ಅವನಿಗೆ ಪುಟ್ಟ ಡಬ್ಬ ಅಂಗಡಿಯಾದರು ಹಾಕಿ ಕೊಳ್ಳುವ ಕನಸಿತ್ತು. ತನ್ನ ಚಪ್ಪಲಿ ರಿಪೇರಿಗೆ ಕೆಲಸಕ್ಕೆ, ಹೊಂಗೆ ತಂಪಿನ ಸೂರು ಕಾವಲುಗಾರ ಕಂಭ ಸಿಕ್ಕಮೇಲೆ ಅವನ ಕನಸು ನನಸಾದಂತೆ ಆಯಿತು. ರಾತ್ರಿ ಹೊತ್ತು ತನ್ನ ಅಂಗಡಿ ಸಾಮಾನುಗಳನ್ನು ಒಂದು ಡಬ್ಬದಲ್ಲಿ ಹಾಕಿ ಹಗ್ಗದಿಂದ ಬಿಗಿದು ವಿದ್ಯುತ್ ಕಂಭಕ್ಕೆ ಕಟ್ಟುತಿದ್ದ. ಅವನ ಬಾಳಿಗೆ ಬೆಳಕಿತ್ತ ವಿದ್ಯುತ್ ಸ್ತಂಭ ಅವನಿಗೆ ಅಧಾರ ಸ್ತಂಭವೂ ಆಯಿತು.
*****