Home / ಕವನ / ಜನಪದ

ಜನಪದ

ಕಾಮ ನೀನು ಧೂಮವಾದಿ ಸೋಮನಾಥನ ಕಣ್ಣಿಗೆ ಪ್ರೇಮದಾ ನುಡಿ ಏನು ಹೇಳಿದಿ ಕಾಮಿನಿ ರತಿ ದೇವಿಗೆ ನಿನ್ನ ಪೋಲುವೆ ಪುರುಷರು ಜಗದೊಳಿನ್ನೂ ಹುಟ್ಯಾರೆಂದಿಗೆ? ನನ್ನ ಮುತ್ತೈದೆ ತನಕೆ ಭಂಗ ತಂದ್ಯಾ ಇಂದಿಗೆ ||೧|| ಮಾರ ನಿನ್ನ ರೂಪ ನೋಡಿ ಸೈರಿಸದೀ ಅಮರ್‍ಯಾರ...

ರತಿ ದೇವಿ ಕಾಂತನ ನೆನಸಿ ಅಳುತ ಬಿಡುವಳು ಬಾಯ | ನೀ ಬಿಡುವುದೇ ಕೈಯಾ ||ಪ|| ಸುರರೆಲ್ಲರು ಕಲೆತು ನಿನಗೆ ಮಾಡಿದರಲ್ಲೋ ಅಪಜಯ ಎನ್ನ ಮೋಹದ ರಾಯ ||೧|| ತಾರಕರ ಬಾಧೆಗೆ ತಾಳದೆ ಮಾಡಿದರುಪಾಯ? ದೇವತಾ ಗುರುರಾಯ ||೨|| ನನಗೆ ನಿನಗೆ ಕಂಕಣ ಕಟ್ಟಿ ಮಾಡಿ ...

ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧|| ನಾ ಪ್ರೇಮದಿಂದ ಕೂಡಿದಂತೆ ಪ್ರೀತಿ ಹೋಯ...

ಮಾರ ವೀರ ತನ್ನ ಮನದಿ ಧೈರ್ಯ ಮಾಡಿ ಹರನ ತಪವ ಸೂರೆಗೊಂಬುದಕೆ ತನ್ನ ಸೈನ್ಯವೆಲ್ಲ ಕೂಡಿಸಿ ||ಪ|| ಅಳಿಯು ಗಿಳಿಯು ಕೋಗಿಲೆಗಳ ಬಳಗವೆಲ್ಲಾ ಮುಂದೆ ಹೈಮಾಚಲಕೆ ತೆರಳ ಹೇಳಿ ಪುಷ್ಪದಲರು ಬಿಲ್ಲಿಗೇರಿಸಿ ||೧|| ಅಂಗಜನು ಪೋಗಿ ಮಾತಂಗ ಪರ್ವತವನು ಏರಿ ತುಂಗ...

ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ ನೂಕಬಾರದೆ ಬ್ಯಾಸರವಾದರೆ?...

ಹರಿ ವಿರಂಚಿಯೂ ಕೂಡಿ ಗುರು ಬೃಹಸ್ಪತಿ| ಕೂಡಿ ಗುರು ಬೃಹಸ್ಪತಿ ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ|| ಹರನ ತಪವನುಽ ಕೆಡಿಸಿ ಸ್ಮರಗೆ ಬೋಧಿಸು| ಕೆಡಿಸಿ ಸ್ಮರಗೆ ಬೋಧಿಸು ಸುರರ ಬಾದೆಯ ಬ್ಯಾಗ ಪರಿಹರಿಸುವುದು||೧|| ಅಕ್ಷ ಮೂರ್ತಿಯಽ ತಪವು ಭ್ರಷ್ಟ...

ಸತಿ ಹೋಮದೊಳಾದುದ ಕೇಳಿ ಶಿತಿ ಕಂಠನು ವ್ಯಸನವ ತಾಳಿ ಕೈಲಾಸದ ವೈಭೋಗವನು ಪಾಲಿಸುವುದ ಬಿಟ್ಟನುಽ ಶಿವನೋಽ||ಪ|| ತಾಳಿದ ಮೌನವ ತಪಸಿಗೆ ಮನವನು ಕೂರಿಸಿದನು ಆ ಪರಮಾತಮನೂ ಶಿವನೋಽ||೧|| ಹೇಮಕೂಟ ಪರ್ವತಕೆ ಹೋಗಿ ತಾ ಮಾಡುತ ತಪ ಶಿವಯೋಗಿ ಪ್ರೇಮದಿಯವತರಿಸ...

ಮೂಢತನವು ಸೇರಿತೇ ರೂಢೀಶ ನಿನ್ನಗೆ ಬ್ಯಾಡ ಶಿವನ ಕೂಡ ಹಗೆ ||ಪ|| ಜನನ ಸ್ಥಿತಿ ಸಂಹಾರ ಕರ್ತ ಘನ ಮಹೇಶನು| ತಾ ಯಾರಿಗೆ ಸಿಲುಕನು ||೧|| ಮನಕೆ ತಿಳಿಯೋ ಜನಕ ನಿನ್ನ ತನುಜೆ ಮಾತನು | ನಾ ಮುಗಿವೆ ಕೈಯನು ||೨|| ಅದಿ ಅಂತ್ಯವಿಲ್ಲದ ಪರನಾದ ಭಾವವೋ ತಿಳ...

ಹೋಳಿಯ ಹಬ್ಬ ವಿಶಾಲದ ಪದಗಳ ಕೇಳಿರಿ ಜನರೆಲ್ಲಽ| ಬಾಲಕರೆಲ್ಲರೂ ಕೋಲಾಟವ ಪಿಡಿದೇಳುವ ಶೃತಿ ಸೊಲ್ಲಽ||ಪ|| ದಕ್ಷವತೀಶನು ದಕ್ಷಬ್ರಹ್ಮ ತಾ ತನ್ನ ಪ್ರೀತಿ ಸುತೆಯುಽ ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ ನುಪೇಕ್ಷದಿ ಸಲಿಸುವೆಯಽ||೧|| ಮನದೊಳರಿದು ದಕ್ಷನ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...