ಥಶಾಸ್ತ್ರ

ಅರ್ಥಶಾಸ್ತ್ರ

#ಅರ್ಥಶಾಸ್ತ್ರ

ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್‍ಯಗಳು

0

೧.೬ ಸಾರಾಂಶ ೧. ಹಣದ ಆವಿಷ್ಕಾರಕ್ಕೂ ಮೊದಲು ವಸ್ತುವಿನಿಮಯ ವ್ಯವಸ್ಥೆ ಅನುಷ್ಠಾನದಲ್ಲಿತ್ತು. ಸರಕುಗಳಿಗೆ ಬದಲಾಗಿ ಸರಕುಗಳನ್ನು ಮತ್ತು ಸೇವೆಗಳಿಗೆ ಬದಲಾಗಿ ಸೇವೆಗಳನ್ನು ವಿನಿಮಯ ಮಾಡುವ ವ್ಯವಸ್ಥೆಯದು. ೨. ವಸ್ತು ವಿನಿಮಯ ವ್ಯವಸ್ಥೆಯ ದೋಷಗಳಿಂದಾಗಿ ಹಣದ ಆವಿಷ್ಕಾರವಾಯಿತು. ಅದಕ್ಕೂ ಮೊದಲು ಸ್ತ್ರೀಯರನ್ನು, ಗುಲಾಮರನ್ನು, ಸಾಕುಪ್ರಾಣಿಗಳನ್ನು, ದವಸಧಾನ್ಯಗಳನ್ನು, ತಪ್ಪಳ, ಚರ್ಮ, ಆನೆದಂತ, ತಂಬಾಕು, ಚಾಹುಡಿ, ಹರಳುಕಲ್ಲು, ಉಪ್ಪು ಇತ್ಯಾದಿಗಳನ್ನು […]

#ಅರ್ಥಶಾಸ್ತ್ರ

ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

0

೧.೫ ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ ಹಣವು ಸರಕು ಮತ್ತು ಸೇವೆಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಸಾಧನವಾಗಿದೆ. ಹಣವನ್ನು ಸಾರ್ವತ್ರಿಕ ವಿನಿಮಯ ಮಾಧ್ಯಮ ಮತ್ತು ಮೌಲ್ಯ ಮಾಪಕ ಸಾಧನವೆಂದು ವ್ಯಾಖ್ಯಾನಿಸಲಾಗುತ್ತದೆ. ಹಣದ ವರ್ತುಲ ಪ್ರವಾಹ ಆರ್ಥಿಕ ಚಟುವಟಿಕೆಗಳ ನಿರಂತರತೆಗೆ ಅತ್ಯಂತ ಅಗತ್ಯವಾದುದು. ಹಣ ಇಲ್ಲದಿದ್ದರೆ ಅನುಭೋಗ, ಉತ್ಪಾದನೆ, ವಿನಿಮಯ ಮತ್ತು ವಿತರಣೆ ನಡೆಸಲು ಸಾಧ್ಯವಿಲ್ಲ. ಹಣವು […]

#ಅರ್ಥಶಾಸ್ತ್ರ

ಹಣದ ಮೂಲ ಪರಿಕಲ್ಪನೆಗಳು

0

೧.೪ ಹಣದ ಮೂಲ ಪರಿಕಲ್ಪನೆಗಳು ವಿತ್ತ ತಜ್ಞರು ಹಣವನ್ನು ಬೇರೆ ಬೇರೆ ರೀತಿಯಲ್ಲಿ ವರ್ಗೀಕರಿಸುತ್ತಾರೆ. ಹಣದ ವರ್ಗೀಕರಣವನ್ನು ಅದರ ವಿಧಗಳು ಅಥವಾ ರೂಪಗಳು ಎಂದು ಕರೆಯಲಾಗುತ್ತದೆ. ಇವುಗಳ ಹಣದ ಮೂಲ ಪರಿಕಲ್ಪನೆಗಳಾಗಿವೆ. ಹಣದ ಸ್ವರೂಪ ಕಾರ್ಯ ಮತ್ತು ತಯಾರಿಕಾ ಸಾಧನಗಳ ಆಧಾರದಲ್ಲಿ ಹಣವನ್ನು ಸಾಮಾನ್ಯವಾಗಿ ಲೋಹದ ಹಣ, ಕಾಗದದ ಹಣ ಮತ್ತು ಬ್ಯಾಂಕು (ಉದರಿ) ಹಣವೆಂದು […]

#ಅರ್ಥಶಾಸ್ತ್ರ

ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

0

ಹಣ ಇಲ್ಲದಿದ್ದರೆ ಇಂದು ಯಾವುದೇ ವ್ಯವಹಾರ ನಡೆಯಲಾರದು. ಸರ್ವೇಗುಣಾಃ ಕಾಂಚನಮಾಶ್ರಯಂತಿ ಎಂಬ ಹೇಳಿಕೆ ಹಣಕ್ಕೆ ಆಧುನಿಕ ಪ್ರಪಂಚದಲ್ಲಿ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ನಾವೆಲ್ಲರೂ ಹಣವನ್ನು ಬಳಸುತ್ತೇವೆ. ಹಣ ಮನುಷ್ಯನ ಮೂಲಭೂತ ಸಂಶೋಧನೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಹಣದ ಸಂಶೋಧನೆಗೆ ಮೂಲಕಾರಣ ವಸ್ತು ವಿನಿಮಯ ವ್ಯವಸ್ಥೆಯ ತೊಂದರೆಗಳು, ಸರ್ವಮಾನ್ಯವಾದ ಮೌಲ್ಯಮಾಪನ ಮತ್ತು ವಿನಿಮಯ ಮಾಧ್ಯಮವೊಂದರ ಅನಿವಾರ್ಯತೆಯು […]

#ಅರ್ಥಶಾಸ್ತ್ರ

ಹಣದ ಹುಟ್ಟು ಮತ್ತು ಬೆಳವಣಿಗೆ

0

೧.೨ ಹಣದ ಹುಟ್ಟು ಮತ್ತು ಬೆಳವಣಿಗೆ ವಿನಿಮಯ ಕ್ರಿಯೆ ಸರಿಯಾಗಬೇಕಾದರೆ ಮೌಲ್ಯವನ್ನು ಮಾಪನ ಮಾಡುವ ಸಾಮಾನ್ಯ ವಾದ ಮಾಪಕವೊಂದು (ಅಳತೆಗೋಲು) ಬೇಕೇ ಬೇಕು. ವಸ್ತು ವಿನಿಮಯ ವ್ಯವಸ್ಥೆಯ ಸೋಲಿಗೆ ಬಹುಮುಖ್ಯವಾದ ಕಾರಣ ಸಾಮಾನ್ಯ ಮೌಲ್ಯಮಾಪನ ಸಾಧನವೊಂದರ ಕೊರತೆಯಾಗಿತ್ತು. ಹಾಗಾಗಿ ವಿನಿಮಯವು ಅನೇಕ ಸಮಸ್ಯೆಗಳನ್ನು ಒಳಗೊಂಡಿತ್ತು ಮತ್ತು ಉತ್ಪಾದನೆಗೆ ಉತ್ತೇಜನ ಇಲ್ಲದಾಗಿತ್ತು. ಆದುದರಿಂದ ಬುದ್ಧಿವಂತ ಜನರು ಸರ್ವಮಾನ್ಯವಾದ […]

#ಅರ್ಥಶಾಸ್ತ್ರ

ವಸ್ತು ವಿನಿಮಯ ವ್ಯವಸ್ಥೆ : ಹಣದ ಉಗಮ

0

ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು ೧.೧. ವಸ್ತು ವಿನಿಮಯ ವ್ಯವಸ್ಥೆ : ಹಣದ ಉಗಮ ಬಹಳ ಹಿಂದಿನ ಕಾಲದಲ್ಲಿ ಹಣ ಬಳಕೆಯಲ್ಲಿರಲಿಲ್ಲ. ನಮ್ಮ ಅನೇಕ ಪೂರ್ವಿಕರು ಹಣ ಇಲ್ಲದೆ, ಹಣವನ್ನು ನೋಡದೆ ಬದುಕಿದ್ದರು. ಆಸೆಗಳು ಬಹಳ ಮಿತವಾಗಿದ್ದ ಕಾಲದಲ್ಲಿ ಹಣದ ಅಗತ್ಯವೇ ಇರಲಿಲ್ಲ. ಪುರಾತನ ಮಾನವ ಬೇಟೆಯಾಡಿ, ಹಣ್ಣು ಹಂಪಲು ತಿಂದು ಬದುಕುತ್ತಿದ್ದ. ಸ್ವಾವಲಂಬಿ […]