ಅನುವಾದ

ಅನುವಾದಿತ ಕವನಗಳು

#ಅನುವಾದ

ಪ್ರೇಮ

0
Latest posts by ಹೊಯಿಸಳ (see all)

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ. ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ. ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ! ಗಂಧವಿಲ್ಲದ ಹೂವಿನಂತೆಯೆ ಚಂದ್ರ ಚಂದ್ರಿಕಾಹೀನ! ಹಾಗೇ ನೀರಸ ಮಾನವ ಜೀವನವಿದ್ದರೆ ಪ್ರೇಮ ವಿಹೀನ ಪ್ರೇಮ ಸ್ವರ್ಗವು! ಸ್ವರ್ಗ ಪ್ರೇಮವು! ಪ್ರೇಮ ಅಶಂಕ […]

#ಅನುವಾದ

ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

0

ಬರಲಿರುವ ಕಾಲದ ಯುವಕರೇ, ಇನ್ನೂ ಕಟ್ಟದಿರುವ ನಗರಗಳಲ್ಲಿ ಹುಟ್ಟದಿರುವ ಎಳೆಯ ಜೀವಗಳೇ, ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ. ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ. ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ ನಾನೂ ಕಾಲ ದಂಡಮಾಡಿದೆ, ದಿನಗಳನ್ನು ಸುಮ್ಮನೇ ಕಳೆದೆ. ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ. ಮಾಡದೆ ಉಳಿದಿರುವುದನ್ನೆಲ್ಲ […]

#ಅನುವಾದ

ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

0

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ ನಾಲ್ಕು ಬಾರಿ ಭಿಕ್ಷೆ ಕೊಟ್ಟ ಮನೆಯ ಮುಂದೆ ಐದನೆಯ ಬಾರಿ ಭಿಕ್ಷುಕ ನಿಂತು ಕೂಗುತ್ತಾನೆ ಈಗ ಅವನಿಗೆ ನಿಜವಾಗಿ ಹೊಟ್ಟೆಹಸಿದಿದೆ. […]

#ಅನುವಾದ

ಕಳ್ಳ ಮತ್ತು ಸೇವಕ

0

ಇಬ್ಬರು ಕಳ್ಳರು ಊರನ್ನು ದೋಚಿದರು. ರೈತರ ಕತ್ತು ಮುರಿದರು. ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ. ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ. ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ? ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ. ಒಡೆಯ ಕೆನೆಹಾಲು ಕುಡಿಯುತ್ತಿದ್ದ ಗುಲಾಮನಿಗೆ ನೀರು ಮಜ್ಜಿಗೆ ಕೊಡುತ್ತಿದ್ದ. ಒಂದು ದಿನ ರೈತರು ಕಳ್ಳರನ್ನು ಹಿಡಿದರು. ಒಂದೇ ಮರಕ್ಕೆ ಒಂದೇ ಹಗ್ಗದಿಂದ ಇಬ್ಬರನ್ನೂ ನೇಣಿಗಿಟ್ಟರು. […]

#ಅನುವಾದ

ಅಮ್ಮನಿಗೆ

0

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

#ಅನುವಾದ

ಬಹಳ ಕಂಡಿದ್ದೇನೆ

0

ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ ನಿಂತಿತ್ತು, ಮೇಲೆ ಬಿಳಿ ಅರಳೆ ಮೋಡ ತೇಲಿತ್ತು, ಅದರಾಚೆ ಬಾನೆತ್ತರದಲ್ಲಿ ರಣಹದ್ದು ವಿಹಾರ ಮಾಡಿತ್ತು ದಿವ್ಯ ಔದಾಸೀನ್ಯದ ಶಕುನ ತಿಳಿಯಲಿಲ್ಲವಲ್ಲ. […]

#ಅನುವಾದ

ಒರೆಸಿಬಿಡು ಬೇಕಾದರೆ

0

ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್ಲ ನಿನ್ನಲ್ಲಿ ತಲುಪಿ ನೆಲೆಗೊಳ್ಳಲಿ ಬಿಡು. ನಡೆ ನಡೆಯುತ್ತ ನನ್ನ ನಿಜ ದಂದುಗ ಮರೆವೆಗೆ ಸಂದಿತ್ತು-ನಾನಿಲ್ಲಿಗೆ ಮತ್ತೆ ಬಂದಿರುವುದೇ ಸಾಕ್ಷಿ. ನನ್ನ […]

#ಅನುವಾದ

ಬಲವಂತ

0

ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ! ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ! ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು ನಿನ್ನಿಂದ ಲಪಟಾಯಿಸುವ ಕನಸು ಕಂಡಿದ್ದೆ ನಾನ- ನನ್ನ ದುಃಖ ಮತ್ತಷ್ಟು ಉಪ್ಪು-ಮೊನಚಾಗಿ ಬೆಳೆದ ಮಗುವಿನಂಥ ನನ್ನ ಅಳು ಎಲ್ಲರಿಗೆ ತಾಗಲೆಂದು. ಪುರಾತನ ನಿಘಂಟಿನ ಮಾಸಿದ ಪುಟಗಳ […]

#ಅನುವಾದ

ಹಾಗೆ ಆಗಬಹುದಿತ್ತು ಸಮುದ್ರವೇ

0

ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು, ಪರರ ಕುರಿತು, ಕ್ಷಣಕ್ಕೊಂದು ರೂಪತಾಳಿ ಜಾರಿ ಹೋಗುವ ಬದುಕನ್ನು ಕುರಿತು ಚಿಂತೆಯನ್ನು ಹೊದ್ದುಕೊಂಡೆ. ಬಡಿಯಲೋ ಕೊಲ್ಲಲೋ ಕೈಯೆತ್ತುವ ಮುನ್ನ ತುಯ್ಯಲಾಡುವ […]

#ಅನುವಾದ

ಗೊತ್ತಿಲ್ಲ

0

ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ. ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ, ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ ಮರೆಯಾದ ಎಡೆಗೆ. ಅಪರಿಚಿತ ನಾಡು ಕೈಬೀಸಿ ಕರೆದಾವು. ಸೂರ್ಯನ ನೆನಪೂ ಮರೆಯಾಗಿ ಕವಿತೆಯ ಸೊಲ್ಲು ಶಬ್ದ ಉದುರಿಬಿದ್ದಾವು. ಅಯ್ಯೋ ನಚ್ಚಗೆ ಕಟ್ಟಿಕೊಂಡ ನಮ್ಮ ಬದುಕಿನ […]