ಸತಿ ಹೋಮದೊಳಾದುದ ಕೇಳಿ
ಶಿತಿ ಕಂಠನು ವ್ಯಸನವ ತಾಳಿ
ಕೈಲಾಸದ ವೈಭೋಗವನು
ಪಾಲಿಸುವುದ ಬಿಟ್ಟನುಽ
ಶಿವನೋಽ||ಪ||
ತಾಳಿದ ಮೌನವ
ತಪಸಿಗೆ ಮನವನು ಕೂರಿಸಿದನು
ಆ ಪರಮಾತಮನೂ
ಶಿವನೋಽ||೧||
ಹೇಮಕೂಟ ಪರ್ವತಕೆ ಹೋಗಿ
ತಾ ಮಾಡುತ ತಪ ಶಿವಯೋಗಿ
ಪ್ರೇಮದಿಯವತರಿಸ್ಯಾ
ಮಹ ಪಾರ್ವತಿ ಕಾಮಿಸಿ
ಬೆಳೆದಳು ಹೆಣ್ಣಾಗಿ||೨||
ಇತ್ತಲು ಈ ಪರಿಯಿರುತಿರಲು ತಾ
ಮತ್ತೊಂದಾಯಿತು ತರುವಾತ|
ದೈತ್ಯನು ತಾರಕ ದೇವತರಿಗೆ
ವಿಪತ್ತು ತಂದನವ ನಿತ್ಯವೂ ಘೀಳಿಡುತ||೩||
ಇಂದ್ರಾಗ್ನ್ಯಮನೈರುತೀಶಾನನ್ನರನ್ನೋಡಿಸಿ
ಗರ್ವದಿ ಮುನ್ನ|
ಕುಂದದೆ ಸುರರಿಗೆ ಅಧಿಪತಿಯಾದನು
ಬಂಧಿಸಿಟ್ಟನು ಸೆರೆಯಲಿ ಸುರನನ್ನ||೪||
ಸುರಸಭೆ ಎಲ್ಲರೂ ಘೀಳಿಡುತಾ
ತೆರಳಿದರೆಲ್ಲರೂ ಬಳಲುತಾ
ಸರಸಿಜ ಭವನಿಗೆ ಮೊರೆಯಿಟ್ಟರು ತಾ
ಪರಿ ಪರಿಯಿಂದಲಿ ದೂರಿಡುತಾ||೫||
*****
Latest posts by ಗಿರಿಜಾಪತಿ ಎಂ ಎನ್ (see all)
- ಅಂತರಾಳ - December 11, 2018
- ಕಾಲ - December 4, 2018
- ಅಕ್ಕನ ಭಾವಗೀತೆ - November 27, 2018