ತರಂಗಾಂತರ – ೧

Published on :

ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ ಓಲಾಡುತ್ತಿವೆ-ಏನೂ ಮಾಡುವಂತಿಲ್ಲ. ದಿನಪತ್ರಿಕ ತೆರೆದರೆ ಹೈರೈಸ್ ಕಟ್ಟಡಗಳ ಪ್ಲಾನುಗಳು, ಆಕರ್ಷಕ ಕಂತುಗಳು, ಧನಸಹಾಯ, ಓನರ್ ಶಿಪ್ ಗ್ಯಾರಂಟಿ. ಅಮೃತ ಅಪಾರ್ಟ್ ಮೆಂಟ್ಸ್, ಕೈಲಾಸ್ ಅಪಾರ್ಟ್ ಮೆಂಟ್ಸ್, ಆಲ್ಫ಼್ಸ್, ಕಾಸಾ ಬ್ಲಾಂಕಾ ಎಂದು ಮುಂತಾದ ಹೆಸರುಗಳು ಈಗ ಗಗನಚುಂಬಿಗಳಿಗೆ. ಫ್ಲಾಟ್ ಎಂದು ಕರೆಯಲಾಗುವ […]

ಮುದುಕನ ಮದುವೆ

Published on :

ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ. ಶ್ಯಾಮರಾಯರ ಮೊದಲ ಪತ್ನಿ ವಿಧಿವಶರಾಗಿ ೩೦ ವರ್ಷವಾಗಿತ್ತು, ಅವರಿಗೆ ಒಂಟಿ ಜೀವನ ಅತ್ಯಂತ ಬೇಸರವನ್ನುಂಟುಮಾಡಿತು. ಮಗ ರವಿ ಮದುವೆಯಾಗಿ ೧೦ ವರ್ಷದಿಂದ ಹೆಂಡತಿಯೊಡನೆ ಬೇರೆ ಸಂಸಾರ ಹೂಡಿದ್ದ. ಶ್ಯಾಮರಾಯರನ್ನು ನೋಡಿಕೊಳ್ಳುವವರು ಮನೆಯಲ್ಲಿ ಯಾರೂ ಇರಲಿಲ್ಲ, ಅವರಿಗೆ ವಯಸಾದವರಿಗೆ ಇರುವ ಎಲ್ಲಾ ಕಾಯಿಲೆಗಳು […]

ಮೋಟರ ಮಹಮ್ಮದ

Published on :

ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ ಒಗ್ಗ ಬೇಕಾದರೂ ಹೇಗೆ? ಶಹರದ ಬೆಡಗಿನ ಜೀವನದ ಮುಂದೆ ಹಳ್ಳಿಯ ಸರಳ ಜೀವನ ಸೊಗಸೆನಿಸುವದಾದರೂ ಸಾಧ್ಯವಿದೆಯೆ? ಈ ಸಿನೆಮಾ ಮಂದಿರಗಳು, ವಿವಿಧ ವಿವಿಧ ತಿಂಡಿತಿನಿಸುಗಳನ್ನು ಒದಗಿಸಿಕೊಡುವ ಹೋಟಲುಗಳು, ಹೊಸ ಬಗೆಯ ಆಟಪಾಟಗಳು-ನಮಗೆ ಆ ಹಾಳು […]

ನೀರ ಮೇಲಣ ಗುಳ್ಳೆ

Published on :

ಗುಲ್ಬರ್ಗದಿಂದ ಹೊರಟಾಗ ಕೂರಲು ಸೀಟೇನು ಸಿಗಲಿಲ್ಲ. ನಿಂತೇ ಹೊರಟಿದ್ದಾಯಿತು. ಅಷ್ಟೊಂದು ಚಾರ್ಜ್ ಕೊಟ್ಟು ಲಕ್ಷುರಿ ಬಸ್‌ನಲ್ಲಿ ನಿಂತು ಪ್ರಯಾಣಿಸುವುದೆಂದರೆ ಮನಸ್ಸಿಗೆ ಅಸಾಧ್ಯ ಕಿರಿಕಿರಿ. ಆದರೆ ಅನಿವಾರ್ಯ, ಆದಷ್ಟು ಬೇಗ ಊರು ಸೇರಬೇಕು ನೂರಾರು ಗಾವುದ ದೂರ, ಪ್ರಾಣಮಿತ್ರ ಜಯಣ್ಣನ ಮರಣದ ಸುದ್ದಿ ಫೋನ್‌ನಲ್ಲಿ ಕೇಳಿದಾಗಿನಿಂದ ತಡೆಯಲಾರದ ಹೊಟ್ಟೆಯುರಿ, ಬೇರೆ ಬಸ್ಸಿಗಾಗಿ ಕಾಯುವಷ್ಟು ವ್ಯವಧಾನವಿಲ್ಲ. ನಿಂತು ತೂಗಾಡುತ್ತಿರುವ ಹಿಂಸೆ ಬೇರೆ. ಜಯಣ್ಣನಿಗೆ ಸಾಯುವಷ್ಟು ವಯಸ್ಸಾಗಿರಲಿಲ್ಲ ನಿಜ. ಆದರೆ ಸಾಯಲು ವಯಸ್ಸೇ ಆಗಬೇಕಂತೇನಿಲ್ಲವಲ್ಲ. […]

ದೇವರು ಮತ್ತು ಅಪಘಾತ

Published on :

ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದುರು ಸೋತು ಸುಮ್ಮನಾಗಿದ್ದರು. ಅವಳೇ ನಿಂತು ಮಣ್ಣಿನ ಗೋಡೆಗಳನ್ನು ಸಿದ್ಧಪಡಿಸಿ ಸೂರನ್ನು ಹೊದಿಸಿದ್ದಳು. ಹೀಗಾಗಿ ಅವಳ ಉಳಿತಾಯವೆಲ್ಲಾ ಗುಡಿಸಲ ರೂಪವನ್ನು ಪಡೆದಿತ್ತು. ಕೆರೆಯಲ್ಲಿ ನೀರು ಏರಿದರೆ ಅವಳ ಗುಡಿಸಲೇ ಮೊದಲ ತುತ್ತಾಗುವುದೆಂದು ಎಲ್ಲರೂ ಭವಿಷ್ಯ ನುಡಿದಿದ್ದರು. ಮೊನ್ನೆಯ ಮಳೆಗೆ ಶೇಖರವಾಗಿದ್ದ ನೀರು […]

ಕಂಬದಹಳ್ಳಿಗೆ ಭೇಟಿ

Published on :

ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು ಬೇಡವೆಂದು ಬದಿಗೊತ್ತಿ ಚೆಕ್ ಸೂಟನ್ನು ಧರಿಸಿ ಕೊಂಡನು. ಅದನ್ನು ಹೊಸದಾಗಿ ಹೊಲಿಸಿದ್ದುದರಿಂದ ಇಸ್ತ್ರಿ ಮಾಡಿದ್ದು ಮಾಡಿಟ್ಟ ಹಾಗೆಯೇ ಇದ್ದಿತು ; ಮತ್ತು ಚೆನ್ನಾಗಿಯೂ ಇದ್ದಿತು. ಜವಾನನು ಬೂಟ್ಸುಗಳಿಗೆ ಪಾಲಿಷ್ ಕೊಟ್ಟು ಮೆರಗು ಬರುವಂತೆ ಮಾಡಿಟ್ಟಿದ್ದನು. ಕಾಲರು, ನೆಕ್ ಟೈ, ಮೊದಲಾದ ಪಾಶ್ಚಾತ್ಯ […]

ಒಲವೆ ನಮ್ಮ ಬದುಕು

Published on :

“The best of you is he who behaves best towards the members of his family” (The Holy Prophet) ವಾರದ ಸಂತೆ. ಬೆಳಿಗ್ಗೆ ೯ ಗಂಟೆ ಅಗುವುದರೊಳಗೆ ಪೇಟೆ ಇಡೀ ಜನಜಂಗುಳಿಯಿಂದ ತುಂಬ ತೊಡಗಿತು. ಜನರ ನೂಕು ನುಗ್ಗಲಿನಿಂದಾಗಿ ರಸ್ತೆ ಮೇಲೆ ವಾಹನಗಳು ಚಲಿಸಲು ಪರದಾಡುತ್ತಿದ್ದವು. ಹಳ್ಳಿಗಳಿಂದ ಬಂದ ರೈತರು ತಮ್ಮ ಸರಕು ಸಾಮಾನುಗಳನ್ನು ಮಾರ್ಕೆಟಿಗೆ ತಂದು ರಾಶಿ ಹಾಕಲು ಹೆಣಗಾಡುತ್ತಿದ್ದರೆ, ವಾರದಲ್ಲಿ ಒಮ್ಮೆ […]

ದಾಲೂರಪ್ಪ

Published on :

ದಾಲೂರಪ್ಪ, ಇದು ಆತನ ಹೆಸರು. ಆದರೆ ಇದು ಆತನ ನಿಜ ಹೆಸರಲ್ಲ. ದಾಲೂ ಎಂಬ ಮಗ ಆತನಿಗಿದ್ದ. ಆತನ ಹೆಸರು ನನಗೆ ಇಂದಿಗೂ ಗೊತ್ತಿಲ್ಲ. ನಾನು ಸೇರಿದಂತೆ ನನ್ನ ಅಕ್ಕ, ತಮ್ಮ, ಅವ್ವೆ ಎಲ್ಲರೂ ಆತನನ್ನ ಕರೆಯುವುದು ದಾಲೂರಪ್ಪ ಎಂದು. ದಾಲೂನ ಅಪ್ಪ ’ದಾಲೂರಪ್ಪ’ ಎಂದು ನಾವು ಸರಳವಾಗಿ ಕರೆಯಲಾರಂಭಿಸಿದೆವು. ನಾನಾಗ ಏಳನೇ ತರಗತಿಯಲ್ಲಿದ್ದೆ. ಆಗ ಆತ ನನ್ನಜ್ಜಿ ಊರಾದ ಗಂಗಾವತಿಯಿಂದ ಇದ್ದಕ್ಕಿದ್ದಂತೆ ಹೊರಟು ಬಂದಿದ್ದ. ಆತನ ಬಗ್ಗೆ ನನಗೆ […]

ಇನ್ನೊಂದು ಕಣ್ಣು

Published on :

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ ಸದ್ದು ಜೊತೆ ಸೇರಿದ್ದೇ, ವಾತಾವರಣ ಹಬ್ಬದ ಕಳೆ ಪಡೆದಿತ್ತು. ಆನ್ನಾ ನಿಟ್ಟುಸಿರಿಡುತ್ತ, ಕಿಟಕಿಯಿಂದ ತುಸು ಆಚೆ ಸರಿದಳು. ನಿತ್ಯ ಬೆಳಿಗ್ಗೆ ತನ್ನ ಗಂಡ ಏಳುವಾಗ ಹಾಸಿಗೆಯನ್ನು ಮಡಚುತ್ತಿದ್ದು, ಆ ದಿವಸ ಮರೆತಿರುವುದನ್ನು ಗಮನಿಸಿದಳು. ಪ್ರತಿ […]

ಹಳ್ಳಿ…

Published on :

ಬಂಗಾರ ಬಣ್ಣದ ಕಾರು, ವೇಗವಾಗಿ… ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ? ಅತ್ಯಾಕರ್ಷಕವಾದ ಸ್ಪಿಯರಿಂಗ್, ಮೃದುವಾದ ಗೇರುಗಳು, ಚಾಲಕನ ರಕ್ಷಣೆಗೆಂದೇ ಏರ್‍ಬ್ಯಾಗ್ ಕಂಡು, ರೆಕ್ಕೆ ಬಂದ ಹಕ್ಕಿಯಾಗಿ, ಲೆಕ್ಕತಪ್ಪಿದ ವೇಗದಲ್ಲಿ ಕಾರು ಓಡಿಸತೊಡಗಿದ. ಅದಕ್ಕಿಂತ ವೇಗವಾಗಿ ತನ್ನ ಮನಸ್ಸು ಓಡುತ್ತಿತ್ತು. ಬಹಳ ವರ್ಷಗಳ್ಮೇಲೆ ತಾಯ್ನಾಡಿಗೆ ಬರುತ್ತಿದ್ದ. ಸ್ವರ್ಗ ಭೂಮಿಗಿಳಿದಷ್ಟು ಖುಷಿ ಅವನಲ್ಲಿತ್ತು. ತಾನುಟ್ಟಿ ಬೆಳೆದ […]