ಬರೆದವರು: Thomas Hardy / Tess of the d’Urbervilles
೧-೯-೧೯೨೦.
‘ತಿಲಕರು ಸ್ಪರ್ಗ ವಾಸಿಗಳಾದರು. ಚೌಪಾತಿಯ ಸಮುದ್ರ ತೀರದಲ್ಲಿ ಅವರ ದೇಹಕ್ಕೆ ಸಂಸ್ಕಾರವಾಗಬೇಕೆಂದು ಬೊಂಬಾಯಿಯ ಪುರಜನರು ಸಂಕಲ್ಪಿಸಿದರು. ಸರಕಾರ ಒಪ್ಪಲಿಲ್ಲ. ಜನ ಪ್ರತಿಭಟಿಸಿತು. ಸರಕಾರ ತನ್ನ ಭದ್ರ ಮುಷ್ಟಿಯನ್ನು ಪದರ್ಶಿ ಸಲು ರಿಸರ್ವ್ ಪೋಲೀಸ್, ಬ್ರಿಟಿಷ್ ಸೋಲ್ಜರಿ, ಎರಡನ್ನೂ ಕಳುಹಿ ಸಿತು. ಗಾಂಧಿಯವರು ಪ್ರತಿಭಟಿಸಿದ ಜನಸ್ತೋಮದ ನಾಯಕ ರಾಗಿ ತಿಲಕರ ದೇಹವನ್ನು ತೆಗೆದುಕೊಂಡು ಹೊರಟರು. ಸರಕಾರಕ್ಕೆ ಏನೋ ಎಂತೋ ಬುದ್ದಿ ತಿಳಿಯಾಗಿ ಅವಿವೇಕವು ಏನೋ ಆಗದೆ, ಗಾಂಧಿಯವರಿಗೆ ಹಾದಿ ಬಿಟ್ಟುಕೊಟ್ಟಿತು.’
ಪೇಪರಿನಲ್ಲಿ ಈ ಸುದ್ದಿ ಯನ್ನು ಓದಿದಾಗ ನಾಯಕನ ಮನೆಯಲ್ಲಿ ಸಿಡಿಲು ಬಿದ್ದಂತಾಯಿತು. ಮಲ್ಲಿಯು ಏಕೆ ಎನು ಎಂಬುದನ್ನು ಅರಿಯದೆ ತನ್ನದೇನೋ ಗಂಟು ಹೋದಂತೆ ಅತ್ತಳು. ತಾವು ಯಾತ್ರೆ ಹೋಗಿ ದ್ದಾಗ ಪೂನಾದಲ್ಲಿ ಆ ಮಹಾರಾಷ್ಟ್ರಸಿಂಹದ ದರ್ಶನಕ್ಕೆ ಹೋದಾಗ, ಅವರ ಮನೆಯಲ್ಲಿ ಅವರು ಪಾರಾಯಣ ಮಾಡುತ್ತಿದ್ದುದು ಜ್ಞಾಪಕಕ್ಕೆ ಬಂತು: ಆ ಕೇಸರಿ ಪ್ರೆಸ್, ಕೇಸರಿ ಎಂದರೆ ಮಹಾರಾಷ್ಟ್ರರು ಪಡುವ ಅಭಿಮಾನ, ಎಲ್ಲವೂ ನೆನಪಾಗಿ. ಅವಳಿಗೆ ದುಃಖವಿಮ್ಮಡಿಸಿತು. ರಾಣಿಯು ‘ಆತನೊಬ್ಬ ಮಹಾಪುರುಷ’. ಆತನ ಮೃತಿಯಿಂದ ರಾಷ್ಟ್ರಕ್ಕೆ ವಿಫಾತವಾಯಿತು. ಎಂದು ಶೋಕಿಸಿದಳು. ನಾಯಕನಿಗೆ ಏನಾ ದರೂ ಮಾಡಬೇಕು: ಸುಮ್ಮನಿರುವ ಸಮಯವಲ್ಲ ಎನ್ನಿಸಿತು. ಕಾರು ಹಾಕಿಕೊಂಡು ನರಸಿಂಹಯ್ಯನನ್ನು ಹುಡುಕಿಕೊಂಡು ಹೋದನು.
ನರಸಿಂಹಯ್ಯನು ತಾತಯ್ಯನವರ ಕಚೇರಿಯಲ್ಲಿದ್ದನು. ನಾಯ ಕನು ಬಂದುದನ್ನು ಕೇಳಿ ತಾತಯ್ಯನವರು “ಬನ್ನಿ ಬನ್ನಿ” ಎಂದರು.
ಅವರ ಕಣ್ಣೂ ಅಳುವಿನಿಂದ ಊದಿಕೊಂಡಿತ್ತು. ಅವರನ್ನು ನೋಡಿ ನಾಯಕನಿಗೂ ಕಣ್ಣಲ್ಲಿ ನೀರೂರಿತು: ತಾತಯ್ಯನವರು ಒರಗುದಿಂಬು ಒರಗಿಕೊಂಡು ಕಂಬಳಿಯನ್ನು ಕಾಲುಮೇಲೆ ಎಳೆದುಕೊಂಡು ಕೂತಿದ್ದರು. ಅಲ್ಲಿ ಒಳಕ್ಕೆ ಹೋಗುತ್ತಿದ್ದಹಾಗೆಯೇ ಏನೋ ಶೂನ್ಯ ತೆಯು ಬಂದು ಆವರಿಸಿದಂತಾಗುತ್ತಿತ್ತು.
ನಾಯಕನು ಆಗಮನದಿಂದ ಕೊಂಚ ತಡೆದಿದ್ದ ಮಾತು ಮುಂದು ವರಿಯಿತು : ತಾತಯ್ಯನನರು ಹೇಳಿದರು:
“ತಿಲಕರು ಸತ್ತುದು ದೇಶದ ದುರದೃಷ್ಟ. ನಿಷ್ಠನಾಗಿ ವಿದ್ವಾಂ ಸನಾಗಿದ್ದ ಮಹಾಪುರುಷನು ಹೋಗಿ ಇಂದು ವೈದಿಕ ಸಂಸ್ಕತಿಯೇ ಅಂತರ್ಧಾನವಾಯಿತು. ಇನ್ನು ಉಳಿದವರಲ್ಲಿ ಬೆಸೆಂಟ್ ಒಬ್ಬಳು. ಆಕೆ ಜಗದ್ಗುರು ತಯಾರಿಸುವುದರಲ್ಲಿ ಕುಳಿತಿದ್ದಾಳೆ. ಆಕೆಗೆ ಇಂಡಿ ಯದ ಮೇಲಿನ ಅಭಿಮಾನಕ್ಕಿಂತ ಇಂಟರ್ ನ್ಯಾಷನಲ್ ಮಠದ ಕಡೆ ಹೆಚ್ಚು ಅಭಿಮಾನ. ಅರವಿಂದರು ಬಾಯಿ ಮುಚ್ಚಿಕೊಂಡು ಪಾಂಡಿ ಚೇರಿ ಸೇರಿದ್ದಾರೆ. ಮಿಕ್ಕವರೆಲ್ಲ ಆಯಾ ಪ್ರಾವಿನ್ಸ್‌ನವರೇ ಹೊರತು ಆಲ್ ಇಂಡಿಯದವರಲ್ಲ. ನೋಡಿದರೆ, ಸತ್ಯಾಗ್ರಹದ ಕೀರ್ತಿ ಗಾಂಧಿ ಯನ್ನು ಮುಂದೂಡಬಹುದು. ಆತನು ಚಂಪಾರಣ್ಯದಲ್ಲಿ ಗೆದ್ದಿ ದ್ದಾನೆ. ಆತನಿಗೆ ಗ್ರಹಬಲ ಚೆನ್ನಾಗಿರುವ ಹಾಗಿದೆ ಹಿಂದೂ ಮುಸಲ್ಮಾನ್ ಎಂಬ ಭೇದವಿಲ್ಲದೆ ಹೊಡೆದಾಡಿದನೆಂದು ಉತ್ತರ ಭಾರತ ಒಪ್ಪುತ್ತದೆ: ಬಾಹ್ಮಣೇತರನೆಂದು ದಕ್ಷಿಣ ಭಾರತ ಒಪ್ಪುತ್ತದೆ. ಆದ ರೇನು? ಆಗಲೆ ಬ್ರಿಟಷ್ ಸರಕಾರ ಡೈಯಾರ್ಕಿ ತಂದಿದೆ. ದೇಶಾಭಿ ಮಾನಿಗಳೆಲ್ಲ ಗಾಂಧಿಯನರ ಮಾತಿನಂತೆ ಸತ್ಯಾಗ್ರಹ, ಅಸಹಕಾರ, ಎಂದು ಕೈಕಟ್ಟಿ ಕೊಂಡು ಕುಳಿತರೆ ಸ್ವಾರ್ಥಿಗಳ ಗುಂಪನ್ನು ಹಿಡಿದು ತಮ್ಮ ಕಡೆ ಮಾಡಿಕೊಂಡು, ಅವರನ್ನು ಮಂತ್ರಿಗಳನ್ನು ಮಾಡಿ, ಸರ ಕಾರ ಬೊಂಬೆಯಾಟ ಆಡುತ್ತದೆ.”
” ನಮ್ಮ ನಾಯಕರಂಥವರು ಮಂತ್ರಿಗಳಾದರೋ ಸಾರ್! ?”
“ನಿಮ್ಮ ನಾಯಕರಂಥವರು ಅವರಿಗೆ ಬೇಕಿಲ್ಲ. ಇವರಂಥಾ ವರು ಮಂತ್ರಿಗಳಾದರೆ ಮೂರು ದಿನಕ್ಕೆ ಬ್ರಿಟಿಷರು ಇಂಡಿಯ ಬಿಟ್ಟು ಪೇರಿ ಹೊಡಿಯಬೇಕಾಗುತ್ತದೆ. ಅವರಿಗೆ ಬೇಕಾದ್ದು ಸ್ವಾಭಿಮಾನದ ಜನ ಅಲ್ಲ: ದೇಶಾಭಿಮಾನದ ಜನ ಮೊದಲೇ ಅಲ್ಲ. ಅವರಿಗೆ ಬೇಕಾದ್ದು, ತಾವು ಹೇಳಿದ ಹಾಗೆ ಕುಣಿಯೋ ಸಣ್ಣ ಜನ.”
” ಹಾಗಾದರೆ ಮುಂದಿನ ಗತಿಯೇನು ? “
“ಮುಂದಿನ ಗತಿ ಗೊತ್ತೇಇದೆ. ಸಣ್ಣ ಜನ ತಾನು ಮೆರೆಯು ವಾಗ ಸರಕಾರದ ಶಕ್ತಿ ಯನ್ನು ದುರುಪಯೋಗ ಮಾಡುತ್ತದೆ. ಅದ ರಿಂದ ಅಸಮಾಧಾನ ಪಟ್ಟ ಜನ ಎದುರುಬೀಳುತ್ತದೆ. ಬ್ರಿಟಿಷ್ ಸರಕಾರದಲ್ಲಿ ಜನರಲ್ ಡೈಯರ್ಗಳಿಗೇನೂ ಕಡಿಮೆಯಿಲ್ಲ. ಏನಾ ದರೂ ಬ್ರಿಟಿಷರು ಇಲ್ಲಿಂದ ದೂರದಲ್ಲಿ ಇದ್ದಾರೆಯಾಗಿ ಏಟು ತಿನ್ನು ವುದು ನಾವು. ದೈವವಶಾತ್ ಇಂಗ್ಲೆಂಡಿಗೆ ಏಟು ಬಿದ್ದು, ಬ್ರಿಟನ್ನರ ದೃಢಮುಷ್ಟಿ ಸಡಲಿದರೆ ಭಾರತದ ಭಾಗ್ಯ ಫಲಿಸುವುದು.”
“ಅದುವರೆಗೂ? “
“ಗಾಂಧಿಯವರ ದಕ್ಷಿಣ ಆಫ್ರಿಕದ ಹೋರಾಟ ಇಲ್ಲಿ ಇನ್ನೂ ವಿಸ್ತಾರವಾಗಿ ನಡೆಯುತ್ತದೆ. ಶತ್ರುವಿನ ಮನಸ್ಸು ಕರಗಿಸಿ ಗೆಲ್ಲ ಬೇಕೆಂಬ ಅವರ ಮತ ಜೈನರ ಅಹಿಂಸೆಯ ಅಪ್ಲಿಕೇಷನ್ -ಕ್ರಿಶ್ಚಿಯನ್ನರ ಗುರು ಹೇಳಿರುವ ಮಾತು ಆತ ಗೆಲ್ಲಲಿ ಸೋಲಲಿ ಇನ್ನೂಂದು ಹೊಸ ಯುಗ ಆರಂಭಿಸುತ್ತದೆ.”
” ಅದೇನು ಗುರುಗಳೇ ! ಹೊಸ ಯುಗ ಅನ್ನುತ್ತೀರಿ ? “
“ಹೋಗೋ ಫೂಲ್, ನಿನಗೆ ಮಾತು ಆಡುವುದಕ್ಕೆ ಬರದು. ಕೇಳುವುದಕ್ಕೆ ಮೊದಲೇ ಬರದು. ಮಹಾಯುದ್ಧಗಳು ಒಂದೊಂದು ನಡೆದರೆ ಜೋಡು ಹೊಸ ಯುಗ ಆರಂಭವಾಗುತ್ತದೆ. ಈಗ. ನೋಡು ಗಂಡಿನ ಯುಗಮುಗಿಯಿತು. ಇನ್ನು ಹೆಣ್ಣಿನಯುಗ ಜಗತ್ತಿನಲ್ಲಿ ನೋಡು, ನಮ್ಮ ದೇಶ ಎಂಬ, ಅಭಿಮಾನ, ನಮ್ಮ ಹಣವಾಗಿರಬೇಕೆಂಬ ಸಿದ್ದಾಂತ ಮಾತ್ರ ಭಾಷೆಗಳ ಮಹತ್ವ. ಇವೆಲ್ಲ ಏನು? ಭೂಮಿ ಹೆಣ್ಣು, ಲಕ್ಷ್ಮಿ ಹೆಣ್ಣು, ವಾಣಿ ಹೆಣ್ಣು, ನನಗೆ ಇನ್ನೂ ಒಂದು ಸಂಶಯ. ಈ ಮಾತೃಭಾಷೆಯ ಮೇಲಿನ ವ್ಯಾಮೋಹ ಕೂಡ, ಇಂಪೀರಿಯಲ್ ಡಿಸೈನ್ ಅಂದರೆ ಬ್ರಿಟಿಷರ ಕೈವಾಡವೋ ಅಂತ ! ಆದಕ್ಕೆ ಇಂಡಿಯದಲ್ಲಿ ಇದು ಬೇಕು. ಹಳ್ಳಿಹಳ್ಳಿಗೂ ಸ್ವಾತಂತ್ರ್ಯದ ಸಂದೇಶ ಒಯ್ಯುವುದು ಇಂಗ್ಲಿಷಿಗೆ ಸಾಧ್ಯವಿಲ್ಲ. ಭಾರತವು ಗೆಲ್ಲಬೇಕಾದಕ್ಕೆ ಮಾಸ್ ಮೂವ್‌ಮೆಂಟ್ ಬೇಕು. ಅದಾಗಲು ಎಚ್ಚರವಾಗಬೇಕು. ಅದರಿಂದಲೇ ಈ ಮಾತೃ ಭಾಷೆ ಬೆಳೆಯಬೇಕು. ಯುದ್ಧಕ್ಕೆ ಮುಂಚೆ ಪೇಪರ್ ಓದುವವರು. ಸಾವಿ ರಕ್ಕೆ ಒಬ್ಬರು ಇರಲಿಲ್ಲ. ಈಗ ನಾಲ್ಕೈದು ಆಗಿದ್ದಾರೆ. ಬಹುಶಃ ಇನ್ನೊಂದು ಯುದ್ದ ಇದಕ್ಕಿಂತ ಭಾರಿಯಾದ ಯುದ್ಧ ಬಂದೇ ಭಾರತದ ಸ್ವಾತಂತ್ರ್ಯ ಬರುವುದೋ ಏನೋ ?”
ಒಂದುಗಳಿಗೆ ಯಾರೂ ಮಾತಾಡಲಿಲ್ಲ. ಮತ್ತೆ ತಾತಯ್ಯನವರೇ ಮಾತನಾಡಿ ಮೌನವನ್ನು ಒಡೆದರು : “ಆಗಲಿ. ಬ್ರೌನಿಂಗ್ ಹೇಳಿದ ಹಾಗೆ ‘ಜಗತ್ತಿನಲ್ಲಿ ಎಲ್ಲಾ ಸರಿಯಾಗಿದೆ’. ಆಡ್ ಕೆಟ್ಟಿರುವುದು ನಮ್ಮ, ಬುದ್ಧಿ. ಆಗುವುದೆಲ್ಲೂ ಒಳಿತೇ ಆಯಿತು ಎಂದು ಮಾನವ ಸುಮ್ಮನಿರಲಾರ.”
*****
ಮುಂದುವರೆಯುವುದು