ಹನಿ ಕಥೆ

#ಹನಿ ಕಥೆ

ಮೊಬೈಲ್ ರೊಮಾನ್ಸ್

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮದುವೆಗೆ ಕಾತುರವಾಗಿದ್ದ ಆ ಹುಡುಗಿಗೆ ದೂರದ ಸಂಬಂಧಿ ಯೊಬ್ಬರು, “ನೋಡು! ಇದು ಹುಡುಗನ ಮೊಬೈಲ್ ನಂಬರ್, ಮಾತನಾಡಿ ನೋಡು, ನಿನಗೆ ಸರಿಯಾಗಬಹುದು”, ಎಂದರು. ಹುಡುಗ ಹುಡಿಗಿ ದಿನವು ಗಂಟಗಟ್ಟಲೆ ಮಾತನಾಡಿ ಮೆಚ್ಚಿಕೊಂಡು ಮೊಬೈಲ್ ರೊಮಾನ್ಸ್ ಮಾಡಿದರು. ಹಿಂದು ಹುಡುಗಿಯಾದ ಅವಳಿಗೆ ಕೊನೆಗೆ ಅರಿವು ಆದದ್ದು ಅವನು ಪ್ರಿಯಕರ “ಅಭಿ” ಅಲ್ಲ, “ಹಬೀಬ್ಬುಲ್ಲಾ!” ಎಂದು. ಅವನು ಹಕಾರಕ್ಕೆ […]

#ಹನಿ ಕಥೆ

ಮದರ್ಸ್ ಡೇ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರಿತಪಿಸುತಿದ್ದ ಒಂದೇ ಜೀವವೆಂದರೆ ಅವಳ ಮಗಳು. “ನೀರಾದರೂ ಮಜ್ಜಿಗೆ, ಹುಚ್ಚಿಯಾದರು ತಾಯಿ” ಎಂದು ಮದರ್ಸ್ ಡೇ ಗೆ ಬಂದು ತಾಯಿಯನ್ನು ಬಿಗಿದಪ್ಪಿ […]

#ಹನಿ ಕಥೆ

ಗಾಂಧಿ ಟೋಪಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅವನು ಗಾಂಧಿಯ ಚಿತ್ರವನ್ನು ತದೇಕ ಚಿತ್ತದಿಂದ ನೋಡುತಿದ್ದ. ಇವನು ಗಾಂಧಿಯ ಪರಮ ಭಕ್ತನಿರಬಹುದೆಂದು ಊಹಿಸಿ “ಗಾಂಧಿಯಲ್ಲಿ ನೀನೇನು ಕಂಡೆ?” ಎಂದೆ. “ಗಾಂಧಿ ಟೋಪಿ ಬಿಸಿಲಿಗೆ ಬಹಳ ಆಕರ್ಷಕವಾಗಿದೆ” ಎಂದ. ‘ಅಯ್ಯೋ’ ಎಂದು ಮರುಗಿತು ಬರಿ ಟೋಪಿ ಕುರಿತು ಚಿಂತಿಸಿದ ಯುವಕನನ್ನು ಕಂಡು ಹೃದಯ. *****

#ಹನಿ ಕಥೆ

ಚಪ್ಪಲಿ ಕಳವು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ದೇವಸ್ಥಾನದಲ್ಲಿ ನಡೆಯುತ್ತಿದ್ದ ಪ್ರವಚನಕ್ಕೆ ನೂರಾರು ಜನ ಬರುತಿದ್ದರು. ಎಲ್ಲರ ಬಾಯಲ್ಲು ಪ್ರವಚನದ ಬಗ್ಗೆ ಬಿಟ್ಟು “ನಮ್ಮ ಚಪ್ಪಲಿ ಕಳುವಾಗಿದೆ” ಎಂದು ಹೇಳಿಕೊಂಡು ಮಾತನಾಡುತ್ತಿದ್ದರು. ಇದು ಪ್ರವಚನಕಾರಾರ ಕಿವಿಗೂ ಬಿತ್ತು. ಅವರು ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಚಪ್ಪಲಿ ಕಳುವಿಗೆ ಹಂದಿ ಜನ್ಮ ಬರುವದೆಂಬುದರ ಬಗ್ಗೆ ಸಾಂಗೋಪಾಂಗವಾಗಿ ಬಿತ್ತರಿಸಿ ಹೇಳಿದರು. ಮಾರನೆಯ ದಿನ ಎಲ್ಲರ ಮುಖದಲ್ಲಿ ಸಂತಸ ತುಳುಕಾಡುತಿತ್ತು. […]

#ಹನಿ ಕಥೆ

ವೃದ್ಧ ಜೋಡಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ ತನ್ನ ಕೈಯಿಂದ, ಗಂಡನ್ನನ್ನು ಎಳೆದುಕೊಂಡು ಎದೆ ಗವಚಿಕೊಂಡಳು. “ಮುಳಗಬೇಡಿ, ಮುಳಗಬೇಡಿ” ಎಂದು ಕಿರುಚುತ್ತಾ ದಡಕ್ಕೆ ಎಳದೊಡನೆ ಜಗಳ ಶುರುವಾಯಿತು. “ಬೇಡಾಂತ ಹೇಳಿದ್ರೆ ಕೇಳ್ತಿರಾರಿ? ಯಾಕ್ರಿ ಮುಳಗಿ ಸಾಯಿತೀರಿ?” […]

#ಹನಿ ಕಥೆ

ಶಿವಲಿಂಗ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಹಲಸಿನ ಕಾಯಿಗಳು ಮೈತುಂಬಾ ಜೋತಾಡುತ್ತಿದ್ದ ಹಲಸಿನ ಮರದ ಮುಂದೆ ಅವನು ನಿಂತಿದ್ದ, “ಇಷ್ಟು ಕಾಯಿ, ಹಣ್ಣುಗಳನ್ನು ಹೇಗೆ ಈ ಮರ ಹೊತ್ತು ನಿಂತಿದೆ ಗಾಳಿ, ಮಳೆ ಬಿಸಿಲಿನಲ್ಲಿ?” ಎಂದುಕೊಂಡ. ಒಡನೆ ಅವನಿಗೆ ನೆನಪಾದದ್ದು ಭಾರವೆಂದು ತಾನು ಬಿಚ್ಚಿಟ್ಟಿದ್ದ ಶಿವದಾರದ ಪುಟ್ಟ ಶಿವಲಿಂಗ. *****

#ಹನಿ ಕಥೆ

ಮುದುಕನ ಬಾಲ್ಯ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ “ಭೇಷ್” ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ ಆಡಿ ದೊಡ್ಡವರಾದರು. ಕೇರಿ ಕೇರಿಯಲ್ಲಿ ಹಾಡಿ ಹಾಡಿ ಹುಡುಗ ಮುದುಕನಾದ. ಕೊನೆಗೆ ಮೊಮ್ಮಕ್ಕಳ ಆಟ ಪಾಟದಲ್ಲಿ ಕಳೆದು ಹೋದ ತನ್ನ ಬಾಲ್ಯವನ್ನು ಕಂಡು ಕೊಂಡ ಮುದುಕ. *****

#ಹನಿ ಕಥೆ

ಹರಟೆಮಲ್ಲಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅವಳು ಹರಟೆ ಮಲ್ಲಿ. ಎಲ್ಲಿ ಜನ ಸಿಕ್ಕರೆ ಅಲ್ಲಿ ಅವರ ಜೊತೆ ಹರಟುತಿದ್ದಳು. ಅಕ್ಕ ಪಕ್ಕದ ಮನೆಯಾಕೆ ಹೇಗೆ? ಅವಳ ಕಾಲೇಜ್ ಹೋಗುವ ಆ ಮಕ್ಕಳ ಫ್ಯಾಷನ್ ಹೇಗೆ? ಅವರಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ? ಆಚೆಮನೆ ಮಗು ಯಾಕೆ ರೊಚ್ಚಿಗೇಳುತ್ತೆ? ಮುಂದಿನ ಮನೆ ಅತ್ತೆ ಸೊಸೆ ಜಗಳ ಹೇಗಿರುತ್ತೆ? ಎದುರು ಮನೆಯಾಕೆ ಏಕೆ […]

#ಹನಿ ಕಥೆ

ತಾಯಿ-ಮಗು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು “ರಂಗೋಲಿ ಬೇಕಾಮ್ಮಾ?” ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. “ಮಗು ಊಟ ಮಾಡುತ್ತಾನಾ?” ಎಂದು ಕೇಳಿದೆ. “ಕೊಡಮ್ಮ ಎಂದು ಕೈ ಒಡ್ಡಿದಳು. ಮನೆಯಲ್ಲಿದ್ದ ಚಾಕೊಲೇಟು, ಜೊತೆಗೆ ಅನ್ನಕ್ಕೆ ಮೊಸರು ಹಾಕಿ, ಬೇಯಿಸಿದ ತರಕಾರಿ ಹಾಕಿ ಮಗುವಿಗೆ ತಿನ್ನಿಸು” ಎಂದೆ. […]

#ಹನಿ ಕಥೆ

ಬಸುರಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. “ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ”-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು ಕೊಟ್ಟೆ. ಕಣ್ಣಿಗೆ ಒತ್ತಿಕೊಂಡಳು. ನಾನು ಒಳಗೆ ಬಂದು ಬಾಗಿಲು ಹಾಕಿ ಕಿಡಕಿಯಿಂದ ನೋಡುತ್ತಾ ಇದ್ದೆ. ಹೊಟ್ಟೆಯಲ್ಲಿ ಮಡಚಿಟ್ಟ ಒಂದು ಸೀರೆ […]