
ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ...
ರಮೇಶನು ಮನೆಯವರೆಲ್ಲರನ್ನೂ ಕರೆದುಕೊಂಡು ತಿರುಪತಿಗೆ ಹೋಗಿದ್ದನು. ಬಲವಂತವಾಡಿದರೂ ಪ್ರಾಣೇಶನು ಹೋಗಲಿಲ್ಲ. ಹೊಸದಾಗಿ ಆರಂಭಿಸಿರುವ ಕನ್ಯಾಮಂದಿರವನ್ನು ನೋಡಿಕೊಳ್ಳುವ ನೆಪದಿಂದ ಅವನು ಹಿಂದೆಯೇ ನಿಂತಿದ್ದನು. ಆದರೆ ಅವನಿಗೆ ಗೊತ್ತಿತ್ತು ಇನ್ನೇನೋ ಪ...
ಸಾಹಿತಿ ಸುಂದರಯ್ಯನವರಿಗೆ ಪುಸ್ತಕದ ಬಾಬು ಮುಂಗಡ ಹಣವನ್ನು ಸಂಗಪ್ಪ ಕೊಟ್ಟುಬಿಟ್ಟ. ಆ ಸಂದರ್ಭದಲ್ಲಿ ಸುಂದರಯ್ಯ ಶಾನುಭೋಗರು ಮತ್ತು ಸಂಗಪ್ಪ ಲೋಕಾಭಿರಾಮವಾಗಿ ಮಾತಾಡ್ತ ಇದ್ದಾಗ ಸುಂದರಯ್ಯ ಹೇಳಿದರು: “ಸಂಗಪ್ನೋರೆ ನೀವು ನಿಜವಾಗ್ಲೂ ಸಮಾಜ ಸೇವೆಗೇ ...
ರಮೇಶ್ ಬೆಳಗೆದ್ದು ಕಾಫಿ ತೆಗೆದುಕೊಂಡು ಕ್ಷೌರ ಮಾಡಿಕೊಳ್ಳುತ್ತ ಕುಳಿತಿದ್ದಾನೆ. ಕ್ಲಾರ್ಕ್ ನರಸಿಂಹಯ್ಯನು ಬಂದು ಕಾಣಿಸಿಕೊಂಡನು. “ಏನ್ರಿ, ನಿಮಗೊಂದು ವಿಚಾರ ಹೇಳಬೇಕೂಂತಿದ್ದೆ. ನೀವು ಒಂದು ಎಂಟು ದಿನ ಬಿಟ್ಟುಕೊಂಡು ಪಿಳ್ಳೇಗೌಡನ ಎಸ್ಟೇಟಿಗೆ ಹೋ...
ಸಂಗಪ್ಪ ಇಷ್ಟೆಲ್ಲ ಮಾಡ್ತಿರುವಾಗ ನಿಮ್ಮ ರಾಜೇಂದ್ರನ ಬಳಗ ಎಲ್ಲಿ ಹೋಯ್ತು ಲೇಖಕರೆ ಅಂತ ನೀವು ಪ್ರಶ್ನೆ ಹಾಕಬಹುದು; ಜೊತೆಗೆ ಅವರಿಗೆ ನಿಮ್ಮ ಈ ಬರವಣಿಗೇಲಿ ಸಂಗಪ್ಪನಷ್ಟೂ ಅವಕಾಶ ಇಲ್ಲ ಅಂತಲೂ ನೀವು ಕೇಳಬಹುದು. ನಿಮ್ಮ ಎರಡು ಪ್ರಶ್ನೆಗಳೂ ಪ್ರಾಮಾಣ...
ಪಿಳ್ಳೇಗೌಡರು ಹೆಸರುವಾಸಿಯಾದ ಕಾಫಿ ಪ್ಲಾಂಟರು. ಅವರ ತೋಟ ಬಾಬಾಬುಡನ್ ಗಿರಿಗಳಲ್ಲೆಲ್ಲಾ ಬಹಳ ದೊಡ್ಡದು. ಯೂರೋಪಿಯನ್ ಪ್ಲಾಂಟರ್‌ಗಳು ಕೂಡ ಅವರಿಗೆ ಗೌರವ ಕೊಡುವರು. ಅವರ ದೇಹ ದೊಡ್ಡದು, ಗಂಟಲು ದೊಡ್ಡದು, ಹೊಟ್ಟೆ ದೊಡ್ಡದು, ಮನಸ್ಸು ದೊಡ್ಡದು; ಎಲ...
ಬೆಳಗ್ಗೆ ಎದ್ದವರು ಎದ್ದ ಹಾಗೆ ಶಾನುಭೋಗರು ಸಂಗಪ್ಪನ ಮನೆಗೆ ಬಂದರು. ಸಂಗಪ್ಪ ಶಯನಗೃಹವನ್ನಿನ್ನೂ ಬಿಟ್ಟಿರಲಿಲ್ಲ. ಅವನ ಹೆಂಡತಿಗೆ ಶಾನುಭೋಗರ ಮೇಲೆ ಸಿಟ್ಟೇ ಬಂದಿತು. ರಾತ್ರಿ ಸಂಗಪ್ಪ ಅದೆಲ್ಲಿ ಹೋಗಿದ್ದನೊ ಬೆಳಗಿನ ಜಾವದಲ್ಲಿ ಮನೆಗೆ ಬಂದಿದ್ದ. ಯ...
ವೀಣಾ ತಾತನಿಗೆ ಮೋಹದ ಮೊಮ್ಮಗಳು. ಒಂದು ಗಳಿಗೆ ಮುದುಕ ಅವಳನ್ನು ಬಿಟ್ಟಿರಲಾರ. ತಂದೆತಾಯಿಗಳ ಜೊತೆಯಲ್ಲಿ ಒಂದು ದಿನ ಸಿನಿಮಾಕ್ಕೆ ಹೋಗಿ ಬಂದರೆ ಅಲ್ಲಿ ತಾನು ಕಂಡುದು ಕೇಳಿದ್ದು ಎಲ್ಲಾ ಅವನಿಗೆ ಎರಡು ದಿನ ಹೇಳುವಳು. ಮುದುಕನಿಗೆ ಸಿನಿಮಾ ಬೇಡ. “ಛೇ...
ಭೂದಾನದ ವಿಷಯಕ್ಕೆ ಬಂದು ಭೂಸುಧಾರಣೆ ಸಂಗತಿ ತಿಳಿಸಿದ್ದಾಯ್ತು. ಈಗ ಅನೇಕರಿಗೆ ಗೊತ್ತಾಗಿದೆ `ಸಂಗಪ್ಪನ ಭೂಸುಧಾರಣೆ’ ಹೇಗಾಯ್ತು ಅಂತ. ಆದರೆ ಅದಕ್ಕೆ ಯಾರೇನೂ ಮಾಡಲಿಲ್ಲ. ಈ ಮಾದರಿ ಮನುಷ್ಯನನ್ನು ಇನ್ನೂ ಅನೇಕರು ಅನುಸರಿಸಿದರು. ಆದ್ದರಿಂದಲ...
ಮುರುಳೀಧರರಯನು ಮಹಡಿಯ ಮೇಲೆ ಕಿಟಕಿಯ ಮಗ್ಗುಲಲ್ಲಿ ಒಂದು ಸೋಫಾದ ಮೇಲೆ ಒರಗಿಕೊಂಡಿದ್ದಾನೆ. ಬಾಯಿ ತುಂಬು ಇರುವ ಅಡಿಕಲೆಯನ್ನು ಮಹತ್ತರವಾದ ಆಲೋಚನೆಯಲ್ಲಿ ಮುಳುಗಿದ್ದಾರೆ. ಮಂಗಳೂರು ಗಣೇಶ ಬೀಡಿಯ ಕಟ್ಟು ಒಂದು ದೀಪದಡ್ಡಿ ಪಟ್ಟಿಗೆ, ಮಗ್ಗುಲಲ್ಲಿರುವ...















