ಆ ಚಾಲಕ ವೇಗವಾಗಿ ವಾಹನವನ್ನು ಓಡಿಸಿ ಆಯ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ. ಅವನ ಅಜಾಗ್ರತೆ ಅವನಿಗೆ ಅರಿವಾಗಲೇ ಇಲ್ಲ. ಅವನಿಗೆ ಮರದ ಮೇಲೆ ಅತೀವ ಕೋಪ ಬಂತು. ಮರವನ್ನು ಕಡೆದು ಹಾಕಿದ. ಮಗುವಿನಂತೆ...
ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇರೆ ಮರಗಿಡಗಳು "ಅಯ್ಯೋ!...
ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ...
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ ಹಸಿರಾದ ಎಲೆ ಚಿಗುರು; ಒತ್ತು ಒತ್ತಾಗಿ...
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ ಕೆಳಗೆ ಗೃಹಪ್ರವೇಶ ಮಾಡಿ ಗೌರಮ್ಮ ಶಿವಪ್ಪನವರು...
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ್ತಿದ್ದ...
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ ಅಮ್ಮ ಬೇಕಂತೆ" ಎಂದು ಪುಟ್ಟ ಸರಳ...
ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು. ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ. ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ. ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ. ಒಂದು...