ವಾಗ್ದೇವಿ – ೪೧

ವಾಗ್ದೇವಿ – ೪೧

ಆಶ್ರಮದ ವಿಶಿಷ್ಟ ವಹಿವಾಟು ಸಾಂಗನಾಗಿ ನಡೆದೆ ಮೇಲೆ ವೇದ ವ್ಯಾಸ ಉಪಾಧ್ಯನ ಹೊಟ್ಟೆಕಿಚ್ಚು ವೃದ್ಧಿಯಾಗುತ್ತಾ ಬಂತು ಹಾಗೆಯೇ ತನ್ನ ಮೇಲಿರುವ ಪ್ರಕರಣದಲ್ಲಿ ತನ್ನ ಗತಿ ಹ್ಯಾಗಾಗುವದೋ ಎಂಬ ಭಯವು ತುುಬಿ ಚಿಂತಾತುರನಾಗಿರುವದು ಅವನ ಮುಖಬಭಾವದಿಂದ ಪತ್ನಿಯ ಮನಸ್ಸಿಗೆ ತಿಳಿಯುತ್ತಲೇ ಅವಳು ತನ್ನ ಮಾತುಕೇಳಿದರೆ ಸ್ವಸ್ಥ ವಾಗಿರಬಹುದಿತ್ತೆಂದು ಮೆಲ್ಲಗೆ ಹೇಳಿದಾಗ ಆದದ್ದು ಆಯಿತು ಇನ್ನೇನು ಮಾಡಲೆಂದು ಬಿಸುಸುಯ್ದನು. ದೇವರಿಗೆ ಚೆನ್ನಾಗಿ ಪ್ರಾರ್ಥನೆಮಾಡಿ ಕೊಂಡರೆ ದುರಿತ ಉಪಶಮನವಾಗುವದು ಆಶ್ಚರ್ಯವಲ್ಲನೆಂದು ಹೆಂಡತಿಯು ಹೇಳಿದಳು. ದೇವರನ್ನು ಮಠದವರು ಅವರ ಬಾಗಿಲಲ್ಲಿ ಕಟ್ಟಿ ಹಾಕಿರುವ ಪ್ರಯುಕ್ತ ಅವನು ಪರಸ್ವಾಧೀನನಾಗಿರುವನೆಂದು ಅಪಹಾಸ್ಯದ ಮಾತು ಆಡಿಬಿಟ್ಟನು. ಇದು ಅವಳ ಮನಸ್ಸಿಗೆ ಏನೂ ಹಿತವಾಗಲಿಲ್ಲ. ಏನು ಮಾಡೋಣ! ಬಂದದ್ದು ಅನುಭವಿಸದೆ ನಿರ್ವಾಹವುಂಟೇ? ತನ್ನ ಗಂಡನ ಚಿಂತೆಯನ್ನು ನೋಡಿ ಅವಳು ಕರಗಿದಳು. ಸಹಾಯಕರ್ಯಾರಿದ್ದರೇನಾಯಿತು? ಜಯಶ್ರೀ ತೊಲಗಿದ ಮೇಲೆ ಎಷ್ಟು ಬಡಕೊಂಡರೂ ವ್ಯರ್ಥ! ತನ್ನ ಗಂಡನ ಹಟವೂ ದುಸ್ಸಾಧನೆಯೂ ಅನಾವಶ್ಯಕವಾದದ್ದೆಂದು ಅವಳ ಮನಸ್ಸಿಗೆ ಪೂರ್ಣವಾಗಿ ಗೊತ್ತಿತ್ತು. ಬಾಯಿಬಿಟ್ಟು ಹೇಳಬಹುದೆ? ಪತಿವ್ರತಾಸ್ತ್ರೀಯು ಸರ್ವಧಾ ಗಂಡಸಿಗೆ ಸಿಟ್ಟು ಬರುವ ಹಾಗಿನ ಕೃತ್ಯಮಾಡುವದಾಗಲೀ ಮಾತು ಆಡುವದಾಗಲೀ ಕೇವಲ ಧರ್ಮವಿರುದ್ಧವಾದದ್ದು.

ಗರುಡಾಚಾರ್ಯನ ವ್ಯಥೆಯನಕ ಘೋರವಾದದ್ದೇ ಸರಿ. ತಕ್ಕಮಟ್ಟಿನ ಸಂಪನ್ನನೂ ಆ ಪರಿಯಂತ್ರ ಅನ್ಯಾಯ ಕೃತ್ಯದಲ್ಲಿ ಪ್ರವರ್ತಿಸದೆ ತನ್ನ ಮರ್ಯಾದೆಯನ್ನು ಕಾಪಾಡಿ ಗೃಹಸ್ಥನೆನಿಸಿಕೊಂಡವನೂ ಖರೆ. ಪರಂತು ರಾಮದಾಸನ ಚಕ್ಕಂದಕ್ಕೆ ಸೋತುಹೋಗಿ ಮಾನಭಂಗ ಮಾಡಿಕೊಂಡು ಕೆಟ್ಟೆನೆಂಬ ವ್ಯಸನವು ಅವನ ಬುದ್ಧಿ ಚಾತುರ್ಯವನ್ನೂ ಧೈರ್ಯವನ್ನೂ ಕುಂದಿಸಿಬಿಟ್ಟಿತು. ರಾಮದಾಸನು ಅವನ ಮತಸ್ಥನಾದ ಕಾರಣ ಅವನ ಮಾತನ್ನು ಕೇಳಬೇಕಾಯಿತಲ್ಲ. ಅವನ ತಿಷ್ಟತಿಯನ್ನು ಬಿಡುವ ಸಮಯವು ಹಿಂದುಳಿಯಿತು. ಈಗ ಹತ್ತು ಜನರ ಸಾವು ಮದುವೆಗೆ ಸಮಾನವೆಂಬ ಗಾದೆಯಂತೆ ತಮ್ಮ ಗತಿ ಎಂದು ಗರುಡಾಚಾರ್ಯನೂ ಅವನಂತೆಯೇ ಅಪರಾಧಿಗಳ ಸಾಲಿಗೆ ಸೇರಿದ ಬೇರೆ ಗೃಹಸ್ತರೂ ಅಂದುಕೊಳ್ಳುತ್ತಾ ಸಂತಪ್ತರಾದರು ರಾಮದಾಸರಾಯನು ಅವರಿಗೆಲ್ಲಾ ಥೈರ್ಯಹೇಳುವು ದರಲ್ಲಿ ಕಡಿಮೆ ಮಾಡಲಿಲ್ಲ. ಹಾಗೆಯೇ ಆಲೋಚನೆ ಕೊಡುವುದರಲ್ಲಿಯೂ ಹಿಂಜರಿಯಲಿಲ್ಲ. ಶಾಬಯ್ಯನು ಪೂರ್ಣವಾಗಿ ಭೀಮಾಜಿಯ ಒಡನಾಟದಲ್ಲಿ ವಾಗ್ದೇವಿಯ ಪಕ್ಷವನ್ನು ಹಿಡಕೊಂಡು ಅವಳ ಅಹಿತರ ಸದೆಬಡಿಯುವದಕ್ಕೆ ಪವಿತ್ರಕರ್ತನಾಗಿರುವದು ನಿಸ್ಸಂದೇಹಕರವೇ! ವಿಮರ್ಶಾಧಿಕಾರಿಯು ಸತ್ಯ ವಂತನೆಂಬ ಖ್ಯಾತಿಯುಳ್ಳವನಾಗಿರುತ್ತಾ ಪ್ರಕೃತದ ವಿಚಾರದಲ್ಲಿ ಸತ್ಯಮಿಥ್ಯ ಪರಿಶೋಧನೆ ಮಾಡುವದರಲ್ಲಿ ಕೊಂಚವಾದರೂ ತಾತ್ಪರ್ಯಕೊಡಲಿಲ್ಲ. ಹೀಗಾಗುವ ಕಾರಣವೇ ತಿಳಿಯದು, ಕಾರ್ಭಾರಿಯೂ ಭೀಮಾಜಿಯೂ ಎಂಧೆಂಥ ವೈನಗಳನ್ನು ಯಾರೂ ತಿಳಿಯದ ಹಾಗೆ ಮಾಡಿರುವರೋ ಎಂಬ ವಿಕಲ್ಪ ಹುಟ್ಟಿತು. ‘ಷಡ್ಬಿರ್ಮನುಷ್ಯ ಚಿಂತಾನಾಂ ಸಪ್ತಮಂ ದೈವಚಿಂತಕಂ’ ಎಂಬ ನ್ಯಾಯಕ್ಕನುಸರಿಸಿ ಒಂದು ಪ್ರಯತ್ನವನ್ನು ಮಾಡಿ ನೋಡುವ ಆಸೆಯು ರಾಮದಾಸನ ಬೋಧನೆಯಿಂದ ಅವನ ಕಕ್ಷಿಗಾರರಲ್ಲಿ ಹುಟ್ಚಿತು. ಶಾಬಯ್ಯನು ತಮ್ಮ ಮೇಲೆ ಅನ್ಯಾಯ ನಡೆಸಬೇಕೆಂಬ ಪ್ರತಿಜ್ಞೆಮಾಡಿ ಕೊಂಡಿರುವನಾದುದರಿಂದ ಅವನ ಮುಂದೆ ತಮ್ಮ ಮೇಲೆ ತಕೋಣಾಗಿರುವ ಪ್ರಕರಣವನ್ನು ಅವನು ವಿಚಾರಣೆ ಮಾಡದಹಾಗೆ ಅಪ್ಪಣೆಯನ್ನೇಕ್ಷಿಸಿ ಮಾಡಿದೆ ಮನವಿಯನ್ನು ವಿಮರ್ಶಾಧಿಕಾರಿಯು ಚೆನ್ನಾಗಿ ಗ್ರಹಿಸಿನೋಡದೆ ತಳ್ಳಿ ಹಾಕಿದ ದೆಸೆಯಿಂದೆ ಅನೀತಿಯಾಗಿ ಛಾನಾಹಾನಿಯಾಗುವ ಕಾಲ ಬಂದೊದೆಗಿದೆ. ಆದಕಾರಣ ತಮ್ಮ ಮೇಲಿನ ಮೊಕದ್ದಮೆಯನ್ನು ಕಾರ್ಭಾರಿ ವಿನಾ ಬೇಕೆ ಯಾರಾದರೂ ವಿಚಾರಣೆಮಾಡಬೇಕೆಂದು ಬೇಡಿ ಇಂಧಾ ಮನವಿಗಳನ್ನು ತೀರಿಸಲಕ್ಕೆ ಅಧಿಕಾರವುಳ್ಳ ಕಿರಿಯ ದಿವಾನರ ಮುಂದಿ ಬಿನ್ನವತ್ತಳೆಯನ್ನು ಕಳುಹಿಸೋಣಾಯಿತು.

ಕಿರಿಯ ದಿವಾನರು ಅದೆನ್ನು ಚಂದವಾಗಿ ಓದಿನೋಡಿ ಮುನಷಿಯನ್ನು ಕರೆಸಿ “ನೀನು ಇದರಲ್ಲಿ ಏನಾದರೂ ಬಲ್ಲೆಯಾ? ಜನರ ಹಿತಾಹಿತಗಳನ್ನು ನೋಡುವ ಕೆಲಸ ನಮ್ಮದಲ್ಲವೇ? ಅವಸರದಿಂದ ಒಂದು ಹುಕುಂ ಬರೆದು ಹಾಕುವುದು ನ್ಯಾಯವೇನಯ್ಯ?” ಎಂದು ನುಡಿದನು. ಚೆಂದವಾಗಿ ತಿಳಿದು ಪ್ರಮೇಣ ಅರಿಕೆಮಾಡುವೆನು. ಸಾಂಪ್ರತ ಈ ಬಿನ್ನಹಪತ್ರವನ್ನು ವಿಮರ್ಶಾ ಧಿಕಾರಿಯ ಬಳಿಗೆ ಕಳುಹಿಸಿ ಅವನೇನು ಹೇಳುವದುಂಟೆಂದು ತಿಳುಕೊಳ್ಳು ವದು ಅತಿ ಅಗತ್ಯವಿದೆ ಎಂಬ ಆಲೋಚನೆಯನ್ನು ಮನಷಿಯು ಕೊಟ್ಟನು. ‘ವಾಸ್ತವ್ಯ, ಹಾಗಾಗಲಿ’ ಎಂದು ಕಿರಿದಿವಾನರ ಅಪ್ಪಣೆಯಾಯಿತು. ಮುನ ಷಿಯು ಅದರ ಮೇಲೊಂದು ತಾಕೀದು ಬರೆದು ವಿಮರ್ಶಾಧಿಕಾರಿಯ ಬಳಿಗೆ ಕಳುಹಿಸಿಕೊಟ್ಟನು. ಈ ವರ್ತಮಾನವು ಶಾಬಯ್ಯಗೆ ತಿಳಿಯಿತು. ಭೀಮಾಜಿ ಯನ್ನು ತತ್ಕಾಲ ಕರೆಸಿ ಮುನಸಿಗೆ ಬಾಯಿ ಸೀ ಮಾಡದೆಹೋದರೆ ಅವನು ಪಾಯಸದಲ್ಲಿ ಪಾದರಕ್ಷೆಯನ್ನು ಮುಳುಗಿಸಿಬಿಡುವನೇ ಸ್ಥೆ. ನಮ್ಮ ಮುಖ ಗಳಿಗೆ ಮಸಿ ಆಗುವದು” ಎಂದು ತಿಳಿಸಿದನು. ತಾಮಸಮಾಡದೆ ಭೀಮಾ ಜಿಯು ವಾಗ್ದೇವಿಯ ಕೂಡ ಪ್ರಸ್ತಾಪಿಸಿದನು. ಅವಳು ಕೂಡಲೇ ನೇಮ ರಾಜ ಸೆಟ್ಟಿಯಿಂದ ಸಹಸ್ರ ರೂಪಾಯಿಯನ್ನು ತರಿಸಿಕೊಂಡು ಒಂದು ಮುತ್ತಿನ ಕಂಠಿಯನ್ತು ಕೊಂಡುಕೊಂಡು ಆಶ್ರಮಕಾಲದ ಉಚಿತವೆಂದು ಮುನಷಿಗೆ ಅವನ ಆಪ್ತರ ಪರಿಮುಖ ಕಳುಹಿಸಿಕೊಟ್ಟಳು. ಅಷ್ಟರಲ್ಲಿ “ಮನವಿದಾರರು ಅನಾಹುತಗಾರರು ಹಣಸುಲಿಯುವ ಯೋಜನೆಯಿಂದ ಸಜ್ಜನರಿಗೆ ಉಪದ್ರಕೊಡುವ ಕಾಕಪೋಕರು ಶಾಬಯ್ಯನ ಮೇಲೆ ಹಾಕ ಲ್ಪಟ್ಟ ಅಪವಾದವು ಮಿಥ್ಯವೆಂದು ತೋರಿಬಂದಕಾರಣ ಮನವಿದಾರರ ಅರಿಕೆಯನ್ನು ಪೂರೈಸಲಿಕ್ಕೆ ನಿರಾಕರಿಸಿದೆನೆಂದು ವಿಮರ್ಶಾಧಿಕಾರಿಯು ಉದಾ ಹರಣೆಯನ್ನು ಬರೆದು ಕಳುಹಿಸಿದನು. ಅದು ತಲಪುವುದಕ್ಕೆ ಮುಂಚೆಯೇ ಮುನಷಿಯು ಸಾವಿರಾರು ರೂಪಾಯಿ ಮೌಲ್ಯದ ಕಂಠಿಯನ್ನು ಪೆಟ್ಟಿಗೆಯಲ್ಲಿ ಮಡಗಿ ಸಾನಂದವಾಗಿದ್ದನು. ಕಿರಿಯು ದಿವಾನನು ಮುನಹಿಯನ್ನು ಕರೆಸಿ “ಇದೇನಪ್ಪಾ, ನಿಮರ್ತ್ಶಾಧಿಕಾರಿಯ ಉತ್ತರಬಂದದೆ. ಅದು ಹಾಗಿರಲಿ ನಿಜ ಸ್ಥಿತಿ ತಿಳಿದು ಹೇಳೆಂದೆನಷ್ಟೆ. ಮರೆತುಬಿಟ್ಟೆಯಾ” ಎಂದು ಪ್ರಶ್ನೆಮಾಡಿದನು. ಪರಾಕೇ, ಸನ್ನಿಧಾನದ ಮಾತು ಮರವೆಗೆ ಬರುವದುಂಟೇೀ? ನಿಜವಾದ ಸಮಾಚಾರ ತರಿಸಿಕೊಂಡಿರುವೆ, ಮನವಿದಾರರ ವಾಗ್ವಾದವು ಸತ್ಯವಾದ್ದಲ್ಲ. ಮಠಾಗ್ರಹದಿಂದ ಅವರು ನಡೆಸುವ ಅಕೃತ್ಯಗಳನ್ನು ಸಹಿಸಕೂಡದಂತೆ; ಕಾರಭಾರಿಯಾಗಲೀ ವಿಮರ್ಶಾಧಿಕಾರಿಯಾಗಲಿೇ ಸತ್ಯವನ್ನು ವಿರೋಧಿಸು ವವರಲ್ಲ, ಸುಮ್ಮಗೆ ಅವರ ಮೇಲೆ ತೋಹ ಮತ್ತೂ ಹಾಕುವ ದುರಾತ್ಮ ರನ್ನು ದಬ್ಬಿಸಿಬಿಡೋದು ಉತ್ತಮ ಎಂದು ಮುನಷಿಯು ರಾಗ ಎಳದು ಮಾತಾಡಿದವನು. ಕಿರೀದಿವಾನರು ವೇದವಾಕ್ಯದಂತೆ ಮುನಷಿಯ ಮಾತಿನ ಮೇಲೆ ನಂಬಿಗೆ ಇಟ್ಟು ಮನವಿಯನ್ನು ತಳ್ಳಿಹಾಕಿದ್ದಾಗಿ ಹುಕುಂ ಬರೆಯು ವದಕ್ಕೆ ಅಪ್ಪಣೆ ಕೊಟ್ಟರು. ತಾಮಸವಿಲ್ಲದೆ ಹಾಗೆ ಅಪ್ಪಣೆ ಬರೆದಾಯಿತು. ಮನವಿಯು ಮರಳಿ ಕಳುಹಿಸಲ್ಪಟ್ಟೇ ತೀರಿತು.

ಈ ಅಪ್ಪಣೆಯು ಗರುಡಾಚಾರ್ಯನ ಕೈಗೆ ಸಿಕ್ಕುತ್ತಲೇ ಅವನು ಕಣ್ಣೀರಲ್ಲಿ ಮುಳುಗಿಸಲ್ಪಟ್ಟವನಂತಾದನು. ಆಹಾ! ಈ ರಾಮದಾಸನ ಮಾತು ಕೇಳಿ ಇಷ್ಟು ಅಪಜಯವೂ ಮಾನಭಂಗವೂ ಆಯಿತು! ಇನ್ನು ನಮಗೆ ಬರತಕ್ಕ ಕಂಟಕವು ಕಠಿಣವಾದ್ದೇ, ಕಾರ್ಭಾರಿಗೂ ವಿಮರ್ಶಾಧಿ ಕಾರಿಗೂ ಏಕಪ್ರಕಾರ ತಮ್ಮ ಮೇಲೆ ದ್ವೇಷ ಉಂಟಾಗುವ ಹಾಗೆ ನಾವೇ ಮಾಡಿಕೊಂಡಂತಾಯಿತೆಂಬ ತಾಪವು ಗರುಡಾಚಾರ್ಯರನ್ನು ಹೆಚ್ಚು ಪೀಡಿ ಸಿತು. ಕಾರ್ಭಾರಿಗಳ ಕಚೇರಿಯಿಂದ ಆಜ್ಞಾಪತ್ರಗಳು ಅಪರಾಧಿಗಳಿಗೆ ಬಂದು ತಲ್ಪಿದವು. ಯಾವ ದಿನ ಕಚೇರಿಗೆ ಬರಬೇಕೆಂದು ಅದರಲ್ಲಿ ಆಜ್ಞೆ ಯಿತ್ತ್ಕೋ ಆ ದಿನ ಅಪರಾಧಿಗಳು ಕಾರಭಾರಿಯ ಮುಂದೆ ಹಾಜರಾದರು. ವಾದಿಯನ್ನೂ ಅವನ ಪಕ್ಷದ ಸಾಕ್ಷಿಗಾರರನ್ನೂ ವಿಚಾರಣೆಗೆ ನಿಲ್ಲಿಸಿದರು. ಯಾಕುಬಖಾನನ ಸಾಕ್ಷಿ ಅಂದು ಆಗಲಿಕ್ಕೆ ಸಮಯ ಸಾಕಾಗಲಿಲ್ಲ. ರಾಮ ದಾಸರಾಯನು ತನ್ನ ಮೇಲೆ ಕಾರಭಾರಿಯು ದ್ವೇಷವಿಟ್ಟು ಏನು ಮಾಡಿ ಬಿಡುತ್ತಾನೋ ಎಂಬ ಹೆದರಿಕೆಯುಳ್ಳ ವನಾಗಿದ್ದರೂ ಎದೆಗುಂದಲಿಲ್ಲ. ಆದರೆ ಅವನ ತಂದೆಯು ಮಗನ ಉರಾ ಉರಿಯು ಅತಿಶಯವಾದ್ದೆಂದು ಬಲ್ಲವ ಮಾಡದಿದ್ದರೆ ಅವನ ಮುಂದಿನ ವೃದ್ಧಿಯು ಹಾಳಾಗುವ ಹಾಗಿನ ದಂಡನೆಗೆ ಪಾತ್ರನಾಗುವನೆಂಬ ಭಯದಿಂದ ಕೊತ್ವಾಲನ ಕಾಲಿಗಾದರೂ ಬಿದ್ದು ಸುಧಾ ರಿಸಿಕೊಳ್ಳಲಿಕ್ಕೆ ಸಂದರ್ಭವಾಗುವದಾದರೆ ನೋಡಿ ಬಿಡುವಾ ಎಂದು ಬೀದಿ ಯಿಂದ ಹೋಗುವ ವೇಳೆಯಲ್ಲಿ ಎದುರಿನಲ್ಲಿ ಯಾಕುಬಖಾನನು ಸಿಕ್ಕಿದನು. ಅವರಿಬ್ಬರಿಗೂ ರಹಸ್ಯವಾಗಿ ಸಂಭಾಷಣೆಯಾಯಿತು. ಕೊತ್ವಾಲನ ಕಾಲು ಹಿಡಿಯಲ್ಯಾಕೆ ಇನ್ನೊಬ್ಬನ ಕ್ಸ ಹಿಡಿಯಲ್ಯಾಕೆ? ರೂಪಾಯಿ ಮುನ್ನೂರು ನಗದಿಯಾಗಿ ಮಡಗಿಬಿಟ್ಟರೆ ಸಾಕ್ಷಿಹೇಳುವಾಗ ನಿಮ್ಮ ಮಗನನ್ನು ತಸ್ಪಿಸಿ ಬಿಡುವೆನೆಂದು ಆ ಖಾನನು ಹೇಳಿದ ಮಾತು ಮುದುಕನ ಮನಸ್ಸಿಗೆ ಬಂತು. ಮುನ್ನೂರು ರೂಪಾಯಿ ಹೆಚ್ಚಾಯಿತು, ಇನ್ನೂರು ಕೊಡುವೆನೆಂದು ಮುದುಕನು ವಾರ್ಜಿಕಮಾಡುವಾಗ ಇನ್ನೂರೈವತ್ತಾಗಬೇಕೆಂದು ಖಾನನು ಹಟಹಿಡಿದನು. ಕೊನೆಗೆ ಇನ್ನೂರ ಇಪ್ಪತೈದು ಕೊಡಲಿಕ್ಕೆ ಸಮ್ಮತಿಸಿದ ಮುದುಕನು ಯಾಕುಬಖಾನನನ್ನು ಮನೆಗೆ ಕರಕೊಂಡು ಹೋಗಿ ಅಷ್ಟು ಹಣವನ್ನು ಕೊಟ್ಟು ಮರ್ಯಾದೆ ಇರಿಸಿಕೊಳ್ಳುವ ಉಪಾಯವನ್ನು ಕೈ ಕೊಂಡನು.

ಮರುದಿನ ಯಾಕುಬಖಾನನ ವಿಚಾರಣೆ ಆಗುವಾಗ ವಾದಿಯ ಕಡೆ ವಕೀಲನು ಎಷ್ಟು ಬೇಡಿದರೂ ರಾಮದಾಸನ ವಿರೋಧದ ಒಂದು ಅಕ್ಷರ ವಾದರೂ ತುರುಕನ ಬಾಯಿಯಿಂದ ಹೊರಡಲಿಲ್ಲ. ಕಾರಭಾರಿಯು ಸಿಟ್ಟಿ ನಿಂದ ಔಡುಗಳನ್ನು ಕಚ್ಚಿಕೊಂಡು ಕಣ್ಣಾಲಿಗಳನ್ನು ಗರಗರನೆ ತಿರುಗಿಸಿ ಕಿಚ್ಚುಮೋರೆ ಮಾಡಿಕೊಂಡು ಯಾಕುಬಖಾನನನ್ನು ನುಂಗಿಬಿಡುವನೋ ಎಂಬಂತೆ ರೌದ್ರಾವತಾರ ತಾಳಿಕೊಂಡನು. ಖಾನನು ನಿರ್ಭೀತನಾಗಿ ರಾಮ ದಾಸನ ಗುಣಕ್ಕೂ ಉಳಿದ ಅಪರಾಧಿಗಳ ಅವಗುಣಕ್ಕೂ ಸಾಕ್ಷಿಕೊಟ್ಟನು. ರಾಮದಾಸರಾಯನನ್ನು ಬಿಡದೆ ಏನು ಮಾಡಬಹುದು? ಎಂದು ಬಹು ಪಶ್ಚಾತ್ತಾಪದಿಂದ ಕಾರ್ಭಾರಿಯು ಅವನನ್ನು ಬಿಟ್ಟು ಬೇರೆ ಪ್ರತಿವಾದಿಗಳ ಮೇಲೆ ಅಪರಾಧ ಪತ್ರವನ್ನು ಏರ್ಪಡಿಸಿ ಎದುರುಸಾಕ್ಷಿಗಳುಂಟೊ? ಎಂದು ಪ್ರಶ್ನೆಮಾಡಲು ಉಂಟೆಂದು ಅವರ ಕಡೆಯಿಂದ ರಾಮದಾಸರಾಯನು ಒಂದು ಇಡೀ ಥಾವು ಕಾಗದದಲ್ಲಿ ನೂರಾರು ಸಾಕ್ಷಿಗಾರರ ಹೆಸರುಗಳನ್ನು ಬರದುಕೊಟ್ಟನು. ಆ ಸಾಕ್ಷಿಗಾರರಿಗೆ ಆಜ್ಞಾಪತ್ರಗಳು ಹೊರಟವು. ಮಠದ ದ್ರವ್ಯವು ಮತ್ತಷ್ಟು ವ್ಯಯವಾಗುವ ಅವಶ್ಯವಾಯಿತು. ಪ್ರತಿವಾದಿಗಳ ಕಡೆ ಯಿಂದ ಬರಿಸಲ್ಪಟ್ಟ ಸಾಕ್ಷಿಗಾರರನ್ನು ತಿರುಗಿಸದೆ ಹೋದರೆ ಅವರ ಮೇಲಿನ ಪ್ರಕರಣವು ಬಲವಾಗುವದೆಂಬ ಹೆದರಿಕೆಯಿಂದ ಅನಂತ ಪಂಡಿತನ ಆಲೋ ಚನೆ ಪ್ರಕಾರ ತಾರತಮ್ಯಾನುಸಾರವಾಗಿ ಸಾಕ್ಷಿಗಾರರಗೆ ಲಂಚಕೊಡೋಣಾ ಯಿತು ಅವರಲ್ಲಿ ಅನೇಕರು ಪ್ರತಿವಾದಿಗಳ ಅವಗುಣಕ್ಕೆ ನುಡಿದರು. ಕೆಲ ವರು ಮಾತ್ರ ಎದುರು ಪಕ್ಷದ ಹಣವನ್ನು ತಿಂದು ಪ್ರತಿವಾದಿಗಳ ಗುಣದ ಸಾಕ್ಷಿನುಡಿದರು. ಅಡ್ಡವಿಚಾರಣೆಯಲ್ಲಿ ಸೋತುಹೋದರು. ಹೀಗಾಗಿ ಅವರ ಸಾಕ್ಷದ ಭಾರವು ಲಘುವಾಯಿತು. ಕಾರಭಾರಿಯು ಗರುಡಾಚಾರ್ಯರಿಗೂ ಪದ್ಮನಾಭ ಉಂಗ್ರುತ್ತಾಯಗೂ ಪ್ರತಿಯೊಬ್ಬನಿಗೆ ಇನ್ನೂರು ರೂಪಾಯಿ, ಅಪರಾಧಿಗಳಿಗೆ ಐವತ್ತು ರೂಪಾಯಿ ಅಪರಾಧ ನಿಶ್ಚೈಸಿ ಬಲವಾದ ತೀರ್ಪು ಬರೆದು ವಾಗ್ದೇವಿಯ ನಿರಂತರ ಪ್ರೇಮಕ್ಕೆ ಅರ್ಹನಾದನು. ಮೊಕದ್ದಮೆಯು ತೀರ್ಮಾನವಾದ ತರುವಾಯ ಕೊತ್ವಾಲನೂ ಕಾರಭಾರಿಯೂ ಯಾಕು ಬಖಾನನ ಮೇಲೆ ಜರದುಬಿದ್ದರು. ರಾಮದಾಸನ ಬಚಾವಿಗೆ ಸುಳ್ಳು ಸಾಕ್ಷಿ ನುಡಿದನೆಂದು ಅವನಿಗೆ ವಿವಿಧ ರೀತಿಯಲ್ಲಿ ಗದರಿಸಿದರು. ಪಠಾನನಾದ ಅವನು ರವಷ್ಟಾದರೂ ಹೆದರದೆ ಸರಿಯಾದ ಮಾರುತ್ತರಗಳನ್ನು ಕೊಟ್ಟು ಇಬ್ಬರಿಗೂ ಬಾಯಿಮುಚ್ಚಿಸಿಬಿಟ್ಟನು. ಅವನು ಸಿಕ್ಕಿಬೀಳುವ ಹಾಗಿಲ್ಲದ ಸಂಧಿಯಲ್ಲಿ ಆ ತುರುಕನನ್ನು ಪೀಡಿಸಿದರೆ ಸರ್ಪನ ಬಾಲ ಮೆಟ್ಟಿದಂತಾಗುವ ದೆಂಬ ಭಯದಿಂದ ಅವರಿಬ್ಬರೂ ಸುಮ್ಮಗಿರಬೇಕಾಯಿತು. ಬಿಡುಗಡೆ ಹೊಂದಿದ ರಾಮದಾಸರಾಯನು ಮೀಸೆಯ ಕೊನೆಗಳನ್ನು ತಿರುಹುತ್ತಾ– “ಯಾರಾದರೆ ಏನು? ನನಗೆ ಏನು ಲಕ್ಷವಿದೆಯೇ? ಮುಂದಾಗುವ ತಮಾಷೆ ಬೇರೆಯೇ ಅದೆ. ಕ್ರಮೇಣ ನೋಡಬಹುದು” ಎಂದು ಬಹಿರಂಗವಾಗಿ ಗಳಹಿದನು.

ಕಾರ್ಭಾರಿಯು ಕೊಟ ತೀರ್ಪಿನ ನಕಲು ಪಡಕೊಂಡು ಅಪರಾಧಿಗಳ ಕಡೆಯಿಂದ ವಕಾಲತ್ಟು ತೆಗೆದುಕೊಂಡ ರಾಮದಾಸನು ವಿಮರ್ಶಾಧಿಕಾರಿ ಗಳ ಮುಂದೆ ವಿಮರ್ಶೆ ಮನವಿಯನ್ನು ಕೊಟ್ಟನು. ತನ್ನನ್ನು ದೂರಿ ಅಪರಾಧಿ ಗಳು ಮನವಿ ಮಾಡಿದ್ದಕ್ಕಾಗಿ ವಿಮರ್ಶಾಧಿಕಾರಿಯ ಮನಸ್ಸಿನಲ್ಲಿ ಕಠಿಣ ವಾದ ಕೋಪವಿತ್ತು. ಆದರೂ ಅವನು ನಿಧಾನವಾಗಿ ಆಲೋಚಿಸಿ ಕಾರ್ಭಾ ರಿಯು ಪ್ರಕರಣದ ಲವಾಜಮೆಗಳನ್ನು ಬಹುಚಾತುರ್ಯದಿಂದ ಸಂಗ್ರಹಿಸಿ ಜಾಗ್ರತೆಯಿಂದ ಬರದ ತೀರ್ಪನ್ನು ಚೆನ್ನಾಗಿ ಓದಿನೋಡಿ ಉಭಯ ಕಕ್ಷಿ ಗಾರರ ಕಡೆ ರುಜುವಾತನ್ನು ಪರಿಶೋಧಿಸಿ ಕಾರಭಾರಿಯು ತೀರ್ಪುನ್ಯಾಯ ವಾದ್ದೆಂತ ನಿರ್ಣಯಿಸಿದನು.

ಕುಮುದಪುರದಲ್ಲಿರುವ ಬ್ರಾಹ್ಮಣ ಮಂಡಳಿಯ ಪ್ರಮುಖರು ಕಾರ್ಭಾ ರಿಯ ಮತ್ತು ಭೀಮಾಜಿಯ ಮೇಲೆ ವಿಮುಖರಾದರು. ವಿಮರ್ಶಾಧಿಕಾರಿಯ ಮೇಲೆಯೂ ಅವರು ವೈಮನಸ್ಸು ತಾಳಿದರು. ಗರುಡಾಚಾರ್ಯನೂ ಅವನ ಸಂಗಡ ಅಪರಾಧಹಾಕಲ್ಪಟ್ಟವರೂ ಮೃತಪ್ರಾಯವಾಗಿ ಊರೊಳಗೆ ಮುಖ ತೋರಿಸಲಿಕ್ಕೆ ನಾಚಿ ಮುಂಡಾಮೋಚಿಕೊಂಡವರಂತೆ ಮನೆಯ ಒಳಗೆ ಸೇರಿ ಕೊಂಡರು. ರಾಮದಾಸರಾಯನು ಪಟ್ಟಣದ ಬ್ರಹ್ಮಸಮೂಹವನ್ನು ಚತು ರೋಪಾಯದಿಂದ,ಒಗ್ಗಟ್ಟು ಮಾಡಿ ಮಠದ ಮೇಲೆ ಅವರು ತಿರುಗಿಬೀಳುವಂತೆ ಭಗೀರಧಪ್ರಯತ್ನ ಮಾಡುವದರಲ್ಲಿ ಬಿದ್ದನು. ವಿಮರ್ಶಾಧಿಕಾರಿಯ ತೀರ್ಮಾನದ ಮೇಲೆ ಕಿರಿಯ ದಿವಾನರ ಮುಂದೆ ಪುನರ್ವಿಮರ್ಶೆ ಮನವಿ ಯನ್ನು ಕೊಡಲಿಕ್ಕೆ ಬರೇ ಜುಲುಮಾನೆಯ ವಿಧಿಯಾದ ಕಾರಣ ಕಾನೂನಿನ ನಿಬಂಧನೆ ಇಲ್ಲದೆ. ಅಸಂದರ್ಭವಾಯಿತು. ಈ ಮೂರು ಅಧಿಕಾರಿಗಳು ಪೂರ್ಣವಾಗಿ ಮಠದ ಅಭಿಮಾನವನ್ನು ಕಾಯಲಿಕ್ಕೆ ಬದ್ಧಕಂಕಣರಾಗಿರುವ ರೆಂದು ಬ್ರಾಹ್ಮಣರೆಬ್ಲರೂ ಅಭಿವ್ರಾಯಪಟ್ಟು ಭವಿಷ್ಯಚಿಂತನೆಯಲ್ಲಿರುವಾಗ ಸಣ್ಣದೊಂದು ಕದನ ನಡೆಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮಾರ್ಥಿ-ಸ್ವಾರ್ಥಿ
Next post ಮುಂದೆ ಸಾಗು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys