ಹಣ್ಣು ಹಣ್ಣು ಮಾವಿನ ಹಣ್ಣು
ಯಾರಿಗೆ ಬೇಕು ಮಾವಿನ ಹಣ್ಣು?
ನಂಗೆ ಬೇಡ ಮಾವಿನ ಹಣ್ಣು
ಯಾಕೋ ಬೇಡ ಮಾವಿನ ಹಣ್ಣು?
ಗೊರಟಿದೆಯಲ್ಲಾ ಅದಕೇ ಬೇಡ!

ಹಣ್ಣು ಹಣ್ಣು ಬಾಳೇ ಹಣ್ಣು
ಯಾರಿಗೆ ಬೇಕು ಬಾಳೇ ಹಣ್ಣು?
ನಂಗೆ ಬೇಡ ಬಾಳೇ ಹಣ್ಣು
ಯಾಕೋ ಬೇಡ ಬಾಳೇ ಹಣ್ಣು?
ಸುಲಿಬೇಕಲ್ಲಾ ಅದಕೇ ಬೇಡ!

ಹಣ್ಣು ಹಣ್ಣು ದ್ರಾಕ್ಷೆ ಹಣ್ಣು
ಯಾರಿಗೆ ಬೇಕು ದ್ರಾಕ್ಷೆ ಹಣ್ಣು?
ಬಿತ್‌ಲೆಸ್ ಆದ್ರೆ ನಂಗೇ ಬೇಕು
ಬಿತ್‌ಲೆಸ್ ಆದ್ರೆ ಯಾಕೋ ಬೇಕು?
ಬಿತ್‌ಲೆಸ್ ಆದ್ರೆ ಉಗಿಬೇಕಿಲ್ಲ!
ಅದಕೇ ಬೇಕು ದ್ರಾಕ್ಷೆ ಹಣ್ಣು!
*****

Latest posts by ತಿರುಮಲೇಶ್ ಕೆ ವಿ (see all)