ವಾಗ್ದೇವಿ – ೧೮

ವಾಗ್ದೇವಿ – ೧೮

ಒಂದೆರಡು ದಿನಗಳಲ್ಲಿ ಅರಮನೆಯ ದೊಡ್ಡಮುದ್ರೆ ಒತ್ತಿರುವ ಪರವಾ ನೆಯು ಜ್ಞಾನಸಾಗರತೀರ್ಧರಿಗೆ ತಲ್ಪಿತು. ಅವರು ಅದನ್ನು ಓದಿಸಿಕೇಳಿದಾಗ ವೇದವ್ಯಾಸ ಉಪಾಧ್ಯನ ಮನವಿಯ ಮೇಲೆ ನೃಪತಿಯು ಕೊಟ್ಟ ಅಪ್ಪ ಣೆಯ ಅಂದವು ತಿಳಿಯಿತು. “ಅಹಾ! ಈ ಹಾರುವನು ಚಾಣಿಕ್ಯನ ಹಾಗೆ ಒಳ್ಳೆ ಸಾಹಸಿಯೇ ಸೈ. ಶ್ರೀಪಾದಂಗಳ್ಳಾರೂ ಅವನಿಗೆ ಇಂಬುಗೊಡದೆ. ನಮ್ಮಂತೆಯೇ ಧಿಕ್ಕರಿಸಿಬಿಟ್ಟರೇ!” ಮನವಿದಾರನು ಪಟ್ಟಣದಲ್ಲೆಲ್ಲಾದರೂ ಬಂದಿರುವನೋ ವಿಚಾರಿಸಿ ಹೇಳಬೇಕಾಗಿ ಸ್ವಾಮಿಗಳು ಅಪ್ಪಣೆಕೊಟ್ಟರು. ಮಠದ ಹರಿಕಾರರು ಅಲ್ಲಲ್ಲಿ ತಿರುಗಾಡಿ ನೋಡುವಾಗ ವೇದವ್ಯಾಸ ಉಪಾ ಧ್ಯನೂ ಭೀಮಾಚಾರ್ಯನೂ ಮಿಠಾಯಿ ಸಂತೆಯ ಸಮಾಸ ತಿರುಗಾಡಿ ಕೊಂಡಿದ್ದರು. ಆ ವದಂತಿಯನ್ನು ಶ್ರೀಪಾದಂಗಳಿಗೆ ಚಾಕರರು ತಿಳಿಸಿದರು.

ಸ್ವಾಮಿಗಳು ತನ್ನ ಮರದ ಪಾರುಪವತ್ಯಗಾರ ರಾಧಾಕೃಷ್ಣಾಚಾರ್ಯ ನನ್ನು ಕರಸಿಕೊಂಡು, ಭೂಪಾಲನ ಪರವಾನೆಯನ್ನು ಅವನಿಗೆ ತೋರಿಸಿ ಅವನ ಆಲೋಚನೆಯನ್ನು ಕೇಳಿದರು. ವೇದವ್ಯಾಸ ಉಪಾಧ್ಯನು ಆರಂಭ ದಲ್ಲಿ ಮಠಕ್ಕೆ ಬಂದು ಹೇಳಿಕೊಂಡಾಗ ಅವನಿಗೆ ಯಾವದೊಂದು ಸುಸೂತ್ರ ನಾದ ಉತ್ತರಕೊಡದೆ, ಧಿಕ್ಕರಿಸಿಬಿಟ್ಟ ಸಮಾಚಾರವನ್ನು ಕೇಳಿ, ಕೊಂಚ ವಿಸ್ಮಯಪಟ್ಟನೆಂದು ಪಾರುಪತ್ಯಗಾರನು ಬಿನ್ನನಿಸಿದನು. ಈಗ ಅನುಸರಿಸ ಬೇಕಾದ ಕ್ರಮ ಹೇಳಬೇಕಾಗಿ ಜ್ಞಾನಸಾಗರರು ಪಾರುಪತ್ಯಗಾರಗೆ ಅಪೇಕ್ಷಿ ಸಿದರು. ಸನ್ನಿಧಿಯಿಂದಲೇ ಅವಶ್ಯವಿರುವ ವಿಚಾರಣೆ ನಡೆದು, ವೇದವ್ಯಾಸನ ಮನವಿಯ ಇತೃರ್ಧವಾಗಲಿಕ್ಕೆ ಪೂರ್ವದ ಕಟ್ಟಿನ ಪ್ರಕಾರ ಸ್ವತಂತ್ರ ವಿದ್ದರೂ ದುರ್ದಾನಕ್ಕೆ ಸಮಾನವಾದ ಈ ವಿಷಯದಲ್ಲಿ ಬೇರೆ ಮೂರು ಮಠದವರಿಗೂ ಬರೆದು ಅವರ ಅಭಿಪ್ರಾಯ ತಿಳುಕೊಂಡು ಮುಂದರಿಸುವದು ಒಳ್ಳೆಯದೆಂದು ರಾಧಾಕೃಷ್ಣಾಚಾರ್ಯನು ಕೊಟ್ಟ ಆಲೋಚನೆಯು ಶ್ರೀಪಾದಂಗಳ ಮನಸ್ಸಿಗೆ ಸಮ್ಮತವಾಗಿ, ಹಾಗೆ ವರ್ತಿಸುವುದಕ್ಕೆ ಅವರು ಅವನಿಗೆ ಅಪ್ಪಣೆಕೊಟ್ಟರು. ಪಾರುಪತ್ಯಗಾರನು ನೃವಾಲನ ಪರವಾನೆಯ ಸಹಿ ನಕಲುಗಳನ್ನುಮಾಡಿಸಿ, ಬೇರೆ ಮೂರು ಮಠಾಧಿಪತಿಗಳಿಗೂ ಕಳುಹಿ ಕೊಟ್ಟು, ಆವರ ಅಭಿಪ್ರಾಯ ಶೀಘ್ರತಿಳಸಬೇಕೆಂದು ಅಪೇಕ್ಷಿಸಿನು.

ಆಶ್ರಮಜ್ಯೇಷ್ಠರಾದ ಜ್ಞಾನತೀರ್ಥರು ಇದನ್ನು ಕುರಿತು ಸೂಚಿಸುವ ಮಾರ್ಗಕ್ಕೆ ಅಸ್ತು ಎಂಬುದಾಗಿ ತಮ್ಮ ಭಾವವನ್ನು ಪೂರ್ಣಾನಂದ ತೀರ್ಥರೂ ಅಚಲನೇತ್ರರೂ ತಿಳಿಸಿದರು. ಹರಿಪದಾಂಬುಜತೀರ್ಧರು ಬಾಲಮುಕುಂದಾ ಚಾರ್ಯನನ್ನು ಕರಿಸಿ ಅವನ ಕೂಡೆ ಗುಪ್ತಾಲೋಚನೆ ಮಾಡಿದರು ಕೊಂಚಸಮಯ ಅವನು ಚಿಂತಿಸಿ ಚಂಚಲನೇತ್ರರ ಕೂಡೆ ಮುಖತಃ ಚರ್ಚೆ ಮಾಡಿ ಮುಂದಿನ ಕೆಲಸವನ್ನು ಮಾಡುವುದು ಒಳ್ಳೆಯದೆಂದು ತನ್ನ ಮತ ವೆಂದನು. “ಬಾಲಮುಕುಂದನೇ! ನೀನೇ ನರಸಿಂಹ ಪುರದ ತನಕ ಹೋಗಿ ಆಶ್ರಮದಲ್ಲಿ ಹಿರಿಯರಾದ ಜ್ಞಾನಸಾಗರರನ್ನು ಕಂಡು, ನಿನ್ನ ಮನಸ್ಸಿಗೆ ಯುಕ್ತತೋರುವಂತೆ ಈ ಕಾರ್ಯವನ್ನು ನಿರ್ವಹಿಸು”ಎಂದು ಹರಿನದಾಂಬು ಜತೀರ್ಥರ ಅಪ್ಪಣೆಯಾಯಿತು.

ದೀರ್ಘದರ್ಶಿಯಾದ ಬಾಲಮುಕುಂದಾಚಾರ್ಯನು ಯಜಮಾನರು ಕೊಟ್ಟ ಅನುಜ್ಞೆಗನುಸರಿಸಿ ವ್ಯರ್ಧವಾಗಿ ಸಮಯ ಕಳೆಯದೆ ಸಂತೋಷ ಚಿತ್ತದಿಂದ ತನ್ನ ಗೌರವಕ್ಕೆ ಯೋಗ್ಯವಾದ ರೀತಿಯಲ್ಲಿ ಸೇವಕ ಜನರನ್ನು ಸಂಗಡ ಕರೆದುಕೊಂಡು ವಾಹನಾರೂಢನಾಗಿ ನೃಸಿಂಹಪುರಕ್ಕೆ ತಲ್ಪಿದನು ಈ ವರದಿಯು ಮಠಕ್ಕೆ ಮುಟ್ಟಿತು. ಜ್ಯಾನಸಾಗರ ತೀರ್ಥರು ತನ್ಮು ಮಠಕ್ಕೆ ಬಾಲಮುಕುಂದಾಚಾರ್ಯನನ್ನು ಕರೆಸಿಕೊಂಡರು. ಅವನಿಗೆ ಮಧ್ಯಾಹ್ನ ಭೋಜನವು ಮಠದಲ್ಲಿಯೀ ಆಯಿತು. ಅನಂತರ ಬಾಲಮುಕುಂದನು ಯತಿಗಳ ಸಮಯವನ್ನು ನೋಡಿ, ತಾನು ಹರಿವದಾಂಬುಜತೀರ್ಥರಿಂದ ಕಳುಹಿಸಲ್ಪಟ್ಟಿವನೆಂದು ತಿಳಿಸಿದರು. ಅವರ ಅಭಿಪ್ರಾಯವನ್ನು ತಿಳೆಯಲಿಕ್ಕೆ ಅಶೆಪಡುತ್ತೇನೆಂದು ಜ್ಞಾನಸಾಗರರು ಹೇಳದಾಗ-“ಅವರು ವಿಶೇಷ ಹೇಳ ತಕ್ಕದ್ದೇನೂ ಇಲ್ಲ. ಒಂದು ಅಪವಾದವು ಚಂಚಲನೇತ್ರರ ಮೇಲೆ ಬಂದಿರು ವಾಗ ಅದನ್ನು ಕುರಿತು ಉಳಿದ ಮಠದವರು ವಿಚಾರತಕ್ಕೊಳ್ಳಲಿಲ್ಲನೆಂಬ ಮಾತಿನ ವಾಶಿ ಬಾರದಂತೆ ಒಂದೊಂದು ಮಠದ ಕಡೆಯಿಂದ ಒಬ್ಬೊಬ್ಬ ಪ್ರಮುಖ ಮನುಷ್ಯನು ಆರಿಸಲ್ಪಡಬೇಕು; ಅಂಥಾ ನಾಲ್ವರು ಕುಮುದ ಪುರಕ್ಕೆ ತೆರಳಿ, ಅಲ್ಲಿ ಕೂಲಂಕಷವಾದ ವರ್ತಮಾನವನ್ನು ಸಂಗ್ರಹಿಸಿ, ಮರಳಿ ಬಂದನಂತರ ಮಿಕ್ಕ ಶ್ರೀಪಾದಂಗಳವರು ಅದನ್ನೆಲ್ಲ ಚೆನ್ನಾಗಿ ಶೋಧಿಸಿ ನೋಡಿ ಯುಕ್ತವೆಂದು ತೋರುವ ಇತ್ಯರ್ಥವನ್ನು ಮಾಡಿದರೆ ರಾಜದ್ವಾರದಲ್ಲಿ ವೇದವ್ಳಾಸನು ಸುನರಪಿ ಹೋಗತಕ್ಕ ಅಗತ್ಯ ಬೀಳದು. ತತ್ರಾಪಿ ಅಂಧಾ ಇತ್ಯರ್ಥವನ್ನು ಸಮ್ಮತಿಸದೆ ಅವನುಎರಡನೆ ಮನವಿಮಾಡಿ ಕೊಂಡರೆ ರಾಜನು ಅದರಲ್ಲಿ ಪ್ರವೇಶಿಸಲಿಕ್ಕೆ ನಿರಾಕರಿಸಿಬಿಡುವನು. ಹೀಗೆ ನನ್ನ ಧನಿಗಳು ಅಭಿಪ್ರಾಯ ಪಡುವರು? ಎಂದು ಉತ್ತರಕೊಟ್ಟನು.

ಹರಿಪದಾಂಬುಜರು ನಿಜವಾಗಿ ವಿಚಕ್ಷಣರಾದ ಕಾರಣ ಇಷ್ಟು ಒಳ್ಳೆ ಯ ಉಪಾಯವನ್ನು ಹುಡುಕಿದ್ದಕ್ಕಾಗಿ ಜ್ಞಾನಸಾಗರರು ಅವರನ್ನು ಸ್ವಲ್ಪ ಹೊಗಳಿದರು ಬೇರೆ ಎರಡು ಮಠದವರು ತಮಗೆ ಯುಕ್ತಕಂಡಂತೆ ವರ್ತಿಸಿ ದ್ದಲ್ಲಿ ತಾವು ಅನ್ಯಥಾ ಹೇಳತಕ್ಕದ್ದೇನಿಲ್ಲವೆಂದು ಉತ್ತರಕೊಟ್ಟರುವರು. ಈಗ ತಕ್ಕ ಪುರುಷನನ್ನು ಆರಿಸಿದರೆ ಆಯಿತಷ್ಟೆ? ತಮ್ಮ ಮಠದಿಂದ ಪಾರು ಪತ್ಯಗಾರ ರಾಧಾಕೃಷ್ಣಾಚಾರ್ಯನೇ ಸಾಕೆಂದು ಜ್ಞಾನಸಾಗರರು ನಿರ್ಣ ಯುಸಿ, ಪೂರ್ಣಾನಂದತೀರ್ಥರಿಗೂ ಅಚಲನೇತ್ರರಿಗೂ ತಾವು ಮಾಡಿದ ನೇಮಕವನ್ನು ತಿಳಿಸಿದರು. ಕ್ಷತ್ರಿಯಪುರದ ಮಠದಿಂದ ಪಾರುಪತ್ಯಗಾರ ಸೂರ್ಯನಾರಾಯಣಾಚಾರ್ಯನೂ ವರ್ತಕಪುರದ ಮಠದಿಂದ ಅಲ್ಲಿಯ ಪಾರುಪತ್ಯಗಾರ ವೆಂಕಟರಮಾಚಾರ್ಯನೂ ನೇಮಿಸಲ್ಪಟ್ಟು, ನರಸಿಂಹ ಪುರಕ್ಕೆ ಅವರಿಬ್ಬರೂ ಬಂದರು. ಶಾಂತಿಪುರ ಮಠದ ಕಡೆಯಿಂದ ಬಾಲಮು ಕುಂದಾಚಾರ್ಯನನ್ನು ನೇಮಿಸಿರುವದಾಗಿ ಹರಿಪದಾಂಬುಜರಿಂದ ಅವನು ಉತ್ತರ ತರಿಸಿಕೊಟ್ಟನು. ಸುಮುಹೂರ್ತದಲ್ಲಿ ನಾಲ್ವರು ಪಾರುಪತ್ಯಗಾರರು ನೃಸಿಂಹಪುರ ಮಠದ ರಾಯಸಪತ್ರವನ್ನು ತಕ್ಕೊಂಡು, ಅವರವರ ಚಾಕರರ ಸಮೇತ ಕಮುದವುರಕ್ಕೆ ಹೊರಟರು. ವೇದವ್ಯಾಸ ಉಪಾಧ್ಯನೂ ಮನಸ್ಸಿ ದ್ದರೆ ಅವರ ಸಂಗಡ ಹೋಗಬಹುದೆಂದು ನೃಸಿಂಹಪುರ ಮಠದಿಂದ ರಾಯ ನಪತ್ರಪು ಹೊರಟಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಘಟನೆ
Next post ಆಡಿಸು ನನ್ನ ಜಾಡಿಸು ನನ್ನ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys