Home / ಕಥೆ / ಕಾದಂಬರಿ / ಒಡೆದ ಮುತ್ತು – ೩

ಒಡೆದ ಮುತ್ತು – ೩

ಪಿಳ್ಳೇಗೌಡರು ಹೆಸರುವಾಸಿಯಾದ ಕಾಫಿ ಪ್ಲಾಂಟರು. ಅವರ ತೋಟ ಬಾಬಾಬುಡನ್ ಗಿರಿಗಳಲ್ಲೆಲ್ಲಾ ಬಹಳ ದೊಡ್ಡದು. ಯೂರೋಪಿಯನ್ ಪ್ಲಾಂಟರ್‌ಗಳು ಕೂಡ ಅವರಿಗೆ ಗೌರವ ಕೊಡುವರು. ಅವರ ದೇಹ ದೊಡ್ಡದು, ಗಂಟಲು ದೊಡ್ಡದು, ಹೊಟ್ಟೆ ದೊಡ್ಡದು, ಮನಸ್ಸು ದೊಡ್ಡದು; ಎಲ್ಲದಕ್ಕಿಂತ ಕೋಪ ಬಲು ದೊಡ್ಡದು. ಆಳುಗಳಲ್ಲಿ ಯಾರಾದರೂ ಹಿಂತಿರುಗಿ ಮಾತನಾಡಿದನೋ ಅವನಿಗೆ ಅಲ್ಲೇ ಮಾರಣಹೋಮವಾಗಿ ಹೋಗುವುದು. ಯಾವನಾದರೂ ಚೆನ್ನಾಗಿ ಕೆಲಸ ಮಾಡಿದ್ದರೆ, ಅವನಿಗೂ ಆಗಲೇ ಪ್ರತಿಫಲ; ಒಂದು ಕಂಬಳಿ, ಒಂದು ಧೋತ್ರ, ಒಂದು ಜುಬ್ಬಾ, ಕೊನೆಗೆ ನಾಲ್ಕಾಣೆ. ಗೌಡರು ಯಾವೊತ್ತೂ ನಾಲ್ಕಾಣೆಗೆ ಕಮ್ಮಿ ಕೊಟ್ಟವರೇ ಅಲ್ಲ. ಅವರ ಸಮೀಪದಲ್ಲಿದ್ದವರು ಅವರು ತಾಮ್ರದ ನಾಣ್ಯ ಮುಟ್ಟಿದವರೇ ಅಲ್ಲ ಎನ್ನುವರು. ತೋಟದಿಂದ ಹೊರಗೆ ಬಂದಾಗ ಗೌಡರು ಏನೋ ಸಾಮಾನ್ಯರಂತೆ ಮಾತನಾಡುವರು; ಹತ್ತು ಜನರೊಡನೆ ಸ್ನೇಹವಾಗಿರುವರು. ಅವರು ತೋಟದ ಎಲ್ಲೆ ತುಳಿದು ಒಳಗೆ ಹೋಗುತ್ತಿದ್ದ ಹಾಗೇ ಈದ ಹುಲಿಯಾಗುವರು. ‘ಕಾಫಿ ಗಿಡಗಳು ಅವರೊಡನೆ ಮಾತನಾಡುತ್ತವೆ: ಇಲ್ಲದಿದ್ದರೆ ಗೌಡರ ಕಣ್ಣಿಗೆ ಎಲ್ಲೋ ಇರುವ ಒಣಕಲು ಕಡ್ಡಿ ಬೀಳುವುದು ? ಎಂದರೇನು ?’ ಎಂದು ಆಳುಗಳೆಲ್ಲ ಮಾತನಾಡಿಕೊಳ್ಳುವರು.

‘ಭೂತಗಳು ವಶವಾಗಿವೆ. ಅದರಿಂದಲೇ ಅವರದು ಒಂದು ಹುಲ್ಲು ಕಡ್ಡಿ ಕೂಡ ಹೋಗುವುದಿಲ್ಲ. ಹುಲಿ ಕೂಡ ಅವರ ಕುರಿ ಮೇಕೆ ಕೊನೆಗೆ ಕೋಳಿ ಕೂಡ ಮುಟ್ಟೋದಿಲ್ಲ.’ ಎನ್ನುವರು. ಯಾರೋಪಿಯನ್ನರು, “ಸೂಪರ್ಬ್ ಮ್ಯಾನೇಜ್‌ಮೆಂಟ್” ಅನ್ನುವರು. ಗೌಡರನ್ನೇ ಕೇಳಿದರೆ, “ನಾನು ಹುಡುಗನಾಗಿದ್ದಾಗ ನಮ್ಮ ಯಜಮಾನರು ಈಲಿಯಟ್ ಸಾಹೇಬರ ಹತ್ತಿರ ನನ್ನ ಮೂರು ವರ್ಷ ಬಿಟ್ಟಿದ್ದರು. ಅವರಿಂದ ಕಲಿತೆ ಈ ಶಿಸ್ತನ್ನೆಲ್ಲ’ ಎನ್ನುವರು. ಈಗಲೂ ಅಷ್ಟೆ! ಈಲಿಯಟ್ ಸಾಹೇಬರು ಸ್ವರ್ಗಕ್ಕೆ ನಡೆದು ಮೂವತ್ತು ವರ್ಷ ಆದಮೇಲೂ ಯಾರಾದರೂ ಬಂದು “ನಾನು ಈಲಿಯಟ್ ಸಾಹೇಬರ ಹತ್ತಿರ ಕೆಲಸ ಮಾಡಿದ್ದೆ’ ಎಂದರೆ ಸಾಕು; ಅವನಿಗೆ ತಪ್ಪದೆ ಕೆಲಸ ಸಿಕ್ಕುವುದು. ಗೌಡರ ಮನೆ ಒಳ್ಳೆಯ ಮಜಬೂತಾದ ಭಾರಿಯ ಮನೆ. ಹೋಗುತ್ತಲೂ ನಾಲ್ಕು ಮೆಟ್ಟಿಲು ಹತ್ತಿ ನಡುವಿನ ಮಟ್ಟದ ಜಗತಿ ಹತ್ತಬೇಕು. ಅದರ ಮೇಲೆ ಭಾರಿಯ ಏಳು ಅಂಕಣದ ಮನೆ, ಬಾಗಿಲಲ್ಲಿ ಎರಡು ದಪ್ಪ ಮರದ ಕಂಭಗಳು. ಅತ್ತ ಕಡೆ ಇತ್ತ ಕಡೆ ಎರಡೆರಡು ಅಂಕಣದ ಎರಡು ಚಿಕ್ಕ ಮನೆಗಳು, ಬೆಂಗಳೂರಿನಲ್ಲಿ ಇದ್ದಿದ್ದರೆ ಆ ಚಿಕ್ಕ ಮನೆಗಳಲ್ಲಿ ಒಂದೊಂದು ಸಂಸಾರ ಇದ್ದುಬಿಡುತ್ತಿದ್ದರು. ಮತ್ತ ಒಳಗೆ ಹೋದರೆ ನಡುವೆ ಅಲ್ಲೊಂದು ಚಿಕ್ಕಮನೆ. ಅಲ್ಲಯೇ ಗೌಡರ ಕಚೇರಿ. ಅಲ್ಲಿಂದ ಮೇಲಕ್ಕೆ ಹೋಗುವುದಕ್ಕೆ ಮೆಟ್ಟಿಲು. ಆ ನಡುವೆ ಕಳೆದು ಒಳಕ್ಕೆ ಹೋದರೆ ಅಲ್ಲಿ ಒಂದು ಹದಿನಾರು ಕಂಭದ ತೊಟ್ಟಿ, ತೊಟ್ಟಿ ಆಚೆ ಅಡುಗೆ ಮನೆ, ಊಟದ ಮನೆ, ಬಚ್ಚಲು ಮನೆ. ಅಲ್ಲಿಂದ ಆಚೆ ಇನ್ನೊಂದು ತೊಟ್ಟಿ. ಅಲ್ಲಿ ಮಲಗುವ ಮನೆಗಳು. ಮೊದಲನೆಯ ನಡುವೆ ಕಳೆದುಹೋಗಬೇಕಾದರೆ ಅವರು ನೆಂಟರಾಗ ಬೇಕು. ಗೌಡರು ಕರೆತಂದ ಅತಿಥಿಗಳಾದರೆ, ಅವರು ಮೆಟ್ಟಿಲು ಹತ್ತಿ ಮಹಡಿಯ ಮೇಲಕ್ಕೆ ಹೋಗುವರು. ಆ ಮಹಡಿಯ ಮೇಲೆ ಎರಡು ಚಿಕ್ಕ ಮನೆಗಳು: ಒಂದು ನಡುಮನೆ, ಅಡುಗೆ ಮನೆ, ಬಚ್ಚಲು ಮನೆ-ಎಲ್ಲಾ ಇದ್ದು ಏಳೆಂಟು ಜನದ ಒಂದು ಸಂಸಾರವಿರುವಮಟ್ಟಿಗೆ ವಿಶಾಲವಾಗಿರುವುದು. ಗೌಡರಿಗೆ ಇಬ್ಬರು ಹೆಂಡತಿಯರು. ಒಬ್ಬಳು ತಂದೆ ಮಾಡಿದವಳು. ಇನ್ನೊಬ್ಬಳು ತಾನು ಮಾಡಿಕೊಂಡವಳು. ಆದರೂ ಮನೆಯಲ್ಲಿ ಗದ್ದಲವಿಲ್ಲ. ಇಬ್ಬರೂ ಎಡಗೈ ಬಲಗೈಗಳಂತೆ ಜೋಡಿಯಾಗಿ ಜೊತೆಯಲ್ಲಿ ಬಾಳುವರು. ಅವರಿಗೆ ಇದ್ದುದು ಒಂದೇ ಒಂದು ವ್ಯಥೆ. ಮಕ್ಕಳಿಲ್ಲ. ಆ ವ್ಯಥೆ ಬಹಳ ಆತ್ಮೀಯರಾದವರಿಗೆ ಮಾತ್ರ ಗೊತ್ತು ಯಾರಾದರೂ ದುಡುಕಿ ಕೇಳಿದರೆ, “ನಮ್ಮ ಹಾಸ್ಟೆಲಿನಲ್ಲಿ ಇರೋರೆಲ್ಲ ಇನ್ನು ಯಾರ ಮಕ್ಕಳು ?’ ಎನ್ನುವರು. ಗೌಡರು ತೋಟಕ್ಕೆ ಬಂದರು. ಗೌಡರ ಕಾರಲ್ಲಿ ಪ್ರಾಣೇಶ್, ಅವನ ಹನ್ನೆರಡು ವರ್ಷದ ಮಗ, ಇನ್ನೊಂದು ಕಾರಿನಲ್ಲಿ ರಮೇಶ್, ಅವನ ಹೆಂಡತಿ, ಮಗಳು. ಅತಿಥಿಗಳಿಗೆ ಯಾವ ಉಪಚಾರವೂ ಕಡಿಮೆಯಾಗಲಿಲ್ಲ. ಸುಮಾರು ಎಂಟು ಗಂಟೆ ಹೊತ್ತಿಗೆ ಬಿಸಿಬಿಸಿ ಊಟವಾಗಿದೆ. ನಿಂಬೆಹುಳಿಯನ್ನ, ಬೋಂಡ, ಶ್ಯಾವಿಗೆ ಪಾಯಸ. ಊಟವಾದ ಮೇಲೆ ಕಿರುತಿಂಡಿ ಎಂದು ಒಂದಷ್ಟು ಓಂಪುಡಿ, ಹುರಿಗಾಳು, ಭರ್ಜರಿ ಅಡಕೆಲೆ. ಹೊರಗೆ ಇದಿಷ್ಟೂ ಆದಮೇಲೆ ಮಲಗುವ ಮನೆಗೆ ಹೋದರೆ ಅಲ್ಲಿ ಮಂಚದ ಮಗ್ಗುಲಲ್ಲಿ ಒಂದು ಶೀಷೆ, ಮಗ್ಗುಲಲ್ಲಿ ಒಂದು ಬಟ್ಟಲು. ಏಳು ಸಾವಿರ ಮೈಲಿಗಳ ಆಚೆಯಿಂದ ಬಂದಿರುವ ಮದಿರಾದೇವಿಯು ರಾಯರನ್ನು ಸೇವಿಸುವುದಕ್ಕೆ ಕಾದಿದ್ದಾಳೆ. ಪ್ರಾಣೇಶನು ತನ್ನ ಕಿರುಮನೆಗೆ ಬಂದನು. ಅಲ್ಲಿ ಅವನಿಗೊಂದು ಮಂಚ, ಆ ಗೋಡೆಯ ಮಗ್ಗುಲಲ್ಲಿ ಅದು, ಈ ಗೋಡೆಯ ಮಗ್ಗುಲಲ್ಲಿ ಇದು, ನಡುವೆ ಒಂದು ದಪ್ಪ ತೆರೆ, ಮಗನನ್ನು ಆ ಮಂಚಕ್ಕೆ ಕಳುಹಿಸಿ, ತಾನು ಮಲಗುವುದರಲ್ಲಿದ್ದಾನೆ. ಆತನಿಗೆ ಆಶ್ಚರ್ಯ. ‘ಮಗನಿಗೆ ಸಿಂಗಲ್ ಕಾಟ್ ಹಾಕಿ, ತನಗೆ ಡಬ್ಬಲ್ ಕಾಟ್ ಹಾಕಿರುವುದೇತಕ್ಕೆ ಎಂದು ಯೋಚನೆ ಬಂತು. ‘ತಾನಿರುವುದು ಅತಿಥಿ ಗೃಹದಲ್ಲಿ, ಅತಿಥಿಗಳು ತಮಗೆ ಲಭಿಸಿದ ಉಪಚಾರದಿಂದ ತೃಪ್ತರಾಗಬೇಕು. ಧರ್ಮಕ್ಕೆ ಎಮ್ಮೆ ಕೊಟ್ಟರೆ ಹಿಡಿದು ಹಲ್ಲು ನೋಡುವುದು ಯಾವ ನ್ಯಾಯ ?’ ಎಂದುಕೊಂಡು ಮಲಗಿಕೊಳ್ಳುವುದಕ್ಕೆ ಸಿದ್ಧವಾಗುತ್ತಿದ್ದಾನೆ. ಮಗನು ಮಲಗಿದ್ದಾನೆ. ಅವನಿಗೆ ನಿದ್ದೆ ಬಂದಿದೆ. ಆಳು ಬಂದು ಬಾಗಿಲು ಸದ್ದು ಮಾಡಿದನು. ಹೋಗಿ ಬಾಗಿಲು ತೆರೆದನು. ಅವನು ಬಾಗಿಲಿಗೆ ಬಂದು ‘ರವಿಕೇ ಕಣ ತೆಗೆದುಕೊಳ್ಳುವಿರಾ ?’ ಎಂದು ಕೇಳುವ ವ್ಯಾಪಾರಿಯಂತೆ, ‘ತಮ್ಮ ಸೇವೆಗೆ ಇವರು ಬಂದಿದ್ದಾರೆ. ದೂರಿಂದ ಬಂದು ಆಯಾಸವಾಗಿದೆ. ಮಾಸೇಜ್ ಮಾಡುತ್ತಾರೆ. ದಯವಿಟ್ಟು ಸೇವೆ ತಕೋಬೇಕು’ ಎಂದು ಹೇಳಿ, ಕೈ ಮುಗಿದು ಹೊರಟೇಹೋದನು. ಪ್ರಾಣೇಶನಿಗೂ ಖುಷಿಯಾಯಿತು. ಬಾಗಿಲಲ್ಲಿ ನಿಂತಿದ್ದವನು ಅತ್ತ ಸರಿದು ಬಂದವರನ್ನು ಒಳಕ್ಕೆ ಬರುವ ಹಾಗೆ ಸನ್ನೆ ಮಾಡಿ ತಾನೂ ಬಾಗಿಲು ಹಾಕಿಕೊಂಡು ಒಳಕ್ಕೆ ಬಂದನು. ಈ ದಿನ ಗುರುವಾರ, ಸನ್ಯಾಸಿಗಳ ದರ್ಶನಕ್ಕೆ ಹೋಗಬೇಕು ಎಂದು ಮೊದಲೇ ಗೊತ್ತಾಗಿತ್ತು. ಅದಕ್ಕೆ ತಕ್ಕಂತೆ ಸಡಗರ. ಗೌಡರ ಮನೆಯವರೆಲ್ಲ ಬೆಳಗಿನ ಝಾವದಲ್ಲೇ ಎದ್ದು ಮಡಿಯಾಗಿ ಸೂದಯದ ವೇಳೆಗೆ ಸಿದ್ಧರಾಗಿದ್ದಾರೆ. ಲಾಯರಿಗಳು ಎದ್ದಿದ್ದಾರೆಯೋ ಇಲ್ಲವೋ ಎಂದು ಸಂದೇಹ, ಅವರ ಅತಿಥಿ ಗೃಹದ ಆಳನ್ನು ಕರೆದು ಕೇಳಿದರು. ಒಬ್ಬರು-ಮಗಳು ಹೆಂಡತಿಯರೊಡನೆ ಬಂದಿರುವವರು ಎದ್ದು ಸ್ನಾನ ಮಾಡಿ ಕಾಫಿ ತೆಗೆದುಕೊಂಡರು. ಮಗನ ಜೊತೆಯಲ್ಲಿ ಬಂದಿರುವವರು ಇನ್ನೂ ಎದ್ದಿಲ್ಲ’ ಎಂದು ಉತ್ತರ ಬಂತು. ‘ಹೋಗಿ ರಮೇಶರಾಯರಿಗೆ ಹೇಳಿ ಇನ್ನೊಬ್ಬರನ್ನು ಏಳಿಸುವ ಹಾಗೆ ಹೇಳು, ಹೊತ್ತಾಗುತ್ತ ಬಂತು’ ಎಂದು ಹುಕುಂ ಆಯಿತು. ಪ್ರಾಣೇಶನು ಎದ್ದನು. ಏನೋ ಮೈಯಲ್ಲಿದ್ದ ಶಕ್ತಿಯನ್ನೆಲ್ಲ ಯಾರೋ ಕಿತ್ತುಕೊಂಡು ಹೋದ ಹಾಗಾಗಿದೆ. ಎದ್ದರೆ ತೂರಿಕೊಂಡು ಹೋಗುವ ಹಾಗಿದೆ. ಮೈಯಲ್ಲ ನೋವು ನೋವು. ಎದ್ದು ರಾತ್ರಿಯ ವಿಷಯವನ್ನೆಲ್ಲ ನೆನೆಸಿಕೊಳ್ಳುತ್ತ ಹಾಸುಗೆಯ ಮೇಲೆ ಒಂದು ಗಳಿಗೆ ಬಿದ್ದಿದ್ದು, ಕೊನೆಗೆ ಬಂದು ಕುರ್ಚಿಯ ಮೇಲೆ ಕುಳಿತಿದ್ದಾನೆ. ನೋಡಿದರೆ ಆಶ್ಚದ್ಯವಾಯಿತು. ಸಣ್ಣ ಮೇಜಿನ ಮೇಲಿದ್ದ ಪದಾರ್ಥಗಳೆಲ್ಲ ಹಾಗೆ ಹಾಗೇ ಇವೆ. “ಹಾಗಾದರೆ ನಾವು ರಾತ್ರಿ ಕುಡಿದದ್ದು ಏನು ? ಕುಡಿದದ್ದು ಉಂಟು, ಇಲ್ಲವೆನ್ನುವ ಹಾಗಿಲ್ಲ. ಅಥವಾ ಬೆಳಗಾಗುವುದರೊಳಗಾಗಿ ಆಳು ಬಂದು ಬೇರೆ ಇಟ್ಟು ಹೋಗಿರಬಹುದೆ ?” ಏಕೋ ಏನೋ ಅನುಮಾನ ಬಂತು.

ಲಾಯರ್ ಬುದ್ಧಿ. ಹೋಗಿ ದಿಂಬನ್ನು ಮೂಸಿ ನೋಡಿದನು. ಯಾವ ಹೂವಿನ ವಾಸನೆಯೂ ಇಲ್ಲ, ಈಗ ಈ ಅಸಹಜ ಸ್ಥಿತಿಯನ್ನು ಕಂಡು ಆಶ್ಚರಭಾವವು ಬಲಿಯಿತು. ರಾತ್ರಿ ಆ ಜಾಜಿಯ ಹೂವು, ತಾಳೆಯ ಹೂವುಗಳ ವಾಸನೆ ಮೂಗಿನ ಸೆಲೆ ಒಡೆಯುವಷ್ಟು ಇದ್ದುದು ಈಗ ದಿಂಬಿನ ಬಟ್ಟೆಗೆ ಅಷ್ಟಾದರೂ ವಾಸನೆ ಕೊಡದೆ ಮಾಯವಾಗುವುದೆಂತು ? ರಾತ್ರಿಯ ವಿಷಯಾನುಭವದ ಗುರುತು ಹಾಸುಗೆಯಲ್ಲಿ ಕಾಣಬೇಡವೆ ? ಹಾಸುಗೆಯ ಹಾಸಿದ್ದಂತೇ ಇದೆ. ಕೆದರಿಲ್ಲ, ರಗ್ಗಿಗೆ ಜೋಡಿಸಿರುವ ದುಪ್ಪಟಿ ಕೂಡ ಇಸ್ತ್ರಿ ಗುರುತು ಅಳಿದಿಲ್ಲ. ರಾಯರಿಗೆ ಕಕ್ಕು ಬಿಕ್ಕಾಯಿತು. ನಡೆದ ಭೋಗಕ್ಕೆ ಕಾಣಿಕೆ ಕೊಟ್ಟು ಸುಸ್ತು ಬಿದ್ದಿರುವ ದೇಹದ ಸಾಕ್ಷ್ಯವನ್ನು ನಿರಾಕರಿಸುವು ದೆಂತು ? ಹಾಸುಗೆಯಲ್ಲಿ ಏನೇನೂ ಗುರುತಿಲ್ಲದಂತೆ ಮಾಡಿ ಮಾಯವಾಗಿರುವ ಮೋಹಿನಿಯು ಬಂದಿದ್ದಳೆಂದು ನಂಬುವುದೆಂತು? ಏನೋ ಆಶ್ಚರ ! ಏನೋ ರಹಸ್ಯ! ಏನೋ ಅದ್ಭುತ! ಇದೆ ಎಂದು ಯೋಚಿಸುವುದರಲ್ಲಿ ಕೈಯಲ್ಲಿ ಹಚ್ಚಿಟ್ಟುಕೊಂಡಿದ್ದ ಸಿಗರೇಟು ಕಳಲಿಹೋಗಿ ಕೈಗೆ ಬಿಸಿ ಹತ್ತಿತು. ಅದನ್ನು ಆ ಪೀಕದಾನಿಯಲ್ಲಿ ಹಾಕುವುದಕ್ಕೆ ತಿರುಗಿದನು. ಕನ್ನಡಿಯಲ್ಲಿ ಮುಖ ಕಾಣಿಸಿತು. ಅವನಿಗೇ ಗಾಬರಿಯಾಯಿತು. ಮುಖವೆಲ್ಲ ಮಗ್ಗುಲ ಹಾಸುಗೆಯ ದುಪ್ಪಟಿಗಿಂತ ಬೆಳ್ಳಗಾಗಿಹೋಗಿದೆ. ಕಣ್ಣುಗಳು ಗುಳಿಬಿದ್ದು ಕಾಡಿಗೆಯ ಕಪ್ಪು ಬೆಳೆದಂತೆ ಇವೆ. ಮುಖ ನೀರಸವಾಗಿ, ರಸ ಹೀರಿ ಎಸೆದ ಅನಾನಸ್ ತೊಳೆಯಂತಾಗಿದೆ. ಆ ವೇಳೆಗೆ ಸರಿಯಾಗಿ ಸ್ನಾನ ಮಾಡಿ ವಿಭೂತಿ ಧರಿಸಿಕೊಂಡು ಗರಿಗರಿಯಾಗಿ ಮಡಿ ಬಟ್ಟೆಗಳನ್ನು ಉಟ್ಟುತೊಟ್ಟಿರುವ ಗೌಡರೇ ಬಂದರು. ಅವರಿಗೆ ಪ್ರಾಣೇಶನ ಸ್ಥಿತಿಯನ್ನು ಕಂಡು ಗಾಬರಿಯಾಯಿತು. ಅನುಮಾನವಾಯಿತು. “ಏನು ರಾಯರೇ! ರಾತ್ರಿ ನಿದ್ದೆ ಚೆನ್ನಾಗಿ ಬಂತೆ? ಪ್ರಯಾಣದ ಆಯಾಸ ಕಳೆಯಿತೇ?” ಎಂದು ಕೇಳಿದರು. ಪ್ರಾಣೇಶನು ಆ ಪ್ರಶ್ನವನ್ನು ಕೇಳಿ ಒಂದೂವರೆ ಕಣ್ಣಲ್ಲಿ ಕಿಟಕಿ ಕಡೆ ನೋಡುತ್ತ “ಮಾಸೇಜ್ ಕೊಂಚ ಬಲವಾಯಿತು ಎನ್ನುವ ಹಾಗಿದೆ. ಆದರೆ ಆಗೇನೋ ಹಿತವಾಗಿತ್ತು’ ಎಂದನು. ಗೌಡರಿಗೆ ಅರ್ಥವಾಗಲಿಲ್ಲ. ಹಾಗೆಂದರೆ ?” “ಹಾಗೆಂದರೆ ರಾತ್ರಿ ಬಂದಿದ್ದವರು ನಿಮಗೆ ತಿಳಿಯದೆ ಬಂದಿದ್ದರೆ ?” “ಯಾರು ಬಂದಿದ್ದರು ?”

“ನಿಮ್ಮ ಆಳೇ ಕರೆದುಕೊಂಡು ಬಂದದ್ದು.’ ಗೌಡರಿಗೆ ಮನಸ್ಸಿನಲ್ಲಿ ಕಚಕ್ ಎಂದಿತು. ಎದೆಯಲ್ಲಿ ಗಡಗಡ ನಡುಗಿತು. “ಹಾಗಾದರೆ ಇವನಿಗೂ ಏಟು ಬಿತ್ತೋ ?” ಎನಿಸಿ ಗಾಬರಿಯಾಯಿತು. ಆದರೂ ಮೌನದಿಂದ ಕಿರುಮನೆಯೊಳಕ್ಕೆ ಬರದೆಯೇ ಹಾಸುಗೆಯ ಕಡೆ ನೋಡಿದರು. ವಿಕಾರ ವಿಲ್ಲದ ಹಾಸುಗೆಯ ಅವರಿಗೇನು ಹೇಳಿತೊ ? ಅವರ ಮುಖವೂ ಕೊಂಚ ಕಾಂತಿಹೀನವಾಯಿತು. ಏಳಿ ಇರಲಿ, ಒಂದಷ್ಟು ತಕೊಂಡು ಮಡಿಗಿಡಿ ಉಟ್ಟುಕೊಳ್ಳಿ. ಆ ವಿಚಾರವೆಲ್ಲ ಆಮೇಲೆ ಮಾತನಾಡೋಣ, ನೀರು ಕಾದದೆ” ಎಂದು ಆಳನ್ನು ಕೂಗಿದರು. “ನಿಂಗ, ರಾಯರಿಗೆ ಎಣ್ಣೆ ಮಜ್ಜನ ಮಾಡಿಸು. ಬೇಗ ಏಳು, ಏಳು ಗಂಟೆಯಾಗುತ್ತಾ ಬಂತು. ನಾವು ಎಂಟು ಗಂಟೆಯೊಳಗಾಗಿ ಗವಿ ತಾವಿರಬೇಕು” ಎಂದು ಅಪ್ಪಣೆಯಾಯಿತು. ಪ್ರಾಣೇಶನು ಹೊರಟುಹೋಗುತ್ತಿದ್ದ ಗೌಡರನ್ನು ಕೂಗಿ ಇವೊತ್ತು ನನಗೆ ಮೈಕೈ ನೋವು ಬಹಳ. ನಾನು ಮಲಗಿಕೊಳ್ಳುತ್ತೇನೆ. ನೀವು ಸ್ವಾಮಿಗಳನ್ನು ನೋಡಿ ಕೊಂಡು ಬನ್ನಿ ನನಗೆ ಕುಳಿತುಕೊಳ್ಳುವುದಕ್ಕೂ ಕೈಯಲಾಗದು” ಎಂದನು. ಗೌಡರ ಅನುಮಾನ ಬಲಿತು ಖಾತರಿಯಾಯಿತು. ಸರಿ, ಏಟು ತಿಂದ ಅಯ್ಯಾ !” ಎಂದು ಗುಂಡಿಗೆ ಕದಲಿತು. ಆದರೂ ಬಿಂಕ ಬಿಡದೆ, “ಏನಿಲ್ಲ ಮೀಣ ಮಾಡಿ, ನಿಂಗನ ಕೈಯ ನೀರು ಬಿದ್ದೆ ಎಲ್ಲಾ ಸರಿ ಹೋಗುತ್ತದೆ. ಅವ ಅದನ್ನು ಬಲ್ಲ ಅಷ್ಟು ದೂರದಿಂದ ಬಂದಿರೋದೇ ಅಲ್ಲಿಗೆ ಹೋಗೋಕೆ!” ಎಂದು ಪ್ರತ್ಯುತ್ತರ ನಿರೀಕ್ಷೆ ಮಾಡದೆ ಮುಂದೆ ಹೋದರು. ನಿಂಗನನ್ನು ಬರಹೇಳಿ ಅವರಿಗೆ ಎರೆಯೋ ನೀರಲ್ಲಿ ಒಂದು ಹಿಡಿ ತಪಸಿ ಸೊಪ್ಪು ಹಾಕು’ ಎಂದರು. ನಿಂಗನ ಕಣ್ಣು ಏನೋ ಕೇಳಿತು. ಗೌಡರು ತಲೆ ಅಲ್ಲಾಡಿಸಿ ಹೌದು ಎಂದು ಮುಂದೆ ಹೋದರು. ಗೌಡರು ಯೋಚಿಸಿದರು. ‘ಪ್ರಾಣೇಶನ ಕೇಸು ರಂಪವಾಗದ ಹಾಗೆ ನೋಡಿಕೋ ಬೇಕು. ಬಿಟ್ಟರೆ ಮನುಷ್ಯ ಕೆಟ್ಟುಹೋಗುತ್ತಾನೆ. ಇವೊತ್ತೇ ತೋಡು ಮಾಡಿಸದಿದ್ದರೆ ಉಳಿಯುವುದೂ ಕಷ್ಟವಾದೀತು’ ಎಂದು ದೀರ್ಘವಾಗಿ ಯೋಚಿಸಿ, ‘ಸ್ವಾಮಿಗಳ ಬಳಿ ಹೇಳಲೇಬೇಕು. ಒಂದು ವೇಳೆ ನಾವು ಹೇಳದಿದ್ದರೆ ತಾನೇ ಏನು? ಅವರಿಗೇ ತಿಳಿಯು ತಲ್ಲಾ! ಅಂತೂ ಗಂಡಾಂತರ ಬಂದೇ ಬಂತು’ ಎಂದು ಏನೇನೋ ಲೆಕ್ಕ ಹಾಕಿ ಹೆಂಗಸರನ್ನೆಲ್ಲ ಹೊತ್ತಿಗೆ ಸರಿಯಾಗಿ ಹೊರಡಿಸಿಬಿಟ್ಟರು. “ನೀವು ಮೊದಲು ಹೋಗಿ, ನಾವೂ ಬಂದೋ ಅನ್ನಿ’ ಎಂದರು. ಕಾರು ಹೊರಟಿತು. ಗೌಡರು ತಡೆದು ದೊಡ್ಡ ಹೆಂಡಿತಿಯನ್ನು ಕರೆದು ಗುಟ್ಟಾಗಿ ಏನೋ ಹೇಳಿ ಕಳುಹಿಸಿದರು. ಗೌಡರು ತಮ್ಮ ಅಂತರಂಗವನ್ನು ರಮೇಶನಿಗೆ ಹೇಳಲಿಲ್ಲ. ರಮೇಶನಿಗೆ ಗೆಳೆಯನು ಇನ್ನೂ ಸಿದ್ಧನಾಗಿಲ್ಲ ಎನ್ನುವುದು ಕೇಳಿ ಆಶ್ಚರವಾಯಿತು. ನ್ಯಾಯವಾಗಿ ಎಂದಿನಂತೆ ಆದರೆ ಅವನು ಬಂದು ತನ್ನನ್ನು ಎಬ್ಬಿಸಬೇಕು. ಎಲ್ಲೋ ರಾತ್ರಿ ಟಪ್ಪಿ ಆಗಿರಬೇಕು.

ಹೋದ ಹಾಗಾಗಿದೆ. ಎದ್ದರೆ ತೂರಿಕೊಂಡು ಹೋಗುವ ಹಾಗಿದೆ. ಮೈಯಲ್ಲ ನೋವು ನೋವು. ಎದ್ದು ರಾತ್ರಿಯ ವಿಷಯವನ್ನೆಲ್ಲ ನೆನೆಸಿಕೊಳ್ಳುತ್ತ ಹಾಸುಗೆಯ ಮೇಲೆ ಒಂದು ಗಳಿಗೆ ಬಿದ್ದಿದ್ದು, ಕೊನೆಗೆ ಬಂದು ಕುರ್ಚಿಯ ಮೇಲೆ ಕುಳಿತಿದ್ದಾನೆ. ನೋಡಿದರೆ ಆಶ್ಚದ್ಯವಾಯಿತು. ಸಣ್ಣ ಮೇಜಿನ ಮೇಲಿದ್ದ ಪದಾರ್ಥಗಳೆಲ್ಲ ಹಾಗೆ ಹಾಗೇ ಇವೆ. “ಹಾಗಾದರೆ ನಾವು ರಾತ್ರಿ ಕುಡಿದದ್ದು ಏನು ? ಕುಡಿದದ್ದು ಉಂಟು, ಇಲ್ಲವೆನ್ನುವ ಹಾಗಿಲ್ಲ. ಅಥವಾ ಬೆಳಗಾಗುವುದರೊಳಗಾಗಿ ಆಳು ಬಂದು ಬೇರೆ ಇಟ್ಟು ಹೋಗಿರಬಹುದೆ ?” ಏಕೋ ಏನೋ ಅನುಮಾನ ಬಂತು.

ಲಾಯರ್ ಬುದ್ಧಿ. ಹೋಗಿ ದಿಂಬನ್ನು ಮೂಸಿ ನೋಡಿದನು. ಯಾವ ಹೂವಿನ ವಾಸನೆಯೂ ಇಲ್ಲ, ಈಗ ಈ ಅಸಹಜ ಸ್ಥಿತಿಯನ್ನು ಕಂಡು ಆಶ್ಚರಭಾವವು ಬಲಿಯಿತು. ರಾತ್ರಿ ಆ ಜಾಜಿಯ ಹೂವು, ತಾಳೆಯ ಹೂವುಗಳ ವಾಸನೆ ಮೂಗಿನ ಸೆಲೆ ಒಡೆಯುವಷ್ಟು ಇದ್ದುದು ಈಗ ದಿಂಬಿನ ಬಟ್ಟೆಗೆ ಅಷ್ಟಾದರೂ ವಾಸನೆ ಕೊಡದೆ ಮಾಯವಾಗುವುದೆಂತು ? ರಾತ್ರಿಯ ವಿಷಯಾನುಭವದ ಗುರುತು ಹಾಸುಗೆಯಲ್ಲಿ ಕಾಣಬೇಡವೆ ? ಹಾಸುಗೆಯ ಹಾಸಿದ್ದಂತೇ ಇದೆ. ಕೆದರಿಲ್ಲ, ರಗ್ಗಿಗೆ ಜೋಡಿಸಿರುವ ದುಪ್ಪಟಿ ಕೂಡ ಇಸ್ತ್ರಿ ಗುರುತು ಅಳಿದಿಲ್ಲ. ರಾಯರಿಗೆ ಕಕ್ಕು ಬಿಕ್ಕಾಯಿತು. ನಡೆದ ಭೋಗಕ್ಕೆ ಕಾಣಿಕೆ ಕೊಟ್ಟು ಸುಸ್ತು ಬಿದ್ದಿರುವ ದೇಹದ ಸಾಕ್ಷ್ಯವನ್ನು ನಿರಾಕರಿಸುವು ದೆಂತು ? ಹಾಸುಗೆಯಲ್ಲಿ ಏನೇನೂ ಗುರುತಿಲ್ಲದಂತೆ ಮಾಡಿ ಮಾಯವಾಗಿರುವ ಮೋಹಿನಿಯು ಬಂದಿದ್ದಳೆಂದು ನಂಬುವುದೆಂತು? ಏನೋ ಆಶ್ಚರ ! ಏನೋ ರಹಸ್ಯ! ಏನೋ ಅದ್ಭುತ! ಇದೆ ಎಂದು ಯೋಚಿಸುವುದರಲ್ಲಿ ಕೈಯಲ್ಲಿ ಹಚ್ಚಿಟ್ಟುಕೊಂಡಿದ್ದ ಸಿಗರೇಟು ಕಳಲಿಹೋಗಿ ಕೈಗೆ ಬಿಸಿ ಹತ್ತಿತು. ಅದನ್ನು ಆ ಪೀಕದಾನಿಯಲ್ಲಿ ಹಾಕುವುದಕ್ಕೆ ತಿರುಗಿದನು. ಕನ್ನಡಿಯಲ್ಲಿ ಮುಖ ಕಾಣಿಸಿತು. ಅವನಿಗೇ ಗಾಬರಿಯಾಯಿತು. ಮುಖವೆಲ್ಲ ಮಗ್ಗುಲ ಹಾಸುಗೆಯ ದುಪ್ಪಟಿಗಿಂತ ಬೆಳ್ಳಗಾಗಿಹೋಗಿದೆ. ಕಣ್ಣುಗಳು ಗುಳಿಬಿದ್ದು ಕಾಡಿಗೆಯ ಕಪ್ಪು ಬೆಳೆದಂತೆ ಇವೆ. ಮುಖ ನೀರಸವಾಗಿ, ರಸ ಹೀರಿ ಎಸೆದ ಅನಾನಸ್ ತೊಳೆಯಂತಾಗಿದೆ. ಆ ವೇಳೆಗೆ ಸರಿಯಾಗಿ ಸ್ನಾನ ಮಾಡಿ ವಿಭೂತಿ ಧರಿಸಿಕೊಂಡು ಗರಿಗರಿಯಾಗಿ ಮಡಿ ಬಟ್ಟೆಗಳನ್ನು ಉಟ್ಟುತೊಟ್ಟಿರುವ ಗೌಡರೇ ಬಂದರು. ಅವರಿಗೆ ಪ್ರಾಣೇಶನ ಸ್ಥಿತಿಯನ್ನು ಕಂಡು ಗಾಬರಿಯಾಯಿತು. ಅನುಮಾನವಾಯಿತು. “ಏನು ರಾಯರೇ! ರಾತ್ರಿ ನಿದ್ದೆ ಚೆನ್ನಾಗಿ ಬಂತೆ? ಪ್ರಯಾಣದ ಆಯಾಸ ಕಳೆಯಿತೇ?” ಎಂದು ಕೇಳಿದರು. ಪ್ರಾಣೇಶನು ಆ ಪ್ರಶ್ನವನ್ನು ಕೇಳಿ ಒಂದೂವರೆ ಕಣ್ಣಲ್ಲಿ ಕಿಟಕಿ ಕಡೆ ನೋಡುತ್ತ “ಮಾಸೇಜ್ ಕೊಂಚ ಬಲವಾಯಿತು ಎನ್ನುವ ಹಾಗಿದೆ. ಆದರೆ ಆಗೇನೋ ಹಿತವಾಗಿತ್ತು’ ಎಂದನು. ಗೌಡರಿಗೆ ಅರ್ಥವಾಗಲಿಲ್ಲ. ಹಾಗೆಂದರೆ ?” “ಹಾಗೆಂದರೆ ರಾತ್ರಿ ಬಂದಿದ್ದವರು ನಿಮಗೆ ತಿಳಿಯದೆ ಬಂದಿದ್ದರೆ ?” “ಯಾರು ಬಂದಿದ್ದರು ?”

“ನಿಮ್ಮ ಆಳೇ ಕರೆದುಕೊಂಡು ಬಂದದ್ದು.’ ಗೌಡರಿಗೆ ಮನಸ್ಸಿನಲ್ಲಿ ಕಚಕ್ ಎಂದಿತು. ಎದೆಯಲ್ಲಿ ಗಡಗಡ ನಡುಗಿತು. “ಹಾಗಾದರೆ ಇವನಿಗೂ ಏಟು ಬಿತ್ತೋ ?” ಎನಿಸಿ ಗಾಬರಿಯಾಯಿತು. ಆದರೂ ಮೌನದಿಂದ ಕಿರುಮನೆಯೊಳಕ್ಕೆ ಬರದೆಯೇ ಹಾಸುಗೆಯ ಕಡೆ ನೋಡಿದರು. ವಿಕಾರ ವಿಲ್ಲದ ಹಾಸುಗೆಯ ಅವರಿಗೇನು ಹೇಳಿತೊ ? ಅವರ ಮುಖವೂ ಕೊಂಚ ಕಾಂತಿಹೀನವಾಯಿತು. ಏಳಿ ಇರಲಿ, ಒಂದಷ್ಟು ತಕೊಂಡು ಮಡಿಗಿಡಿ ಉಟ್ಟುಕೊಳ್ಳಿ. ಆ ವಿಚಾರವೆಲ್ಲ ಆಮೇಲೆ ಮಾತನಾಡೋಣ, ನೀರು ಕಾದದೆ” ಎಂದು ಆಳನ್ನು ಕೂಗಿದರು. “ನಿಂಗ, ರಾಯರಿಗೆ ಎಣ್ಣೆ ಮಜ್ಜನ ಮಾಡಿಸು. ಬೇಗ ಏಳು, ಏಳು ಗಂಟೆಯಾಗುತ್ತಾ ಬಂತು. ನಾವು ಎಂಟು ಗಂಟೆಯೊಳಗಾಗಿ ಗವಿ ತಾವಿರಬೇಕು” ಎಂದು ಅಪ್ಪಣೆಯಾಯಿತು. ಪ್ರಾಣೇಶನು ಹೊರಟುಹೋಗುತ್ತಿದ್ದ ಗೌಡರನ್ನು ಕೂಗಿ ಇವೊತ್ತು ನನಗೆ ಮೈಕೈ ನೋವು ಬಹಳ. ನಾನು ಮಲಗಿಕೊಳ್ಳುತ್ತೇನೆ. ನೀವು ಸ್ವಾಮಿಗಳನ್ನು ನೋಡಿ ಕೊಂಡು ಬನ್ನಿ ನನಗೆ ಕುಳಿತುಕೊಳ್ಳುವುದಕ್ಕೂ ಕೈಯಲಾಗದು” ಎಂದನು. ಗೌಡರ ಅನುಮಾನ ಬಲಿತು ಖಾತರಿಯಾಯಿತು. ಸರಿ, ಏಟು ತಿಂದ ಅಯ್ಯಾ !” ಎಂದು ಗುಂಡಿಗೆ ಕದಲಿತು. ಆದರೂ ಬಿಂಕ ಬಿಡದೆ, “ಏನಿಲ್ಲ ಮೀಣ ಮಾಡಿ, ನಿಂಗನ ಕೈಯ ನೀರು ಬಿದ್ದೆ ಎಲ್ಲಾ ಸರಿ ಹೋಗುತ್ತದೆ. ಅವ ಅದನ್ನು ಬಲ್ಲ ಅಷ್ಟು ದೂರದಿಂದ ಬಂದಿರೋದೇ ಅಲ್ಲಿಗೆ ಹೋಗೋಕೆ!” ಎಂದು ಪ್ರತ್ಯುತ್ತರ ನಿರೀಕ್ಷೆ ಮಾಡದೆ ಮುಂದೆ ಹೋದರು. ನಿಂಗನನ್ನು ಬರಹೇಳಿ ಅವರಿಗೆ ಎರೆಯೋ ನೀರಲ್ಲಿ ಒಂದು ಹಿಡಿ ತಪಸಿ ಸೊಪ್ಪು ಹಾಕು’ ಎಂದರು. ನಿಂಗನ ಕಣ್ಣು ಏನೋ ಕೇಳಿತು. ಗೌಡರು ತಲೆ ಅಲ್ಲಾಡಿಸಿ ಹೌದು ಎಂದು ಮುಂದೆ ಹೋದರು. ಗೌಡರು ಯೋಚಿಸಿದರು. ‘ಪ್ರಾಣೇಶನ ಕೇಸು ರಂಪವಾಗದ ಹಾಗೆ ನೋಡಿಕೋ ಬೇಕು. ಬಿಟ್ಟರೆ ಮನುಷ್ಯ ಕೆಟ್ಟುಹೋಗುತ್ತಾನೆ. ಇವೊತ್ತೇ ತೋಡು ಮಾಡಿಸದಿದ್ದರೆ ಉಳಿಯುವುದೂ ಕಷ್ಟವಾದೀತು’ ಎಂದು ದೀರ್ಘವಾಗಿ ಯೋಚಿಸಿ, ‘ಸ್ವಾಮಿಗಳ ಬಳಿ ಹೇಳಲೇಬೇಕು. ಒಂದು ವೇಳೆ ನಾವು ಹೇಳದಿದ್ದರೆ ತಾನೇ ಏನು? ಅವರಿಗೇ ತಿಳಿಯು ತಲ್ಲಾ! ಅಂತೂ ಗಂಡಾಂತರ ಬಂದೇ ಬಂತು’ ಎಂದು ಏನೇನೋ ಲೆಕ್ಕ ಹಾಕಿ ಹೆಂಗಸರನ್ನೆಲ್ಲ ಹೊತ್ತಿಗೆ ಸರಿಯಾಗಿ ಹೊರಡಿಸಿಬಿಟ್ಟರು. “ನೀವು ಮೊದಲು ಹೋಗಿ, ನಾವೂ ಬಂದೋ ಅನ್ನಿ’ ಎಂದರು. ಕಾರು ಹೊರಟಿತು. ಗೌಡರು ತಡೆದು ದೊಡ್ಡ ಹೆಂಡಿತಿಯನ್ನು ಕರೆದು ಗುಟ್ಟಾಗಿ ಏನೋ ಹೇಳಿ ಕಳುಹಿಸಿದರು. ಗೌಡರು ತಮ್ಮ ಅಂತರಂಗವನ್ನು ರಮೇಶನಿಗೆ ಹೇಳಲಿಲ್ಲ. ರಮೇಶನಿಗೆ ಗೆಳೆಯನು ಇನ್ನೂ ಸಿದ್ಧನಾಗಿಲ್ಲ ಎನ್ನುವುದು ಕೇಳಿ ಆಶ್ಚರವಾಯಿತು. ನ್ಯಾಯವಾಗಿ ಎಂದಿನಂತೆ ಆದರೆ ಅವನು ಬಂದು ತನ್ನನ್ನು ಎಬ್ಬಿಸಬೇಕು. ಎಲ್ಲೋ ರಾತ್ರಿ ಟಪ್ಪಿ ಆಗಿರಬೇಕು.

ಗೌಡರು ಇಟ್ಟಿದ್ದುದು ಸ್ಪೆಷಲ್ ಲಿಕ್ಕರ್, ಎಲ್ಲೋ ಹೆಚ್ಚಾಗಿರಬೇಕು. ಆದರೂ ಅವನು ಖದೀಮ, ಜಗ್ಗುವವನಲ್ಲ ಏನಿದು ಆಶ್ಚಯ್ಯ ?” ಎಂದು ತಾನೇ ಅವನನ್ನು ನೋಡ ಬೇಕೆಂದು ಹೊರಟನು. ಪ್ರಾಣೇಶನು ರೂಮಿನಲ್ಲಿರಲಿಲ್ಲ. ಸ್ನಾನಕ್ಕೆ ಹೋಗಿದ್ದ ನಿಂಗನ ಮಜ್ಜನ ಎಂದರೆ ಮರೆಯುವಹಾಗಿಲ್ಲ, ಬಲವಾಗಿಲ್ಲದೆ ಇದ್ದರೆ ಅವನು ನೀರು ಹೊಡೆಯುವ ರಭಸಕ್ಕೆ ಮೂರ್ಚೆ ಬಂದುಬಿಡಬೇಕು. ಹಾಗಿದ್ದರೂ ಆಗ ತಾನೇ ಹುಟ್ಟಿದ ಮಗುವಿಗೂ ಹಿತವಾಗುವ ಹಾಗೆ ನೀರು ಎರೆಯಬಲ್ಲಂಥಾ ನಿಪುಣ ನಿಂಗ ಅವನು ಎಣ್ಣೆ ಒತ್ತುತ್ತಿದ್ದರೆ ನಿದ್ದೆ ಬರುವುದು. ಮೈಯಲ್ಲಿ ಮಾಂಸದೊಳಗೆ ಇರಲಿ, ಮೂಳೆಯ ಹಿಂದೆ ಅವಿತಿದ್ದ ನೋವು ಕೂಡ ಆ ಎಣ್ಣೆ ಒತ್ತುವುದರಲ್ಲಿ ಹಾರಿ ಹೋಗುವುದು. ಅವನು ನೀರೆರೆಯುತ್ತಿದ್ದರೆ ಮಗುವಿಗೆ ಸನ್ಯಪಾನದಿಂದ ಆಗುವಷ್ಟು ಆನಂದವಾಗಿ ಸುಖದಲ್ಲಿ ಸೊಕ್ಕುವಂತಾಗುವುದು. ಎಣ್ಣೆ ಒತ್ತಿಸಿಕೊಳ್ಳುವ ಜನ ಕೂತುಕೊಳ್ಳುವಾಗಲೇ ಅವರಿಗೆ ಯಾವ ತರಹ ಒತ್ತಬೇಕು ಎನ್ನುವುದು ಅವನ ಮನಸ್ಸಿಗೆ ಅರಿವಾಗುವುದು. ಮೊದಲನೆಯ ಸಲ ನೀರು ಹಾಕುವಾಗಲೇ ಆ ರಭಸ ಹೇಗಿರಬೇಕು ಎನ್ನುವುದು ಅವನಿಗೆ ತಿಳಿದುಹೋಗುವುದು. ಅಷ್ಟೇನು ? ಅವನು ಅಭ್ಯಂಜನ ಸ್ನಾನ ಸಿದ್ಧ. ಚರಿತ್ರೆ ಹೇಳುವುದು ನಿಜವಾದರೆ ನಿಂಗ ಆ ಮಡಿವಂತೆ ಮೂಗೂರು ಸೂಳೆಯ ಮನೆಯಲ್ಲಿ ಇದ್ದ. ಅವನನ್ನು ಗೌಡರು ಮೊದಲು ನೋಡಿದ್ದು ಅಲ್ಲಿ. ಅವರಿಗೂ ಅವನು ಒಂದು ದಿನ ಉಪಚಾರಮಾಡಿದ. ಕೂಡಲೇ ಆ ಸಿದ್ಧಪುರುಷನಿಗೆ ಕಾಫಿಯ ತೋಟಕ್ಕೆ ವರ್ಗವಾಗಿತ್ತು. ಅವನಿಗೆ ಇರುವುದಕ್ಕೆ ಮನೆ, ತಿಂಗಳಿಗೆ ಆಗುವಷ್ಟು ಕಾಳುಕಡ್ಡಿ ಸೌದೆ ತರಕಾರಿ, ಜೊತೆಗೆ ೨೦ ರೂಪಾಯಿ ಸಂಬಳ, ಅದರ ಮೇಲೆ ಗೌಡರಿಗೆ ಮೀಣ ಮಾಡಿಸಿದ ದಿನ ಎರಡು ರೂಪಾಯಿ, ಗೌಡರ ಮನೆಯಲ್ಲಿ ಊಟ ನಿಂಗ ಹೆಂಡತಿಗೂ ಈ ವಿದ್ಯೆ ಕಲಿಸಿದ್ದ. ಅವಳಿಗೂ ಅವನಂತೆಯೇ ಸಂಬಳ, ಗೌಡರ ಹೆಂಡತಿಯರಿಗೆ ಮೀಣಮಾಡಿಸಿದ ದಿನದ ರಿವಾಜ್ ಬರುತಿತ್ತು ನಿಂಗನ ಮೇಲೆ ತೋಟದ ಆಳುಮಗನಿಂದ ಹಿಡಿದು ಮ್ಯಾನೇಜರ್‌ವರೆಗೆ ಎಲ್ಲರಿಗೂ ಗೌರವ. ಗೌಡರ ಕಿವಿ ನಿಂಗನ ಕೈಯಲ್ಲಿತ್ತು ಎಂದು ಸುದ್ದಿಯೊಂದು. ಅವನಿಗೆ ಎಲ್ಲಾ ಸೇರಿ ಗಂಡಹೆಂಡತಿಯರಿಗೆ ಒಂದು ನೂರು ರೂಪಾಯಿ ತಪ್ಪದೆ ಬರುತ್ತಿತ್ತು ಎನ್ನುವದು ಇನ್ನೊಂದು, ಅಂತೂ ಎರಡು ಕಾರಣ ಆ ಗೌರವಕ್ಕೆ ಪ್ರಾಣೇಶನಿಗೆ ನಿಂಗನ ಅಭ್ಯಂಗನ ಪೂರ್ತಾ ಜೀವ ತರಲಿಲ್ಲ. ಮೇಲಕ್ಕೆ ಏಳುವುದೇ ಸಾಧ್ಯವಿಲ್ಲ ಎನ್ನುವಂತಾಗಿದ್ದುದು ತಪ್ಪಿ ಕುಳಿತುಕೊಳ್ಳುವಂತಾಯಿತು. ಸೊಗಸಾದ ಹುಯ್ಯಗಡುಬು, ಹೊಸಬೆಣ್ಣೆ ಕಾಯಿಚಟ್ನ, ತಿನ್ನುವಷ್ಟು ಸಾಮರ್ಥ್ಯ ಬಂತು. ಪ್ರಾಣೇಶನಿಗೆ ಕಾಫಿ ಎಂದರೆ ಪ್ರಾಣ. ಸುಮಾರು ಒಂದು ರೈಲುಚಂಬಿನಷ್ಟು ಕುಡಿದ. ಕುಡಿದ ಎನ್ನುವುದಕ್ಕಿಂತ ಹೀರಿದ ಎಂದರೆ ಸರಿಯೇನೋ ? ಗೌಡರು ಮನೆಯಲ್ಲೇನು ಬೇಕೆಂದರೆ ಡೆಲ್ಲಿ ಎಮ್ಮೆ ಕೂಡ ಸಾಕು ಸಾಕು ಎನ್ನುವಷ್ಟು ಕಾಫಿ ಕೊಡುವರು. ಇಷ್ಟಾದರೂ ಪ್ರಾಣೇಶ ಇನ್ನೂ ಪ್ರಕೃತಿಸ್ಥನಾಗಲಿಲ್ಲ. ಅವನಿಗೆ ಸನ್ಯಾಸಿಗಳ ದರ್ಶನ ಬೇಡ, ಒಳಗೆ ಏನೋ “ಡಾಚಕ್.” ಕಳ್ಳನಿಗೆ ಕಾನ್‌ಸ್ಟೇಬಲ್ ಅಲ್ಲ, ಇನ್‌ಸ್ಪೆಕ್ಟರನ್ನು ಕಾಣುವುದಕ್ಕೆ ಇರುವ ಆತಂಕ. ಸ್ಪಷ್ಟವಾಗಿ ಹೇಳಿಕೊಳ್ಳಲಾರ. ‘ತಾನೇ ಹೊರಡು ಹೊರಡು ಎಂದು ಹೊರಡಿಸಿದ ರಮೇಶ್ ಏನೆಂದುಕೊಂಡಾನು ?’ ಎಂದು ಒಂದು ಸಂಕಟ. ‘ಅಲ್ಲಿಂದ ಬಂದು ಇಲ್ಲಿಂದು ಬರುವುದಿಲ್ಲ ಎಂದರೆ, ಗೌಡನು ರೇಗಿದರೋ? ಆಗಲೇ ಬಂದು ಇಷ್ಟಾರೆ ಕೊಟ್ಟು ಹೋಗಿದ್ದಾನೆ’ ಎಂದು ಇನ್ನೊಂದು ಸಂಕಟ. ಅಂತೂ ಮೊದಮೊದಲು ಸ್ಕೂಲಿಗೆ ಹೋಗುವ ಮಗುವಿನ ಹಾಗೆ ಪಂಚಪ್ರಾಣ ಕೈಯಲ್ಲಿ ಹಿಡಿದುಕೊಂಡು ಸನ್ಯಾಸಿಗಳ ದರ್ಶನಕ್ಕೆ ಹೋಗಲು ಧೈರ್ಯಮಾಡಿದ. ರಮೇಶನು ಅದೂವರೆಗೂ ತನ್ನ ಕಿರುಮನೆಯಲ್ಲಿಯೇ ಇದ್ದಾನೆ. ಅವನಿಗೂ ಏಕೋ ದಿಗಿಲು, ಅವನಿಗೂ ತಾನು ಏಕಾದರು ಒಪ್ಪಿಕೊಂಡೆನೋ ? ಬರದಿದ್ದರೆ ಚೆನ್ನಾಗಿತ್ತೇನೋ ? ಎಂದು ಒದ್ದಾಟ. ಒಳಗಿನ ಯಾವುದೋ ಬಂದು ಕೇಳಿಯೂ ಕೇಳದಂತಿರುವ, ಕೇಳದಿದ್ದರೂ ಕೇಳಿದಂತಿರುವ ಸಣ್ಣದನಿ, ಒಳ್ಳೆಯದಾಯಿತು. ಮಹನೀಯರ ದರ್ಶನ ವಿಫಲವಾಗುವುದಿಲ್ಲ’ ಎನ್ನುತ್ತಿತ್ತು, ಆದರೆ ಅವನಿಗೇ ನಿರ್ಧರ ವಿಲ್ಲ. ‘ತನಗೆ ಬೇಕಾದುದೆಲ್ಲ ಆಗಿಯೇ ಇದೆ. ಹೆಂಡತಿ, ಮಗಳು, ಮನೆ, ಬಾಗಿಲು, ಐಶ್ವರ್ಯ, ಬುದ್ದಿ ಕೀರ್ತಿ, ಬಲ, ಆರೋಗ್ಯ, ಎಲ್ಲಾ ಇದೆ. ಇನ್ನೇನು ಬೇಕು ?? ಎಂದುಕೊಳ್ಳುತ್ತಾನೆ. ಆದರೂ ಒಳ್ಳೆಯದಾಯಿತು. ದರ್ಶನಮಾಡಿರೋಣ” ಎಂಬ ಕಡೆಗೇ ಓಟು. ಕಾರು ಬಂದು ಬಾಗಿಲಲ್ಲಿ ನಿಂತಿತು. ಗೌಡರೂ ಪ್ರಾಣೇಶನೂ ಕರೆಯುವುದಕ್ಕೆ ಬಂದರು. ರಮೇಶನಿಗೆ ಸ್ನೇಹಿತನನ್ನು ನೋಡಿ ಗಾಬರಿಯಾಯಿತು. “ವ್ಹಾಟ್ ಈಸ್ ದಿಸ್ ? ಆರ್ ಯು ಅಲೈವ್ ಆರ್ ಡೆಡ್ ?’ ಎಂದು ಕೇಳಿದನು. “ಪರ್ ಹ್ಯಾಪ್‌ಸ್ ಬೋತ್.” ಕೆನ್ ಯೂ ಸ್ಟಾಂಡ್ ದಿ ಕಾರ್ ಜರ್ನಿ ?” “ಐ ಮಸ್ಟ್” ಪ್ರಾಣೇಶನು ಗೌಡರು ಬಿಡುವುದಿಲ್ಲ ಎಂದು ಅವರ ಕಡೆ ತೋರಿಸಿದನು. “ಇಫ್ ಯೂ ಮಸ್ಟ್, ಯೂ ಮಸ್ಟ್ ಹ್ಯಾವ್ ಎ ಡೋಸ್ ಮ್ಯಾನ್.” “ಐ ಹ್ಯಾವ್ ಟೂ.” ರಮೇಶನು ಇದೇನು ಇವನ ಅವಸ್ಥೆ ಎಂದು ಕೇಳುವವನಂತೆ ಗೌಡರ ಕಡೆ ತಿರುಗಿದನು. ಗೌಡರು ಆ ಅರ್ಥವನ್ನು ಗ್ರಹಿಸಿ “ಗೊತ್ತಾಗುತದೆ ನಡೀರಿ’ ಎಂದು ಕಾರಿನ ಕಡೆಗೆ ಹೊರಟರು. ಪ್ರಾಣೇಶನ ನಡುವಿಗೆ ಗೌಡನ ತೋಳು ಇಂಬಾಗಿತ್ತು. ಆ ಇಂಬು ಬೇಡ ಎಂದು ಅವನು ಅನ್ನಲಿಲ್ಲ, ಅವನಿಗೆ ಅನ್ನಿಸಲೂ ಇಲ್ಲ. ರಮೇಶನು ಅವರಿಬ್ಬರ ಹಿಂದೆ ಪರವಶನಂತೆ ಬಂದನು. ಹಚ್ಚಬೇಕೆಂದು ಕೈಯ್ಯಲ್ಲಿ ಹಿಡಿದಿದ್ದ ಸಿಗರೇಟು ಹಾಗೆಯೇ ಕೈಯಲ್ಲಿತ್ತು, ಗೌಡನು ಮೂಟೆ ತಂದು ಗಾಡಿಗೆ ಭರ್ತಿಮಾಡುವ ವೈಖರಿಯಿಂದ ತನ್ನ ಸ್ನೇಹಿತನನ್ನು ಗಾಡಿಯಲ್ಲಿ ಇಟ್ಟುದನ್ನು ನೋಡುತ್ತ, ರಮೇಶನೂ ಗಾಡಿಯನ್ನು ಹತ್ತಿ ಕುಳಿತನು. ಗೌಡರು ಮಾತ್ರ ಕಳೆದುಹೋಗಿರುವ ಕಾಲವನ್ನು ಹಿಂದಕ್ಕೆ ಎಳೆಯುವ ಅವಸರದಲ್ಲಿರುವಂತೆ, ಥಟ್ಟನೆ ಮುಂದಿನ ಬಾಗಿಲು ತೆಗೆದು ಹತ್ತಿದರು. ಡ್ರೈವರು ಅವರ ಚಿತ್ತವೃತ್ತಿಯನ್ನು ಕಂಡು ಅಷ್ಟೇ ಜಾಗ್ರತೆಯಿಂದ ಹೊರಟನು. ಗೌಡರ ಪಾರ್ಟಿಯು ಗವಿಯ ಬಳಿಗೆ ಬರುವ ವೇಳೆಗೆ ಸುಮಾರು ಹತ್ತು ಗಂಟೆಯಾಗಿತ್ತು. ಪೂಜೆಗೆ ಬೇಕಾದ ಹಾಲು ಹಣ್ಣು ಹೂವು ಮೊದಲಾದ ಪದಾರ್ಥ ಗಳೆಲ್ಲ ಮೊದಲೇ ಹೋಗಿದ್ದುವಾದ್ದರಿಂದ, ಇವರು ಹೋಗುವ ವೇಳೆಗೆ ಪೂಜೆಯೇ ಆರಂಭವಾಗಿತ್ತು. ಸಾಲಗ್ರಾಮವನ್ನು ಕಮಂಡಲುವಿನಲ್ಲಿಟ್ಟು ಹಾಲು ಅಭಿಷೇಕ ಮಾಡಿ ರುದ್ರಪಾರಾಯಣ ಮಾಡುತ್ತ ಕುಳಿತಿದ್ದಾರೆ. ಮೂವರು ಹೆಂಗಸರೂ ವೀಣಾ, ಮಲ್ಲೇಶ, ಗವಿಯ ಬಾಗಿಲ ಮಗ್ಗುಲಲ್ಲಿ ಕುಳಿತುಕೊಂಡಿದ್ದಾರೆ. ಬಾಗಿಲ ಎದುರಿಗೆ ಗೌಡರ ಪಾರ್ಟಿಗೆಂದು ಒಂದು ಸಣ್ಣ ರತ್ನಕಂಬಳಿ ಹಾಕಿದ್ದಾರೆ. ಎಲ್ಲರೂ ಹೋಗಿ ನಮಸ್ಕಾರ ಮಾಡಿದರು. ರುದ್ರ ಹೇಳುತ್ತಿದ್ದ ಸ್ವಾಮಿಗಳು ಎಲ್ಲರಿಗೂ ಕೈಯಿಂದ ಆಶಿರ್ವಾದ ಮಾಡಿ ಕುಳಿತುಕೊಳ್ಳಿರೆಂದು ತಿಳಿಸಿ ರತ್ನಕಂಬಳಿ ತೋರಿಸಿದರು. ಪ್ರಾಣೇಶನು ಕೊನೆಯಲ್ಲಿ ನಮಸ್ಕಾರ ಮಾಡಿ ಎದ್ದನು. ಸ್ವಾಮಿಗಳು ಅವನ ಮುಖವನ್ನು ನೋಡಿದರು. ಅವರ ಮುಖವು ಗಂಭೀರವಾಯಿತು. ಮೂಗಿನಳ್ಳೆಗಳು ದಪ್ಪವಾದುವು. ದನಿ ದಪ್ಪವಾಯಿತು. ಗೌಡರೂ ಅದನ್ನು ಕಂಡರು, ಅವರವರ ಕಣೇ ಮಾತನಾಡಿಕೊಂಡಿತು. ಪೂಜೆಯು ಮುಗಿಯಿತು. ಎಲ್ಲರಿಗೂ ಫಲಪುಷ್ಪ ವಿನಿಯೋಗವಾಯಿತು. ಸ್ವಾಮಿಗಳು ಇಂದು ತಮ್ಮ ಪಾಲು ಇಟ್ಟುಕೊಳ್ಳದೆ ಎಲ್ಲವನ್ನೂ ಹಂಚಿಬಿಟ್ಟರು. ಒಂದು ವಿಚಿತ್ರವೆಂದರೆ ರಮೇಶ್ ತಂದಿದ್ದ ದ್ರಾಕ್ಷಿಯ ಹಣ್ಣಿನ ತಟ್ಟೆಯನ್ನು ಹಾಗೆಯೇ ಎತ್ತಿ ಡ್ರೈವರ್ ಕರೆದು ಕೊಟ್ಟು, “ಇದಿಷ್ಟು ಹಣ್ಣೂ ಎದುರು ಬಂಡೆಯ ಮೇಲೆ ಇಟ್ಟು ಹಿಂತಿರುಗಿ ನೋಡದೆ ಬಾ” ಎಂದು ಹೇಳಿದರು. ಯಾಕೆನ್ನುವುದು ಯಾರಿಗೂ ಅರ್ಥವಾಗಲಿಲ್ಲ. ಅದಾದಮೇಲೆ ಸ್ವಾಮಿಗಳು ಎಳ್ಳು ಹಾಕಿದರೆ ಸದ್ದು ಕೇಳಿಸುವಂತಹ ನಿಶ್ಯಬ್ದದಲ್ಲಿ ಗೌಡರನ್ನು ಕೇಳಿದರು; ಅಂತೂ ರಾಯರಿಬ್ಬರನ್ನು ಭೀಮಸೇನ ಸನ್ಯಾಸಿಗಳನ್ನು ನೋಡುವುದಕ್ಕೆ ಕರೆದುಕೊಂಡು ಬಂದಿರಿ ?” ಆ ಮಾತು ಕೇಳಿ ಎಲ್ಲರೂ ತಲೆ ತಗ್ಗಿಸಿದರು.

ಸ್ವಾಮಿಗಳು ಹೇಳಿದರು: “ಇವೊತ್ತು ನಿಮಗೆ ಭೀಮಸೇನಸ್ವರೂಪ ಕಾಣಿಸು ವಂತಿಲ್ಲ, ಭೈರವನಾಗಬೇಕಾಗಿದೆ. ಹಾಗೆಂದು ಪ್ರಾಣೇಶನ ಕಡೆ ಸನ್ನೆಮಾಡಿದುದು ಗೌಡನಿಗೆ ಅರ್ಥವಾಯಿತು. ಮಿಕ್ಕವರಿಗೆ ಆ ಮಾತು ಅರ್ಥವಾಗಲಿಲ್ಲ. ಪ್ರಾಣೇಶನಿಗೆ ಯಾಕೋ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಏನೋ ಭಯ, ಏನೋ ದಿಗಿಲು, ಸನ್ಯಾಸಿಯ ಮುಖ ನೋಡುವುದಕ್ಕೆ ಆಗದು. ಹೇಗೆ ಹೇಗೋ ಆಗುತ್ತಿದೆ. ಎದ್ದು ಹೋಗೋಣ ಎನ್ನಿಸುತ್ತದೆ. ಏಳುವುದಕ್ಕೆ ಕಾಲು ಬಾರದು. ತೊಡೆಗಳೆರಡನ್ನೂ ಸಿಮೆಂಟ್ ಹಾಕಿ ನೆಲಕ್ಕೆ ಅಂಟಿಸಿದ ಹಾಗಾಗಿದೆ. ಮೈ ನಡುಗುತ್ತಿದೆ. ಗಳಿಗೆಗೊಂದು ಸಲ ಬೆವರುತ್ತಿದೆ. ಹಾಗೂ ಕಷ್ಟಪಟ್ಟು ಏಳುವುದಕ್ಕೆ ಹೋದರು. ಸನ್ಯಾಸಿಯು “ಎಲ್ಲಿಗೆ ಹೋಗೋದು ? ಕುಕ್ಕರಿಸು” ಎಂದರು. ಪ್ರಾಣೇಶನು ಹೆದರಿ ಕುಳಿತುಬಿಟ್ಟನು. ಅಳು ಬಂತು. ಅತ್ತುಬಿಟ್ಟನು. ಗಳಗಳನೆ ಹೆಣ್ಮಗಳು ಅಳುವಹಾಗೆ ಅಳುವ ಅವನನ್ನು ಕಂಡು ಗೌಡನಿಗೂ ರಮೇಶನಿಗೂ ಗಾಬರಿಯಾಯಿತು. ಮಿಕ್ಕವರಿಗಂತೂ ಜೀವವೇ ಇಲ್ಲದಂತಾಗಿದೆ. ಗೌಡನಿಗಂತೂ ದೊಡ್ಡಜೀವ ಹಾರಿಹೋಗುವುದರಲ್ಲಿದೆ. ‘ಹೈಕೋರ್ಟಿನಲ್ಲಿ ಫುಲ್ ಬೆಂಚಿನ ಎದುರಿಗೆ ಸಿಡಿಲಿನ ಮರಿಯ ಹಾಗೆ ಗುಡುಗುವ ಭಾರಿಯ ಲಾಯರು ಒಬ್ಬ ಸನ್ಯಾಸಿಯ ಎದುರಿಗೆ ಕುರಿಯ ಮರಿಯಾಗಿದ್ದಾನೆಯೆಂದರೆ ನಂಬಬಹುದೆ? ಅವರು ಇವನನ್ನು ಗದರಿಸಿದರು ಎಂದರೆ ಮುಂದೆ ನಾನೇ ಹೇಳಿಕೊಟ್ಟು ಎಲ್ಲವನ್ನೂ ಮಾಡಿಸಿದೆ ಎಂದಾದರೆ ಎಷ್ಟು ಅವಮಾನ!’ ಎಂದು ನಡುಗಿಹೋಗಿದ್ದಾನೆ. ರಮೇಶನಿಗೆ ‘ದಿಸ್ ಈಸ್ ಪ್ರಿಪಾಸ್ಟರಸ್. ಎ ವಾಂಡರಿಂಗ್ ಬೆಗ್ಗರ್ ಇನ್‌ಸಲ್ಟಿಂಗ್ ಎ ಲೀಡರ್ ಆಫ್ ದಿ ಬಾರ್’ ಎನ್ನಿಸಿ ರೇಗುತ್ತಿದೆ. ಆದರೂ ಈ ಮಾತು ಆಡಲಾರ. ಏನೋ ಗಂಟಲು ಹಿಡಿದಂತಿದೆ. ಮಾತು ಈಚೆಗೆ ಬರಲೊಲ್ಲದು. ಸನ್ಯಾಸಿಯು ರಾಯರು ಸಮಾಧಾನವಾಗಬೇಕು. ತಮ್ಮ ಗೆಳೆಯರ ಮೇಲಲ್ಲ ನಮ್ಮ ಕೋಪ, ತಮ್ಮ ಗೆಳೆಯರಿಗೆ ಕೈಕೊಟ್ಟು ಅವರನ್ನು ಹಿಡಿದಿರುವ ಮತ್ತೊಬ್ಬರ ಮೇಲೆ, ಎ ವಾಂಡರಿಂಗ್ ಬೆಗ್ಗರ್ ಈಸ್ ನಾಟ್ ಇನ್‌ಸಲ್ಟಿಂಗ್ ಎ ಲೀಡರ್ ಆಫ್ ದಿ ಬಾ‌, ಎ ಬೆನೆವಲೆಂಟ್ ಮಾಂತ್ರಿಕ್ ಈಸ್ ಪಿನ್ನಿಂಗ್ ಡೌನ್ ಎ ವಂಡರಿಂಗ್ ವಿಕೆಡ್ ಸ್ಪಿರಿಟ್”” ಎಂದರು. ಗೌಡನಿಗೆ ಗೌಡನ ಹೆಂಡತಿಯರಿಗೆ ಸಂಪೂರ್ಣವಾಗಿ ಅರ್ಥವಾಯಿತು. ಮೋಹನೆಗೆ ಅರ್ಧಾರ್ಧ ಅರ್ಥವಾಯಿತು. ಹುಡುಗರಿಗೆ ಅರ್ಥವಾಗಲೇ ಇಲ್ಲ. ರಮೇಶನಿಗೆ ನಗು ಬಂತು. ಗಂಭೀರವಾಗಿ ಇರಲು ಮಾಡಿದ ಪ್ರಯತ್ನ ಫಲವಾಗಲಿಲ್ಲ. ಆದರೆ ದೊಡ್ಡದಾಗಿ ನಗಬೇಕೆಂಬ ಮನಸ್ಸಿನ ಪ್ರಯತ್ನವೂ ಸಫಲವಾಗಲಿಲ್ಲ. ಮುಖವನ್ನು ಹಿಂಡಿಕೊಳ್ಳುತ್ತ “ಎಕ್ಸ್‌ಕ್ಯೂಜ್ ಮಿ, ಸ್ವಾಮಿಜಿ, ವಾಟ್ ಅಬೌಟ್ ನಾನ್‌ನ್‌ಫಾರ್ ಮಿಸ್ಸೆಸ್ ?” ಎಂದನು. ಅವನು ಆ ಮಾತಿನಲ್ಲಿ ಒಂದು ಪೌಂಡು ಧೈರ್ಯವಿರಬೇಕು ಎಂದುಕೊಂಡಿದ್ದರೂ ನಾಕು ಔನ್‌ಸಿನ ಮೇಲೆ ಇರಲಿಲ್ಲ. ಸನ್ಯಾಸಿಯು ಗುಡುಗಿದನು, “ಕನ್‌ಫಾರ್ಮಿಸ್ಟ್ ಆರ್ ನೋ ಕನ್‌ಫಾರ್ಮಿಸ್ಟ್ ಫೈರ್ ಬರ್ನ್ಸ್, ಇಟೀಸ್ ಅನ್ ಆಸ್ಟೆಕ್ಟಿವ್ ಫ್ಯಾಕ್ಸ್. ಗೌಡನು ನೋಡಿದನು. ಮಲೆತಿದೆ, ವಾಗ್ಯುದ್ಧ ಆರಂಭವಾಗಿದೆ. ಬಿಟ್ಟರೆ ಯಾವ ಕೊನೆಗೆ ಹೋದೀತೋ ? ಥಟ್ಟನೆ ಎದ್ದನು. ನಮಸ್ಕಾರ ಹಾಕಿದನು. ಗೌಡನ ಹೆಂಡತಿಯರೂ ಗಂಡನ ಜೊತೆಯಲ್ಲಿಯೇ ಎದ್ದು ನಮಸ್ಕಾರ ಹಾಕಿದರು. ಡ್ರೈವರುಗಳೂ ಇದ್ದಕಡೆಯಿಂದಲೇ ಅಡ್ಡಬಿದ್ದರು. ರಮೇಶನೂ ಎದ್ದು ಅಡ್ಡಬಿದ್ದನು. ಆದರೆ ತಾನೇಕೆ ಹಾಗೆ ಮಾಡಿದೆನೆಂದು ಅವನಿಗೆ ತಿಳಿಯದು. ಪ್ರಾಣೇಶನು ಭಂಗಿಯ ಅಮಲಿನಲ್ಲಿ ಇರುವವನಂತೆ ತಲೆಯಲ್ಲಾಡಿಸುತ್ತಾ ಕುಳಿತಿದ್ದನು. ಗೌಡನು ಭಯದಿಂದ, ಭಕ್ತಿಯಿಂದ, ವಿನಯದಿಂದ “ನಾವು ಇರುಗಳಂಗೆ ಬಂದಿದ್ದೇವೆ. ಸಕ್ಕರೆ ಕಲ್ಲಾಗಿ ನಮ್ಮ ಮೇಲೆ ಬಿದ್ದರೆ ತಡೆಯೋಕೆ ಆದೀತಾ ? ಕಣ್ಣು ನೋಡಬೇಕು ಮಹಾಸ್ವಾಮಿ !” ಎಂದು ಕೈಮುಗಿದನು. ಸನ್ಯಾಸಿಯು ಕಣ್ಣು ಬಿಟ್ಟು ಮುಚ್ಚಿ ನಗುತ್ತಾ ಪ್ರಾಣೇಶನ ಕಡೆ ತೋರಿಸಿದನು. ಎಲ್ಲರೂ ಅತ್ತ ನೋಡಿದರು. ಪ್ರಾಣೇಶನು ಹಲ್ಲುಹಲ್ಲು ಕಡಿಯುತ್ತಿದ್ದಾನೆ. ಕಣ್ಣುಗಳು ಬಿರಿಗಣ್ಣಾಗಿ ತೆರೆದಿವೆ, ಭುಸುಗುಟ್ಟುವುದಕ್ಕೆ ಆರಂಭವಾಗಿದೆ. ತಿರಸ್ಕಾರಕ್ಕೆ ಮನಸ್ಸು ಸಿದ್ಧವಾಗಿದ್ದರೂ, ದೊಡ್ಡ ನಾಯಿಯ ಎದುರಿಗೆ ಹದುಗಿಕೊಂಡು ಬಾಲ ಮುಚ್ಚಿಕೊಂಡು ಹಲ್ಲು ಕಿರಿದುಕೊಂಡು, ‘ನಿನಗೆ ಮೇಲೆ ಬೀಳುವುದಕ್ಕೆ ಇನ್ನು ಯಾರೂ ಇರಲಿಲ್ಲವೆ ?’ ಎಂದು ಕೇಳುತ್ತಿರುವ ಕುನ್ನಿಯಂತೆ, ಹೆದರಿ ಹದುಗಿಕೊಳ್ಳುತ್ತಿರುವ ದೈನ್ಯಭಾವದಿಂದ “ನಾನೊಂದು ಸುಳಿ ಮುರಿದರೆ ನಿಮ್ಮ ಗಂಟೇನು ಹೋಯಿತು ?” ಎಂದು ಕೇಳುತ್ತಿದ್ದಾನೆ. ಸನ್ಯಾಸಿಯು ಪದ್ಮಾಸನದಲ್ಲಿ ಗೂಟ ಹೊಡೆದಂತೆ ಕುಳಿತಿದ್ದಾನೆ. ಆತನು ಯಾವ ಮಾತೂ ಆಡಲಿಲ್ಲ. ತಿರುಗಿ ಪ್ರಾಣೇಶನೇ ಮಾತನಾಡಿದನು. “ಇವನು ಪಾಪಿ, ಗೌಡನ ಹಣಕ್ಕೆ ಆಸೆಬಿದ್ದು ಅವನ ನರಹತ್ಯ ಇಲ್ಲ ಎನ್ನಿಸಿದ್ದಾನೆ. ನೀವು ಅಡ್ಡ ಬರಬೇಡಿ.” ಸನ್ಯಾಸಿಯು ಕಣ್ಣು ಬಿಟ್ಟು ನೋಡಿದನು. ಪ್ರಾಣೇಶನ ಕಣ್ಣಲ್ಲಿ ನೀರು ಸೋರುತ್ತಿದೆ, ಆದರೆ ಅಳುವಿನ ಭಾವವಿಲ್ಲ. ನಗಬೇಕೆಂಬ ಪ್ರಯತ್ನ ಹಿರಿದಾಗಿರುವುದು ಮುಖದಲ್ಲಿ ತೋರುತ್ತಿದೆ. ಆದರೆ ನಗುವುದಕ್ಕೆ ಧೈರ್ಯವಿದ್ದಂತಿಲ್ಲ, ಆ ಭಾವಸಂಧಿ ಯಲ್ಲಿದ್ದುಕೊಂಡು ಹೇಳಿತು, “ನಾನು ಯಾರು ಎನ್ನುವುದು ನನ್ನ ಬಾಯಲ್ಲಿ ಹೇಳುವುದಿಲ್ಲ, ಹೌದು, ನೀವು ಹೇಳಿಸಬಲ್ಲಿರಿ. ಬೇಡಿ, ದುಡುಕಬೇಡಿ, ಇವನ ಮೇಲೆ ಮಾಡಬೇಕೆಂದಿರುವ ಕೃಪೆ ನನ್ನ ಮೇಲೆ ಮಾಡಿ, ಇದು ನನಗೆ ಬೇಕಾದ ಕೊನೆಯ ಬಲಿ, ಇದನ್ನು ತೆಗೆದುಕೊಂಡು ಹೋಗುತ್ತೇನೆ. ತಡೆದರೆ ಇನ್ನೊಂದು ಪಾಪಚಕ್ರ ನೀವಾಗಿ ಆರಂಭಿಸಿದಂತಾಗುತ್ತದೆ. ನಿಮಗೆ ಇರುವ ಶಕ್ತಿಯನ್ನು ಉಪಯೋಗಿಸಿ, ಇವನ ಕರಾಳ ಹೃದಯದಲ್ಲಿ ಅಡಗಿರುವ ಪಾಪಸಂಕಲ್ಪಗಳನ್ನೆಲ್ಲ ನೋಡಿ ಸುಮ್ಮನಾಗಿ ಆಗುವುದಿಲ್ಲವೆ? ಮನುಷ್ಯನೆಂಬ ಜಾತಿ ವಾತ್ಸಲ್ಯಕ್ಕೆ, ಗೌಡನು ಭಕ್ತನೆಂಬ ಅಭಿಮಾನಕ್ಕೆ ವಶನಾಗಿ ಏ ಸನ್ಯಾಸಿ, ಈ ಚಂಡಾಲನನ್ನು ಉಳಿಸಿಕೊಳ್ಳುವೆನೆನ್ನುವೆಯಾ? ನಿನ್ನ ಕೈಲಾದರೆ ಉಳಿಸಿಕೊ. ಎಚ್ಚರಿಕೆ. ನೀನು ನನ್ನನ್ನು ಬಿಟ್ಟೆಯಾ ಸರಿ. ಇಲ್ಲದಿದ್ದರೆ, ನೀನು ಕಟ್ಟಬಲ್ಲೆ ಕೊಲ್ಲಲಾರೆ ಎನ್ನುವುದನ್ನು ನೋಡಿಕೊ. ಕೊಂಬೆಯಿಂದ ಕೊಂಬೆಗೆ ಹಾರಿ ಮರವನ್ನು ಮುರಿದೇನು ?….” “” ಇನ್ನೂ ಏನೇನು ಹೊರಡುವುದರಲ್ಲ? ಸಂನ್ಯಾಸಿಯ ಹುಂಕಾರವು ಅದೆಲ್ಲವನ್ನೂ ತಡೆಯಿತು. “ಕೊಲ್ಲುವೆಯಾ ? ಮಾರಣಹೋಮ ಮಾಡುವೆಯಾ ? ಕೊಲ್ಲು ಕೊಲ್ಲು ನಿನ್ನ ಕೈಲಾದರೆ ಕೊಲ್ಲು…. ಎಂದು ಗಳಹುವುದಕ್ಕೆ ಹೊರಟಿತು. ಇನ್ನೊಂದು ಹುಂಕಾರ, ಅಯ್ಯೋ ಎಂದು ಪ್ರಾಣೇಶನ ದೇಹವು ಬಿದ್ದುಹೋಯಿತು. ಸನ್ಯಾಸಿಯು ಥಟ್ಟನೆ ಎದ್ದು ಕಮಂಡಲುವಿನಲ್ಲಿದ್ದ ಹಾಲನ್ನು ಆ ದೇಹಕ್ಕೆ ಅಭಿಷೇಕ ಮಾಡಿದರು. ಪ್ರಾಣೇಶನಿಗೆ ಹೋಗಿದ್ದ ಉಸಿರು ಬಂದಂತಾಯಿತು. ಮೆತ್ತಗೆ ಉಸಿರು ಕೂಡಿ ಕೊಂಡಿತು. ಹೆಂಗಸಿನ ಹಾಗೆ ಮುದುರಿಕೊಂಡು ಬಿದ್ದಿದ್ದ ಪ್ರಾಣೇಶನು ಕೊಂಚ ಕೊಂಚವಾಗಿ ಚೇತರಿಸಿಕೊಂಡು ಏಳುತ್ತಿರುವ ಲಕ್ಷಣಗಳು ಕಾಣಿಸಿತು. ಮೆಲ್ಲಗೆ ಎದ್ದು ಕುಳಿತುಕೊಂಡನು. ಗೌಡನೂ ರಮೇಶನೂ ಮಾತನಾಡಿಸುವುದಕ್ಕೆ ಹೋದರು. ಸನ್ಯಾಸಿಯು ಬೇಡವೆಂದರು. ಅವರ ಮಾತು ಮೀರುವ ಧೈರ್ಯ ಯಾರಿಗೂ ಇರಲಿಲ್ಲ ಕಣ್ಣು ಮುಚ್ಚಿಕೊಂಡು, ಬಲಗೈ ಎತ್ತರವಾಗಿ ಎತ್ತಿಕೊಂಡು, ಇಲ್ಲಿರುವವರೆಲ್ಲ ಹೆಣ್ಣಾಗಲಿ, ಗಂಡಾಗಲಿ, ನಿತ್ಯ ಶಿವಲಿಂಗದ ಪೂಜೆ ಮಾಡಬೇಕು. ಶಿವತೀರ್ಥ ಪ್ರಸಾದ ದಿನಾದಿನವೂ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನರ್ಥವು ತಪ್ಪುವುದಿಲ್ಲ ಎಚ್ಚರಿಕೆ. ಎಚ್ಚರಿಕೆ. ಗೌಡ ನೀನು ಶೂದ್ರನೆಂದುಕೊಳ್ಳಬೇಡ. ಶಿವನು ಶೂದ್ರನಿಗೊಬ್ಬ ಬ್ರಾಹ್ಮಣನಿಗೊಬ್ಬ ಇಲ್ಲ. ಎಲ್ಲರಿಗೂ ಇರುವವನು ಒಬ್ಬನೇ ಶಿವ. ಧೈರ್ಯವಾಗಿ ಶಿವಪೂಜೆ ಮಾಡು. ಪೂಜೆ ಕಲಿತುಕೋ, ರುದ್ರಾಭೀಷೇಕ ಮಾಡು. ಅದುವರೆಗೆ ಬೇರೆ ಕಡೆ ಮಾಡಿಸುತ್ತಿರು. ತಪ್ಪುತ್ತದೆ ಎಂದು ಹೆದರಬೇಡ. ಸಾವಿರ ಹೆಜ್ಜೆ ತಪ್ಪಿದ ಮೇಲೆ ಒಂದು ಸರಿಯಾದ ಹೆಚ್ಚೆ ಮರೆತೀರಿ ! ಮರೆತೀರಿ!” ಎಂದು ಗರ್ಜಿಸಿ ಸುಮ್ಮನಾದರು. ಎಲ್ಲರೂ ಅವಾಕ್ಕಾಗಿ ಶ್ರದ್ಧಾಭಕ್ತಿಗಳಿಂದ ಕೈಕಟ್ಟಿಕೊಂಡು ನಿಂತಿದ್ದರು. ಅಷ್ಟು ಹೊತ್ತಾದ ಮೇಲೆ ಸನ್ಯಾಸಿಗಳು ಕಣ್ಣು ಬಿಟ್ಟರು. ಭಯಂಕರವಾಗಿ ಭೈರವನಂತೆ, ರುದ್ರನಂತೆ, ಉರಿಯುತ್ತಿದೆಯೋ ಎಂಬಂತೆ ತೋರುತ್ತಿದ್ದ ಮುಖ ಶಾಂತ ಸುಂದರ ವಾಯಿತು. ಸಣ್ಣಗೆ ನಕ್ಕರು. ಎಲ್ಲರಿಗೂ ಪ್ರಾಣಗಳು ತಮ್ಮ ತಮ್ಮ ಸ್ಥಾನದಲ್ಲಿ ಕುಳಿತು ಕೊಂಡಂತಾಯಿತು. ಪ್ರಾಣೇಶನಿಗೆ ಏನೋ ಕನಸಾದಂತಿದೆ. ತನ್ನ ಮೈಯೆಲ್ಲ ಹಾಲಾಗಿರುವುದು ನೋಡಿಕೊಂಡು, ಇದೇನು ಎಂದು ಕೇಳುವನಂತೆ ಆಶ್ಚರದಿಂದ ಸುತ್ತಲೂ ನೋಡಿ, ಎಲ್ಲರೂ ತನ್ನ ಕಡೆಗೇ ನೋಡುತ್ತಿರುವುದನ್ನು ಕಂಡು ಆಶ್ಚಯ್ಯಪಟ್ಟು ಸ್ವಾಮಿಗಳ ಕಡೆ ನೋಡಿದನು. ಅದೇನಾಯಿತೋ ಏನೋ ? ತಾನು ಅವರ ಕೃಪೆಯಿಂದ ಉಳಿದುಕೊಂಡೆನೆಂಬ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವವನಂತೆ ಎದ್ದು ನಮಸ್ಕಾರ ಮಾಡಿದನು. ಸ್ವಾಮಿಗಳು ನಗುತ್ತಾ “ನಿನ್ನೆಯ ರಾತ್ರಿಯ ಕನಸು ನೆನೆಪಿದೆಯೋ?” ಎಂದರು. “ಹಾಗಾದರೆ ಅದು ಕನಸೇ ??? “ಹೌದು ಕನಸು. ಆ ಕನಸು ಇನ್ನೊಂದು ದಿನ ಕಂಡಿದ್ದರೆ ಎಲ್ಲವೂ ಪೂರೈಸಿಹೋಗುತ್ತಿತ್ತು. ಅಷ್ಟರಲ್ಲಿ ಗೌಡರು ಅಡ್ಡವಾಗಿ ನಿಮ್ಮನ್ನು ಅವರು ಉಳಿಸಿಕೊಂಡರು.” ~ “ಉಂಟಾ ಬುದ್ದಿ! ಅವರೂ ಇವರೂ ನಮ್ಮನ್ನು ಉಳಿಸಿದವರು, ತಾವು ದೊಡ್ಡ ಮನಸ್ಸು ಮಾಡಿ ಅವರನ್ನು ಉಳಿಸಿದಿರಿ. ತಮ್ಮ ಪಾದದಲ್ಲಿ ನಾನು ಎಷ್ಟರವನು ?” “ಇವೊತ್ತು ಈ ಮಾತು ಆಡುತ್ತಿದ್ದೀರಿ. ಅವೊತ್ತು ಆ ಕೋಪದಲ್ಲಿ ಆ ಬಡಪಾಯಿಯನ್ನು ಕೊಂದಾಗ ಈ ದೈನ್ಯ ಎಲ್ಲಿ ಹೋಗಿತ್ತು? ನಾವು ಸನ್ಯಾಸಿಗಳು.

ಸ್ವಕರ್ಮಸೂತ್ರಗ್ರಥಿತೋಹಿಲೋಕಃ ಎಂದು ಸುಮ್ಮನಿರಬೇಕು. ಆದರೂ ಎದುರಿಗೆ ಬಂದ ಮೇಲೆ, ಕಣ್ಣಿಗೆ ಬಿದ್ದ ಮೇಲೆ, ಈಶ್ವರಭಾವವಿದ್ದವರು ಕೃಪೆ ಮಾಡಲೇ ಬೇಕು. ಅದರಿಂದ ಈಶ್ವರ ಅವರನ್ನು ಕಾಪಾಡುವ ನೆವದ ಮೇಲೆ ನಿಮ್ಮ ಮೇಲೆ ಕೃಪೆ ತೋರಿಸಿದ. ರಾಯರೇ, ಅವಳು ಒಳಕ್ಕೆ ಬಂದಳು. ಆಳು ಹೊರಟುಹೋದ. ಹೌದೋ ?’ “ಹೌದು.’ “ಇಲ್ಲಿಗೆ ಬಂದಿದ್ದವಳು ಅವಳು. ಹೋದ ಆಳು ತಪ್ಪಿಸಿಕೊಂಡಿದ್ದಾನೆ. ನಿಮ್ಮ ಮೂವರಲ್ಲಿ ಯಾರಿಗೋ ಒಂದು ಸಲ ಅವನು ವಕ್ರಿಸುತ್ತಾನೆ. ಶಿವಪೂಜೆ ಮಾಡಿ ಬದುಕಿಕೊಳ್ಳಿ, ಗೌಡರೆ, ಇವೊತ್ತಿಗೆ ಇಲ್ಲಿನ ಋಣ ತೀರಿತು. ನಾವು ಇಂದಿನ ಸಂಜೆ ಹೊರಡುತ್ತೇವೆ. ಎಲ್ಲರೂ ಸುಖವಾಗಿರಿ. ಗೌಡನಿಗೆ ತನ್ನ ಪ್ರಾಣವೇ ಹೊರಹೊರಟಂತಾಯಿತು: “ಉಂಟಾ ಬುದ್ಧಿ! ಇನ್ನೂ ಎರಡು ಕಾಲವಾದರೂ ಇಲ್ಲದಿದ್ದರೆ ಆದೀತೆ ? ತಾವು ಹಾಗನ್ನಬಾರದು ಮಹಾ ಪಾದ. ಇನ್ನೂ ಅಷ್ಟು ದಿನ ಇದ್ದು ನಮ್ಮ ಒಳ್ಳೇದು ಕೆಟ್ಟುದು ನೋಡಿಕೊಂಡು ಆಮೇಲೆ ಬಿಜಮಾಡಬೇಕು’ ಎಂದು ಅಂಗಲಾಚಿಕೊಂಡನು. ಗೌಡನ ದೊಡ್ಡ ಹೆಂಡತಿಯಂತೂ ಮೊಕಕ್ಕೆ ಬಟ್ಟೆ ಕವಿಚಿಕೊಂಡು ನೀರವವಾಗಿ ಅಳುತ್ತ ನಿಂತಿದ್ದಳು. ಸನ್ಯಾಸಿಯು ಅದನ್ನು ಕಂಡು ಅಳುಕಿದವನಂತೆ ಹೇಳಿದರು: “ಮಲ್ಲಮ್ಮಾ ಅಳಬೇಡ ತಾಯಿ. ನಿನಗಷ್ಟು ಸಂಕಟವಾದರೆ, ನಿಮ್ಮ ಮನೆ ಬಾಗಿಲಲ್ಲಿ ಇನ್ನೂ ಒಂದು ತಿಂಗಳು ಇದ್ದು ಹೋಗುತ್ತಾನೆ ಗುರುದೇವ. ಆದರೆ, ಆಗಲೂ ಈಗಿನ ಹಾಗೆ ಅಳಬಾರದು ಒಪ್ಪಿಕೆಯೋ ?” ಆ ದನಿಯಲ್ಲಿ ಏನೋ ಮಾರ್ಮಿಕವಾದ ಭಾವನೆ ತಾನೇತಾನಾಗಿ ತುಂಬಿ ಹೋಗಿತ್ತು ತಾಯಿಯನ್ನು ಮಗನು ನಂಬಿಸುವ, ಪ್ರಾರ್ಥಿಸುವ, ಒಪ್ಪಿಕೊಳ್ಳೆಂದು ಬಲವಂತ ಮಾಡುವ ಆ ಭಾವದ ಶಬಲತೆಗೆ ವಶವಾದವಳಂತೆ ಆ ಮಲ್ಲಮ್ಮನು “ಹೂಂ” ಎಂದಳು. ಅಯ್ಯೋ ನಾನು ಒಪ್ಪಿಕೊಳ್ಳಬಾರದಾಗಿತ್ತು, ಎಂಬ ಭಾವ ತಿರುಗಿ ಬಂದು ಅವಳಿಗೆ ಇನ್ನೂ ಸಂಕಟವಾಯಿತು. “ಗೌಡರೇ, ಇಂದಿನ ಸಂಜೆ ವೇಳೆಗೆ ನಿಮ್ಮ ಮನೆಗೆ ಪಶ್ಚಿಮವಾಗಿ ಆ ದೊಡ್ಡ ಮಾವಿನ ಮರವಿದೆಯಲ್ಲ ಅದರ ಕೆಳಗೆ ಒಂದು ಜೋಪಡಿ ಹಾಕಿಸಿರಿ, ಆ ಜೋಪಡಿಯಲ್ಲಿ ನಿತ್ಯವೂ ದೇವರ ಪೂಜೆ ಮಾಡಿಕೊಂಡು ಒಂದು ತಿಂಗಳು ಇರುತ್ತೇನೆ. ನಿತ್ಯವೂ ನಮ್ಮ ಮಲ್ಲಮ್ಮ ಪೂಜೆಗೆ ಅಣಿ ಮಾಡಲಿ, ಕೆಂಪಮ್ಮ ಗುಡಿಸಿ ಸಾರಿಸಿ ಮಾಡಲಿ. ನೀವೂ ಪೂಜೆಯ ಕಾಲದಲ್ಲಿ ಎದುರಿಗೆ ಇದ್ದು ಪೂಜೆಯನ್ನು ಕಲಿತುಕೊಳ್ಳಿ. ನಿಮ್ಮ ಮನೆಯಲ್ಲಿ ಆ ಕರಿಯ ಹಸು ಇದೆಯಲ್ಲ ಅದರ ಹಾಲೆಲ್ಲ ಎರಡು ಹೊತ್ತೂ ನಮಗೇ ಕೊಡಬೇಕು. ಸಾಧ್ಯವೋ ? ಒಪ್ಪಿಗೆಯೋ ?” “ಅಪ್ಪಣೆ “ಮತ್ತೊಂದು ಮಾತು. ಈ ರಾಯರ ಚಿಕಿತ್ಸೆ ಇನ್ನೂ ಪೂರ್ಣವಾಗಿಲ್ಲ.

ಇನ್ನೊಂದು ಗುಡಿಸಲು ಮಾವಿನ ಮರದ ತೆಂಕಲಿನಲ್ಲಿ ಹಾಕಿಸಿರಿ. ಅಲ್ಲಿ ಇವೊತ್ತು ಇನ್ನೊಂದು ಗಳಿಗೆ ಇವರನ್ನಷ್ಟು ಚಂಡಿಸಬೇಕು. ಏನು ರಾಯರೇ! ತಮಗೆ ಸಮ್ಮತವೋ? ಇನ್ನೂ ಒಂದು ಸಲ ಬಟ್ಟೆ ಒಗೆಯಬೇಕು. ಆಗಬಹುದೋ ?” ರಾಯರಿಗೆ ಬೇಕು ಬೇಡ ಎನ್ನುವುದಕ್ಕೆ ಉಸಿರು ಇತ್ತೇನು? ಕೀಲು ಬೊಂಬೆಯಂತೆ ತಲೆಯಲ್ಲಾಡಿಸಿದರು. * * * ಸಂಜೆ ಐದು ಗಂಟೆಯಿರಬಹುದು. ಸನ್ಯಾಸಿಗಳು ತೋಟಕ್ಕೆ ಬಂದುಬಿಟ್ಟರು. ಗೌಡನೂ ರಾಯರುಗಳೂ ಸಪರಿವಾರರಾಗಿ ಹೋಗಿ ಎದುರುಗೊಂಡು ಕರೆದುಕೊಂಡು ಬಂದರು. ಅವರಿಗಾಗಿ ಗೊತ್ತಾಗಿದ್ದ ಗುಡಿಸಿಲಿನ ಬಾಗಿಲಿಗೆ ಬಂದಾಗ, ಮಲ್ಲಮ್ಮನು ಮುಂದೆ ಬಂದು “ಗುರುವೇ, ಪಾದ ತೊಳೀಲೆ?” ಎಂದಳು. ಸನ್ಯಾಸಿಯು “ಅಗತ್ಯವಾಗಿ’ ಎಂದು ನಿಂತುಕೊಂಡರು. ಮಲ್ಲಮ್ಮನು ಪಾದಗಳನ್ನು ತೊಳೆದು ಆ ನೀರನ್ನು ಬಿಂದಿಗೆಯಲ್ಲಿ ತುಂಬಿಟ್ಟುಕೊಂಡಳು. ಸ್ವಾಮಿಗಳು ಅದೇಕೆ ಆ ನೀರು?” ಎಂದರು. “ಮನೆಯಲ್ಲೆಲ್ಲಾ ಪ್ರೋಕ್ಷಣೆ ಮಾಡುತ್ತೇನೆ ಗುರುವೇ’ “ಹಾಗೆ ಮಾಡೆಂದು ನಿನಗೆ ಯಾರು ಹೇಳಿದರು ?’ ತಾವೇ ಬಂದು ಹೇಳಿದಿರಲ್ಲಾ?” “ಹೌದು. ಅರ್ಥವಾಯಿತೋ ಇಲ್ಲವೋ ಅಂತ ತಿಳಿದುಕೊಳ್ಳೋಣ ಎಂದೇ ಕೇಳಿದೆ. ಎಲ್ಲಿ ಮತ್ತೆ? ಹಾಲು ಹಣ್ಣು ಇಟ್ಟದ್ದೀಯಾ ?” ‘ಇಕೋ’ ಎಂದು ಬಿದಿರುಗೊಡೆ ಮೂಟೆ ಬಡುವಿನ ಮೇಲೆ ಇಟ್ಟಿದ್ದ ಪಂಚಾಮೃತ, ಹಾಲು ತೆಗೆದು ಒಪ್ಪಿಸಿದಳು. “” “ಯಾರಿಗೆ ಕೊಡುತ್ತಿದ್ದೀಯೆ ? ಮಲ್ಲವ್ವಾ ! ನೋಡಿ ಕೊಡು. ಮಲ್ಲವ್ವನು “ಅಪ್ಪಯ್ಯಾ !” ಎಂದಳು. ಆನಂದದಿಂದ ಉಬ್ಬಿಹೋದಳು. ಸುಖದಲ್ಲಿ ಸೊಕ್ಕಿ ಮಾತನಾಡಲೂಲಾರದೆ, “ಅಯ್ಯೋ, ನನ್ನ ಫಕೀರಪ್ಪ, ನನ್ನ ಸೋಮಿ, ನಮ್ಮಪ್ಪನ ಮನೇ ದೇವರಲ್ಲವೇನೋ ನೀನು ? ಅಲ್ಲಿಂದ ಇದುವರೆಗೂ ದರ್ಶನ ಕೊಡದೆ ಮರೆಯಾಗಿದ್ದೆಯೇನೋ?” ಎಂದು ಆತನ ಚರಣತಲದಲ್ಲಿ ತಾನು ಹೆಣ್ಣು ಎಲ್ಲರ ಎದುರಿಗೂ ಇರುವೆನು ಎಂಬುದನ್ನೂ ಮರೆತು ಬಿದ್ದು ಒದ್ದಾಡಿ, ಆ ಪಾದಗಳಿಗೆ ಮುತ್ತು ಕೊಟ್ಟು ಪಂಚಾಮೃತವನ್ನು ಸರ್ವಲೋಕ ಮಹೇಶ್ವರನಿಗೇ ಒಪ್ಪಿಸುವಳಂತೆ ಒಪ್ಪಿಸಿದಳು. ಒಂದು ತಟ್ಟೆಯ ಪಂಚಾಮೃತವನ್ನು ಅವಳ ಕೈಯಿಂದ ತುತ್ತು ಹಾಕಿಸಿ ಕೊಂಡು ತಿಂದು, ಒಂದು ಚೊಂಬಿನ ಹಾಲೂ ಕುಡಿದು, “ಈ ತಿಂಗಳೆಲ್ಲಾ ಹೀಗೇ ಕಣವ್ವಾ !” ಎಂದು ಹೇಳಿದರು. ಆ ಮಾತು ಅವಳೊಬ್ಬಳಿಗೇ ಅರ್ಥವಾದುದು. ಸ್ವಾಮಿಗಳು ಇನ್ನೂ ಅಷ್ಟು ಹೊತ್ತು ಕಣ್ಮುಚ್ಚಿ ಕುಳಿತಿದ್ದರು. ಅಂತೂ ರಮೇಶರಾಯರು ಗಟ್ಟಿಗರು. ಭೀಮಸೇನ ಸನ್ಯಾಸಿಯ ದರ್ಶನವನ್ನೂ ಮಾಡಿದರು. ಆದರೆ ಇವೊತ್ತು ಅವರ ಕಡೆಗೆ ತಿರುಗುವುದಕ್ಕೆ ಅವಕಾಶವಿಲ್ಲ. ಬೆಳಗಿನ ಕೆಲಸ ಅಷ್ಟು ಬಾಕೀ ಇದೆ. ನಾವೂ ನಮ್ಮ ರಾಯರೂ ಆ ಗುಡಿಸಲಿಗೆ ಹೋಗಿ ಬರಬಹುದೋ?” ಎಂದು ಎಲ್ಲರಿಗೂ ಹೇಳಿ, ಪ್ರಾಣೇಶನನ್ನು ಕರೆದುಕೊಂಡು ಆ ಗುಡಿಸಲಿಗೆ ಹೋದರು. ಅಲ್ಲಿ ಪ್ರಾಣೇಶನಿಗೆ ಒಬ್ಬನೇ ಸ್ವಾಮಿಗಳ ಜೊತೆಯಲ್ಲಿರುವುದಕ್ಕೆ ದಿಗಿಲು. ರಮೇಶನನ್ನೂ ಕೂಗಲೇನು” ಎಂದನು. “ಇದು ಕೇವಲ ನಿನ್ನ ಮಾತು. ನಿಮ್ಮ ತಂದೆಯ ವಿಚಾರ ಹೆಚ್ಚಾಗಿ ಬರುತ್ತದೆ. ಅದನ್ನು ಎಲ್ಲರೂ ಕೇಳಬಹುದು ಎಂದರೆ ನನ್ನ ಮಾತಿಲ್ಲ ನಿನಗೆ ದಿಗಿಲಾಗುತ್ತಿರುವುದೂ ನನಗೆ ಗೊತ್ತು ದಿಗಿಲಿಗೆ ಕಾರಣವಿಲ್ಲ. ನೀನು ಬೇಕೆಂದರೆ ಯಾರನ್ನು ಬೇಕಾದರೂ ಕರಿ. ಆದರೂ ಒಬ್ಬನೇ ಇದ್ದರೆ ಒಳ್ಳೆಯದು. ಪ್ರಾಣೇಶನು ಯಾರನ್ನೂ ಕರೆಯಲಿಲ್ಲ. ಮಿಗಳು ಹೇಳಿದರು: “ನಿನಗೆ ನನ್ನ ಗುರುತಿಲ್ಲ. ನನಗಿದೆ. ನಾನೂ ನಿಮ್ಮ ತಂದೆಯೂ ಒಟ್ಟಿಗೆ ಆಡುತ್ತಿದ್ದವರು. ಮೈಸೂರಲ್ಲಿ ನಿಮ್ಮ ಮನೆಯಿದ್ದುದು ನಿನಗೆ ನೆನೆಪಿದೆಯಲ್ಲವೆ ? ಹಳೆಯ ಆಗ್ರಹಾರದಲ್ಲಿ? ಒಂದು ಬೀದಿ ಆಚೆ ನಮ್ಮ ಮನೆ. ನಿಮ್ಮ ತಂದೆಯವರಿಗೂ ನನಗೂ ಬಾಲ್ಯದಲ್ಲಿ ಬಹಳ ಸ್ನೇಹ. ನಿಮ್ಮ ಅಜ್ಜಿ ನನ್ನ ಮೇಲೆ ಬಹಳ ವಿಶ್ವಾಸವಿಟ್ಟುಕೊಂಡಿದ್ದರು. ಅಗಾಗ ತಾಯಿಗೆ ತಾಯಾಗಿ ಉಪಚಾರ ಮಾಡುತ್ತಿದ್ದರು. ಆ ವಿಶ್ವಾಸ ಇವೊತ್ತು ನಿನ್ನನ್ನು ಕಾಪಾಡಿತು.

“ನಡೆದುದೆಲ್ಲ ನನಗೆ ಕನಸಿನ ಹಾಗಾಗಿದೆ. ಏನೂ ಅರ್ಥವಾಗಿಲ್ಲ. “ಅದಕ್ಕೇ ನಿನ್ನನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದೆ. ನಿನಗೆ ಹೇಳಬೇಕು ಎಂದೇ ಇಲ್ಲಿಗೆ ಕರೆತಂದುದು. ನಾನು ಹೇಳಿ ನೀನು ಕೇಳಿದರೆ ನಿನಗೆ ನಂಬಿಕೆ ಬರದೇ ಹೋಗಬಹುದು. ನಿನಗೆ ನೋಡಬೇಕು ಎನ್ನುವ ಇಷ್ಟವಿದ್ದರೆ, ಧೈರ್ಯ ಮಾಡಿ ನೋಡು ಒಂದು ಸಿನಿಮಾ ನೋಡುವುದಕ್ಕೆ ಸಿದ್ಧವಾಗಿದ್ದೀಯಾ ?” ರಮೇಶನೂ ಇದ್ದುಬಿಡಲಿ.” “ಆಗಬಹುದು. ಎದ್ದು ಹೋಗಬೇಡ, ಇಲ್ಲಿಂದಲೇ ಕರೆ.” ರಮೇಶನು ಬಂದನು. ಬೆಳಕು ಮಂಕಾಗುತ್ತ ಬಂದಿತು. ಹಕ್ಕಿಗಳು ಗೂಡು ಸೇರುವ ಕಾಲ ಹತ್ತಿರ ಬರುತ್ತಿತ್ತು, ಪ್ರಾಣೇಶನು ಕಣ್ಮುಚ್ಚಿ ಕುಳಿತನು. ಅವನ ಮುಚ್ಚಿದ ಕಣ್ಣ ಮುಂದೆ ಒಂದು ಸಿನಿಮಾ ಷೋ ಆರಂಭವಾಯಿತು. ತರುಣ ದಂಪತಿಗಳು ಸಂಸಾರ ಮಾಡುತ್ತಿದ್ದಾರೆ. ಅವರಿಗೊಬ್ಬ ಮಗನಾಗಿದ್ದಾನೆ. ಅವನು ಬೆಳೆದು ದೊಡ್ಡವನಾದ. ಅವನಿಗೂ ಮದುವೆಯಾಗಿದೆ. ಆ ತರುಣನು ತನ್ನ ತಂದೆಯೆಂಬುದನ್ನು ಪ್ರಾಣೇಶನು ಗುರುತಿಸಿದ್ದಾನೆ. ಅವನೂ ಲಾಯರು. ಅವನ ಬಳಿಗೆ ಒಬ್ಬಳು ಹೆಂಗುಸು ಬಂದಿದ್ದಾಳೆ. ಆಕೆಯ ಕೇಸನ್ನು ಗೆದ್ದು ಕೊಡುವುದಾಗಿ ಮಾತು ಕೊಡುತ್ತಾನೆ. ಬಂದವಳು ಜಾತಿಯಿಂದ ಸೂಳೆ ಇಬ್ಬರಿಗೂ ಹೇಗೆ ಹೇಗೋ ಸಂಬಂಧವಾಗುತ್ತದೆ. ಅವಳದು ಭಾರಿಯ ಆಸ್ತಿ. ಸ್ಥಿರಕ್ಕಿಂತ ಚರವೇ ಹೆಚ್ಚು. ಸ್ಥಿರ ಆಸ್ತಿ ಬರಬೇಕು ಎಂಬ ಜಗಳ, ಕೋರ್ಟಿನಲ್ಲಿ ಗೆದ್ದಿದೆ. “ಗಂಡು ಆಸ್ತಿಗೆ ಸೋತು ಹೆಣ್ಣಿಗೆ ವಿಷ ಕೊಟ್ಟಿದೆ. ಔಷಧ ಉಪಚಾರ ಮಾಡಿದರೂ ಅವಳು ಬದುಕದೆ ಸತ್ತುಹೋಗುತ್ತಾಳೆ. ಅವಳ ದೇಹದಿಂದ ಇನ್ನೊಂದು ಮಂಜಿನಂತಹ ದ್ರುವಮಯ ರೂಪ ಮೇಲಕ್ಕೆ ಎದ್ದಿದೆ. ಅದು ಬಂದು, ತನ್ನನ್ನು ಕೊಂದ ಗಂಡನ್ನು ಎದುರಿಸುತ್ತದೆ. “ನಂಬಿ ಮಗ್ಗುಲಲ್ಲಿ ಮಲಗಿದ್ದವಳನ್ನು ಕೊಂದಿದ್ದೀಯೆ. ಒಂದಕ್ಕೆ ಎರಡಾದರೂ ತಕೊಳದಿದ್ದರೆ ಕೇಳು’ ಎನ್ನತ್ತದೆ. ಅವನು ನಗುತ್ತಾನೆ. “ಕೊನೆಗೊಂದು ದಿನ ಗಂಡು ಒಬ್ಬನೇ ಮಲಗಿದ್ದಾಗ, ಸರಿರಾತ್ರಿಯಲ್ಲಿ ಯಾವ ಬರುಕಿ ಹಾಕಿಕೊಂಡಿದ್ದವಳು ಅವನ ಮಂಚದತ್ತ ಹೋಗಿದ್ದಾಳೆ. ಅಲ್ಲಿಯೇ ಎಲ್ಲಿಯೋ ಇದ್ದ ಇನ್ನೊಂದು ಸ್ವರೂಪವು ಅದನ್ನು ತಡೆಯಲು ಹೋಗುತ್ತದೆ. ಎರಡಕ್ಕೂ ಮಾರಾಮಾರಿಯಾಗುತ್ತದೆ. ಮೊದಲನೆಯದಕ್ಕೆ ಎರಡನೆಯದು ಸೋಲುತ್ತದೆ. ಎರಡನೆಯದು ‘ಹೋಯಿತು, ಹೋಯಿತು, ಯಾರಾದರೂ ಬಿಡಿಸಿಕೊಳ್ಳಿ ಬನ್ನಿ ಎಂದು ಕೂಗಿಕೊಂಡರೂ ಯಾರೂ ಬರುವುದಿಲ್ಲ. ಹೆಣ್ಣು ಗಂಡನ್ನು ಬೆರೆಯುತ್ತದೆ. ಅವನ ಜೀವನವನ್ನು ಹೀರುತ್ತದೆ. ಪೂರ್ಣವಾಗಿ ಅಲ್ಲ, ಮೂರು ಪಾಲು. ಇನ್ನೊಂದು ಪಾಲು ಇದೆ. ಅದು ಬೆಳಗಾದ ಮೇಲೆ ಅಷ್ಟು ಹೊತ್ತು ಅರಿವಿಲ್ಲದ ಮೈಯಲ್ಲಿ ಇದ್ದು ಹೋಗಿಬಿಡುತ್ತದೆ.” “ಅಲ್ಲಿ ಪ್ರಾಣೇಶನು ತಾನೂ ಇದ್ದಾನೆ. ಅವನು ಕರೆದುಕೊಂಡು ಬಂದ ಡಾಕ್ಟರೂ ಅಲ್ಲಿಯೇ ಇದ್ದಾನೆ. ಡಾಕ್ಟರು ‘ಏನಿ ಫೌಲ್ ಪ್ಲೇ ?’ ಎಂದು ಗುಟ್ಟಾಗಿ ಕೇಳುತ್ತಾನೆ. ಪ್ರಾಣೇಶನಿಗೆ ಏನು ಹೇಳಬೇಕೋ ತಿಳಿಯದೆ, ತಬ್ಬಿಬ್ಬಾಗುತ್ತಾನೆ. ಡಾಕ್ಟರನು ದಿಸ್ ಡೆಡ್ ಈಸ್ ಡ್ಯೂ ಮೋರ್ ಟು ಸೈಕಲಾಜಿಕಲ್ ರೀಸನ್ಸ್ ದ್ಯಾನ್ ಪ್ಯಾಥೋಲಾಜಿಕಲ್, ಐ ಹ್ಯಾವ್ ಎ ಮೈಂಡ್ ಟು ಸೆಂಡ್ ದಿ ಬಾಡಿ ಫಾರ್ ಪೋಸ್ಟ್ ಮಾರ್ಟ೦, ಇಫ್ ಯೂ ಹ್ಯಾವ್ ನೋ ಅಬ್‌ಜಕ್ಷನ್” ಎನ್ನುತ್ತಾನೆ. ಪ್ರಾಣೇಶನು ಯಾಕೋ ಹೆದರಿ, ಬೇಡ ಎನ್ನುತ್ತಾನೆ. ಡಾಕ್ಟರು “ದನ್, ಐ ಷಲ್ ಡಿಕ್ಟೇರ್ ದಟ್ ಡೆತ್ ಈಸ್ ಡ್ಯೂ ಟು ಹಾರ್ಟ್ ಫೇಯಲ್ಯೂರ್” ಎಂದು ಹೇಳಿ ಹೊರಟು ಹೋಗುತ್ತಾನೆ. ಮುಂದೆ ಎರಡನೆಯ ರೂಪವು ಅಳುತ್ತಾ ಈ ಸನ್ಯಾಸಿಯ ಬಳಿಗೆ ಹೋಗಿದೆ. ಅಲ್ಲಿ ಅತ್ತುಕೊಂಡಿದೆ. “ಮಗನನ್ನು ಮುರಿದುಕೊಂಡಳು. ಮೊಮ್ಮಗನನ್ನೂ ಮುರಿದುಕೊಳ್ಳುವಂತೆ, ಅವನನ್ನಾದರೂ ಕಾಪಾಡು” ಎಂದು ಬೇಡಿಕೊಳ್ಳುತ್ತದೆ. ಸನ್ಯಾಸಿಯು ಒಪ್ಪಿ ಬಂದು ಬಾಬಾಬುಡನ್ ಬೆಟ್ಟಗಳಲ್ಲಿ ನಿಲ್ಲುತ್ತಾನೆ. ಆ ಪ್ರಾರಬ್ಧವು ಸಮಯ ಕಾದಿದೆ. ಪ್ರಾಣೇಶನು ಹೋದ ಹೋದ ಕಡೆಯಲ್ಲೆಲ್ಲಾ ಹೋಗುತ್ತದೆ. ದಿನವೂ ಬೆನ್ನು ಹಿಂದೆಯೇ ಇದೆ. ಆದರೂ ಆ ಎರಡನೆಯದು ಕಾದಿರುವುದರಿಂದ ಮೊದಲನೆಯದಕ್ಕೆ ಅವಕಾಶವು ಸಿಕ್ಕಿಲ್ಲ. ಇವನು ಗೌಡರ ಜೊತೆಯಲ್ಲಿ ತೋಟಕ್ಕೆ ಹೊರಡುತ್ತಾನೆ. ಆಗ ಆ ಮೊದಲನೆಯದು ಎಲ್ಲಿಯೋ ಅದೃಶ್ಯವಾಗುತ್ತದೆ.

ಆ ದಿನ ಮಧ್ಯಾಹ್ನವೇ ಅದು ಬಂದು ಇವನನ್ನು ಹಿಡಿಯುತ್ತದೆ. ರಾತ್ರಿ ಬಂದು ಇವನನ್ನು ಸೇರಿ ಆರಾಣೆ ಪಾಲು ತಿಂದಿದೆ. ಮರುದಿನ ಇವನು ಗವಿಯೊಳಕ್ಕೆ ಬರುವುದಕ್ಕೆ ಅದು ಬಿಡುವುದಿಲ್ಲ. ಆದರೂ ಎರಡನೆಯದು ಬಲವಂತವಾಗಿ ಎಳೆದುಕೊಂಡುಹೋಗಿ ಕೂರಿಸಿದೆ. ಸನ್ಯಾಸಿಯನ್ನು ಕೇಳಿಕೊಳ್ಳುತ್ತದೆ. ಸನ್ಯಾಸಿಯು ಆ ಪ್ರಾರ್ಥನೆಯನ್ನು ತನ್ನ ದೈವಕ್ಕೆ ಒಪ್ಪಿಸಿದ್ದಾನೆ. ಆ ದೈವವು ಶೂಲಹಾಕಿ ಇರಿದು ಅದನ್ನು ಪ್ರಾಣೇಶನ ದೇಹದಿಂದ ಕಿತ್ತು ಎಸೆದಿದೆ. ಅದು ಮತ್ತೆ ಬರಲು ಪ್ರಯತ್ನಿಸುತ್ತಿದೆ. ಆದರೂ ಅದಕ್ಕೆ ಮೊದಲ ಶಕ್ತಿ ಇಲ್ಲ. ಪ್ರಾಣ ತೆಗೆಯುವುದಿಲ್ಲವೆಂದು ಮಾತು ಕೊಟ್ಟ ಮೇಲೆ ಅದನ್ನು ಬಿಟ್ಟರೆ ಅದು ಬಂದು ಮತ್ತೆ ಪ್ರಾಣೇಶನ ದೇಹದ ಮಗ್ಗುಲಲ್ಲಿಯೇ ನಿಲ್ಲುತ್ತದೆ. ಎರಡನೆಯ ನೆರಳೂ ಇದೆ. ಅದು ಈಗ ಮೊದಲನೆಯ ನೆರಳನ್ನು ತಡೆಯಬಲ್ಲುದು. ಆದರೇನು? ಇದು ಮನೋಬುದ್ದಿಗಳ ಮೇಲೆ ಪ್ರಭಾವ ಬೀರುವುದು. ಇದನ್ನು ತಡೆಯಲಾರೆ ನೆರಳು ಒದ್ದಾಡುತ್ತದೆ.

ಎಂದು ಮೊದಲನೆಯ ಅಲ್ಲಿಗೆ ಸಿನಿಮಾ ಸೋ ನಿಂತಿತು. ಕಣ್ಣಿಗೆ ಕಂಡುದನ್ನು ಪ್ರಾಣೇಶನು ಸಣ್ಣ ಮಾತಿನಲ್ಲಿ ಹೇಳುತ್ತಿದ್ದಾನೆ. ಸ್ವಾಮಿಗಳು ಸರಿ ಸರಿ ಎನ್ನುತ್ತಿದ್ದಾರೆ. ಎಲ್ಲಾ ಮುಗಿಯಿತು. ಸ್ವಾಮಿಗಳು ಸಣ್ಣ ದನಿಯಲ್ಲಿ ಕೇಳಿದರು: “ನೀವಿಬ್ಬರೂ ದೊಡ್ಡ ಲಾಯರಿಗಳು. ನಿಮಗೆ ನಾವು ಒಂದು ಬುದ್ದಿವಾದ ಹೇಳಬಹುದೋ ?” ಸ್ವಸ್ಥಾನದಲ್ಲಿದ್ದರೆ ಅವರು ಏನು ಹೇಳುತ್ತಿದ್ದರೋ ? ಇಲ್ಲಿ ಅವರ ಪ್ರಭಾವಕ್ಕೆ ಸಿಕ್ಕಿ ಆಗಬಹುದು ಎಂದರು. ಸ್ವಾಮಿಗಳೂ ವಿಶ್ವಾಸದಿಂದಲೇ ಹೇಳಿದರು: “ನಿಮ್ಮಿಬ್ಬರಿಗೂ ದೇವರು ಬೇಕಾದ ಹಾಗೆ ಕೊಟ್ಟಿದ್ದಾನೆ. ಇನ್ನು ಮುಂದೆ ಪ್ರಾಕ್ಟಿಸ್ ಬಿಟ್ಟುಬಿಡಿ.” “ಪ್ರಾಕ್ಟಿಸ್ ಬಿಟ್ಟು ಏನು ಮಾಡುವುದು ?” “ನೀವು ಲೌಕಿಕರು, ಲೋಕಸೇವೆ ಮಾಡಿಕೊಂಡಿರಿ. “ಸ್ವಾಮಿಗಳೇ, ಈಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಒಬ್ಬರಲ್ಲಿ ಒಬ್ಬರಿಗೆ ನಂಬಿಕೆಯಿಲ್ಲ. ಈಗ ಒಬ್ಬರನ್ನು ಒಬ್ಬರು ಆಶ್ರಯಿಸುವುದು, ಜತೆ ಸೇರುವುದು ಲೋಭದಿಂದ, ಬಾಯಲ್ಲಿ ಲೋಕೋದ್ಧಾರ ಎಂದು ಹೇಳುತ್ತ ಕಾವ್ಯದಲ್ಲಿ ಆತ್ರೋಪಕಾರ ಮಾಡಿಕೊಳ್ಳುವ ಸಮಾಜ ಸೇವಕರಾಗುವುದಕ್ಕಿಂತ ತೆಪ್ಪಗಿರುವುದು ಲೇಸು.” “ಹೋಗಲಿ, ಸುಖಜೀವನ ಮಾಡಿಕೊಡಿರಿ.” ಮಾಡುವುದಕ್ಕೆ ಕೆಲಸವಿಲ್ಲದೆ ಕೂತಿರುವುದು ಹೇಗೆ ಸ್ವಾಮಿಗಳೇ ?” “ನಾನು ಇನ್ನು ಮುಂದೆ ಏನೂ ಹೇಳುವುದಿಲ್ಲ. ನೀವು ಸುಖವಾಗಿರಬೇಕು ಎಂದರೆ ಲಾಯರ್‌ಗಿರಿಯನ್ನು ಬಿಟ್ಟುಬಿಡಿ. ಹೇಗೆ ಹೇಗೆ ನೋಡಿದರೂ ನೀವು ಇನ್ನು ಲಾಯರಾಗಿರುವ ಕಾಲವೂ ಬಹಳ ಕಾಲವಿಲ್ಲ, ನಿಮ್ಮ ಇಷ್ಟ.” ಸ್ವಾಮಿಗಳು ಎದ್ದರು. ಅವರೂ ಜೊತೆಯಲ್ಲಿ ಎದ್ದು ಈಚೆಗೆ ಬಂದರು. * * * *

ಮರುದಿನ ರಮೇಶನು ಎದ್ದು ಪ್ರಾಣೇಶನನ್ನು ನೋಡುವುದಕ್ಕೆ ಹೋದನು. ಪ್ರಾಣೇಶನು ಬಹುಮಟ್ಟಿಗೆ ಸ್ವಸ್ಥನಾಗಿದ್ದನು. ರಾತ್ರಿ ಚೆನ್ನಾಗಿ ನಿದ್ದೆ ಬಂದು ಹಿಂದಿನ ದಿನದ ನಿಶ್ಯಕ್ತಿಯು ಎಷ್ಟೋ ಕಳೆದಿತ್ತು. ಆ ವೇಳೆಗೇ ಗೌಡರೂ ಸ್ನಾನಾದಿಗಳನ್ನು ಮುಗಿಸಿಕೊಂಡು ಬಂದರು. ಅವನೂ ಪ್ರಾಣೇಶನ ಯೋಗಕ್ಷೇಮ ವಿಚಾರಿಸಿ “ಈ ದಿನವೂ ಸ್ವಾಮಿಗಳು ಪೂಜೆ ಮಾಡುತ್ತಾರೆ. ಬರುತ್ತೀರಷ್ಟೆ?” ಎಂದು ಕೇಳಿದನು. ಇಬ್ಬರು ಲಾಯರುಗಳಿಗೂ ಸ್ವಾಮಿಗಳನ್ನು ಕಂಡರೆ ಭಕ್ತಿಯಿಲ್ಲದಿದ್ದರೂ ಭಯ ಬಂದಿತ್ತು “ಸ್ನಾನ ಮಾಡಿಕೊಂಡು ಬರುತ್ತೇವೆ” ಎಂದು ಇಬ್ಬರೂ ಒಪ್ಪಿಕೊಂಡರು. ಇಬ್ಬರಿಗೂ ಸ್ವಾಮಿಗಳ ಬಳಿ ಹೋಗುವುದಕ್ಕೆ ಮುಂಚೆ ತಿಂಡಿ ತಿನ್ನುವುದಕ್ಕೆ ಏನೋ ದಿಗಿಲು, ಬರಿಯ ಕಾಫಿ ತೆಗೆದುಕೊಂಡು ಹೋದರು. ಸ್ವಾಮಿಗಳ ದೇವರ ಪೂಜೆ ಇಂದು ಬೆಳೆಯಿತು. ಎಲ್ಲಾ ಮುಗಿಯುವ ವೇಳೆಗೆ ಸುಮಾರು ಹತ್ತು ಗಂಟೆಯಾಯಿತು. ಎಲ್ಲರಿಗೂ ತೀರ್ಥ ಪ್ರಸಾದಗಳನ್ನು ಕೊಟ್ಟರು. ಎಲ್ಲರೂ ನೋಡುತ್ತಿದ್ದ ಹಾಗೆಯೇ ಸಾಲಿಗ್ರಾಮವನ್ನು ಒರೆಸಿ, ಬಲಮೂಗಿನಲ್ಲಿಟ್ಟು ಸೇದಿದರು. ಅದು ಒಳಕ್ಕೆ ಹೊರಟುಹೋಯಿತು. ರಮೇಶನಿಗೆ ಅದನ್ನು ಕಂಡು, ಅದು ಹೇಗೆ ಸಾಧ್ಯ ಕೇಳಬೇಕು, ಎನ್ನಿಸಿತು. ಆದರೆ ಅದೇಕೋ ಸಂಕೋಚ, ಸ್ವಾಮಿಗಳೇ ಅದನ್ನು ನೋಡಿ, “ರಾಯರಿಗೆ ಪವಾಡ ಗಳಲ್ಲಿ ನಂಬಿಕೆಯಿಲ್ಲ, ಈ ಸಾಲಿಗ್ರಾಮ ಬ್ರೆಯಿನ್‌ನಲ್ಲಿ ಎಲ್ಲಿ ಇರುತ್ತದೆ ? ಬೇಕಾದಾಗ ಬರುವುದು ಹೇಗೆ ? ಎಂದು ಏನೇನೋ ಯೋಚನೆಗಳು ಬುರುತ್ತಿವೆ. ಅಲ್ಲವೆ ? ಆಗಲಿ, ಈವೊತ್ತು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಬನ್ನಿ, ಗುರುದೇವ ನೀವು ಕೇಳಿದ್ದೆಲ್ಲ ಹೇಳುತ್ತಾನೆ ಎಂದು ನಗುನಗುತ್ತಾ ಹೇಳಿದರು. ನಿನ್ನೆಯ ದಿನದ ಕಾಲರುದ್ರನಿಗೂ ಈ ದಿನದ ಪರಮಶಂಕರನಿಗೂ ಎಷ್ಟು ವ್ಯತ್ಯಾಸ !

ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಮತ್ತೆ ಸನ್ಯಾಸಿಗಳ ದರ್ಶನಕ್ಕೆ ಎಲ್ಲರೂ ಬಂದರು. ಪ್ರಾಣೇಶನಿಗೂ ರಮೇಶನಿಗೂ ಮೊದಲೇ ಒಪ್ಪಂದವಾಗಿದೆ. ಏನು ಕೇಳುವುದಿದ್ದರೂ ರಮೇಶನೇ ಕೇಳಬೇಕು ಎಂದು ಸ್ವಾಮಿಗಳಿಗೆ ಪ್ರಣಾಮ ಮಾಡಿ ಎಲ್ಲರೂ ಕುಳಿತರು. ಸ್ವಾಮಿಗಳೇ ಆರಂಭ ಮಾಡಿದರು. ಯಾರಿಗೂ ಪ್ರಶ್ನೆ ಮಾಡುವ ಕಷ್ಟವಿರಲಿಲ್ಲ. “ನೋಡಿ, ಆಧುನಿಕರ ಚಿತ್ತವೃತ್ತಿ ಬಹಳ ವಿಚಿತ್ರವಾಗಿದೆ. ಹಿಂದಿನ ವೈಭವದ ಮೇಲೆ ಉಪನ್ಯಾಸ ಕೊಡಿ ಎನ್ನಿ; ಸೊಗಸಾಗಿ ಒಂದು ಗಂಟೆಯಲ್ಲಿ ಒಂದು ದಿನವೆಲ್ಲ ಬೇಕಾದರೂ ಮಾತನಾಡುತ್ತಾರೆ. ಭರತಖಂಡದ ಐಶ್ವರ್ಯ, ಭರತಖಂಡದ ವೇದಾಂತ, ಅದೂ ಇದೂ ಬೇಕಾದ ಹಾಗೆ ಹೇಳುತ್ತಾರೆ. ಆದರೆ ದಿನ ದಿನದ ನಡೆನುಡಿಗಳಲ್ಲಿ ಪಾಶ್ಚಾತ್ಯರ ಶಿಷ್ಯರ ಹಾಗೆ ಅಲ್ಲ, ಪಾಶ್ಚಾತ್ಯರಿಗಿಂತ ಪಾಶ್ಚಾತ್ಯರಾಗಿ ನಡೆದುಕೊಳ್ಳುತ್ತಾರೆ. ನೀವಿಬ್ಬರೂ ಯೂನಿವರ್ಸಿಟಿಗೆ ಹೋಗಿ ಬಂದವರು. ಡಬ್ಬಲ್ ಗ್ರಾಜುಯೇಟ್ಸ್ ನಿಮಗೆ ದೇವರು ವಿದ್ಯಾಬುದ್ದಿ ಎಲ್ಲಾ ಕೊಟ್ಟಿದ್ದಾನೆ. ಆದರೂ ನಮ್ಮ ದೇಶದ ಆತ್ಮ ಯಾವುದು ? ಅದನ್ನು ನಾವು ತಿಳಿದುಕೊಂಡು ಅದನ್ನು ಆಚಾರದಲ್ಲಿ ತರೋಣ ಎಂದು

* ಯಾವಾಗಲಾದರೂ ಅನಿಸಿದೆಯೇ ? ಆ ಪ್ರಯತ್ನ ಒಂದಿಷ್ಟಾದರೂ ಮಾಡಿದ್ದೀರಾ ? ಈ ದೇಹವೇ ಆತ್ಮವಲ್ಲ: ದೇಹದಲ್ಲಿರುವ ಆತ್ಮ ಬೇರೆ ಎಂಬ ವಿಚಾರ ನೀವು ಕಾಣಿರಾ? ಆದರೆ ಆ ಮಾತು ನಿಜವೇ ಸುಳ್ಳೇ ಎಂದು ಯಾವಾಗಲಾದರೂ ವಿಚಾರ ಮಾಡಿರು ವಿರಾ ? ಮಾತೆತ್ತಿದರೆ ದಿಸ್ ಈಸ್ ದಿ ಏಜ್ ಆಫ್ ಸೈನ್ಸ್ ಎನ್ನುತ್ತೀರಿ. ಆ ಸೈನ್ಸ್‌ನಲ್ಲಿ ತಾನೇ ನಿಮಗೆ ಗೊತ್ತಿರುವುದೆಷ್ಟು? ನಿಮಗೆ ಗೊತ್ತಿರುವ ಸೈನ್ಸ್ ಎಲ್ಲ ಸುಮಾರು ೨೦-೩೦ ವರ್ಷಗಳ ಹಿಂದಿನ ಹಳಸಲು. ಅದು ಎಲ್ಲಿ ಹುಟ್ಟಿತೋ ಅಲ್ಲಿಯೇ ಕನ್ನಡಮ್ ಆಗಿ ಸಮಾಧಿಯಾಗಿರುವ ತತ್ವಗಳು. ನೀವು ಯೂನಿವರ್ಸಿಟಿಯ ವಿದ್ವಾಂಸರು ಯಾವೊತ್ತಾದರೂ ‘ನಮ್ಮ ದೇಶ ಋಷಿಗಳ ದೇಶ, ಆ ಋಷಿಗಳು ತ್ರಿಕಾಲ ಜ್ಞಾನ ಸಂಪನ್ನರಂತೆ. ಅವರು ಹೇಳಿರುವುದು ಏನೋ ನೋಡೋಣ, ಸಿದ್ದಾಂತವಾಗಿ ಅಲ್ಲದಿದ್ದರೆ ಹೋಗಲಿ, ಪೂರ್ವಪಕ್ಷವಾಗಿಯಾದರೂ ಅಂಗೀಕರಿಸೋಣ’ ಎನ್ನುವಷ್ಟು ಮಟ್ಟಿಗಾದರೂ ಔದಾರ್ಯ ತೋರಿಸಿದ್ದೀರಾ ? ನಿಮಗೆಲ್ಲಾ ನಾವು ಆಕ್ಸ್‌ಫರ್ಡ್ ಕೇಂಬ್ರಿಜ್ ಮಕ್ಕಳು ಎಂದುಕೊಳ್ಳುವುದರಲ್ಲಿ ಇರುವ ಹೆಮ್ಮೆ ಋಷಿ ಸಂತಾನ ಎಂದುಕೊಳ್ಳುವುದರಲ್ಲಿ ಇದೆಯೇ ? ವಿದ್ಯಾವಂತರಾದ ನಿಮಗೇ ಹೀಗೆ ಇದ್ದರೆ ನಿಮ್ಮನ್ನು ನೋಡಿ ಕಲಿಯುವ ಅವಿದ್ಯಾವಂತರ ಸ್ಥಿತಿಯೇನು ? ಭೂಮಿಯನ್ನು ಉತ್ತು ಬಿತ್ತಿ ಬೆಳೆ ಮಾಡಿದವರಿಗಿಂತ ಹೆಚ್ಚಾಗಿ ಕುಡುಗೋಲು ತೆಗೆದುಕೊಂಡು ಹೊರಡುತ್ತೀರಿ. ನೆಲದಲ್ಲಿ ಕಾಡು ಬೆಳೆದಿರುವುದು ನೋಡಿ “ಇದು ನಮ್ಮ ಭಾಗ್ಯ !’ ಎಂದು ಮೂಗೆಳೆಯುತ್ತೀರಿ. ಬಡವರನ್ನು ಬಿಡಿ. ಹೊಟ್ಟೆಗೆ ಬಟ್ಟೆಗೆ ಸಂಪಾದಿಸಿಕೊಳ್ಳುವುದರಲ್ಲಿ ಅವರಿಗೆ ಸಾಕಾಗಿಹೋಗುತ್ತದೆ. ಶ್ರೀಮಂತರು ಎನ್ನುವರನ್ನು ನೋಡಿ. ಯಾರಿಗಾದರೂ ಜ್ಞಾನವನ್ನು ಆರ್ಜಿಸೋಣ ಎಂಬ ಬುದ್ಧಿಯಿದೆಯೇನು ? ಈ ಮಾತೆತ್ತಿದರೆ ‘ಈಗ ಪುಸ್ತಕಗಳ ಕಾಲ, ಗುರುವಿನ ಪಾದ ಮೂಲದಲ್ಲಿ ಕುಳಿತು ಕಲಿಯುವ ದಾಸ್ಯದ ಕಾಲ ಕಳೆಯಿತು’ ಎನ್ನುತ್ತೀರಿ. ಪುಸ್ತಕಗಳನ್ನಾದರೂ ಓದುತ್ತಿದ್ದೀರಾ ? ನಿಮ್ಮ ರೇಡಿಯೋ ಹಾಡಬೇಕು. ಅದು ಹಾಡಬೇಕಾದರೆ, ಎ.ಐ.ಆರ್. ನಲ್ಲಿ ಯಾರೋ ಹಾಡಬೇಕು. ಅವರನ್ನು ಹುಡುಕಿ ತಂದು ಹಾಡಿಸಿ ಅದನ್ನು ಬ್ರಾಡ್‌ಕ್ಯಾಸ್ಟ್ ಮಾಡಿದರಲ್ಲವೆ ನಿಮ್ಮ ಮನೆಯಲ್ಲಿ ನೀವು ಕೇಳುವುದು ? ಹಾಗೆ ಪೂರ್ವಿಕರ, ಆಧುನಿಕರ ಜ್ಞಾನ ಭಂಡಾರವನ್ನು ಆರ್ಜಿಸಿ, ಊರ್ಜಿಸಿ, ಜನಸಾಮಾನ್ಯಕ್ಕೆ ಹರಡುವ ಕೇಂದ್ರಗಳು ಎಷ್ಟಿವೆ ? ಆ ಕೇಂದ್ರಗಳಿಂದ ಪ್ರಯೋಜನವನ್ನು ಪಡೆಯುವುದಕ್ಕೆ ಎಷ್ಟು ಮಂದಿ ಸಿದ್ಧರಾಗಿದ್ದೀರಿ ? ಅಷ್ಟೇನು ? ವಿಚಾರಿಗಳು ಈಗ ಹಗಲಿನ ನಕ್ಷತ್ರಗಳಾಗಿದ್ದಾರೆ. ಅವರು ಹೆಚ್ಚುವವರೆಗೂ ನಮ್ಮ ದೇಶಕ್ಕೆ ಮುಕ್ತಿಯಿಲ್ಲ.” ರಮೇಶನಿಗೆ ಅದಷ್ಟು ತನ್ನನ್ನೇ ಕುರಿತು ಹೇಳುತ್ತಿದ್ದಾರೆ ಎನ್ನಿಸಿತು. ಅವರ ಮಾತಿನಲ್ಲಿ ತಾನು ಅಲ್ಲಲ್ಲಿ ಉಪನ್ಯಾಸಕನಾಗಿ, ಅಧ್ಯಕ್ಷನಾಗಿ ಆಡಿದ ಮಾತುಗಳೇ ಇರುವುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಅದರಲ್ಲೂ ಪುಸ್ತಕಗಳ ಕಾಲ, ಗುರುದಾಸ್ಯದ ಕಾಲ ಕಳೆಯಿತು’ ಎಂದು ತಾನು ವೈಖರಿಯಿಂದ ಹೇಳಿ ಯಾರೂ ಆಡದಿದ್ದ ಮಾತು ಏನು ಆಡಿದೆನೆಂದು ಜಂಭ ಕೊಚ್ಚಿದ್ದುದು ಅವನಿಗೆ ಮರೆತಿರಲಿಲ್ಲ. ಹೀಗೆ ತನ್ನ ಮಾತೇ

ತನಗೇ ಹೇಳುತ್ತಿರುವನ ಹತ್ತಿರ ತಾನಿನ್ನೇನು ಹೇಳಬೇಕು ? ಇದುವರೆಗೆ ರಮೇಶನು ಎಲ್ಲೂ ಸೋಲು ಒಪ್ಪಿಕೊಂಡಿರಲಿಲ್ಲ. ಇಲ್ಲಿ ಒಂಟಿ ಬಟ್ಟೆಯ ಸನ್ಯಾಸಿಯ ಮುಂದೆ ತಾನೂ ಏನೂ ಅಲ್ಲ: ಆದೊಂದು ಬೆಟ್ಟ; ತಾನೊಂದು ನೊರಜುಗಲ್ಲು ಎನ್ನಿಸುತ್ತಿದೆ. ಏನು ಮಾತನಾಡುವುದು ? ಆದರೂ ಪ್ರಯತ್ನ ಮಾಡಿದ. ತಾನು ಭಾರಿಯ ಲಾಯರ್, ಮಾತುಗಾರನೆಂದು ಹೆಸರಾದವನು. ಇಲ್ಲಿ ಸುಮ್ಮನಾದರೆ ಹೇಗೆ ? ಅದೂ ಸಾವಿರಾರು ಕೊಟ್ಟಿರುವ, ಕೊಡುವುದಕ್ಕೆ ಸಿದ್ಧವಾಗಿರುವ, ದೊಡ್ಡ ಗಿರಾಕಿಯ ಎದುರು ? ಅದರಿಂದ ಮಾತನಾಡಿ ದನು. “ತಾವು ಹೇಳುವುದು ನಿಜ ಆಯಿತು. ಸ್ವಾಮಿಗಳೇ! ಈಗಿನವರು ಹೈತುಕರು, ರೇಷನಲಿಸ್ಟ್ಸ್, ರೀಸನ್ ಈಸ್ ದಿ ಗಾಡ್ ಅಂಡ್ ಗೈಡ್ ಆಫ್ ದಿಸ್ ಏಜ್. ಈ ಏಜಿನಲ್ಲಿ ನಾವು ಹಿಂದಿನ ಸ್ಟೋರೀಸ್ ಆಫ್ ಮಿರೆಕಲ್ ಓದಿಕೊಂಡು ಕುಳಿತಿರುವುದು ನ್ಯಾಯವೇ ಸ್ವಾಮಿಗಳೇ ?” ~ “ಹೋ! ಮಿರೆಕಲ್ಸ್ ವಿಚಾರವೇ ? ಹೌದು. ಬೆಳಿಗ್ಗೆಯೇ ತಮಗೆ ಅನುಮಾನ ಬಂದಿತ್ತು. ಅಲ್ಲವೇ ? ಹೂ, ಕೇಳಿ. ಈಗ ನಾವು ಸಾಲಗ್ರಾಮ ಇಟ್ಟುಕೊಂಡಿರುವುದು ಒಂದು ಮಿರೆಕಲ್, ಯಾರ ದೃಷ್ಟಿಯಲ್ಲಿ? ಅಜ್ಞರ ದೃಷ್ಟಿಯಲ್ಲಿ ನಮ್ಮ ಮಲ್ಲಮ್ಮ ನಮ್ಮನ್ನು ಮಹಾತ್ಮರು ಎನ್ನುವುದು ಏತರಿಂದ? ಆಕೆಯೇನೋ ನೋಡಿದರು. ನಮ್ಮ ಗುರುದೇವ, ಆ ಮಹಾಪುರುಷ ದಯಾನಿಧಿ, ದತ್ತಾತ್ರೇಯರು ಆಕೆಗೆ ನಿನ್ನೆ ದರ್ಶನ ಕೊಟ್ಟರು. ಆಕೆಗೆ ನಂಬಿಕೆ ಬಂತು. ಆಕೆ ನಿಮಗೆ ಸಕಾರಣವಾಗಿ ವಚನವಾಗಿ ತನ್ನ ಅನುಭವವನ್ನು ಹೇಳಲಾರಳು. ಅದರಿಂದ ಆಕೆ ನಿಮ್ಮ ದೃಷ್ಟಿಯಲ್ಲಿ ಆಜ್ಞಳು. ಅವಳ ಅನುಭವ ನಿಮ್ಮ ದೃಷ್ಟಿಯಲ್ಲಿ ಮಿರೆಕಲ್. ಈಗ ಅವಳ ಅನುಭವ ಹೆಚ್ಚ ? ನಿಮ್ಮ ತರ್ಕಪೂರ್ವಕ ವಿವರಣ, ನ್‌ಡ್ ಎಕ್ಸ್‌ಪ್ಲನೇಷನ್ ಹೆಚ್ಚ ? ಅದೂ ಬಿಡಿ. ನಿಮ್ಮ ಜೊತೆಜೊತೆ ಲಾಯರ್ ಪ್ರಾಣೇಶರಾಯರ ಅನುಭವ ಹೇಳಿ, ಇಲ್ಲಿ ನಡೆದದ್ದೆಲ್ಲ ಸುಳ್ಳು ಅನ್ನುವಿರಾ ? ನಿಜವೆನ್ನುವಿರಾ ? ಈ ವಿಚಾರದಲ್ಲಿ ನಿಮ್ಮ ಗಾಡ್ ಅಂಡ್ ಗೈಡ್ ಆಫ್ ದಿಸ್ ಏಜ್ ಏನು ಹೇಳುತ್ತದೆ ? ಸತ್ಯವನ್ನು ದೂರದ ನಕ್ಷತ್ರದಂತೆ ನಿಮ್ಮ ರೀಸಸ್ಟ್ ಗುರ್ತಿಸಬಲ್ಲುದು. ಅಲ್ಲಿಗೆ ಕರೆದುಕೊಂಡು ಹೋಗುವುದು ಅದರಿಂದ ಸಾಧ್ಯವಿಲ್ಲ. ಹಾಗೆಂದು ಅದನ್ನು ಬಿಡಬೇಕು ಎಂದಲ್ಲ. ಹಳ್ಳಿಗೆ ಹೋಗುವವರು ರೈಲು, ಬಸ್, ಗಾಡಿ, ಮೂರರಲ್ಲೂ ಪ್ರಯಾಣಮಾಡಿ ಊರು ಸೇರುವಂತೆ, ನೀವೂ ರೀಸನ್ಸ್, ಫೆಯಿತ್, ವಿಚಾರ, ಶ್ರದ್ಧೆ, ಎರಡೂ ಹಿಡಿಯಬೇಕು.

“ಮಿರೆಕಲ್ ವಿಚಾರವೇ ತೆಗೆದುಕೊಳ್ಳಿ. ಯಾವುದನ್ನು ನಾವು ಪವಾಡ ವೆನ್ನುವುದು ? ಸಾಮಾನ್ಯ ಬುದ್ಧಿಗೆ ಗೋಚರವಾಗದ ವಿಷಯವನ್ನು ಅಲ್ಲವೆ ನಾವು ಪವಾಡ ಅನ್ನುವುದು ? ಆಯಿತು. ನನ್ನೆದುರಿಗೆ ಕುಳಿತಿರುವ ಸುಮಾರು ಈ ನೂರ ಅರುವತ್ತು ಪೌಂಡು ತೂಕದ ವ್ಯಕ್ತಿಯನ್ನು ಈಗ ಕಂಡ ನಾನು ಇದು ತಾಯಿ ಬಸುರಿ ನಲ್ಲಿತ್ತು, ಎಂದು ನಂಬುವುದು ಹೇಗೆ ? ಇಲ್ಲದಿದ್ದರೆ ಈ ವ್ಯಕ್ತಿ ಆಕಾಶದಿಂದ ಬಿತ್ತು; ಇದೊಂದು ಮಿರೆಕಲ್; ಪವಾಡ ಎನ್ನಬೇಕು. ಇಲ್ಲದಿದ್ದರೆ, ಎಲ್ಲರಿಗೂ ಗೊತ್ತಿರುವ ಸ್ಥಾನವನ್ನು ನಾನೂ ಅವಲಂಬಿಸಿ ಈ ದೇಹವೂ ತಾಯಿ ಬಸುರಿಂದ ಬಂದು ಮಗುವಾಗಿ ಹುಡುಗನಾಗಿ ತರುಣನಾಗಿ ಬೆಳೆದು ಈಗ ಹೀಗಾಗಿದೆ ಎನ್ನಬೇಕು. ಈ ಜ್ಞಾನವಿದ್ದವನಿಗೆ, ಅಂದರೆ ದೇಹವು ಕ್ರಮಕ್ರಮವಾಗಿ ಬೆಳೆಯುತ್ತದೆ ಎಂದು ಗೊತ್ತಿರುವನಿಗೆ ಇದು ಮಿರೆಕಲ್ ಅಲ್ಲ ಆ ಜ್ಞಾನವಿಲ್ಲದಿದ್ದವನಿಗೆ ಅದೊಂದು ಪವಾಡ ಆಯಿತು. ಆ ಜ್ಞಾನ ಪ್ರತಿಯೊಬ್ಬನಿಗೂ ಬರುವುದು ಹೇಗೆ? ಇನ್ನೊಬ್ಬರಿಂದ ಅಲ್ಲವೆ? ಸಮೂಹದಲ್ಲಿರುವಾಗ ಅಲ್ಲಿ ಮತ್ತೊಂದು ದೇಹವು ಹುಟ್ಟುವುದನ್ನು ನೋಡಿ ಅದರಂತೆಯೇ ತಾನೂ ಹುಟ್ಟುವನೆಂದುಕೊಂಡು ಅಲ್ಲವೇ ಆ ಜ್ಞಾನವನ್ನು ತಾನು ಪಡೆದುಕೊಳ್ಳುವುದು ? ಹೀಗೆ ಪ್ರತಿಯೊಬ್ಬರಿಗೂ ತನ್ನ ತನ್ನ ಸಮೂಹದ ಜ್ಞಾನ ಭಂಡಾರ ಲಬ್ಧವಾಗಿದ್ದರೆ, ಆಯಾ ಗುಂಪಿನಲ್ಲಿರುವ ಸಂಸ್ಕೃತಿ ತಿಳಿದಿದ್ದರೆ, ಅಲ್ಲಿ ಸಾಮಾನ್ಯವೇ ಕಾಣುವುದು. ಸಾಮಾನ್ಯದಲ್ಲಿ ವಿಶೇಷವನ್ನು ಕಂಡರೆ ಆಗ ಅದು ಅದ್ಭುತ. “ಅಥವಾ ಈ ಅದ್ಭುತ ನಿಮ್ಮಲ್ಲಿ ನಡೆಯುತ್ತಿಲ್ಲವೆಂದುಕೊಂಡಿರುವಿರಾ ? ಈ ಜಗತ್ತು, ನಮ್ಮ ಬಾಳು, ಇದೇ ಒಂದು ಪವಾಡವಲ್ಲವೆ? ಈ ಜಗತ್ತು ಬುಗುರಿಯಂತೆ ತಿರುಗುತ್ತಿರುವುದು ಎನ್ನುವರಲ್ಲ? ಅದು ಸುಳ್ಳೆ ? ಅಪ್ಪಾಲೆ ತಿಪ್ಪಾಲೆ ತಿರುಗಿದರೆ ತಲೆ ಸುತ್ತುವದಲ್ಲಾ, ಗಂಟೆಗೆ ಎಷ್ಟೋ ನೂರ ಮೈಲಿ ತಿರುಗುವ ಈ ಜಗತ್ತಿನಲ್ಲಿ ನಾವು ಸಹಜವಾಗಿ ಇರುವೆವು ಎಂದರೆ ಅದು ಅದ್ಭುತವಲ್ಲವೆ? ನೀವು ನೆಲ ನೋಡುತ್ತಿರುವಿರಿ. ಥಟ್ಟನೆ ತಲೆಯೆತ್ತಿ ಎಷ್ಟೋ ಲಕ್ಷ ಕೋಟಿ ಮೈಲುಗಳ ದೂರದಲ್ಲಿ ಕಣ್ಣಿಗೆ ಕಂಡ ಸೂರನು ಇಲ್ಲಿ ನಿಮ್ಮ ಕಣ್ಣಮುಂದೆ ಬಂದನೋ? ಅಥವಾ ನಿಮ್ಮ ಕಣ್ಣು ಸೂರನನ್ನು ಇದ್ದಲ್ಲಿಯೇ ಕಂಡಿತೋ? ಇದನ್ನು ಯಾವ ರೀಸನ್ ವಿಮರ್ಶಿಸಿ ಹೇಳಬಲ್ಲುದು? ಇದು ಮಿರೆಕಲ್ ಅಲ್ಲವೆ ?’ ರಮೇಶನು ಕಣ್ಣು ಕಣ್ಣು ಬಿಡುತ್ತ ಕೂತಿದ್ದನು. ಸನ್ಯಾಸಿಗಳು ನಕ್ಕು ಹೇಳಿದರು, “ನೋಡಿದಿರಾ ? ನಿಮ್ಮಂಥಾ ಬುದ್ಧಿವಂತರೂ ಎಷ್ಟು ಬೇಗ ಸಿಕ್ಕಿಕೊಳ್ಳುವರು. ಅದರಿಂದ ತರ್ಕವನ್ನು ಚಾಕು ಕತ್ತರಿಯ ಹಾಗೆ ಉಪಯೋಗಿಸಿಕೊಂಡು ಕೃತಾರ್ಥರಾಗಿ. ಅದೇ ಸರ್ವವಲ್ಲ, ಅದೂ ಸಾಧನಗಳಲ್ಲೊಂದು. ಏಕೈಕ ಸಾಧನವಲ್ಲ ಇನ್ನು ನಮ್ಮ ವಿಷಯ ತೆಗೆದುಕೊಳ್ಳೋಣ. ಈ ಸಾಲಗ್ರಾಮವನ್ನು ಮೊದಲು ಮೊದಲು ನಶ್ಯವನ್ನು ಸೇದುವ ಹಾಗೆ ಒಳಗೆ ಸೇದಿಕೊಳ್ಳುವುದನ್ನು ನಮ್ಮ ಗುರುಗಳು ಕಲಿಸಿದರು. ಹಾಲು ಕುಡಿಯುತ್ತಿದ್ದ ಮಗುವು ರೊಟ್ಟಿಯನ್ನು ತಿನ್ನುವ ಹುಡುಗನಾದಾಗ ಹೊಟ್ಟೆಯು ರೊಟ್ಟಿಯ ತುಂಡುಗಳನ್ನು ಇಟ್ಟುಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆಯುವುದು. ಈಗ ಈ ಸಾಲಗ್ರಾಮವು ಹುಬ್ಬಿನ ಮಧ್ಯದಲ್ಲಿರುವ ಆಜ್ಞಾಚಕ್ರದ ಮಾರ್ಗವಾಗಿ ಹೋಗಿ ಬಲಗಡೆಯ ಮೇಲೆ ಇರುವುದು. ಕಪಿಗಳು ತಿಂದ ತಿಂಡಿಯು ದವಡೆಯಲ್ಲಿರುವಂತೆ, ಹಸುವು ತಿಂದುದೆಲ್ಲ ಮಲಕು ಆಗುವವರೆಗೂ ಮೊದಲನೆಯ ಹೊಟ್ಟೆಯಲ್ಲಿರುವಂತೆ, ಇದೂ ನೆತ್ತಿಯಲ್ಲಿರುವುದು. ಇವೆಲ್ಲ ಸಿದ್ಧಗಳು. ಅದರೊಳಗೂ ಇದಂತೂ ಕ್ಷುದ್ರಸಿದ್ಧಿ ಗುರುಗಳ ಅಪ್ಪಣೆ. ನಮಗೆ ಇದು ಬೇಕಿಲ್ಲದಿದ್ದರೂ ಇಟ್ಟುಕೊಂಡಿದ್ದೇವೆ. ಕೊನೆಯದಾಗಿ ಇಷ್ಟು ಹೇಳಿ ಮುಗಿಸೋಣ.

ಈ ಮನುಷ್ಯ ದೇಹದಲ್ಲಿ ಇರುವ ಜೀವ ತಾನು ಬೇರೆ ಎಂದು ತಿಳಿದುಕೊಂಡು, ಈ ದೇಹವನ್ನು ಒಂದು ಕ್ರಮದಲ್ಲಿ ಉಪಯೋಗಿಸುವುದಾದರೆ, ಹಕ್ಕಿಯಂತೆ ಹಾರಬಹುದು. ಮೀನಿನಂತೆ ನೀರಿನಲ್ಲಿ ಇದ್ದುಬಿಡಬಹುದು. ಅದೃಶ್ಯನಾಗಬಹುದು. ಆನೆಯೊಡನೆ ಹೋರಾಡುವ ಬಲಿಷ್ಠನಾಗಬಹುದು. ಅಷ್ಟೇನು? ಹೂವು ಅರಳಿದಾಗ ಅದರ ಪರಿಮಳವು ಹರಡುವಂತೆ, ಮನುಷ್ಯನು ಈ ದೇಹದಲ್ಲಿಯೇ ಕುಳಿತು ಏನೇನೋ ಸಿದ್ಧಿಗಳನ್ನು ತೋರಿಸಬಹುದು. ಒಟ್ಟಿನಲ್ಲಿ ನಮ್ಮಲ್ಲಿಯೂ ಸೈನ್ಸ್ ಇವೆ. ಅದೂ ಕೂಡ ನಮ್ಮ ವೇದಾಂತದಂತೆಯೇ ದೇಹ ನಾನಲ್ಲ ಎಂದ ಮೇಲೆ ಆರಂಭಿಸುತ್ತದೆ. ಅದರಿಂದ ನಮ್ಮಲ್ಲಿ ಸೈನ್ಸ್ ವೇದಾಂತ ಎರಡಕ್ಕೂ ದೇಹದಲ್ಲಿರುವ ದೇಹಿಯನ್ನು ಗುರುತಿಸುವುದೇ ಮೂಲ, ಅದೇ ಆರಂಭ, ಮನುಷ್ಯನೆಂದರೆ ದೇಹ ಮಾತ್ರವಲ್ಲ, ದೇಹ ಮತ್ತು ಇನ್ನೂ ಅಷ್ಟು ಅದು ತಿಳಿದರೆ ಯಾವುದೂ ಅದ್ಭುತವಲ್ಲ, ಎಲ್ಲವೂ ಕ್ರಮವರಿತು ನಡೆಯುವ ಸಾಮಾನ್ಯವೇ ಆಗುವುದು. ಅದುವರೆಗೂ ಎಲ್ಲಾ ಅದ್ಭುತ, ಎಲ್ಲಾ ಪವಾಡ, ಎಲ್ಲಾ ಮಿರೆಕಲ್, ನಮಗೆ ಇದು ಬೇಕಿಲ್ಲದಿದ್ದರೂ ಇಟ್ಟುಕೊಂಡಿದ್ದೇವೆ. ಇವೊತ್ತು ಬಹಳ ಮಾತಾಯಿತು. ಇಲ್ಲಿಗೆ ಬಿಡೋಣ.” ಇನ್ನೇನಾದರೂ ಮಾತು ನಡೆಯಲಿ. ರಮೇಶನು ಏನೇನೋ ಕೇಳಬೇಕೆಂದಿದ್ದನು. ಯಾವುದೂ ನೆನಪಾಗಲಿಲ್ಲ. ಎಳೆಯಲಾಗದ ಭಾರವನ್ನು ಎಳೆಯಬೇಕಾದಾಗ ಹಠಮಾಡಿ ಬುಸುಗುಟ್ಟುತ್ತಾ ಮುನ್ನುಗ್ಗುವ ಎತ್ತಿನಂತೆ, ಏನೇನೋ ನೆನೆದುಕೊಂಡು ಏನೋ ಕೇಳಬೇಕೆಂದು ಹೊರಟು, ಕೊನೆಗೆ “ನಾವು ಏನು ಮಾಡಿದರೆ ಕೃತಾರ್ಥರಾಗಬಹುದೋ ಅಪ್ಪಣೆಯಾಗಲಿ” ಎಂದು ಕೈಮುಗಿದನು. ಸನ್ಯಾಸಿಗಳು ರಮೇಶನ ಒದ್ದಾಟವು ಗೊತ್ತಾಯಿತು. ಸಣ್ಣ ನಗೆ ನಕ್ಕು ಹೇಳಿದರು: “ಒಬ್ಬರನ್ನೊಬ್ಬರು ನಗೆ ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿತುಕೊಳ್ಳಿ, ಎಲ್ಲ ಸರಿಹೋಗುತ್ತದೆ. ನಿಮ್ಮ ವಿಚಾರವಾಗಿ ನಾನು ಹೇಳಿದ ಮಾತು ನಿಮಗೆ ಹಿಡಿಯುವುದಿಲ್ಲ. ಆದರೂ ಕೇಳಿದರಾಗಿ ಹೇಳುತ್ತೇನೆ. ನೀವು ಈಗ ಎರಡು ಪಾಪ ಮಾಡುತ್ತಿದ್ದೀರಿ. ಜೊತೆಗೆ ಹಣದ ಸಂಪಾದನೆಯೊಂದೇ ಮುಖ್ಯವೆಂದು ನಂಬಿ ಎತ್ತಕಡೆಯಿಂದ ಹೇಗೆ ಬಂದರೇನು ಎಂದು ಹೊರಟಿದ್ದೀರಿ. ಅದು ಬಿಟ್ಟು ಧರ್ಮವಾಗಿ ನ್ಯಾಯವಾಗಿ ವರ್ತಿಸಿ ಉಹುಂ. ನಮ್ಮ ಮಾತಿಗೆ ಅಡ್ಡ ಮಾತಾಡಬೇಡಿ. ನೀವು ಕೇಳಿದಿರಿ, ನಾನು ಹೇಳಿದೆ. ಹೀಗೆ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಅದರ ಫಲ ನೀವೇ ಅನುಭವಿಸುತ್ತೀರಿ. ಅದರಿಂದ ಅಲ್ಲಿಗೆ ಬಿಡೋಣ. ನಮ್ಮ ಮಾತು ಸರಿಯಾಗಿದ್ದರೆ, ಇವೊತ್ತಲ್ಲದಿದ್ದರೆ ನಾಳೆಯಾದರೂ ನಿಮಗೆ ಅರ್ಥವಾಗಬೇಕು. ಆಗುತ್ತದೆ. ಆದರೆ ಆ ವೇಳೆಗೆ ನಿಮ್ಮ ಭಾಷೆಯಲ್ಲಿ ಹೇಳಬೇಕಾದರೆ ಟೂ ಲೇಟ್.” ರಮೇಶನು ನಿಟ್ಟುಸಿರು ಬಿಟ್ಟು ನುಂಗಲಾರದ ತುತ್ತು ಎಂದುಕೊಳ್ಳುವನಂತೆ ಏನೋ ಆಯಾಸದಿಂದ ಸುಮ್ಮನಾದನು. ಪ್ರಾಣೇಶನು ಸುಮ್ಮನಿದ್ದರೆ ಚೆನ್ನಿಲ್ಲ ಎಂದು ಮಾತನಾಡುವುದಕ್ಕೆ ಪ್ರಯತ್ನಿಸಿದನು; ಸನ್ಯಾಸಿಗಳು ಕಣ್ಣು ಮುಚ್ಚಿ ಕುಳಿತಿದ್ದವರು ಒಂದು ಗಳಿಗೆಯಾದ ಮೇಲೆ ಕಣ್ಣು ಬಿಟ್ಟರು. ಅವರ ಕಣ್ಣು ನೇರವಾಗಿ ಪ್ರಾಣೇಶನ ಮೇಲೇ ಬಿತ್ತು. ಅದೇ ತನಗೆ ಅಪ್ಪಣೆಯೆಂದು ಹೇಳಿದನು: “ನಿನ್ನೆಯ ದಿನ ಶಿವಪೂಜೆ ಮಾಡಬೇಕೆಂದು ಅಪ್ಪಣೆಯಾಯಿತು. “ಹೌದು, ನಾವು ಮಾಡುವ ಕೆಲಸದಲ್ಲೆಲ್ಲ ಯಾವುದಾದರೊಂದು ವಿಧದಲ್ಲಿ ಅಷ್ಟೋ ಇಷ್ಟೋ ಪಾಪ ಬರುತ್ತಲೇ ಇರುತ್ತದೆ. ಅದರಿಂದ ಹಿಂದಿನ ಪಾಪ, ಮುಂದಿನ ಪಾಪ, ಎರಡೂ ಕಳೆದುಕೊಳ್ಳುವುದಕ್ಕೆ ಸಾಧನವೆಂದು ಹಿರಿಯರು ತಪಸ್ಸು ಮಾಡಬೇಕು ಎನ್ನುತ್ತಾರೆ. ಆ ತಪಸ್ಸಾಧನಗಳಲ್ಲಿ ಪೂಜೆಯೂ ಒಂದು. ಅದನ್ನು ಮಾಡಿ ಕೃತಾರ್ಥರಾಗಿ.” ಗೌಡನು ಕೈಮುಗಿದುಕೊಂಡು ಅಪ್ಪಣೆಯಾದರೆ….” ಎಂದು ಕೇಳಿದನು. ಸನ್ಯಾಸಿಗಳು “ಹೂಂ” ಎಂದರು. ಗೌಡನು ಕೇಳಿದನು: “ಪಾಪ ಬರುತ್ತಲೇ ಇದೆ ಅಂದಮೇಲೆ ಪೂಜೆ ಮಾಡಿದರೆ ಫಲವೇನು ?” ಒಂದು ಸಣ್ಣ ನಗೆ ನಕ್ಕು ಹೇಳಿದರು: “ಪೂಜೆ ನಿಮ್ಮ ಸ್ನಾನದ ಹಾಗೆ ದಿನದಿನವೂ ಮೈ ಕೊಳೆಯುತ್ತಲೇ ಇದೆಯೆಂದು ಸ್ನಾನ ಬಿಡುವಿರೇನು? ಸೋಪು ಹಾಕಿ ಮೈ ತೊಳೆದರೂ ತೊಳೆದದ್ದೂ ! ಹಾಗೇ, ಮನಸ್ಸನ್ನೂ ತೊಳೆಯಬಲ್ಲಿರಾದರೆ ಗೆದ್ದಿರಿ. ಇಲ್ಲಿಗೆ ಬಿಡೋಣ. ಇವೊತ್ತಿಗೆ ಸಾಕು. ನಾವು ಇಷ್ಟು ಮಾತಾಡಿ ಬಹು ವರ್ಷವಾಯಿತು. ಮೌನದಲ್ಲಿ ಸುಖ ಕಂಡವರಿಗೆ ಮಾತು ಅಷ್ಟು ಪ್ರಿಯವಲ್ಲ’ ಎಂದು ಮೈ ಮುರಿದರು. * * * ಆ ದಿನ ರಾತ್ರಿ ಊಟವಾದ ಮೇಲೆ ಪ್ರಾಣೇಶನೂ ರಮೇಶನೂ ಬಿಸಿಲು ಮಚ್ಚಿನಲ್ಲಿ ಕುಳಿತಿದ್ದಾರೆ. ಗೌಡನೂ ಹುರಿಗಾಳು, ಹುರುಳಿಯ ಹಪ್ಪಳ, ಒಂದು ಸೀಮೆ ಜೇನು, ಹಣ್ಣು ಒಂದು ತಟ್ಟೆಯ ತುಂಬಾ ತುಂಬಿಕೊಂಡು ಬಂದು ಮೇಜಿನ ಮೇಲಿಟ್ಟನು. ಮೂವರೂ ಮಾತನಾಡದೆ ಒಂದು ಗಳಿಗೆ ಏನೋ ವಿಮನಸ್ಕರಾಗಿ ಕುಳಿತಿದ್ದರು. ಗೌಡನೇ ಮಾತು ಮೊದಲುಮಾಡಿದನು: ಏನು ರಾಯರೇ ! ನಮ್ಮ ಗುರುಗಳು ಹ್ಯಾಗಿದ್ದಾರೆ ?” ರಮೇಶನಿಗೆ ಪ್ರಾಣೇಶನು ಮಾತನಾಡಲೆಂದು ಮನಸ್ಸು ಅದರಿಂದ ಸುಮ್ಮ ನಿದ್ದನು. ಪ್ರಾಣೇಶನು ಪ್ರಶ್ನಕ್ಕೆ ಉತ್ತರವಿಲ್ಲವಿದ್ದರೆ ಹೇಗೆ ಎಂದು ಮಾತನಾಡಿದನು. “ಅವರು ಯಾವುದೋ ಲೋಕದವರು ಎನ್ನುವ ಹಾಗಿದೆ. ಅಂತೂ ನಮ್ಮ ಲೋಕವಲ್ಲ, ನಮಗೆ ಅರ್ಥವಾಗುವ ಜನವಲ್ಲ ಏನಾದರೂ ಆಗಲಿ, ಇಂಥವರ ದರ್ಶನ ಮಾಡುವುದೇ ಒಂದು ಅನುಭವ. ನೀವು ನಮಗೆ ಒಂದು ರೀತಿಯಲ್ಲಿ ಉಪಕಾರ ಮಾಡಿದಿರಿ. ಇವರು ನಿಮಗೆ ಹೇಗೆ ಸಿಕ್ಕಿದರು ? ನೀವು ನಿಜವಾಗಿಯೂ ಅದೃಷ್ಟವಂತರು.” “ಅವೊತ್ತು ನಾನು ನಿಮಗೆ ಎಲ್ಲಾ ಹೇಳಲಿಲ್ಲ. ನೀವು ಓದಿದ ಜನ, ಲಾಯರ್‌ಗಳು, ಪಾಯಿಂಟ್ ಮೇಲೆ ಪಾಯಿಂಟ್ ಹಾಕಿ ಉರುಳಿಸಿಬಿಡೋರು. ನಿಮ್ಮ ಹತ್ತಿರ ನಿಜ ಹೇಳಿದರೆ ನಡೆಯೋಲ್ಲ ಅಂತ ನಿಮಗೆ ಒಪ್ಪಿಗೆಯಾಗೋವು ಎರಡು ಮಾತು ಹೇಳಿದೆ ಅಷ್ಟೆ! ಈಗ ನಿಜ ನಿಮಗೂ ಗೊತ್ತಾಗದೆ. ಅದರಿಂದ ಹೇಳಿಯೇಬಿಡೋಣ. ಆ ಹಾಳು ಪಾಪ ಕಳೆದುಹೋಗಲಿ. “ನೀವು ಗೆದ್ದರಲ್ಲಾ ಆ ಕೇಸು ನಿಜ, ಸುಳ್ಳಲ್ಲ. ಕರಿಯ ಅನ್ನೋ ಆಳು ನಮ್ಮಲ್ಲಿದ್ದ. ಅವನು ಮಲೆಯಾಳಕ್ಕೆ ಹೋಗಿ ಮಂತ್ರಗಿಂತ್ರ ಕಲಿತು ಬಂದಿದ್ದವ. ಅವನೇ ನಮ್ಮ ತೋಟಕೀಟಕ್ಕೆಲ್ಲಾ ಕಟ್ಟು ಮಾಡಿದ್ದವ. ಇದುವರೆಗೂ ನಮ್ಮಲ್ಲಿ ಒಂದು ತೆಂಗಿನಕಾಯಿ, ಬಾಳೆಗೊನೆ ಕೂಡ ಹೋಗಿಲ್ಲ. ಇವನಿಗೆ ಅಲ್ಲಿಯೊಳೇ ಒಬ್ಬಳು ಸೂಳೆ. ಅವಳನ್ನೇ ಹೆಂಡತೀ ಅಂತ ಹೇಳೋನು. ನಮಗೇನು ಅಂತ ನಾನೂ ಇದ್ದುಬಿಟ್ಟೆ. ಈ ಕಟ್ಟುಗಳೆಲ್ಲ ಹನ್ನೆರಡು ವರ್ಷಕ್ಕೆ ಒಂದು ಸಲ ಮತ್ತೆ ಮಾಡಬೇಕು. ಹೋದ ವರ್ಷ ಹೊಸ ಕಟ್ಟು ಕಟ್ಟಬೇಕು. ಕಟ್ಟು ಅಂದೆ. ಈ ಸಲ ನನಗೆ ವರ್ಷಕ್ಕೆ ಸಾವಿರ ರೂಪಾಯಿ ಕೊಡಬೇಕು ಎಂದ. ಆ ಕೇಳಿದ್ದರಲ್ಲಿ ಬಲು ಸೊಕ್ಕಿತ್ತು ನನಗೆ ಬಹಳ ಕೋಪ ಬಂತು. ಇರಲಿ ಎಂದು ಎಲ್ಲಾ ನುಂಗಿಕೊಂಡು ಆಗಲಿ ಎಂದು ಒಪ್ಪಿಕೊಂಡೆ. ಇದಾದ ಒಂದು ತಿಂಗಳಿಗೆ ಅವನ ಹೆಂಡತಿ ಜಗಳ ಆಡಿಕೊಂಡು ಹೊರಟುಹೋದಳು. ಅವಳು ಇರುವವರೆಗೂ ಅವನ ಕುಡಿತ ಒಂದು ಹಿಡಿತದಲ್ಲಿತ್ತು ಅವಳು ಹೊರಟುಹೋಗುತ್ತಲೂ ಅವನ ಕುಡಿತ ಹಿಡಿತ ತಪ್ಪಿಹೋಯಿತು. ಯಾವಾಗಲೂ ನಿಷಾನೇ! ಯಾರನ್ನು ಕಂಡರೂ ಬಾಯಿಗೆ ಬಂದ ಮಾತು. ನಾನೂ ಬಹಳ ತಡೆದೆ. ಒಂದು ದಿನ ನಾನು ಈ ರಾಯರು ಇರೋ ರೂಮಿನಲ್ಲಿ ಇದೇನೆ. ಮ್ಯಾನೇಜರು ಅಳುತ್ತಾ ಬಂದರು. “ಕರಿಯ ಇವೊತ್ತು ನಮ್ಮ ಮನೇ ನುಗ್ಗಿ ಹೆಂಗಸರ ಮೇಲೆ ಬೀಳೋಕೆ ಹೋದ. ನಾಕೈದು ಜನ ಸೇರಿ ಹೊರಕ್ಕೆ ನೂಕಿದೆವು. ಮಾಟ ಮಾಡಿ ನಿಮ್ಮನ್ನೆಲ್ಲ ಮಟ್ಟ ಹಾಕುತ್ತೇನೆ ಈತ ಕೂತಿದ್ದಾನೆ’ ಅಂದರು. ನಾನು ನಿಂಗನ್ನ ಕಳುಹಿಸಿ ಕರೆಸಿಕೊಂಡೆ. ನಿಷಾದಲ್ಲಿ ಎಲ್ಲಿ ಗೌಡನೋ ? ಹಾಗೆ, ಹೀಗೆ” ಎಂದು ಬಾಯಿ ಹಿಡಿಸಲಾರದ ಮಾತೆಲ್ಲ ಆಡಿದ. ಕೊನೆಗೆ “ನಿನಗೆ ಮಾತ್ರ ಇಬ್ಬರು ಹೆಂಡರು ಬೇಕು. ನನಗೆ ಒಬ್ಬರೂ ಬೇಡವೋ ? ನಿನ್ನ ಧರ್ಮದ ಹೆಂಡತಿ ಬೇಡ. ಆ ಕೂಡಿಕೆ ಅವಳನ್ನ ಕೊಡೋ’ ಅನ್ನೋದೆ ? ಭೋ ಕೋಪ ಬಂತು, ಒದ್ದುಬಿಟ್ಟೆ. ಝಾಡಿಸಿ ಒದ್ದು ಒದ್ದೆ ಕಿಬ್ಬೊಟ್ಟೆಗೆ ಏಟು ಬಿತ್ತು, ಸತ್ತ ಅವನೀಗ ದೈಯವಾಗಿ ಹೋಗಿದ್ದಾನೆ. ಅವನು ನಮ್ಮ ಕಿರಿಯ ಹೆಂಡತಿ ಕಣ್ಣಿಗೆ ಕಾಣೋದು ನಿನ್ನ ಗೌಡನ್ನ ಮುರಿಕೋತೀನೋ ಇಲ್ಲವೋ ?’ ಅನ್ನೋದು. ಮ್ಯಾನೇಜರ್ ಕಣ್ಣಿಗೆ ಕಾಣೋದು, ಅವನ್ನ ಬಯ್ಯೋದು. ಹೀಗೆ ಷುರು ಆಗಿಹೋಯಿತು. “ಇದೊಂದಕ್ಕೂ ಹೆದರದಿದ್ದವಳು ನನ್ನ ಹಿರೀ ಹೆಂಡತಿ, ಅವರಪ್ಪನ ಮನೆಯವರು ಗಿರೀ ಭಕ್ತರು. ಅವರು ಬಹಳ ನಡೆಕೊಳ್ಳೋದು. ಅವಳು ನನಗೆ ಬೆಂಗಾವಲಾಗಿ ಹೋದಳು. ಅವಳು ಜೊತೆಯಲ್ಲಿ ಇಲ್ಲದೆ ತೋಟ ಸುತ್ತೋಕೆ ಹೊರಟರೆ ಯಾರೋ ಜೊತೇಲಿ ಬಂದ ಹಾಗೆ ಆಗೋದು. ತಿರುಗಿ ನೋಡಿದರೆ ಏನೂ ಇಲ್ಲ.

“ಪಾಪ, ಆ ಜೀವ ನನಗಾಗಿ ಬಹಳ ಒದ್ದಾಡಿತು. ಸೋಮಿ, ನಂಬಿತೀರೋ ಇಲ್ಲವೋ ? ಒಂದು ವಾರ ದೇವರ ಮುಂದೆ ಉಪವಾಸ ಮಲಗಿಬಿಡೋದಾ? ಆಗ ಕನಸಿನಲ್ಲಿ ಅವಳಿಗೆ ಅವರಪ್ಪನ ಮನೆ ದೇವರು ಗಿರಿಯ ಫಕೀರಪ್ಪ ಕಾಣಿಸಿಕೊಂಡು, ಇನ್ನು ಕೆಲವು ದಿನಕ್ಕೆ ನನ್ನ ಭಕ್ತ ಒಬ್ಬ ಸನ್ಯಾಸಿ ಬರುತಾನೆ. ಅವನಿಗೆ ಭಕ್ತಿಯಾಗಿ ನಡಕೊ, ಅವನು ಕಾಯುತ್ತಾನೆ ಎಂದು ಹೇಳಿದಂಗೆ ಆಯಿತು. ಅಂದಿನಿಂದ ಸುತ್ತಮುತ್ತ ಯಾರು ಸನ್ಯಾಸಿಗಳು ಬಂದಿದ್ದಾರೆ, ಯಾರಿಲ್ಲ ಅಂತ ಹುಡುಕೋಕೆ ಸುರು. ಕೊನೆಗೆ ಆರು ತಿಂಗಳ ಹಿಂದೆ ಇವರು ಬಂದು ಗವಿ ಸೇರಿದ್ದಾರೆ. ಆ ದಿನ ಕನಸು. ‘ಆ ಗವಿಯಲ್ಲಿ ಬಂದು ಇಳಿದಿದ್ದಾನೆ. ನಾಳೆ ಶುಕ್ರವಾರ, ಹೋಗಬೇಡ. ನಾಳಿದ್ದು ಬೆಳಗೆದ್ದು ಹಣ್ಣು ಕಾಯಿ, ಹೂವು, ಹಾಲು ತಕೊಂಡು ಹೋಗು’ ಅಂತ ಅವಳಿಗೆ ಅಪ್ಪಣೆ ಆಗಿದೆ. ಬೆಳಗೆದ್ದು ಹೇಳಿದಳು. ಸರಿ, ಹಾಗೆಯೇ ಶನಿವಾರ ಅವಳೂ ನಾನೂ ಹೋದೆವು. ಆ ಸನ್ಯಾಸಿ ಅವಳನ್ನು ನೋಡುತ್ತಿದ್ದ ಹಾಗೆಯೇ ಮಗಳನ್ನು ಕಂಡ ತಂದೆ ಹಾಗೆ “ಬಲು ನೊಂದೆಯಾ ಅವ್ವ! ದೇವರಿದ್ದಾನೆ. ನಿನ್ನ ತಾಳಿ ತೆಗೇಳ್ಳೋಕ್ಕೇಳೋಕೆ ಬಿಡೋಲ್ಲ ಅಂದರು. ನಾವಿಬ್ಬರೂ ಅವರ ಕಾಲು ಕಟ್ಟಿಕೊಂಡು ಅತುಬುಟ್ಟೋ, ಏನೋ ನಮ್ಮ ದೇವರ ಕಂಡಂಗೆ ಆಗಿಹೋಯಿತು. “ಈ ಕೇಸಿನಲ್ಲಿ ನೀವು ಕೂಡ ಮದರಾಸ್ ಲಾಯರ್ ತರಬೇಕು ಅಂದು ಕೊಳ್ಳಲಿಲ್ಲವಾ ? ಆಗ ಇವರೇ ‘ಇರಲಿ ಬಿಡು. ಆದರೆ ಅವರು ಕೇಳಿದಷ್ಟು ದುಡ್ಡು ಕೊಟ್ಟುಬಿಡು’ ಅಂದರು. ಅದರ ಮೇಲೆ ನಾನೂ ನಿಮಗೆ ಎಷ್ಟಾದರೂ ತೆಗೆದುಕೊಳ್ಳಿ ಎಂದು ಸೈನ್ ಮಾಡಿ ಚೆಕ್ ಕೊಟ್ಟು ಬಂದುದು. “ಈಗ ಇವರು ಬಂದಮೇಲೆ ನಾನು ಬಹಳ ಬದಲಾಯಿಸಿ ಹೋದೆ ಸೋಮಿ. ಆಳುಕಾಳಿಗೆಲ್ಲ ಈಗ ಏನು ಸ್ವರ್ಗ ಮಾಡಿಬಿಟ್ಟಿದ್ದೀನಿ. ಮ್ಯಾನೇಜರಿಗೆ ಸಂಬಳ ಡಬಲ್ ಮಾಡಿದ್ದೀನಿ. ನೀವು ಬಂದ ಮೇಲೆ ಕೇಳಿ, ಇವರಿಗೆಲ್ಲಾ ಇನ್‌ಕ್ಯೂರೆನ್‌ಸ್ ಕೂಡ ಮಾಡಿಸೋಣ ಅಂತ ಇದ್ದೀನಿ. ಆದರೆ, ನೋಡಿ, ಈ ಆಳುಮಕ್ಕಳು ಬುದ್ಧಿ ಏನು ಹೇಳಲಿ, ಒಂದು ಒಷ್ಟೊತ್ತಿಗಿದ್ದರೆ, ಅವೊತ್ತು ಕೆಲಸ ಮಾಡೋಲ್ಲ, ಅದು ನನಗೆ ದಿಗಿಲು. ಇವರಿಗೆ ಕೊಂಚ ತಂಪು ಮಾಡಿದರೆ, ನಮ್ಮ ಕೆಲಸಕ್ಕೆ ಚಕ್ಕರ್. ಏನು ಮಾಡೋದು ಹೇಳಿ.” “ಅದಕ್ಕೇನು ಗೌಡರೆ, ದಿನಗೂಲಿ ಹೆಚ್ಚುಮಾಡಿ. “ಇಲ್ಲ ರಾಯರೆ, ಯೋಚನೆ ಮಾಡಿ, ಈಗೀಗ ನಮ್ಮಂಗೇ ಅವರು ಅಂತಾ ತೋರುತಾ ಅದೆ. ನಮಗೆ ‘ಮುಪ್ಪಿನ ಕಾಲಕ್ಕೆ ನಿರಾಳವಾಗಿ ಇರಬೇಕು’ ಅನ್ನಿಸೋ ಹಾಗೆ ಈ ದುಡಿಯೋ ಮಕ್ಕಳಿಗೂ ಪಾಪ, ಕೊನೆಗಾಲಕ್ಕೆ ಏನಾದರು ಒದಗೋಹಾಗೆ ಮಾಡಬೇಕು. ದಿನಗೂಲಿ ಹೆಚ್ಚಿಸಿದರೂ ಆಗೊಲ್ಲ ಈಗ ನಿಮಗೆಲ್ಲ ಬ್ಯಾಂಕಿನವರು ಸ್ಟಾಂಡಿಂಗ್ ಫೀಸ್ ಕೊಟ್ಟು ಕೇಸು ಕೇಸಿಗೂ ಫೀಸ್ ಕೊಡೋಲ್ಲವಾ ? ಹಾಗೆ ಒಂದು ಸಿಸ್ಟಂ ಬೇಕು. ನಾನೇ ಮಾಡೋಣ ಅಂದರೆ, ಮಿಕ್ಕ ತೋಟದವರೆಲ್ಲ ಏನೆಂದು ಕೊಳ್ಳುತ್ತಾರೋ ಅಂತ ಅದು ಬೇರೆ! ಅಂತೂ ಏನಾದರೂ ಹೊಸದು ಮಾಡಬೇಕು. ಇಲ್ಲದಿದ್ದರೆ ಬದುಕೋಹಾಗಿಲ್ಲ.” “ಆಯಿತು. ಸಂನ್ಯಾಸಿಗಳದು ಹೇಳಿ, ಅದೇನು ಅವರು ಇಷ್ಟು ದಿನವೂ ಗವಿಯಲ್ಲಿದ್ದು ಈಗ ನಿಮ್ಮ ತೋಟಕ್ಕೆ ಬಂದುದು ??? “ನಿನ್ನೆ ನೀವೆಲ್ಲ ನೋಡಿಕೊಳ್ಳಲಿಲ್ಲವಾ ?” “ಹಾಗಾದರೆ ಅದೆಲ್ಲ ನಿಮಗೂ ಗೊತ್ತಿತ್ತೇನು ?” “ಹೇಳಿದ್ದರೇನು ?” “ಹೌದು. ಅವರು ಕರೆದುಕೊಂಡು ಬಾ ಅಂದದಕ್ಕೆ ನಾನೂ ಕರಕೊಂಡು ಬಂದದ್ದು. ಅವರ ಅಪ್ಪಣೆ ಆಗಿತ್ತು ಅಂತಲೇ ರಮೇಶರಾಯರು ಹೊರಟರು. ಇಲ್ಲದಿದ್ದರೆ ಹೊರಡುತಾ ಇದ್ದರೆ ?” “ಅದೂ ನಿಜ. ನಾನು ಕಾರಲ್ಲಿ ಕುಳಿತುಕೊಳ್ಳುವಾಗಲೂ ನನಗೆ ಅರೆ ಮನಸ್ಸು” “Bin?” “ನೋಡಬೇಕಾದ ವಸ್ತು. ನೋಡಿದ್ದೇ ಒಳ್ಳೆಯದಾಯಿತು.” “ಆಯಿತು. ಗೌಡರೇ, ನಿಮ್ಮ ಮನೆಗೆ ಬಂದದ್ದು ಹೇಳಲಿಲ್ಲವಲ್ಲಾ?” “ಅದು ನನ್ನ ಹೆಂಡತಿ ಭಕ್ತಿ, ಅವಳು ನನ್ನ ಮನೆಗೆ ಬಂದು ಹಾಲೂ ಹಣ್ಣ ತಕೋಬೇಕು ಅಂತ ದಿನ ಕೇಳಿಕೊಳ್ಳುತ್ತಿದ್ದಳು. ಇಲ್ಲಿ ಒಂದು ಪ್ರಾರಬ್ಧ ಕಳೆದು ಆಮೇಲೆ ಅಲ್ಲಿಗೆ ಬಂದು ಆ ಪ್ರಾರಬ್ಧ ಕಳೆಯೋದು ಅನ್ನುತ್ತಿದ್ದರು. ನಿನ್ನೆ ಇಲ್ಲಿಗೆ ಬಂದರು. “ಮುಂದಿನದೂ ಹೇಳಿದ್ದಾರೆಯೋ ? ಭವಿಷ್ಯ ಹೇಳುತಾರೆಯೋ ?” “ಹೇಳುವುದಿಲ್ಲ. ನಿಮ್ಮದು ಮಾತ್ರ ಹೇಳಿದರು ಇನ್ನು ಯಾವುದೂ ಹೇಳಿಲ್ಲ.” “ನಿನ್ನೆ ಹೇಳಿದ್ದರಲ್ಲಿ ಏನೋ ವಿಪತ್ತೂ ಇನ್ನೂ ಕಾದಿರುವಂತೆ ಇದೆ. “ಏನಿದ್ದರೂ ಅವರು ಹೇಳಿದ ಹಾಗೆ ಮಾಡಿಬಿಡಿ. ಸುಖವಾಗಿರಬಹುದು. “ಅವರು ಪ್ರಾಕ್ಟಿಸ್ ಬಿಡಿ ಎನ್ನುತ್ತಾರೆ.” “” “ನೋಡಿ. ಆ ವಿಚಾರ ನಾ ಹೇಳೊಲ್ಲ ಇಷ್ಟು ನನ್ನ ಮಾತು. ಹಿಂದೆ ಐದು ವರ್ಷದಲ್ಲಿ ನನಗೆ ಎರಡು ಲಕ್ಷ ರೂಪಾಯಿನ ಆಸ್ತಿ ಉಳಿಸಿದ್ದೀರಿ. ಈಗ ಮಾನ ಪ್ರಾಣ ಉಳಿಸಿದ್ದೀರಿ. ನಾನು ನಿಮ್ಮ ಇಬ್ಬರಿಗೂ ನನ್ನ ಜೀವ ಇರೋವರೆಗೂ ವರ್ಷಕ್ಕೆ ಎರಡೆರಡು ಸಾವಿರ ಕೊಡುವುದಕ್ಕೆ ಸಿದ್ಧವಾಗಿದ್ದೇನೆ.’ 99 “ಆಯಿತು ಗೌಡರೆ, ತಿಂಗಳಿಗೆ ಸಾವಿರಾರು ಸಂಪಾದಿಸುತ್ತಿದ್ದವರು ಪ್ರಾಕ್ಟಿಸ್ ಬಿಟ್ಟು ಇನ್ನೊಬ್ಬರ ಕೈ ಕಾಯುವ ಬೊಂಬೆಗಳಾಗಿ ಕೂಡುವುದೇ ?” “ಸೋಮಿ, ನನ್ನ ಮಾತು ಕೇಳೀರಾ ? ಸ್ವಾಮಿಗಳನ್ನೆ ನಾಳೆ ಕೇಳಿಬಿಡಿ. ಅವರು ಕಾರಣವಿಲ್ಲದೆ ಹೇಳುವುದಿಲ್ಲ. ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ.” “ಅಲ್ಲದೆ ಪ್ರಾಕ್ಟಿಸ್ ಬಿಟ್ಟರೂ ಉಪವಾಸ ಕೂರಬೇಕಾಗಿಲ್ಲ. ಅದೂ ನಿಜ. ಆದರು ಒಲಿದುಬಂದ ವಕೀಲಿ ಬಿಟ್ಟುಬಿಡುವುದು ಎಂದರೆ, ಅರ್ಧ ಪ್ರಾಣವೇ ಬಿಟ್ಟಹಾಗಲ್ಲವೆ?”

“ನಾನು ಮುಂದಕ್ಕೆ ಏನು ಹೇಳಲಿ ? ಹತ್ತು ಗಂಟೆ ಆಯಿತು. ನಾನಿನ್ನು ಬರಲೇ?” “ಸರಿ ಹೋಗಿಬನ್ನಿ” ಗೌಡನು ಹೋಗುವಾಗ ರಮೇಶನನ್ನು ಬೇರೆಯಾಗಿ ಕರೆದು “ನಿಮ್ಮ ಕುಟುಂಬ ನಿನ್ನೆಯದೇನಾದರೂ ಹೇಳಿದರೇನು ?” ಎಂದು ಕೇಳಿದನು. “ಇಲ್ಲ.” ‘ಕೇಳಿನೋಡಿ” ರಾಯರಿಬ್ಬರೂ ಒಂದು ಗಳಿಗೆ ಅಲ್ಲಿ ಕುಳಿತಿದ್ದು ಮಲಗುವುದಕ್ಕೆ ಹೋದರು. ಮೋಹನೆಯು ಅಡಕೆಲೆ ಮಡಿಸಿಟ್ಟು ಹಾಗೇ ಮಂಚ ಒರಗಿಕೊಂಡು ಮಲಗಿದ್ದಳು. ಜೊಂಪು ಹಿಡಿದಿತ್ತು ರಮೇಶನು ಸದ್ದಿಲ್ಲದೆ ಹೋಗಿ ಮಂಚದ ಮೇಲೆ ಕುಳಿತನು. ಅವನ ಚೇಷ್ಟೆಯಿಂದ ಅವಳಿಗೂ ಎಚ್ಚರವಾಯಿತು. ಒಂದು ಗಳಿಗೆ ಅದೂ ಇದೂ ಮಾತಾಡುತ್ತಿದ್ದ “ನಿನ್ನೆ ನೀವು ಸ್ವಾಮಿಗಳ ಹತ್ತಿರ ಹೋದಾಗ ಏನಾಯಿತು ?” ಎಂದು ಕೇಳಿದನು. ಅವಳು ಉತ್ತರ ಕೊಡಲಿಲ್ಲ. ಅವನ ಎದೆಯ ಮೇಲೆ ಮೊಕವಿಟ್ಟುಕೊಂಡು ಅತ್ತುಬಿಟ್ಟಳು. ಅವನೂ ಬಹಳ ಸಮಾಧಾನ ಮಾಡಿ ಕೇಳಿದರೆ, “ನಾನು ಅವರಿಗೆ ನಮಸ್ಕಾರ ಮಾಡುವಾಗ ಹಣೆಯಲ್ಲಿ ಕುಂಕುಮವಿರಲಿಲ್ಲ. ವೀಣಾ ನೋಡಿ ಸನ್ನೆ ಮಾಡಿದಳು. ಆಮೇಲೆ ಹಚ್ಚಿಕೊಂಡೆ’ ಎಂದಳು. ಅದನ್ನು ಕೇಳಿ ರಮೇಶನಿಗೂ ಏನೋ ನೋವಾಯಿತು. ಆದರೂ ಅದನ್ನು ತೋರಿಸಿಕೊಳ್ಳದೆ ಲೊಚಗುಟ್ಟಿಕೊಂಡು ದೀಪವನ್ನು ಆರಿಸಿದನು. ಮರುದಿವಸ ಸ್ವಾಮಿಗಳು ಮೌನವಾಗಿ ಪೂಜೆಯನ್ನು ಮಾಡಿದರು. ಎಲ್ಲರಿಗೂ ಪ್ರಸಾದ ವಿನಿಯೋಗವಾದ ಮೇಲೆ, “ಇವೊತ್ತಿನಿಂದ ಇನ್ನೊಂದೆಂಟು ದಿನ ಮೌನ ಮಾಡುತ್ತೇವೆ. ನೀವು ನಮ್ಮನ್ನು ಮತ್ತೆ ನೋಡಬೇಕಾಗಿಲ್ಲ. ಹೋಗಿಬರಬಹುದು? ಎಂದು ಹೇಳಿದರು. * * * ಯಾರಿಗೂ ಅವರಿಗೆ ಪ್ರತಿನುಡಿಯುವ ಧೈರವಿರಲಿಲ್ಲ, ವೀಣಾ ನಮ್ಮ ಮನೆಗೆ ಬರಬೇಕು ಸ್ವಾಮಿಗಳೇ ?” ಎಂದಳು. ಸ್ವಾಮಿಗಳು ತಲೆಯೆತ್ತಿ ಅಷ್ಟು ಹೊತ್ತು ನೆಟ್ಟ ದೃಷ್ಟಿಯಿಂದ ನೋಡಿ, “ಆಗಲಮ್ಮ, ನಿನ್ನ ಮನೆಗೆ ಬರಬೇಕು. ಬರುತ್ತೇನೆ. ಆದರೆ ಈ ದೇಹದಲ್ಲಲ್ಲ” ಎಂದರು. ಅದಕ್ಕೂ ಯಾರೂ ಏನೂ ಹೇಳಲಿಲ್ಲ.

ಅಂದಿನ ದಿನವೇ ರಾಯರಿಬ್ಬರೂ ಹಿಂತಿರುಗಿದರು. ಗೌಡನು ತಡೆದು ನಿಲ್ಲಿಸಬೇಕೆಂದು ಆಸೆಯಿದ್ದರೂ ಅವರನ್ನು ತಡೆಯಲಿಲ್ಲ.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...