ರಮೇಶ್ ಬೆಳಗೆದ್ದು ಕಾಫಿ ತೆಗೆದುಕೊಂಡು ಕ್ಷೌರ ಮಾಡಿಕೊಳ್ಳುತ್ತ ಕುಳಿತಿದ್ದಾನೆ. ಕ್ಲಾರ್ಕ್ ನರಸಿಂಹಯ್ಯನು ಬಂದು ಕಾಣಿಸಿಕೊಂಡನು. “ಏನ್ರಿ, ನಿಮಗೊಂದು ವಿಚಾರ ಹೇಳಬೇಕೂಂತಿದ್ದೆ. ನೀವು ಒಂದು ಎಂಟು ದಿನ ಬಿಟ್ಟುಕೊಂಡು ಪಿಳ್ಳೇಗೌಡನ ಎಸ್ಟೇಟಿಗೆ ಹೋಗಿ ಬನ್ನಿ, ಅಲ್ಲಿ ಒಬ್ಬರು ಸನ್ಯಾಸಿ ಇದ್ದಾರೆ. ನಿಮ್ಮಂತಹವರು ಅವರನ್ನು ನೋಡಿದರೆ ಬಹಳ ಸಂತೋಷ ಪಡುತ್ತೀರಿ.” “ಹಾಗಾದರೆ ತಾವು ಅಲ್ಲಿಗೇನೇನು ಹೋಗಿದ್ದುದು ?” “ಯಾಕೆ, ನಾನು ನಿಮಗೆ ಹೇಳಿದ್ದೆನಲ್ಲ. ಎಲ್ಲಿ ಹೋದರೂ ಸನ್ಯಾಸಿಗಳನ್ನ ನೋಡೋಕೆ ಅಂತ ಹೇಳಿರಲಿಲ್ಲ. ನಾನೂ ಏನೋ ಅಂದುಕೊಂಡು ಹೋದೆ. ಭಾರಿ ಬಂದೂಕ. ಅದು ಜೋಡು ನಲ್ಲಿ, ಡು ಯೂ ಬಿಲೀವ್ ನರಸಿಂಹಯ್ಯ, ನನಗೂ ಆತನ ಎದುರು ಮಾತನಾಡೋಕೆ ದಿಗಿಲಾಯ್ತು” “ತಮಗೆ ಏನು ಹೇಳಿದರು ಸ್ವಾಮಿ ?” “ಅವರು ಪ್ರಾಣೇಶನ ಫಾದರ್ಸ್ ಫ್ರೆಂಡ್ ಅಂತೆ. “ರವರಿಗೆ ಬಹಳ ಆಯಿತು. ನನಗೇನು, ನಮ್ಮಿಬ್ಬರಿಗೂ ಹೇಳಿದ್ರು ಪ್ರಾಕ್ಟಿಸ್ ಬಿಟ್ಟು ದೇವರ ಪೂಜೆ ಮಾಡಿಕೊಂಡಿರಿ ಅಂತ.
“ತಾವು ಏನು ಹೇಳಿದಿರಿ ಸ್ವಾಮಿ. “ಅಂಥಾವರೆದುರು ಏನು ಹೇಳೋಕೆ ಆಗುತ್ತೆ? ದಟ್ ವಾಸ್ ಎ ವಂಡರ್‌ಫುಲ್ ಎಕ್ಸ್‌ಪೀರಿಯನ್‌ಸ್. ಐ ಕುಡ್ ನಾಟ್ ಫೈಂಡ್ ವರ್ಡ್ಸ್ ಟು ರಿಜಿಸ್ಟರ್ ಮೈ ಪ್ರೊಟೆಸ್ಟ್ ಅಲ್ಲದೆ. ಮೈ ಫ್ರೆಂಡ್, ಯೂ ನೋ ಮಿ. ನಾನು ಅಷ್ಟು ಪ್ಯೂರಿಸ್ಟ್ ಆಗಿರೋದು ಸಾಧ್ಯವಿಲ್ಲ. ಅವರು ಹೆದರಿಸಿಯೂ ಇದ್ದಾರೆ. ಕಪ್ ಈಸ್ ಪುಲ್, ಅಂತ ವಾರ್ನಿಂಗ್ ಕೂಡ ಕೊಟ್ಟರು. ಅವರ ವಾರ್ನಿಂಗ್ ಐಡಲ್ ಅಂತಲೂ ಅನ್ನಿಸಿತು. ಆದರು ರಮೇಶ್ ಕಾನ್ಟ್ ಹೆಲ್ ಇಟ್, ಟೂ ಹಾರ್ಡ್‌ಬೇಕ್‌ಡ್.” “ತಮಗೆ ಹೇಳಿದ ಎಕ್ಸಾಕ್ಸ್ ವರ್ಡ್ಪ್ರೆಸ್ ಏನು ಸ್ವಾಮಿ ?” “ಗುಡ್, ಎಷ್ಟೇ ಆಗಲಿ ಲಾಯರ್ ಗುಮಾಸ್ತೆ ಅಲ್ಲವೆ ? ಕ್ರಾಸ್ ಮಾಡುತ್ತಿ ದ್ದೀರಿ ??? “ಅಲ್ಲ ಸ್ವಾಮಿ, ಅವರು ಏನೆಂದರು ? ತಾವೇನು ಅಪ್ಪಣೆ ಕೊಡಿಸಿದಿರಿ, ಗೊತ್ತಾದರೆ ಅಲ್ಲವೆ ಸ್ವಾಮಿ, ತಮ್ಮ ಸ್ಟೇಟ್‌ಮೆಂಟನ ಫುಲ್ ಪೋರ್ಸ್ ತಿಳಿಯೋದು? ಅದಕ್ಕೆ ಕೇಳಿದೆ.”
“ಐ ಸೀ, ಅವರು ಆಡಿದ್ದರಲ್ಲಿ ಎರಡು ಮೂರು ಮಾತು ಬಹಳ ಸರಿ. ಮೊದಲನೆಯದಾಗಿ ನಾನು ಹೇಳುತ್ತೀನಲ್ಲ, ಪೈರೋ ಟೆಕ್ನಿಕ್ಸ್ ಇನ್ ವರ್ಡ್ಸ್, ಅದಕ್ಕೇ ಚೆನ್ನಾಗಿ ಕೊಟ್ಟರು. ಪ್ಲಾಟ್ ಫಾರಂ ಮೇಲೆ ನಿಂತರೆ ನಮ್ಮ ಋಷಿಗಳ ದೇಶ ಅಂತೀರಿ, ಮನೇಲೆಲ್ಲ ಆಕ್ಸ್‌ಫರ್ಡ್ ಕ್ರೇಂಬಿಜ್ ಮಕ್ಕಳಾಗಿದ್ದೀರಿ ಅಂತ ಜಡಿದರು. ಆಮೇಲೆ, ದೇಹದೊಳಗೆ ಒಬ್ಬ ಆತ್ಮ ಇದ್ದಾನೆ ಅಂತ ನಂಬಿ ಅಂದರು. ಮಾಡುವ ಕೆಲಸ ಕೆಲಸದಲ್ಲೂ ಪಾಪ ಬರುತ್ತೆ ಅದು ಕಳೆದುಕೊಳ್ಳೋಕೆ ಪೂಜೆ ಮಾಡಿ ಅಂದರು. ಕೊನೆಯದಾಗಿ ಬಹಳ ವೆನ್‌ಮೆಂಟಾಗಿ ‘ಮೈ ಮಾತ್ರ ಕೊಳೆಯಾದರೆ, ಸೋಪ್ ಹಾಕಿದ್ದೂ ಹಾಕಿದ್ದೇ. ಮನಸ್ಸಿನ ಕೋಳೇನೂ ಹಾಗೆ ಏತಕ್ಕರೀ ತೊಳೆಯೋಲ್ಲಾ?” ಎಂದರು. ಡು ಯು ನೋ ? ಹೌ ಅಥಾರಿಟೆಟಿವ್ ಅಂಡ್ ಡಿಕ್ಟೇಟೋರಿಯಲ್ ಹಿ ವಾಸ್ ? ಮೈ ಗಾಡ್ ?” “ತಾವೇನಂದಿರಿ ಸ್ವಾಮಿ ?” “ಅನ್ನೋದೇನು ? ಹುಲಿ ಎದುರಿಗೆ ಹೋದ ಕುರೀ ಹಾಗೆ ಸರಿಸರಿ ಅಂತ, ತಪ್ಪಿಸಿಕೊಂಡು ಬಂದರೆ ಸಾಕು ಅಂತ ಬಂದುಬಿಟ್ಟೆವು. ಡು ಯು ನೋ ಐಸೆ? ಅವರು ಥಾಟ್ ರೀಡಿಂಗ್ ಚೆನ್ನಾಗಿ ಬಲ್ಲರು.” “ಅದು ತಮಗೆ ಹೇಗೆ ತಿಳಿಯಿತು ಸ್ವಾಮಿ ?” ‘ಇಟ್ ವಾಸ್ ಈಸಿ, ಅಸ್ ಆಬ್ಬಿಯಸ್ ಅಸ್ ದಿ ಬ್ರಾಡ್ ಡೇ ಲೈಟ್ ಅವರು ಹೇಳತಾ ಇದ್ದರೆ ಮನಸ್ಸಿನಲ್ಲಿ ಇದೆಲ್ಲಾ ಯುಟೋಪಿಯನ್, ಕೆಲಸಕ್ಕೆ ಬಾರದ್ದು. ನಾಟ್ ಟು ದಿ ಪಾಯಿಂಟ್’ ಎಂದುಕೊಂಡೆ. ಕೂಡಲೇ ‘ನೀವಿನ್ನು ಹೊರಟುಬಿಡಿ. ಇನ್ನು ಎಂಟು ದಿನ ನಮಗೆ ಮೌನ’ ಎಂದರು. ಪ್ರಾಣೇಶ್‌ಗೆ ಇನ್ನೂ ಮಾತನಾಡಬೇಕು ಎಂದು ಇತ್ತೇನೋ ? ಅವನಿಗೆ ಬಹುಶಃ ಡಿಸ್ಕ್ ಅಪಾಯಿನ್‌ಟ್ ಆಗಿರಬೇಕು.” “ತಮ್ಮ ಅಭಿಪ್ರಾಯ ಏನು ಸ್ವಾಮಿ ?” ಅಂಥಾವರ ಮೇಲೆ ನಮ್ಮ ಅಭಿಪ್ರಾಯ ಅನ್ನೋದು ಪ್ರಿಪಾಸ್ಟರಸ್. ಆದರೂ, ಹೇಳದೆ ಇರುವುದು ಹೇಗೆ ? ಅದರಿಂದ ಹೇಳೋದು. ಅಂಥಾವರು ಪ್ಲೇನ್‌ನಲ್ಲಿ ಹೋಗುವವರು. ನಾವು ಜಟಕಾ ಗಾಡಿಯವರು. ಅವರು ಹೇಳಿದ್ದು ಮಾಡೋಕೂ ನಮ್ಮಿಂದ ಸಾಧ್ಯವಿಲ್ಲ. ನೀವು ಎಷ್ಟಾದರೂ ಜಪ, ದೇವತಾರ್ಚನೆ ಇಟ್ಟುಕೊಂಡಿರುವವರು ನೀವು ಹೋಗಿಬನ್ನಿ ಅವರಿಂದ ನಮಗಿಂತ ನಿಮಗೆ ಹೆಚ್ಚು ಪ್ರಯೋಜನವಾಗಬಹುದು. “ತಾವು ಲೀವ್ ಕೊಡುತ್ತೀರಾ ಸ್ವಾಮಿ ?” “ನಾವು ಸದ್ಯದಲ್ಲಿ ತಿರುಪತಿಗೆ ಹೋಗಿ ಬರಬೇಕು ಅಂತ ಇದ್ದೇವೆ. ಆಗ ನೀವು ಹೋಗಿ ಬನ್ನಿ. ~ “ಎಲ್ಲಿ ಸ್ವಾಮಿ ? ತಾವಿಲ್ಲದೆ ಇದ್ದರೆ ಚಿಕ್ಕರಾಯರಿಗೆ ನೋಟ್‌ಗೀಟ್ಸ್ ಬೇಕಾದರೆ ? ಇರದಿದ್ದರೆ ಹೇಗೆ ?”
“ಅದೂ ನಿಜ. ಹಾಗಾದರೆ ಬರುವ ವಾರ ಹೋಗಿ ಬನ್ನಿ. ನೀವು ಬಂದಮೇಲೆ ನಾವು ಹೋಗುತ್ತೇವೆ. ಅಷ್ಟರೊಳಗಾಗಿ ನಾನೂ ಪ್ರಾಣೇಶ್ ಆ ಡೀಡ್ ಮುಗಿಸುತ್ತೇವೆ. ಏನ್ರಿ, ನಮ್ಮ ಅನಾಥಾಲಯಕ್ಕೆ ಪಿಳ್ಳೇಗೌಡನೂ ಒಬ್ಬ ಟ್ರಸ್ಟಿ ಆದರೆ ಒಳ್ಳೆಯ ದಲ್ಲವೆ ??? “ಮನುಷ್ಯನೂ ಒಳ್ಳೆಯವ. ಕಾಲಧರ್ಮಕ್ಕೂ ಅನುಗುಣವಾಗಿರುತ್ತದೆ. ಆಗಬಹುದು. “ನೀವು ಸೆಕ್ರೆಟರಿ ಆಗುತ್ತೀರೋ ?” “ತಾವಿದ್ದ ಮೇಲೆ ನಾನೆಲ್ಲಿ ಹೋಗೋದು ? ಆದರೆ ಸೆಕ್ರೆಟರಿಯಾಗಿ “” “ಹೌದಿರಿ, ಇರಿ, ಹೇಳುತೀನಿ. ಆ ಐದನೆಯ ರೋಡಿನ ಮನೆಯಿದೆ ನೋಡಿ. ಅಲ್ಲಿ ಅನಾಥಾಲಯ. ಈಗ ಸದ್ಯಕ್ಕೆ ಐವತ್ತು ಸಾವಿರ ರೂಪಾಯಿ ಕ್ಯಾಪಿಟಲ್ ಫಂಡ್. ನನ್ನ ಇನ್‌ಪ್ಯೂರೆನ್‌ಸ್ ಹಣ ಕೂಡ ಅದಕ್ಕೇ. ಪ್ರೊಫೆಸರ್ ಶತಾನಂದ ಇದ್ದಾರಲ್ಲ: ಅವರು, ಪ್ರಾಣೇಶ್, ಗೌಡ, ನೀವು, ನಾನು, ಟ್ರಸ್ಟಿಗಳು. ಆ ಪ್ರಾಣೇಶ್ ಈ ವೇಳೆಗೆ ಬರಬೇಕಾಗಿತ್ತು. ಇನ್ನೂ ಬಂದಿಲ್ಲ.” “ಇಗೋ, ಸ್ಕೂಲ್ ಹುಡುಗರು ಹೇಳುವಹಾಗೆ, ಪ್ರೆಸೆಂಟ್, ಸಾರ್. “ಅಗೋ ಬಂದ; ಪ್ರಾಣೇಶ್, ನಿನಗೆ ನೂರು ವರ್ಷ ಆಯುಸ್ಸು. ನಾನು ನರಸಿಂಹಯ್ಯನ್ನ ಆ ಸನ್ಯಾಸಿಗಳನ್ನು ನೋಡೋಕೆ ಹೋಗಿ ಬನ್ನಿ ಅಂತ ಹೇಳಿದೆ. ವಾಟ್ ಈಸ್ ಯುವರ್ ಒಪಿನಿಯನ್ ?”
“ನರಸಿಂಹಯ್ಯ ಅಲ್ಲಿಗೆ ಹೋದರೆ ಅವರ ಹಿಂದೆಯೇ ಹೊರಟು ಹೋಗುತ್ತಾರೆ.” “ಅದೇನು ಸ್ವಾಮಿ ಹಾಗಂತೀರಿ ?” “ನಿಮ್ಮ ಕಲ್ಟರ್ ಅಂಥಾದ್ದು, ನಿಮಗಿರೋ ಶ್ರದ್ಧೆ ನಮಗೆಲ್ಲಿಂದ ಬರಬೇಕು ? ನಾವೆಲ್ಲ ಬುಡಬುಡಿಕೆಗಳು.
“ಉಂಟೆ ಸ್ವಾಮಿ? ನೀವೆಲ್ಲ ಓದಿದವರು. ಡಬ್ಬಲ್ ಗ್ರಾಜ್ಯುಯೇಟ್ಸ್ ನಿಮಗಿಲ್ಲದ ಕಲ್ಕರ್ ನಮಗೆಲ್ಲಿಯದು ?” “ಹಾಗೆನ್ನಬೇಡಿ. ನಾವು ಓದಿದ್ದೇವೆ. ನಮಗೆ ಪಾಲಿಷ್ ಬಂದಿದೆ. ಆದರೆ ಹೃದಯ ಪಾಷಾಣವಾಗಿಯೇ ಇದೆ. ಅದು ಮೆತ್ತಗಾಗುವುದೇ ಕಲ್ಟರ್, ನೋಡಿ. ನರಸಿಂಹಯ್ಯ, ನಮ್ಮ ಇಂಡಿಯನ್ ಕಲ್ಟರ್‌ನಲ್ಲಿ ಕಾನ್‌ಕ್ರೀಟ್, ಅಬ್‌ಸ್ಟ್ರಾಕ್ಟ್ ಎರಡಕ್ಕೂ ಬಹಳ ಸಂಬಂಧ. ಅಬ್‌ಸ್ಟ್ರಾಕ್ಟ್ ಒಂದನ್ನೊಂದು ಬಿಟ್ಟಿಲ್ಲ. ಇದನ್ನು ಕಂಡು ಅದನ್ನ ಅದನ್ನ ನೆನೆದಾಗ ಇದನ್ನ ತಂದಿಟ್ಟುಕೊಂಡು ಬ್ಯಾಲೆನ್‌ಸ್ ಮಾಡಬೇಕು. ಇದಕ್ಕೆ ಶ್ರದ್ಧೆ ಬೇಕು. ಅದು ನಮಗಿಲ್ಲ. ನಮಗೆ ಅದಿದ್ದಾಗ ಇದಿಲ್ಲ: ಇದಿದ್ದಾಗ ಅದಿಲ್ಲ. ನೀವು ನೋಡಿ, ಮೂರ್ತಿಪೂಜೆ ಮಾಡಿ ಪರಮಾತ್ಮಎಂದು ಸುಲಭವಾಗಿ ನುಡಿದುಬಿಡುತ್ತೀರಿ. ನಮ್ಮಿಂದ ಆಗೋಲ್ಲ”
“ರಮೇಶ್, ಪೂಜೆ ಅನ್ನತ್ತಲೂ ನೆನಪಾಯಿತು. ಸ್ವಾಮಿಗಳು ಹೇಳಿದ ಶಿವಪೂಜೆ ಏನು ಮಾಡಿದೆ?? “ನೀನೇನು ಮಾಡಿದೆ ?” – “ಸದ್ಯದಲ್ಲಿ ಒಬ್ಬ ದೇವರ ಪೂಜೆ ಬ್ರಾಹ್ಮಣನ್ನ ಇಡೋದು. ಕಾಲಕ್ರಮದಲ್ಲಿ ನಾನೇ ಆರಂಭಿಸೋದು.” “ಐ ಡೋಂಟ್ ಲೈಕ್ ಇಟ್. ಮಾಡಿದರೆ ನಾವು ಮಾಡಬೇಕು. ಅಲ್ಲವಯ್ಯಾ, ನರಸಿಂಹಯ್ಯಾ, ನೀವು ಕೋಪ ಮಾಡಿಕೊಳ್ಳಬೇಡಿ, ಅಲ್ಲರೀ, ನಮ್ಮ ಹತ್ತಿರ ಆಶ್ರಯಕ್ಕೆ ಬಂದೋನ ಆಶೀರ್ವಾದ ನಮಗೆ ಫಲಿಸತ್ತೆ ಏನ್ರಿ ? ಆಶೀರ್ವಾದ ಎಂದರೆ ಮಳೆ ಬಂದಹಾಗೆ ಮೇಲಿಂದ ಬರಬೇಕು. ಅದು ಕ್ರಿಶ್ಚಿಯನ್ ಗ್ರೇಸ್, ಮಳೆ ಕೊಡುತು ಅಂತ ಮೋಡಕ್ಕೆ ನೀವು ಏನು ಕೊಡಬಲ್ಲಿರಿ ? ಅದು ಬಿಟ್ಟು ಹೊಟ್ಟೆಗಿಲ್ಲ ಒಂದು ರೂಪಾಯಿ ಕೊಡಿ ಅಂತ ಬಂದೋನು ಮಂತ್ರ ಹೇಳಿ ಆಶೀರ್ವಾದ ಮಾಡುವುದಕ್ಕೆ ಕೈಯೆತ್ತಿದರೆ, ನನಗೆ ತಕ್ಷಣ ‘ಹೀಲ್ ದೈ ಸೆಲ್ಫ್, ಡಾಕ್ಟರ್’ ಅನ್ನಬೇಕು ಅನ್ನಿಸತದೆ.” ರಮೇಶ್ ದುಡುಕಿದ, ಈಗ ನರಸಿಂಹಯ್ಯ ನಿನ್ನ ಹತ್ತಿರ ಕ್ಲಾರ್ಕ್ ಆಗಿದ್ದಾರೆ, ಆದರೆ ಯೂ ಡೋನ್‌ಟ್ ಅಲ್ಯೂಮ್ ದಟ್ ಯೂ ಆರ್ ಹಿಸ್ ಸೀನಿಯರ್ ಸ್ಪಿರಿಚುಯಲಿ, ಈಗ ನೀನು ಅವರ ಆಶೀರ್ವಾದ ಕೇಳಬೇಕೋ, ಅವರು ನಿನ್ನ ಆಶೀರ್ವಾದ ಕೇಳಬೇಕೋ ?” “ಅವರು ಆನೆಸ್ಟ್ ಆಗಿ ದುಡಿತಾರಯ್ಯ ! ನಾವೊಂದರಲ್ಲಿ ಹೆಚ್ಚಾದರೆ ಅವರಲ್ಲಿ ಇನ್ನೊಂದರಲ್ಲಿ ಹೆಚ್ಚು ಅಂತ ಮನಸ್ಸು ಒಪ್ಪತ್ತೆ? ಅದಿಲ್ಲದೆ ಬರಿಬರಿದೇ ಫೀಸಿಂಗ್‌ಗೆ ಬರೋನ್ನ ಕುರಿತು ನಾನು ಹೇಳಿದ್ದು’ “ನೋ, ಐ ಡೋನ್‌ಟ್ ಅಗ್ರಿ ವಿತ್ ಯೂ ದೇರ್ ! ಈಗ ಸ್ವಾಮಿಗಳಿಗೆ ಹಿಂದಿಲ್ಲ ಮುಂದಿಲ್ಲ. ಅವರು ಗೌಡರ ಆಶ್ರಯದಲ್ಲಿದ್ದಾರೆ. ಹಾಗೆಂದು ಗೌಡರು ಅವರಿಗಿಂತ ಹೆಚ್ಚು ಎನ್ನೋಣವೇನು? ನಮ್ಮವರು ಬೇಕುಬೇಕು ಎನ್ನುವುದಕ್ಕಿಂತ ಬೇಡಬೇಡ ಎನ್ನುವುದಕ್ಕೆ ಹೆಚ್ಚು ಬೆಲೆಕೊಟ್ಟು ವೈರಾಗ್ಯದ ತಳಹದಿಯ ಮೇಲೆ ಲೈಫ್ ಕಟ್ಟಿದ್ದರು. ಅದರಿಂದ ನೀನು ಬಡವರನ್ನು ಕನ್‌ಡೆಮ್ಸ್ ಮಾಡಬೇಡ.” * ‘ “ಅಲ್ಲವಯ್ಯಾ, ನಾನು ಬಡವರನ್ನು ಕಂಡೆಮ್ಸ್ ಮಾಡೋಕೆ ಹೊರಟಿಲ್ಲ, ಬಡತನ ಸಹಿಸಲಾರದೆ ತಮ್ಮ ಸರ್ವಸ್ವವನ್ನೂ ಆ ಮಾರಿಗೆ ಬಲಿಕೊಟ್ಟು ತಮ್ಮ ಸ್ಪಿರಿಚುಯಾಲಿಟಿಯನ್ನೂ ಬಡತನದ ಬಾಧೆ ಕಳೆದುಕೊಳ್ಳುವುದಕ್ಕೆ ಮಾರಿಕೊಳ್ಳುತ್ತಾರಲ್ಲ ಅಂಥವರನ್ನು ಕುರಿತು ನಾನು ಹೇಳಿದ್ದು.” “ಆ, ಆ, ದಟ್ಸ್ ದಿ ಲಾಯರ್ ಇನ್ ಯು.” “ಸ್ವಾಮಿ, ನನಗೇನಾದರೂ ಇನ್‌ಸ್ಟಕ್ಷನ್ ಇದೆಯೇ ಸ್ವಾಮಿ? ಎಂಟೂವರೆ ಆಗುತ್ತಾ ಬಂತು ?? “ಡು ಯು ಸೀ ಹೌ ಈಸಿಲಿ ನರಸಿಂಹಯ್ಯ ಟೆಲ್‌ಸ್ ಅಸ್ ದಟ್ ವಿ ಆರ್ ನೇಸ್ಟಿಂಗ್ ಟೈಮ್ !”
“ಅದೂ ನಿಜವೇ ! ದೇವರ ಪೂಜೆ ಮಾಡಿಸು, ನಾನು ಹೊರಡುತ್ತೇನೆ.” “ಕಾಫಿ ಬರಲಿ, ತಡಿ, ನಾನೂ ಯೋಚನೆ ಮಾಡಿದೆ. ಐ ಡೋನ್‌ಟ್ ಥಿಂಕ್ ಐ ಅಕ್ಸೆಪ್ಟ್ ದಟ್. ಸದ್ಯದಲ್ಲಿ ದಿನಕ್ಕೆ ನಾಲ್ಕಾಣೆಯಂತೆ ತಿಂಗಳಿಗೆ ಏಳೂವರೆ ರೂಪಾಯಿ, ವರ್ಷಕ್ಕೆ ೯೦ ರೂಪಾಯಿ ಬಡ್ಡಿ ಬರುವ ಹಾಗೆ ಎರಡೂವರೆ ಸಾವಿರ ರೂಪಾಯಿ ಪುದುವಟ್ಟು ನಮ್ಮಪ್ಪನ ಹೆಸರಿನಲ್ಲಿ ಮಂಜುನಾಥನಿಗೆ ಕೊಟ್ಟುಬಿಡೋದು. ಆಮೇಲೆ ಅದೃಷ್ಟವಿದ್ದರೆ, ನಾವು ಮನೆಯಲ್ಲಿ ಪೂಜೆ ಆರಂಭಿಸೋದು. ಸದ್ಯದಲ್ಲಿ ಪೂಜೆಗೆ ಬೇಕಾದ ಮೆಂಟಾಲಿಟಿ ನಮ್ಮ ಮನೆಯಲ್ಲಿ ಇಲ್ಲ, ಆ ಅಟ್‌ಮೋಸ್ಪಿಯರ್ ಇಲ್ಲ, ಅದು ಕಲ್ಟಿವೇಟ್ ಮಾಡುವುದಕ್ಕೂ ಸಾಧ್ಯವಿಲ್ಲ. ವೈ ವರಿ? ವೀ ಆ ಆಲ್ ಮೆಷೀನ್‌ಸ್, ಪ್ರಾಣೇಶ್, ದಟ್ಸ್ ವ್ಯಾಟ್ ವಿ ಆರ್.” ~ “ಆಯಿತು, ಪ್ರೊಫೆಸರ್‌ಗೆ ಬರೆದೆಯಾ ?’ “ನಾಳಿದ್ದು ಅಂದರೆ ಬುಧವಾರ ಸಂಜೆ ನಾಲ್ಕು ಗಂಟೆಗೆ ನಾವೆಲ್ಲ ಸೇರೋಣ. ಇಫ್ ಪಾಸಿಬಲ್ ಗೆಟ್ ಗೌಡ ಆಲ್ ಸೋ. ವಿ ಷಲ್ ಸೆಟಲ್ ಇಟ್ ಆಫ್’ “30.” * * ವೆಂಕಟೇಶಯ್ಯನವರು ಗೋಡೆ ಒರಗಿಕೊಂಡು ಯೋಚನೆಯಲ್ಲಿ ಕುಳಿತಿದ್ದಾರೆ: ‘ಪದಾರ್ಥಗಳ ಬೆಲೆ ವಿಷ ಏರುವ ಹಾಗೆ ಏರಿಹೋಗುತ್ತಿದೆ. ಈ ಸರ್ಕಾರವೂ ಅನುಕೂಲವಾಗಿದೆ. ನಮ್ಮ ಸಂಪಾದನೆ ಬೆಳೆಯಲಿಲ್ಲ. ಖರ್ಚು ಒಂದಕ್ಕೆರಡು ಆಯಿತು. ಇನ್ನು ಮಾನವಾಗಿ ಬದುಕುವ ಹಾಗಿಲ್ಲ, ಒಂದು ಜೊತೆ ಪಂಚೆ ತರೋಣ ಅಂದರೆ, ಇಪ್ಪತ್ತು ರೂಪಾಯಿ. ಹೆಂಗುಸಿಗೆ ಒಂದು ಸೀರೆ ತರೋಣ ಅಂದರೆ, ಇಪ್ಪತ್ತೈದು. ಏನೋ ಬದುಕುವುದಕ್ಕೆ ಬರಲಿಲ್ಲ ಈ ಕಾಲ. ಏನು ಮಾಡಬೇಕು ?’ ಇದುವರೆಗೆ ಒಳ್ಳೆಯವ ಎನ್ನಿಸಿಕೊಂಡು ಬದುಕಿದ್ದಾಯಿತು. ಇನ್ನು ಮುಂದೆ ಏನು ಗತಿ? ಮಕ್ಕಳುಮರಿ ಇಲ್ಲದ್ದು ಏನೋ ಒಂದು ಅನುಕೂಲ ಆಯಿತು. ಅವರೂ ಇದ್ದು ಹೀಗಾಗಿದ್ದರೆ,… ಎಂದು ಇನ್ನೂ ಏನೋ ಯೋಚನೆಗಳಲ್ಲಿ ಒದ್ದಾಡುತ್ತಿದ್ದರು. “ಏನು ಸಮಯ, ವೆಂಕಟೇಶಯ್ಯನವರೇ ?’ ಎಂದು ನರಸಿಂಹಯ್ಯನವರು ಬಂದರು. ದಯಮಾಡಿಸಿ, ಅಪರೂಪವಾಗಿ ಬಂದಿರಿ ?” “ನಾವು ಲಾಯರ್ ಗುಮಾಸ್ತೆಗಳು, ಕೆಲಸವಿಲ್ಲದೆ ಬರುತ್ತೇವೆಯೇ ?” “ಅಪ್ಪಣೆಯಾಗಲಿ, ಸಿದ್ಧವಾಗಿದ್ದೀನಿ.” “ನಿಮಗೆ ರಿಟೈರ್ ಆಯಿತಂತೆ !” ಅದೇ ಬಂದಿರುವ ಕಷ್ಟ ಸಂಬಳ ಒಂದು ಐವತ್ತು ಎರಡು ಮೂರು ಪಾಠ ಒಂದು ಮೂವತ್ತೂ ಬರುತ್ತ ಏನೋ ಇದ್ದೆ. ಇನ್ನು ಮುಂದೆ ಆ ವೆಂಕಟೇಶ ಹೇಗೆ ಮಾಡುತ್ತಾನೋ ಅದರ ಜೊತೆಯಲ್ಲಿ ಒಂದು ರೀತಿ ತೂಗಿಸುತ್ತ ನೋಡಬೇಕು. “ನಿಮಗೇನ್ರಿ ? ನೀವು ದೇವರನ್ನ ಕಂಡೋರು. ಹೇಗೋ ಆಗುತ್ತೆ?” “ದೇವರೇ ಎಲ್ಲಾ ಮಾಡಿಸೋದು. ಆದರೆ ಮನುಷ್ಯನ ಮನಸ್ಸು, ಜೊತೆಗೆ, ನಾವು ಯಾರ ಜೊತೆಯಲ್ಲಿ ಇದ್ದರೆ ಅವರಂತೆ ಮನಸೂ ಎಲ್ಲರೂ ದುಡ್ಡು ದುಡ್ಡು ಎನ್ನುತ್ತಿರುವಾಗ, ನಾನು ದೇವರು ದೇವರು ಎಂದು ಕುಳಿತಿರುವುದಕ್ಕೆ ಆದೀತೆ ?” “ನಿಜ, ಅದಿರಲಿ, ನಿಮಗೆ ದೇವರ ಪೂಜೆ ಮಾಡಿಕೊಂಡು ಇರೋದಕ್ಕೆ ಅನುಕೂಲವಾದರೆ ಏನು ಹೇಳೀರಿ ?” “ಅದೇನು ಹೇಳಿ.” ರಮೇಶರಾಯರು ಒಂದು ಅನಾಥಾಲಯ ಮಾಡಬೇಕು ಅಂತ ಇದ್ದಾರೆ. ಅದಕ್ಕೆ ಅವರೇ ಪ್ರೆಸಿಡೆಂಟ್, ಪ್ಲಾಂಟ ಪಿಳ್ಳೆಗೌಡರು ವೈಸ್ ಪ್ರೆಸಿಡೆಂಟ್, ಲಾಯ ಪ್ರಾಣೇಶ್ವರರಾಯರು ಸೆಕ್ರೆಟರಿ, ಪ್ರೊಫೆಸರ್ ಶತಾನಂದರು, ಜವಳಿ ಅಂಗಡಿ ಜೀವಣ್ಣನವರು, ಮೆಂಬರುಗಳು, ನಾನು ಅಸಿಸ್ಟೆಂಟ್ ಸೆಕ್ರೆಟರಿ. ಮ್ಯಾನೇಜರ್ ಒಬ್ಬರು ಬೇಕು. ಸದ್ಯದಲ್ಲಿ ಆರು ಜನ ಅನಾಥ ಬಾಲಿಕೆಯರನ್ನು ಅಲ್ಲಿ ಇಡುವುದು. ಮಿಡಲ್ ಸ್ಕೂಲ್ ಪರೀಕ್ಷೆವರೆಗೂ ಓದಿಸೋದು. ಆಮೇಲೆ ಸಂಗೀತ ವೈದ್ಯ ಕಲಿಸೋದು. ಸುಮಾರು ಹದಿನಾಲ್ಕು ಹದಿನೈದರ ವೇಳೆಗೆ ಮದುವೆ ಮಾಡಿ ಕಳಿಸೋದು. ಮ್ಯಾನೇಜರಿಗೆ ಮನೆ ಕೊಡುತ್ತೆ ಸಂಸಾರ ಸಮೇತ ಅವರು ಅಲ್ಲಿಯೇ ಇರಬೇಕು. ಊಟಗೀಟ ಎಲ್ಲ ಅಲ್ಲೇ ! ಅವರಿಗೆ ಒಂದು ಗಂಡಾಳು, ಒಂದು ಹೆಣ್ಣಾಳು, ಇಷ್ಟು ಮಾಡಬೇಕು ಅಂತ ಆಗಿದೆ.” “ಕೊಂಚ ಟೈಂ ಕೊಡಿ. ಯೋಚನೆ ಮಾಡೇನೆ. ಅವಳು ಏನಂತಾ ಕೇಳೋಣ.” “ನೀವು ಹುಡುಗರಲ್ಲಿ ಒಗ್ಗಿದವರು. ಅದರಿಂದ ನಿಮ್ಮನ್ನು ನಾನೇ ರಾಯರಿಗೆ ಹೇಳಿದೆ. ಗೊತ್ತಿದೆಯಲ್ಲ ಅವರು ನನ್ನ ಮಾತು ತೆಗೆದು ಹಾಕೋಲ್ಲ ಅಂತ. ನೀವು ಒಪ್ಪಿಕೊಳ್ಳಿ. ಜೊತೆಗೆ ಅವರ ಮಗಳು ವೀಣಾಗೆ ಈಗ ಐದಾರು ವರ್ಷ. ಅವಳ ಪಾಠ ಅನ್ನೋ ನೆವದಲ್ಲಿ ಅದೊಂದು ಮೂವತ್ತು ರೂಪಾಯಿ ಕೊಡಿಸುತ್ತೇನೆ. ಮ್ಯಾನೇಜರ್ ಅಲೋಯನ್‌ಸ್ ಒಂದು ಮೂವತ್ತು ರೂಪಾಯಿ ಬರುತ್ತೆ ಮನೆ ಬಾಡಿಗೆ ಇಲ್ಲ ಊಟದ ಖರ್ಚು ಇಲ್ಲ. ಏನು ಹೇಳುತ್ತೀರಿ ?” “ಆಗಬಹುದು ಅನ್ನಬೇಕು ಅನ್ನತ್ತೆ ಮನಸ್ಸು, ಆದರೂ ಕೊಂಚ ಯೋಚಿಸಿ, ನಾಳೇ ಹೇಳುತ್ತೇನೆ. ಇದೇನು ಪ್ರೈವೆಟ್ರೋ ಪಬ್ಲಿಕ್ಕೋ ?” “ಅದಿನ್ನೂ ಸೆಟಲ್ ಆಗಿಲ್ಲ. ಸದ್ಯದಲ್ಲಿ ಈ ಗತಿಯಿಲ್ಲದಿದ್ದ ಜಾತೀಗೆ ಅಂತ ಅಂದುಕೊಂಡಿರೋದು. ಆಮೇಲೆ ಅನುಕೂಲವಾದರೆ ನೋಡೋಣ.” “ಸರಕಾರ ಒಪ್ಪುತ್ತೆಯೇ ?” “ಏನು ವೆಂಕಟೇಶಯ್ಯನವರೇ, ಸರಕಾರದ ಹತ್ತಿರ ನಡೆಯೋವಾಗ ಅವರು ಹೇಳಿದಹಾಗೆ, ನಮ್ಮ ಮನೆಗೆ ಬಂದರೆ ನಾವು ಹೇಳಿದಹಾಗೆ, ಏನಿದು ಹಿಂದಿನ ಕಾಲ ಅಂದುಕೊಂಡಿರಾ? ಸೆಕ್ಯುಲರ್ ಗವರ್ನಮೆಂಟ್ ಬಂದ ಮೇಲೆ, ನೀವು ಪಾಪಭೀತರಾಗಿ ನಡೆಯೋದು ನಿಮ್ಮ ಸಂತೋಷಕ್ಕೆ, ರೈಲಿನಲ್ಲಿ ಟಿಕೆಟ್ ತಕೊಂಡು ಕೂತುಕೊಂಡ ಮೇಲೆ ನೀವು ಏನು ಮಾಡಬೇಕಾದರೂ ಮಾಡಿಕೊಳ್ಳಿ. ರೈಲಿನವರು ಕೇಳುತ್ತಾರೆಯೇ? ಲಾ ಅಂಡ್ ಆರ್ಡರ್ ಕೆಡದ ರೀತಿಯಲ್ಲಿ ನೀವು ಬಾರಾ ಖನ್ ಮಾಡಿದರೂ ಮಾಫ್. ಒಟ್ಟಿನಲ್ಲಿ ಸಿಕ್ಕಿದರೆ ಕೆಟ್ಟರಿ, ಸಿಕ್ಕಿಕೊಳ್ಳದೆ ಏನು ಮಾಡಿದರೂ ಪರವಾಯಿಲ್ಲ.” “ಆಯಿತು. ನರಸಿಂಹಯ್ಯನವರೇ, ಮಿಕ್ಕಾದವರೆಲ್ಲ ತಮ್ಮ ತಮ್ಮ ಜಾತಿ ಹಾಸ್ಟೆಲ್, ಬ್ಯಾಂಕ್, ಸೊಸೈಟಿ ಮಾಡುತ್ತಿದ್ದಾರಲ್ಲ, ಬ್ರಾಹ್ಮಣರೂ ಏಕೆ ಮಾಡಬಾರದು ?” “ಅದು ತಪ್ಪು ಎಂದು ಬ್ರಾಹ್ಮಣನಿಗೆ ಗೊತ್ತಿದೆ. ಎಲ್ಲಾ ಒಟ್ಟಾಗಬೇಕಾದ ಕಾಲ. ಸಬ್‌ಲುಂಡಾ ಏಕ್‌ಲುಂಡಾ ಆಗುವ ಕಾಲ ಬಂದಿದೆ ಎನ್ನುವುದು ಅವನಿಗೆ ಗೊತ್ತಿದೆ. ಅದರಿಂದ ಹೆದರುತ್ತಾನೆ. ಇತರರು ಇನ್ನೂ ಅದು ಅರ್ಥವಾಗುವಷ್ಟು ಬೆಳೆದಿಲ್ಲ. ಅದರಿಂದ ಅವರು ಧೈರವಾಗಿ ಆ ಕೆಲಸ ಮಾಡುತ್ತಿದ್ದಾರೆ. “ಹಾಗಂತೀರಾ?” “ಕೇಳಿಲ್ಲವೇ ವೆಂಕಟೇಶಯ್ಯ, ಮೀಸೆ ಬರೋನು ದೇಶಾ ಕಾಣ ಅಂತ ಅದರ ಹಾಗೆ, ಇವರೆಲ್ಲ ಇಷ್ಟು ದಿವಸ ಬ್ರಾಹ್ಮಣನ ಜೈಲಿನಲ್ಲಿದ್ದು ಈಗ ಈಚೆಗೆ ಬಂದವರ ಹಾಗೆ ಆಡುತ್ತಾ ಇದ್ದಾರೆ. ಆ ಭಾವ ತಪ್ಪೋವರೆಗೂ ಈ ಬೇರೆ ಬೇರೆ ಭಾವ ಹೋಗೋಲ್ಲ. ಈಗ ಆ ಮಾತು ಬಿಡೋಣ. ನಾವು ಕೈತುಂಬ ಕೆಲಸದವರು. ಈ ಹೊಟ್ಟೆಯೋ ಬೆಳಗಿಂದ ಸಂಜೆವರೆಗೂ ದುಡಿದರೂ ತುಂಬುವುದಿಲ್ಲ, ನೀವು ಒಪ್ಪಿಕೊಳ್ಳಿ. ಒಂದು ವೇಳೆ ಕಾಸ್ಮಾಪೊಲಿಟನ್ ಆದರೆ ನಿಮಗೇನು ಕಷ್ಟ?”
“ಶುಚಿರುಚಿಯಾಗಿದ್ದರೆ ಮನಸ್ಸು ಒಡೆಯುವುದಿಲ್ಲ. ಅಲ್ಲಿಗೆ ಬಂದ ಮೇಲೆ ಶುಚಿರುಚಿಯಾಗಿ ಇಟ್ಟುಕೊಳ್ಳುವುದು ನಮ್ಮ ಕೆಲಸ. ಅದರಿಂದ ಅದಕ್ಕೂ ಚಿಂತೆಯಿಲ್ಲ.” “ಸರಿ, ಇಷ್ಟಕ್ಕೆ ಸಿದ್ಧರಾದರೋ ಸಾಕು. ಹೋಗಿ ಪ್ರೊಫೆಸರ್ ಶತಾನಂದಂ ಅವರನ್ನ ಕಂಡು ಬನ್ನಿ ಮುಂದಿನದು ನನ್ನ ಕೆಲಸ. “ಯಾವೊತ್ತು ಹೋಗಲಿ ?”
“ಯಾವೊತ್ತೇನು ? ಇವೊತ್ತೋ ನಾಳೆಯೋ ಅದನ್ನೂ ಮುಗಿಸಿಬಿಡಿ. ರಾಯರ ಮಗಳ ಪಾಠ ಯಾವೊತ್ತಿನಿಂದ ಆರಂಭಿಸುತ್ತೀರಿ?’ “ಗುರುವಾರ ದಿನ ಚೆನ್ನಾಗಿದೆ.” “ಅವರು ಇವೊತ್ತಿನವರೆಗೂ ಏನೂ ಮುದ್ದು ಅಂತ ಪಾಠಗೀಟ ಏನೂ ಹೇಳಿಸಿಲ್ಲ, ಆ ಹುಡುಗಿ ಬುದ್ಧಿ ಪಾದರಸ, ನೋಡಿಕೊಳ್ಳಿ. “O.” ಅವೊತ್ತೇ ವೆಂಕಟೇಶಯ್ಯ ಶತಾನಂದಂ ಮನೆಗೆ ಹೋದ. ಶತಾನಂದಂ ಹೆಸರಾದ ಪ್ರೊಫೆಸರ್, ಎರಡು ಮೂರು ಯೂನಿವರ್ಸಿಟಿಗಳಿಂದ ಡಾಕ್ಟರೇಟ್‌ಗಳು ಬಂದಿದ್ದರೂ ಅವನಿಗೆ ಜಂಭ ಇಲ್ಲ. ಅವನಿಗೆ ಹಗಲೂ ರಾತ್ರಿ ಒಂದೆ ಯೋಚನೆ. ನಮ್ಮ ದೇಶ ಎಂದಿಗೆ ಮುಂದಕ್ಕೆ ಬರೋದು? ಮಿಕ್ಕದೇಶಗಳ ಹಾಗೆ ನಮ್ಮ ದೇಶವೂ ತಲೆಯೆತ್ತಿಕೊಂಡು ನಿಲ್ಲುವುದು ಹೇಗೆ ? ಎಂದು ಮುಂತಾಗಿ ಹತ್ತದ ಹರಿಯದ ಯೋಚನೆ. ಆತನಿಗೆ ಒಬ್ಬನೇ ಮಗ, ಅವನಿಗೆ ಓದು ಎಂದರೆ ತಲೆನೋವು. ಇದ್ದಕ್ಕಿದ್ದ ಹಾಗೆ ಮಗನ ಯೋಚನೆ ಬರುವುದು. ‘ದೇಶವನ್ನೆಲ್ಲ ಉದ್ಧಾರಮಾಡುವ ಯೋಚನೆಯಲ್ಲಿ ಮನೆಯ ಮಗನನ್ನು ತಿದ್ದಿಲ್ಲ. ಇವನು ಮುಂದಕ್ಕೆ ಏನಾಗುವನೋ ಏನೋ ?’ ಎಂದು ಚಿಂತಾಕ್ರಾಂತನಾಗುವನು. ಕೂಡಲೇ ‘ಮನುಷ್ಯನಿಗೆ ಇರುವ ಎನರ್ಜಿಯೆಲ್ಲ ಒಂದು ಎಕ್ಸ್ ಕ್ವಾಂಟಿಟಿ. ಅದನ್ನು ಫ್ಯಾಮಿಲಿಗಾದರೂ ಕೊಡಬಹುದು. ಕಂಟ್ರಿಗಾದರೂ ಕೊಡಬಹುದು. ನಮ್ಮಲ್ಲಿ ಅಬಂಡಂಟ್ ಎನರ್ಜಿ ಇದ್ದರೆ ಎರಡಕ್ಕೂ ಆದೀತು. ಪರ್‌ಹ್ಯಾಪ್ಸ್, ವಿ ಹ್ಯಾವ್ ಟು ಪೇ ಎ ಪ್ರೈ ಒನ್ ಫಾರ್ ದಿ ಅದರ್ ಅಂಡ್ ನಾಟ್ ಬೋತ್ ಎಂದು ಕಾಣುತ್ತದೆ’ ಎಂದುಕೊಂಡು ಆ ಚಿಂತೆ, ಆ ಯೋಚನೆ, ಬಿಟ್ಟು ಸುಮ್ಮನಾಗುವನು. ~ ವೆಂಕಟೇಶಯ್ಯನು ಹೋದಾಗ ಶತಾನಂದಂಗೆ ಇಂತಹುದೇ ಒಂದು ಚಿಂತಾಲಹರಿ ಎದ್ದಿತ್ತು, ಆ ಮನುಷ್ಯ ತನ್ನನ್ನು ನೋಡುವುದಕ್ಕೆ ಬರುವನೆಂದು ಆತನಿಗೂ ಗೊತ್ತಿತ್ತು. ಅದರಿಂದ, ತನ್ನ ಯೋಚನೆಯನ್ನು ಒದರಿ, ಹೋಗಿ, ಆತನನ್ನು ಒಳಕ್ಕೆ ಕರೆದುಕೊಂಡು ಬಂದು ‘ಕೂತುಕೊಳ್ಳಿ’ ಎಂದನು. ವೆಂಕಟೇಶಯ್ಯನು ತಾವು ದೊಡ್ಡ ಮನುಷ್ಯರು, ಸಾರ್, ನಾನು ತಮ್ಮೆದುರು ಕೂತುಕೊಂಡರೆ ಹೇಗೆ ?” ಎಂದನು. “ಮಿಸ್ಟರ್, ದಯವಿಟ್ಟು ಕುಳಿತುಕೊಳ್ಳಿ. ಡೆಮೋಕ್ರಸಿ ಎಂದರೆ ಒಬ್ಬರಿಗೊಬ್ಬರು ಸಮಾನ ಅಂತ. ನಾವು ಅದನ್ನು ಆಚರಣೆಯಲ್ಲಿ ತರೋವರೆಗೂ ನಮಗೆ ಸ್ವಾತಂತ್ರ್ಯ ಇದ್ದರೂ ಇಲ್ಲದಿದ್ದ ಹಾಗೆ, ವಿ ಆರ್ ಈಕ್ವಲ್, ಡೋಂಟ್ ವರಿ, ಕುಳಿತುಕೊಳ್ಳಿ.’ “ಸ್ವಾಮಿ, ತಾವು ದೊಡ್ಡವರು ಆ ಮಾತು ಹೇಳಬಹುದು. ಆದರೆ, ನಾನು ಮಿಡಲ್ ಸ್ಕೂಲಿನಲ್ಲಿ ಬಡಮೇಷ್ಟ್ರರಾಗಿ ರಿಟೈರ್ ಆದವನು ಯೂನಿವರ್ಸಿಟಿ ಪ್ರೊಫೆಸರ್ ಮನೆಗೆ ಬಂದು ನಾನೂ ನೀವೂ ಒಂದೇ ಸಮ ಎಂದರೆ ನಡೆದೀತೆ ? ಡೆಮೋಕ್ರಸಿ, ಸ್ವಾತಂತ್ರ್ಯ, ಎಲ್ಲ ಬಂತು. ಸ್ವಾ ಸ್ವಾಮಿ, ಬಂದು ಮೂರು ನಾಲ್ಕು ವರ್ಷವಾಯಿತು. ಆದರೂ ಹಳ್ಳದಿಣ್ಣೆ ಹೆಚ್ಚಾಗುತ್ತಿದೆಯೇ ಹೊರತು ಸಮವಾದ ಹಾಗೆ ಕಾಣಲಿಲ್ಲ ಮಾತಿನಲ್ಲಿ ಒಂದೇ ಆದ ಸಮಾಜ ಮರದ ಕೊನೆಗಳ ಹಾಗೆ ಒಡೆದು ಒಡೆದು ನೂರಾರು ಗುಂಪು ಆಗುತ್ತಿದೆ.
ಪ್ರೊಫೆಸರ್ ಶತಾನಂದಂ ಆ ಮಾತಿನಲ್ಲಿ ಅಡಗಿರುವ ನಿಜ ಅರಿತನು. ಅದುವರೆಗೆ ಅವನು ಹಾಗೆ ಮಾಡುತ್ತಿದ್ದುದ್ದು, ಯಾರು ಬಂದರೂ ತಾನು ದೊಡ್ಡವನು. ಅವನಿಗೆ ಸಮದಹಾಗೆ ನಡೆಯುವುದೆ ಅವನಿಗೆ ತಾನು ಮಾಡುವ ಅನುಗ್ರಹ ಎಂದುಕೊಳ್ಳುತ್ತಿದ್ದವನು. ಈಗ ಏನೋ ಹೊಸ ಬೆಳಕು ಬಂದಹಾಗೆ ಆಯಿತು. ಆದರೆ ಆ ಬೆಳಕು ಬರುವುದು ಒಬ್ಬ ಮಿಡಲ್ ಸ್ಕೂಲ್ ಟೀಚರಿಂದ ? ತನಗೆ ? ಆದರೆ ಶತಾನಂದಂ ಬೆಳಕು ಬಂದರೆ ಬೇಡ ಎನ್ನುವ ಜಾತಿಯಲ್ಲ ವೆಂಕಟೇಶಯ್ಯನನ್ನು ಇನ್ನಷ್ಟು ಮಾತನಾಡಿಸಬೇಕು ಎಂದುಕೊಂಡನು. ಬಲವಂತವಾಗಿ ಹಿಡಿದು ಕುರ್ಚಿಯಲ್ಲಿ ಕುಳ್ಳಿರಿಸಿದನು. ಆಯಿತು. ಮುಂದೆ ಹೇಳಿ, ಏನು ಮಾಡಿದರೆ ಇದು ಸರಿಹೋಗುತ್ತೆ?”
“ನೊನೊಬ್ಬ ಬಡ ಟೀಚರು ಸ್ವಾಮಿ. ನಾವು ತಮಗೆ ಹೇಳೋದೆ ?” “ನಾನೇ ಕೇಳುತ್ತಿದ್ದೇನಲ್ಲ? ಆಯಿತು. ನಮ್ಮ ಮನೆಯಲ್ಲಿ ಕಾಫಿ ತೆಗೆದು ಕೊಳ್ಳುತ್ತೀರೋ ?” “ಸ್ವಾಮಿ, ಭಾಗ್ಯವಂತರಿಗೆ ಭಾಗ್ಯ ಬಂದು ಅವರೆಲ್ಲ ಒಂದೇ ಸಮನಾಗುತ್ತಾರೆ. ಬಡವರಿಗೆ ಏನೂ ಇಲ್ಲದೆ ಇರೋಣದರಿಂದ ಅವರಿಗೆ ಜಾತಿ ಬೇಕಾಗಿಲ್ಲ. ಇರುವುದೆಲ್ಲ ಮಧ್ಯಮವರ್ಗದವರಿಗೆ, ಅವರು ಬಿಡಲಾರರು; ಇಟ್ಟುಕೊಳ್ಳಲಾರರು. ಸಮಾಜದ ಸಹಜಸ್ಥಿತಿ ಕಾಣುವುದು ಈ ಕೊನೆಯಲ್ಲೂ ಆ ಕೊನೆಯಲ್ಲೂ ಅಲ್ಲ. ಈ ನಡುವೆ, ಮಧ್ಯದಲ್ಲಿರುವ ಮಧ್ಯಮವರ್ಗದಿಂದ. ಆದರೆ ಈಗ ನಡುಮನೆ ಇಲ್ಲ ಸ್ವಾಮಿ. ಇರುವುದೆಲ್ಲ ಯಾವ ಮನೆಗೆ ಹೋಗಲಿ, ಇಲ್ಲದಿದ್ದರೆ ರೂಮು; ಇಲ್ಲದಿದ್ದರೆ ಹಾಲು. ಹೀಗಿರುವಾಗ ನಾನೇನು ಹೇಳಲಿ.” “ಕಾಫಿ ವಿಚಾರ ಹೇಳಲಿಲ್ಲವಲ್ಲ?” “ನಮಗೆ ಬೇಡ ಎನ್ನುವ ದಿಟ್ಟತನವೂ ಇಲ್ಲ ಬೇಕು ಎನ್ನುವ ಧೈರವೂ ಇಲ್ಲ.” ‘ಸೋ, ಯು ಟೇಕ್ ಆಗಬಹುದು” ಪ್ರೊಫೆಸರಿಗೆ ‘ಈ ಮನುಷ್ಯ ನೇರವಾಗಿ ತೆಗೆದುಕೊಳ್ಳುತ್ತೇನೆ ಎಂದು ಏಕೆ ಹೇಳಲಿಲ್ಲ’ ಎಂದು ಯೋಚನೆ. “ಡಸ್ ಹಿ ಹೈಡ್ ಹಿಸ್ ಥಾಟ್ಸ್? ವೈ ದಿಸ್ ಬೀಟಿಂಗ್ ಔಟ್ ದಿ ಬುಷ್ ? ಲುಕ್ ಇನ್‌ಟೆಲಿಜೆನ್‌ಟ್, ಲೆಟ್ ಮಿ ಎಂಗೇಜ್ ಹಿಮ್ ?” ಎಂದು ಇತ್ಯರ್ಥಮಾಡಿ, ಕೊನೆಗೆ, ದಟ್ಸ್ ಆಲ್ ರೈಟ್” ಎಂದು ಕಾಲಿಂಗ್ ಬೆಲ್ ಒತ್ತಿದನು. ಆಳು ಬಂದನು. “ಕಾಫಿ ಫೀಸ್” ಎಂದು ಇಬ್ಬರನ್ನೂ ತೋರಿಸಿದನು. “ಆಯಿತು. ಮೊದಲು ನಾವು ಮಾತಾಡಿದ ಕಡೆಯಿಂದ ಹೇಳಿ, ಮುಂದಕ್ಕೆ?” “ನಾನು ಶಾಸ್ತ್ರಪಾಠ ಬಹಳ ಮಾಡಿದೋನಲ್ಲ ಸ್ವಾಮಿ. ಆದರೆ ನಮ್ಮ ತಂದೆ ಬಹಳ ಒಳ್ಳೆಯ ವಿದ್ವಾಂಸರು, ಅವರು ಮಾತನಾಡುತ್ತಿದ್ದುದನ್ನು ಕೇಳಿ ಕೇಳಿ ನಾನೂ ಎಣ್ಣೆ ಅಳೆದ ಮಾನವಾಗಿದ್ದೇನೆ. ನಾನು ಅಷ್ಟೋ ಇಷ್ಟೋ ಓದಿದೆ. ಆದರೆ ಹೊಟ್ಟೆಗೋಸ್ಕರ ಮಿಡಲ್ ಸ್ಕೂಲ್ ಸೇರಿದೆ. ಏನೋ ಎರಡನೆಯ ಯುದ್ಧ ಕಳೆಯೋವರೆಗೂ ಅಷ್ಟೇನೂ ಬಿಸಿ ತೋರಲಿಲ್ಲ. ಅಲ್ಲಿಂದೀಚೆಗೆ ಬಿಸಿ ತೋರಿ, ತಲೆ ಕಾಯಿತು. ಹೊಸ ಹೊಸ ವಿಚಾರ ತಲೆಯಲ್ಲಿ ಸುಳಿದು ಹೊಸ ಕನಸುಗಳು ಬರುತ್ತಿವೆ. ಆಗ, ಹಿಂದೆ ಸುಮಾರು ಮೂವತ್ತು ವರ್ಷದಲ್ಲಿ ನಮ್ಮ ತಂದೆ ಹೇಳುತ್ತಿದ್ದ ಮಾತು ಈಗ ಅರ್ಥವಾಗುತ್ತಿದೆ. “ಏನು ಹೇಳುತ್ತಿದ್ದರು ?” “ನೋಡಿ, ಈ ಪವರ್ ಫ್ಯಾನಿನಲ್ಲಿ ಬೀಸುತ್ತಿರಲಿ, ಬಲ್ಸ್‌ನಲ್ಲಿ ಉರಿಯುತ್ತಿರಲಿ, ಒಂದೇ ಅಲ್ಲವೆ ?” “ಹೌದು.” “ಹಾಗೆಯೇ ತಾವು ಪ್ರೊಫೆಸರ್ ಆಗಿರಿ, ನಾನು ಬಡ ಟೀಚರ್ ಆಗಿರಲಿ, ನಮ್ಮಿಬ್ಬರಲ್ಲಿಯೂ ಇರುವ ಜೀವ ಒಂದೇ! ಮೊಳೆಯೂ ಹಾರೆಯೂ ಒಂದೇ ಕಬ್ಬಿಣದಿಂದ ಆದರೂ ಅದರ ಕೆಲಸ ಬೇರೆ! ಹಾಗೆ ಜೀವದ ವಿಚಾರ ಹೇಳಿದರೆ ವೇದಾಂತ; ಹೀಗೆ ಕೆಲಸದ ವಿಚಾರ ಹೇಳುವಾಗ ಲೋಕ, ಸಮಾಜ ವೇದಾಂತದಲ್ಲಿ ಭೇದ ಇರಬಾರದು; ಲೋಕದಲ್ಲಿ ಭೇದ ಬಿಡಬಾರದು. ಆದರೆ ಈಗ ಎಲ್ಲಾ ತಳಾತಳಕು ಆಗಿದೆ. ಲೋಕದಲ್ಲಿ ಭೇದ ಇಲ್ಲ ಎನ್ನುತ್ತಾರೆ; ವೇದಾಂತದಲ್ಲಿ ಭೇದ ಉಂಟು ಎನ್ನುತ್ತಾರೆ. ಇದೇ ಈಗಿನ ತಲೆನೋವು.’ ಪ್ರೊಫೆಸರ್ ತಲೆದೂಗುತ್ತ ಕೇಳಿದರು: ‘ಇದಕ್ಕೆ ನಿಮ್ಮ ಔಷಧವೇನು ?” “ಸ್ವಾಮಿ, ಮನುಷ್ಯನ ಮನಸ್ಸು ಬಲಿತಾಗ ಅದರಲ್ಲಿ ಧೈರ್ಯ, ವಿಶ್ವಾಸ, ಸೌಜನ್ಯ ಮೊದಲಾದ ಸದ್ಗುಣಗಳು ಬರುತ್ತವೆ. ಬಲಿಯದಿದ್ದಾಗ ಎಲ್ಲಾ ದುರ್ಗುಣಗಳೇ ಇರುತ್ತವೆ. ಅದರಿಂದ ಈಗ ಮನಸ್ಸು ಬಲಿಯುವ ವಿದ್ಯೆ ಕಲಿಸಬೇಕು. “ಈಗ ಕಲಿಸುತ್ತಿರುವ ವಿದ್ಯೆ ?”
“ಇಂದ್ರಿಯಗಳ ನೈಪುಣ್ಯ ಹೆಚ್ಚಿಸುತ್ತ ಮನಸ್ಸಿನ ಚಾಪಲ್ಯ ಬೆಳೆಸುತ್ತಿರುವ ವಿದ್ಯೆ ಸ್ವಾಮಿ ಈಗಿನದು. ಹಿಂದೆ ನಮಗೆ ಹಿರಿಯರ ಭಯ ಇತ್ತು ಸಮಾಜದ ದಿಗಿಲು ಇತ್ತು ದೇವರದಿಂಡರ ಅಂಜಿಕೆಯಿತ್ತು ಇವೆಲ್ಲ ಮನಸ್ಸನ್ನು ಹತೋಟಿಯಲ್ಲಿಡುತ್ತಿದ್ದುವು. ಈಗ ಇವು ಯಾವುದೂ ಇಲ್ಲ. ಮನಸ್ಸು ಅಂಕೆಯಿಲ್ಲದ ಕಪಿಯಾಗಿದೆ. ಆ ಕಪಿ ತನಗೆ ಬೇಕಾದ್ದು ತಕೊಳ್ಳೋಕೆ ಸಿದ್ಧವಾಗಿರುವಷ್ಟು ಬಿಡೋದಕ್ಕೆ ಸಿದ್ಧವಾಗಿಲ್ಲ. ಹೀಚು ತಿನ್ನಬೇಡ, ಹಣ್ಣಾಗುವವರೆಗೆ ಬಿಡು ಎಂದರೆ, ಅದಕ್ಕೆ ಆಗಲೇ ಕೋಪ ಬಂತು; ಮೇಲೆ ಬಿತ್ತು ಹೀಗಾಗಿದೆ. ಇದು ತಪ್ಪುವವರೆಗೂ ಸ್ವಾತಂತ್ರ್ಯ ಯಾರಿಗೆ ಸ್ವಾಮಿ? ತಪ್ಪು ಮಾಡುವವರಿಗೆ ನೇರವಾಗಿ ಇರುವವರಿಗೆ ಇಲ್ಲ.” “ನಾಳೆ ನೀವು ಡಿಕ್ಟೇಟರ್ ಆದರೆ ಏನು ಮಾಡುತ್ತೀರಿ ಮೇಷ್ಟರೆ ?” “ಸ್ವಾಮಿ, ನಮಗೊಬ್ಬರು ಹೆಡ್‌ಮಾಸ್ಟರು ಬಂದರು. ಎಲ್ಲಾ ಕರೆಕ್ಟ್ ಆಗಿರಬೇಕು ಅವರಿಗೆ ಯಾರ ಮೇಲೂ ಅಭಿಮಾನವಿಲ್ಲ, ಕರೆಕ್ಟ್ ಪ್ರಿಸ್ಟೆಜ್, ರೂಲ್ಸ್, ರೆಗ್ಯುಲೇಷನ್ ಬಿಟ್ಟು ಬೇರೆ ಮಾತಿಲ್ಲ ಏನಾಯಿತು ಗೊತ್ತೆ? ಒಬ್ಬೊಬ್ಬರಿಗೆ ಪ್ರೀತಿಯಿಲ್ಲ. ಎಲ್ಲಾ ರೇಷನ್ ಆಗಿಹೋಯಿತು. ಫಲವೇನಾಯಿತು? ಎಲ್ಲೂ ಜೀವವಿಲ್ಲ. ಏನೋ ಬಿಕೋ ಅನ್ನುವ ಹಾಗಾಯಿತು. ಅದೇ ಇನ್ನೊಬ್ಬರು ಹೆಣ್ಮಾಸ್ಟರು. ಅವರು ಯಾರು ಬಂದರೂ ಅಭಿಮಾನ ಮುಂಚೆ, ಆಮೇಲೆ ರೂಲ್ಲು ಆತನ ಕಾಲದಲ್ಲಿ ಎಲ್ಲಿ ನೋಡಿದರೂ ಎನೋ ಹಾಲುಕ್ಕುವಂತೆ ಒಂದು ತುಂಬು, ಈಗ ಬೇಕಾದ್ದು ಈ ಎರಡನೆಯ ಜಾತಿ. ನಾವು ಹೇಳುವುದು ಮೊದಲನೆಯ ಜಾತಿ. “ಡಿಸಿಪ್ಲಿನ್ ಬೇಡವೇನಿರಿ ?”
“ಬೇಕು ಸ್ವಾಮಿ, ಆದರೆ ಡಿಸಿಪ್ಲಿನ್ ತಂದೆತಾಯಿ ಕೊಡೋ ಶಿಕ್ಷೆ ಹಾಗಿರಬೇಕು. ಜೈಲಿನಲ್ಲಿ ಕೊಡೋ ಸಜಾದ ಹಾಗಿರಬಾರದು ಸ್ವಾಮಿ!” “ಹಾಗೆಂದರೆ ?” “ತಂದೆತಾಯಿಗೆ ಅಭಿಮಾನವಿದೆ ಸ್ವಾಮಿ, ಮಗನ್ನ ಎದುರುಹಾಕೊಳ್ಳೋಕೆ ಅವರಿಗೆ ಇಷ್ಟವಿರಲ್ಲ, ಜೊತೆಗೆ ಎಂದಾದರೂ ಒಂದು ದಿನ ತಮ್ಮ ಸರ್ವಸ್ವವನ್ನೂ ಅವನಿಗೆ ಕೊಟ್ಟೇ ಕೊಡಬೇಕು ಎನ್ನುವುದು ಅವರಿಗೆ ಗೊತ್ತು ಅದರಿಂದ, ಮುಂದೆ ಮನೆಯ ಬೆಳಕಾಗಲಿ ಎಂದು ಅವರು ಶಿಕ್ಷಿಸುವುದು. ಜೈಲಿನಲ್ಲಿ, ಇರೋವರೆಗೂ ಭಯ ಬಿದ್ದಿರಲಿ; ಅಣಗಿರಲಿ ಎಂದು ತುಳಿಯುವುದಕ್ಕೆ ಶಿಕ್ಷೆ ಮಾಡುವುದು. ಎರಡೂ ಒಂದೇ ಹ್ಯಾಗೆ? ಹಾಗೆ ಡಿಕ್ಟೇಟರ್ ಬಂದರೆ ನಮಗೆಲ್ಲಾ ಮನೆಗಳೇ ಜೈಲು ಆಗುತ್ತವೆ.’ “ಹಾಗಾದರೆ ಏನು ಮಾಡಬೇಕು? ಅದು ಹೇಳಿ.’ “ಅಮಾವಾಸ್ಯೆಯ ದಿನ ಎಲ್ಲೆಲ್ಲೂ ಕತ್ತಲು. ಚಂದ್ರನಿಲ್ಲ ಹಾಗೆಂದು ಯಾರೂ ಅಳುತ್ತ ಕೂತಿರುವುದಿಲ್ಲ. ಕತ್ತಲಲ್ಲಿ ಹೋಗಬೇಕಾದವನು ದೀಪ ಹಿಡಿದುಕೊಂಡು ಹೋಗುತ್ತಾನೆ. ಹಾಗೆ ಬೇಕಾದವರು ದೀಪ ಹಚ್ಚಿಕೊಳ್ಳಲಿ ಅಂತ ಬಿಟ್ಟುಬಿಡಿ.” “ಹಾಗೆಲ್ಲಾಗುತ್ತದೆ? ಸಿವಿಲೈಸ್ಟ್ ಗವರ್ನ್‌ಮೆಂಟ್ ಎಲ್ಲಾ ಎಜುಕೇಷನ್ ತಮ್ಮ ರೆಸ್‌ಪಾನ್‌ಸಿಬಿಲಿಟಿ ಎಂದು ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ.” ~ “ಆಯಿತು ಸ್ವಾಮಿ, ಆಗಲಿ, ಹೂಂ ಅನ್ನೋಣ. ಅಲ್ಲಿಗೆ ಬಿಡೋಣ. ತಾವೂ ಬೇಕಾದಷ್ಟು ಬಲ್ಲವರು. ನಮ್ಮ ಅಲ್ಪ ಬುದ್ಧಿಗೆ ತಿಳಿದಹಾಗೆ, ಕೊನೆಯ ಮಾತಾಗಿ ಇಷ್ಟು ಹೇಳುತ್ತೇನೆ. ಇತರರಿಗಿಂತ ನಾನು ಹೆಚ್ಚಾಗಿರಬೇಕು ಎನ್ನುವುದು ಎಲ್ಲರಿಗೂ ಸಹಜವಾಗಿ ಇರೋ ಆಸೆ. ಅದನ್ನು ಯಾರೂ ಕಲಿಸಬೇಕಾಗಿಲ್ಲ; ಆದರೆ ಅದರ ಜೊತೆಗೆ ನನಗಿಂತ ಹೆಚ್ಚಾಗಿ ಇನ್ನೊಬ್ಬರಿದ್ದಾರೆ; ಎಲ್ಲರಿಗಿಂತ ಹೆಚ್ಚಾದ್ದು ಒಂದಿದೆ : ಅದಕ್ಕೆ ಎಲ್ಲರೂ ವಶರು ಅನ್ನುವುದನ್ನು ಕಲಿಸಬೇಕು. ಇಲ್ಲದಿದ್ದರೆ ಕಲಿತ ಕಲಿವೆಲ್ಲ ಕುಲಗೇಡಿಗೆ ಕಾರಣ ಸ್ವಾಮಿ.” “ಯಸ್. ದೇರ್ ಈಸ್ ಎ ಗುಡ್ ಲಾಟ್ ಇನ್ ವಾಟ್ ಯು ಸೇ. ಆಯಿತು. ಈಗ ನಾನೇನು ಮಾಡಬೇಕು?” “ನರಸಿಂಹಯ್ಯನವರು ತಮ್ಮನ್ನು ನೋಡು ಅಂದರು. ಬಂದೆ.” “ಐ ಯಾಮ್ ಗ್ಲಾಡ್ ಐ ಸಾ ಯು.” “ಶತಾನಂದಂ ರಮೇಶ್‌ಗೆ ಫೋನ್ ಮಾಡಿದರು. “ರಮೇಶ್, ನರಸಿಂಹಯ್ಯಾಸ್ ಸೆಲೆಕ್ಷನ್ ಈಸ್ ರಿಯಲಿ ಎ ಫೈನ್‌ಡ್. ಹಿ ಹ್ಯಾಸ್ ಸಮ್ ಥಿಂಗ್ ಟು ಗಿವ್, ಐ ಹಾರ್ಟೆಲಿ ಅಪೂವ್. ….ಯಸ್ ಆಗಲಿ. ಐ ಹ್ಯಾವ್ ನೋ ಅಬ್ಬಕ್ಷನ್, ಗುಡ್ ಈವಿನಿಂಗ್.” ಪ್ರೊಫೆಸರ್ ಒಂದು ಕಾಗದ ಬರೆದು ಅದನ್ನು ವೆಂಕಟೇಶಯ್ಯನ ಕೈಗೆ ಕೊಟ್ಟರು. ಅವನೂ ವಂದನೆ ಮಾಡಿ ಹೊರಡಲು, ಕೈ ಕುಲುಕಿ, “ಪದೇಪದೇ ಬರುತ್ತಿರಿ. ಇಟ್ ಈಸ್ ಎ ಪ್ಲಜರ್ ಟು ಟಾಕ್ ಟು ಯು’ ಎಂದು ಸಾದರದಿಂದ ಕಳುಹಿಸಿಕೊಟ್ಟರು. * * * ರಮೇಶ್ ಮಂಜುನಾಥನಿಗೆ ಎರಡೂವರೆ ಸಾವಿರ ರೂಪಾಯಿ ತಂದೆ ಹೆಸರಿನಲ್ಲಿ ಕಳುಹಿಸಿಕೊಟ್ಟ ಐವತ್ತು ಸಾವಿರ ರೂಪಾಯಿ ಬ್ಯಾಂಕಿನಲ್ಲಿ ಅನಾಥಾಲಯದ ಹೆಸರಿನಲ್ಲಿ ಡಿಪಾಜಿಟ್ಟು ಆಯಿತು. ಇನ್ನು ಎರಡು ಸಾವಿರ ರೂಪಾಯಿ ತಂದು ತಂದೆ ಹತ್ತಿರ ತಿರುಪತಿಯ ಯಾತ್ರೆಗೆ ಎಂದು ಹೇಳಿದ. ಎಂಟು ದಿನ ಬಿಟ್ಟು ತ್ರಯೋದಶಿ ಕೊಟ್ಟು ಹೊರಡುವುದು ಎಂದು ಗೊತ್ತಾಯಿತು. ಆಫೀಸಿಗೆ ಬಂದು ನರಸಿಂಹಯ್ಯನನ್ನು ಕರೆಸಿಕೊಂಡು “ನರಸಿಂಹಯ್ಯ, ನಿಮಗೆ ಬಹಳ ಶ್ರಮವಾಯಿತು. ಏನು ಸನ್ಯಾಸಿಗಳನ್ನು ನೋಡಿಕೊಂಡು ಬಂದು ಅನಾಥಾಲಯ ಆರಂಭಿಸುತ್ತೀರೋ? ಇಲ್ಲದಿದ್ದರೆ ಇದು ಮುಗಿಸಿಕೊಂಡು ಅಲ್ಲಿಗೆ ಹೋಗುತ್ತೀರೋ?” ಎಂದು ಕೇಳಿದ. “ಅಲ್ಲಿಗೆ ಹೋಗಿ ಬಂದುಬಿಡುತ್ತೇನೆ.” ಆಗಬಹುದು. ನೂರು ರೂಪಾಯಿ ಸಾಕೊ?” “ಪಿಳ್ಳೇಗೌಡರು ನೀವು ಬನ್ನಿ, ಮಿಕ್ಕದ್ದೆಲ್ಲ ನನಗಿರಲಿ ಎಂದರು.” “ಆದರೂ ನೀವು ನನ್ನ ರಿಪ್ರೆಸೆಂಟೆಟಿವ್ ಆಗಿ ಹೋಗುವಾಗ ಬರಿ ಕೈಯ್ಯಲ್ಲಿ ಹೋಗಬಾರದು. ದಾರೀ ಖರ್ಚಿಗೆ ಒಂದು ನೂರು, ಅಲ್ಲಿನ ಖರ್ಚಿಗೆ ಒಂದು ನೂರು, ಸಾಕೋ” “ಸಾಕು ಸ್ವಾಮಿ.
“ಬೇಕಾದರೆ ಗೌಡರ ಹತ್ತಿರ ನನ್ನ ಅಕೌಂಟಿನಲ್ಲಿ ಬೇಕಾದ್ದು ತೆಗೆದುಕೊಂಡಿರಿ.” “ಸರಿ, ಸ್ವಾಮಿ” “ಕನ್‌ವೆಯನ್‌ಸ್?” “ಬಸ್ ಇದೆಯಲ್ಲ!” “ಬೇಕಾದರೆ ನಮ್ಮ ಕಾರ್ ತೆಗೆದುಕೊಂಡು ಹೋಗಿ.” “ಗೌಡರೂ ‘ಹೊರಡುವ ದಿವಸ ವೈರ್ ಮಾಡಿ, ವ್ಯಾನ್ ಕಳುಹಿಸುತ್ತೇನೆ’ ಎಂದಿದ್ದರು.” “ಬೇಡಿರಿ. ನಮ್ಮ ಕಾರು ತೆಗೆದುಕೊಂಡು ಹೋಗಿ. ಐ ಷಲ್ ಮ್ಯಾನೇಜ್ ವಿತ್ ಮೈ ಫ್ರೆಂಡ್ಸ್” “ಹಾಗಾದರೆ, ಅರ್ಧ ದಾರಿಯಾಗಿರುತ್ತೆ ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಧರ್ಮಸ್ಥಳ, ಹೋಗಿಬರೋಣವೇನು?” “ಗುಡ್ ಐಡಿಯಾ? ನಮ್ಮ ತಂದೇನ ಕೇಳಿ, ಅವರೂ ಬರುತ್ತಾರೇನೋ?” ದೊಡ್ಡ ರಾಯರನ್ನು ಕೇಳಿದ್ದಾಯಿತು. ಅವರು ತಿರುಪತಿ ಯಾತ್ರೆಯಿದೆಯಲ್ಲ ಎಂದರು. ತಿರುಗಿ ಹಾಗೆ ಹೀಗೆ ನೋಡಿ, ಅಳೆದು ಸುರಿದು ಬರುವ ಪಂಚಮಿ ತಿರುಪತಿಯೆಂದು ನರಸಿಂಹಯ್ಯನ ಜೊತೆಯಲ್ಲಿ ಹೊರಟರು. ವೀಣಾ, ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ದೊಡ್ಡ ರಾಯರು, ಅವರ ಮಗ್ಗುಲಲ್ಲಿ ಅವಳ ಮಗ್ಗುಲಲ್ಲಿ ನರಸಿಂಹಯ್ಯನ ಹದಿಮೂರು ವರ್ಷದ ಮಗ ಶ್ರೀನಿವಾಸ, ಅವನ ಮಗ್ಗುಲಲ್ಲಿ ಅವರ ತಾಯಿ, ಮುಂದಿನ ಸೀಟಿನಲ್ಲಿ ಡ್ರೈವರ್, ಅವರ ಮಗ್ಗುಲಲ್ಲಿ ನರಸಿಂಹಯ್ಯ, ಕಾರು ಮತ್ತೆ ತೋಟಕ್ಕೆ ಹೋಯಿತು. ಗೌಡರು ಎಲ್ಲರನ್ನೂ ವಿಶ್ವಾಸವಾಗಿ ಕಂಡರು. ಎಲ್ಲರಿಗೂ ಅವರ ಮ್ಯಾನೇಜರ್ ಮನೆಯಲ್ಲಿ ಬಿಡಾರ ಸಿದ್ಧವಾಗಿತ್ತು. ಬಿಸಿನೀರು ಕಾದಿತ್ತು. ಸ್ನಾನ ಮಾಡಿ ಮಡಿಯುಟ್ಟು ಸಂಧ್ಯಾಕಾರ್ಯಗಳನ್ನು ನೆರವೇರಿಸಿಕೊಂಡು ನರಸಿಂಹಯ್ಯನವರು ಎಲ್ಲರನ್ನೂ
ಕರೆದುಕೊಂಡು ಸ್ವಾಮಿಗಳ ದರ್ಶನಕ್ಕೆ ಹೋದರು. ಅವರೂ ಆಕಗಳನ್ನೆಲ್ಲ ಮುಗಿಸಿ ಇವರನ್ನು ನಿರೀಕ್ಷಿಸುತ್ತಿದ್ದರು. ಗೌಡರು ಎಲ್ಲರನ್ನೂ ಪರಿಚಯ ಮಾಡಿಸಿಕೊಟ್ಟರು. ಇವರು ರಾಯರು ತಂದೆ: ಮುರಳೀಧರರಾಯರು. ಇವರು ನರಸಿಂಹಯ್ಯನವರು, ರಾಯರ ಗುಮಾಸ್ತೆ” ಎಂದು ತೋರಿಸಿದರು. ಸ್ವಾಮಿಗಳೂ ಒಬ್ಬೊಬ್ಬರನ್ನಾಗಿ ಕುಶಲ ಪ್ರಶ್ನೆ ಮಾಡಿ, ನರಸಿಂಹಯ್ಯನ ಮಗ ಶ್ರೀನಿವಾಸನನ್ನು ಕರೆದು “ಏನು ಓದುತ್ತಿದ್ದೀಯಾ?” ಎಂದು ಕೇಳಿದರು. “ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೇನೆ-ಗುರುಗಳೇ!” “ನರಸಿಂಹಯ್ಯನವರೇ, ನಿಮ್ಮ ಮಗ ನಮ್ಮನ್ನು ಗುರುಗಳೇ ಅಂದ ನೋಡಿದಿರಾ? ನಿಮಗದು ಸಮ್ಮತವೇ?” “ಸನ್ಯಾಸಿಗಳನ್ನೆಲ್ಲ ಸ್ವಾಮಿಗಳೇ, ಗುರುಗಳೇ ಎಂದು ತಾನೇ ಕರೆಯುವುದು?” “ಅಲ್ಲರೀ, ಒಂದು ವೇಳೆ ಅಂದ ಮಾತು ನಿಜವಾಗಿಹೋದರೆ?” “ಅದು ದೈವಚಿತ್ರ, ಸ್ವಾಮಿ, ಹಾಗಾದರೂ ನಾನು ದುಃಖಪಡೋದಿಲ್ಲ” “ನಿಮಗೆ ಒಬ್ಬನೇ ಮಗ ಅಲ್ಲವೆ? “ಹೌದು. ಇನ್ನೆರಡು ಮಕ್ಕಳು ಹೋದರು’ “ಇನ್ನೆರಡು ಮಕ್ಕಳಾದರೆ ಇವನನ್ನು ನಮಗೆ ಕೊಡುತ್ತೀರಾ?” “ಆ ಯೋಗ ಇವನಿಗೆ ಇದೆ ಅಂತ ಜಾತಕದಲ್ಲಿಯೂ ಬರೆದಿರೋ ಹಾಗಿದೆ. ಆದರೆ ಒಂದು ಮಾತು. “ಹೇಳಿ.”
“ಇವನು ಸನ್ಯಾಸಿಯಾದರೆ ನಮ್ಮ ಗುರುಗಳು ಒಪ್ಪುವಂತಹ ಸನ್ಯಾಸಿಯಾಗಬೇಕು. ಹಾಗೆ ಮಾಡುವಿರಾ?” “ಇಲ್ಲ. ಈಗ ದೇಶಕ್ಕೆ ಒಬ್ಬ ಸನ್ಯಾಸಿ ಬೇಕು. ಅವನು ಸ್ವಾಮಿ ಮಿ ವಿವೇಕಾನಂದರ ಹಾಗೆ ಇನ್ನೊಮ್ಮೆ ಲೋಕವನ್ನೆಲ್ಲಾ ಅಲೆದು ಬರಬೇಕು. ಲೋಕಕ್ಕೊಂದು ಹೊಸ ವ್ಯವಸ್ಥೆ ಬರಬೇಕು. ಅದರ ಜೀವವನ್ನು ಅಲ್ಲಲ್ಲಿ ನಾಟಿ ಹಾಕಿ ಬರುವುದಕ್ಕೆ ಭರತಖಂಡದಲ್ಲಿ ಒಬ್ಬ ಸನ್ಯಾಸಿಯ ಜನ್ಮಆಗಬೇಕು. ಆ ಸನ್ಯಾಸಿ ಶಂಕರರ ಸಿದ್ಧಾಂತವನ್ನು ಒಪ್ಪಿಕೊಂಡು, ಹೊರಡುವನು. ವಿವೇಕಾನಂದರು ಮಾಡಿದ ಕಾರ್ಯವನ್ನು ಪೂರ್ಣ ಮಾಡುವನು.” “ಇನ್ನಷ್ಟು ವಿವರವಾಗಿ ಅಪ್ಪಣೆಯಾಗಬೇಕು ಮಹಾಸ್ವಾಮಿ. ‘ಇಂಡಿಯಾ ಸ್ವತಂತ್ರವಾದುದು ಲೋಕದ ಬಂಧನವನ್ನು ನೀಗುವುದಕ್ಕೆ ಬಹಿರ್ಮುಖವಾಗಿ ಭೋಗಪಡುವುದಕ್ಕಿಂತ ಹೆಚ್ಚಿನ ಸೌಖ್ಯ ಅಂತರ್ಮುಖವಾಗಿ ಧ್ಯಾನದಲ್ಲಿ ಪಡೆಯಬಹುದು ಎಂದು ಲೋಕಕ್ಕೆ ಬೋಧಿಸುವುದಕ್ಕೆ ಈ ಕಾವ್ಯ ಸಾಧಿಸುವುದಕ್ಕೆ ಬೀಜ ಬಿತ್ತಿ ಒಂದು ನೂರು ವರ್ಷದ ಮೇಲಾಯಿತು. ಇಂಗ್ಲಿಷ್ ವಿದ್ಯಾಭ್ಯಾಸ ಮೊದಲು ಆರಂಭವಾದ ಕಲ್ಕತ್ತೆಯಲ್ಲಿ ಒಂದು ಆಲದ ಬೀಜ ರಾಮಕೃಷ್ಣರ ರೂಪವಾಗಿ ಹುಟ್ಟಿತು. ಸರ್ವ ಧರ್ಮಗಳೂ ಮೂಲದಲ್ಲಿ ಒಂದೇ! ಆ ಮೂಲ ವೇದಧರ್ಮ ಎಂದು ಆ ಮಹಾನುಭಾವರು ತೋರಿಸಿಕೊಟ್ಟರು. ಜೀವನದ ಪ್ರಗತಿ ವೈರಾಗ್ಯದಲ್ಲಿದೆ, ಭೋಗದಲ್ಲಿಲ್ಲ ಎಂಬುದನ್ನು ನಿದರ್ಶನ ಮಾಡಿಕೊಟ್ಟರು. ಭೂಮಂಡಲದ ಅತ್ತಕಡೆಯಲ್ಲಿದ್ದ ಶಿಷ್ಯಮಂಡಲಿಯನ್ನು ಉದ್ಧಾರಮಾಡಲು, ತಮ್ಮ ಸರ್ವಸ್ವವನ್ನೂ ಧಾರೆಯೆರೆದು ಸ್ವಾಮಿ ವಿವೇಕಾನಂದರನ್ನು ಅಲ್ಲಿಗೆ ಕಳುಹಿಸಿಕೊಟ್ಟರು. ಅವರು ಹಚ್ಚಿಬಂದ ನಂದಾದೀಪ ಅಲ್ಲೆಲ್ಲಾ ಬೆಳಕು ಚೆಲ್ಲಿ ಹೊಸ ಹೊಸ ಸಿದ್ಧಾಂತಗಳನ್ನು ತಂದಿದೆ. ಅವನ್ನೆಲ್ಲಾ ಸಮನ್ವಯ ಮಾಡುವ ಧೀರನೊಬ್ಬ ಮತ್ತೆ ಅಲ್ಲಿಗೆ ಹೋಗಬೇಕಾಗಿದೆ. ಅಲ್ಲಿ ನಾನಾಮುಖವಾಗಿ ಹರಡಿರುವ ಸಂಸ್ಕೃತಿಯ ತಂತುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಹೊಸೆಯಬೇಕಾಗಿದೆ.” “ಕೋಪ ಮಾಡಿಕೊಳ್ಳಬಾರದು. ಇದು ನಾವು ನಮ್ಮ ದೇಶದ ಅಭಿಮಾನದಿಂದ ಆಡಿಕೊಳ್ಳುವ ಮಾತಲ್ಲವೆ, ಮಹಾಸ್ವಾಮಿ?” “ಸೊಗಸಾದ ಪ್ರಶ್ನವೆತ್ತಿದಿರಿ. ನರಸಿಂಹಯ್ಯನವರೆ, ನಮ್ಮಲ್ಲಿ ಒಂದು ರೂಪಾಯಿ ಇಟ್ಟುಕೊಂಡು ಅದನ್ನು ಹತ್ತು ರೂಪಾಯಿ ಎಂದರೆ ಅಭಿಮಾನ. ಆದರೆ ನೂರು ರೂಪಾಯಿ ಇದ್ದು ಅದರಲ್ಲಿ ಇತರರಿಗೆ ಹಂಚುವುದಕ್ಕೆಂದು ಹತ್ತು ರೂಪಾಯಿ ತೆಗೆದಿಟ್ಟರೆ ಅದೂ ಅಭಿಮಾನ. ನಾನು ಹೇಳುತ್ತಿರುವುದು ಎರಡನೆಯ ಜಾತಿ ನೀವು ಇನ್ನೂ ಒಂದು ಪ್ರಶ್ನವತ್ತಬಹುದು. ನಮ್ಮ ದೇಶದಲ್ಲಿಯೇ ಹೀಗೆ ಅವ್ಯವಸ್ಥೆಯಾಗಿದೆಯಲ್ಲಾ! ಸೆಕ್ಯುಲರ್ ಗವರ್ನ್ ಮೆಂಟ್ ಬಂದಿದೆಯಲ್ಲಾ ಎನ್ನುವಿರಿ. ನಿಜ. ಎಲ್ಲಾ ದೇಶಗಳ ಎಲ್ಲಾ ಧರ್ಮಗಳೂ ಇಲ್ಲಿ ಬಂದು ತಮ್ಮ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಾದರೆ, ಮೊದಲು ಇಲ್ಲಿ ಶುದ್ಧಿಯಾಗಬೇಡವೆ? ನೀವು ಹಿಂದೂಗಳು, ಆರ್ಯರು, ಬ್ರಾಹ್ಮಣರು, ಏನಾದರೂ ಕರೆದುಕೊಳ್ಳಿ. ನಿಮಗೆ ಇತರರಿಗಿಂತ ನಾವು ಹೆಚ್ಚು ಎಂಬ ಅಹಂಕಾರ ಬಂದಿಲ್ಲವೆ? ಸಾವಿರಾರು ವರ್ಷದಿಂದ ನಾವು ಗುಲಾಮರಾಗಿದ್ದೇವಲ್ಲ, ನಮ್ಮ ಧರ್ಮದಲ್ಲಿ ಆ ಲೋಪವನ್ನು ಭರ್ತಿ ಮಾಡಿಕೊಳ್ಳೋಣ ಎಂದು ಲೋಪವಿರಬೇಕು. ಯಾವಾಗಲಾದರೂ ಎನ್ನಿಸಿದೆಯೇ? ಇಂಡಿಯದಲ್ಲಿ ನಾವು ಹೆಚ್ಚೆಂದು ಬಾಯಲ್ಲಿ ಹೇಳಿಕೊಳ್ಳುತ್ತ, ನಮ್ಮ ದೇಶದ ಹೊಲೆಯರಿಗಿಂತ ಹೊಲೆಯರಾದವರ ಕೈಗೆ ಸಿಕ್ಕಿ ನರಳಿದುದನ್ನು ಮರೆತಿರಾ? ಇನ್ನೆಷ್ಟು ದಿನ ಈ ಸಂಕೋಚ ಭಾವದಲ್ಲಿ ತೊಳಲುವಿರಿ? ಕೃಣ್ವಂತೋ ವಿಶ್ವಮಾದ್ಯಂ ಎಂಬುದನ್ನು ಏಕೆ ಮರೆತಿರಿ? ನಿಮ್ಮ ದೀಪದಲ್ಲಿ ಇನ್ನೊಬ್ಬ ದೀಪ ಹಚ್ಚಿಕೊಂಡರೆ ನಿಮ್ಮ ದೀಪದ ಬೆಳಕು ಕಮ್ಮಿಯಾಯಿತೆ? ದೀಪ ನಮ್ಮದು, ಇದರ ಬಳಿ ಬರಬೇಡಿ ಎಂದು ಬೇಲಿ ಹಾಕಲು ನಿಮಗೆ ಯಾರು ಅಧಿಕಾರ ಕೊಟ್ಟರು? ವಿಶ್ವಕ್ಕಾಗಿ ಬಂದ ವೇದಧರ್ಮವು ಕೆಲವರ ಹಿತ್ತಿಲಿನ ಮರವಾಗಿ ಮರುಗಬೇಕೇ? ಜೀವ ಜೀವರ ಪ್ರಗತಿಗೆಂದು ಪ್ರಕೃತಿಯ ಸ್ವಭಾವವನ್ನು ಅನುಸರಿಸಿ ವಿಕಾಸವಾದ ವರ್ಣಾಶ್ರಮಧರ್ಮವಿಂದು ಇತರರ ಹಿಂಸೆಗೆ ಕಾರಣವಾಗಬೇಕೆ? ಇವನ್ನೆಲ್ಲ ಈಶ್ವರನು ಇಂದು ಹೊಸ ಮೂಸೆಯಲ್ಲಿಟ್ಟು ಕರಗಿಸಿ ಇದರಲ್ಲಿರುವ ಕಂದು ತೆಗೆದು ಊದಿದ ಬೆಳ್ಳಿಯನ್ನು ಗಟ್ಟಿ ಹೊಯ್ದು ಇಡಬೇಕೆಂದಿರುವನು. ವಿಶ್ವಧರ್ಮದ ವಿಶಾಲಮಂದಿರದಲ್ಲಿ ಎದ್ದಿರುವ ಗೋಡೆಗಳನ್ನು ಸ್ವಾಮಿಯು ತಳ್ಳಿಹಾಕಬೇಕೆಂದು ಹೊರಟಿರುವನು. ಮತ್ತೊಮ್ಮೆ ಈ ಜಗತ್ತು ಮನುಷ್ಯರೆಲ್ಲ ಒಂದೇ ಕುಲದವರು; ಮನುಷ್ಯರು ಕಪಿಸಂತಾನವಲ್ಲ;
ದೇವಸಂತಾನ ಎಂದು ತಿಳಿಯುವರು. ಆಗ ಹಸ್ತದ ಐದು ಬೆರಳೂ ಹೆಚ್ಚು ಕಡಿಮೆಗಳಿದ್ದರೂ ಹಸ್ತದ್ದೇ ಎಂದು ತಿಳಿಯುವ ಹಾಗೆ, ಧರ್ಮವು ಬೇರೆಬೇರೆಯಾಗಿ ಕಂಡರೂ ಒಂದೇ ಮೂಲದ್ದು ಎಂದು ಅರಿತು ನಂಬುವರು. ಅದಕ್ಕಾಗಿ ಇನ್ನೊಬ್ಬ ವಿವೇಕಾನಂದನು ಬರಬೇಕಾಗಿದೆ. ಆ ವಿವೇಕಾನಂದನನ್ನು ತಯಾರಿಸುವ ಮಹಾಶಕ್ತಿಯು ಇಂದು ನಿಮ್ಮನ್ನು ಕೇಳುತ್ತಿದೆ. ದಾನಮಾಡುವಿರಾ? ಲೋಕೋಪಕಾರ ಮಾಡುವಿರಾ?’ ನರಸಿಂಹಯ್ಯನಿಗೆ ಅವರ ಮಾತು ಕೇಳಿ ಮೈ ನವಿರೆದ್ದಿತು. ಕಣ್ಣಲ್ಲಿ ಆನಂದಾಶ್ರುಗಳು ಉದುರಿದುವು. ಕಂಠವು ಬಿಗಿದುಬಂತು. ಎದ್ದು ನಿಂತು ಕೈ ಮುಗಿದು, “ದೇವಾ ಈಶ್ವರಚಿತಕ್ಕೆ ಅಡ್ಡಿ ಬರುವ ದುಷ್ಟವೃತ್ತಿ ನನ್ನಲ್ಲಿ ಹುಟ್ಟದಿರಲಿ. ನನ್ನ ಪಾಲಿನ ಸ್ವಾಮ್ಯವನ್ನು ಕೊಟ್ಟಿದ್ದೇನೆ. ಆದರೆ ಹೆತ್ತ ಕರುಳು, ಅಲ್ಲಿದೆ” ಎಂದು ನಮಸ್ಕಾರ ಮಾಡಿದನು. ಸ್ವಾಮಿಗಳೂ ಆತನ ಮಾತು ಕೇಳಿ ಆನಂದಪಟ್ಟರು. ಅವರಿಗೂ ಕಣ್ಣು ಒದ್ದೆಯಾಗಿ, ಗಂಟಲು ಬಿಗಿದುಬಂತು. ಒಂದು ಗಳಿಗೆ ಸುಮ್ಮನಿದ್ದು “ಏನು ತಾಯಿ, ಒಬ್ಬ ಮಗನನ್ನು ಕೊಡಿ, ಇಬ್ಬರು ಮಕ್ಕಳನ್ನು ಎತ್ತಿಕೊಳ್ಳಿ. ಆಗಬಹುದೇ?” ಎಂದರು. ನರಸಿಂಹಯ್ಯನ ಪತ್ನಿ ಏನೋ ಸ್ವಪ್ನದಲ್ಲಿ ಇದ್ದವರಂತೆ ಕಣ್ಣು ಬಿಟ್ಟು, ಗಂಡನು ನಿಂತಿರುವುದನ್ನು ಕಂಡು ತಾವೂ ಎದ್ದು ನಿಂತು. ಅರೆ ನಿದ್ದೆಯಲ್ಲಿ ಮಾತನಾಡುವರಂತೆ, “ಮನೇ ದೇವರಾಗಿ ಬಂದು ನಿಂತುಕೊಂಡಿದ್ದೀಯೆ. ಮೂಗುತಿ ಕೊಡು, ಎರಡು ಕಿವಿಗೂ ಎರಡು ವಾಲೆ ಕೊಡುತ್ತೀನಿ ಅಂತಿದ್ದೀಯೆ, ವಜ್ರದ ಮೂಗುತಿ ಬೇಕು ಎಂದವನು ಮೂಗೇಕೆ ಬರಿದು ಮಾಡುತ್ತೀಯೆ? ಅದಕ್ಕೂ ಒಂದು ಕೊಡು’ ಎಂದು ಅಡ್ಡಬಿದ್ದರು. “” “ಆಗಬಹುದು. ಎರಡು ಗಂಡು ಒಂದು ಹೆಣ್ಣು. “ಅಷ್ಟೇ ಸಾಲದು. “ಇನ್ನೇನು ಬೇಕು?”
“ನಮ್ಮ ಮನೆ ನಂದಾದೀಪ ಹತ್ತು ಕಾಲ ತುಪ್ಪದ ನಂದಾದೀಪವಾಗಿರಬೇಕು.” “ಇನ್ನು ನೂರು ವರ್ಷ ನಿಮ್ಮ ಮನೆಯಲ್ಲಿ ತುಪ್ಪದ ನಂದಾದೀಪ ಬೆಳಗಲಿ.” “ಅಭಯಹಸ್ತವಲ್ಲಿ ಮತ್ತೆ?’ “ಇಗೋ?’ ಸನ್ಯಾಸಿಗಳು ಕೈನೀಡಿದರು. ಆ ಮುತ್ತೈದೆಯು ಸಂತೋಷವಾಗಿ, ನಮಸ್ಕಾರಮಾಡಿ “ಕೊಟ್ಟೆ’ ಎಂದರು. ಸನ್ಯಾಸಿಗಳು ಕಣ್ಣುಬಿಟ್ಟು ಗೌಡನ ಮುಖ ನೋಡಿದರು. ಗೌಡ ದೊಡ್ಡ ಹೆಂಡತಿಯ ಮುಖ ನೋಡಿದನು. ಅವಳು ಏನೋ ತರುವುದಕ್ಕೆ ಅತ್ತ ಹೋದಳು. ವೀಣಾ ನಕ್ಕಳು. ಎಲ್ಲರ ಕಣ್ಣು ಅತ್ತ ತಿರುಗಿತು. ಅವಳು “ಸ್ವಾಮಿಗಳೇ, ನನ್ನ ಪಾಲು ನಾನು ಕೊಡದಿದ್ದರೆ?” ಎಂದಳು. ಸ್ವಾಮಿಗಳು ಥಟ್ಟನೆ ಉಗ್ರವಾಗಿ ಅತ್ತ ತಿರುಗಿದರು. “ಪಾಲು ಕೇಳುವವಳು ನೀನು ಯಾರು?” ಎಂದು ಗರ್ಜಿಸಿದರು.
ವೀಣಾ ಕೊಂಚವೂ ಹೆದರದೆ, “ಶ್ರೀನಿವಾಸ ನನ್ನ ಗಂಡ, ನಾನು ಇವನನ್ನು ಒಪ್ಪಿದ್ದೇನೆ. ನಾನು ಕೊಡುವುದಿಲ್ಲ.” ಎಂದಳು. ಸನ್ಯಾಸಿಗಳು ಆ ಮಾತನ್ನು ಹುಡುಗಿಯ ಹುಡುಗು ನುಡಿಯೆಂದು ತಳ್ಳಲಿಲ್ಲ ಒಂದು ನಿಟ್ಟುಸಿರು ಬಿಟ್ಟರು. “ಆಗಲಿ, ಬಿಡು, ಸುಂಕಕೊಟ್ಟರಾಯಿತೋ ಇಲ್ಲವೋ? ಕಾಲಬಂದಾಗ ಸಾಲ ತೀರಿಸಿಕೋ, ನೀನು ನಾಣ್ಯ ಬೇಕೆಂದಾಗ ಅವನು ನೋಟು ಕೊಡುತ್ತಾನೆ ಹೋಗು” ಎಂದರು. ವೀಣಾ ಅಳುತ್ತ ಎದ್ದು ಹೋದಳು. ಮಲ್ಲಮ್ಮನು ಆ ವೇಳೆಗೆ ಒಂದು ತಟ್ಟೆ ತಂದಿಟ್ಟಳು. ಅದರ ತುಂಬಾ ರೂಪಾಯಿ ಗಳು ನೋಟುಗಳು, ಒಂದು ಬಂಗಾರದ ತಾಯಿತಿ “ಏನು ಶ್ರೀನಿವಾಸ, ನೀನೇನು ಹೇಳುತ್ತೀಯೆ? ನಿನ್ನ ಇಪ್ಪವೇನು?” ಸನ್ಯಾಸಿಗಳು ಕೇಳಿದರು. “ಏನೋ ತಮ್ಮ ಜೊತೆಯಲ್ಲಿ ಯಾವಾಗಲೂ ಇರಬೇಕು ಎನ್ನಿಸುತ್ತಿದೆ.” “ಈಗ ಸದ್ಯದಲ್ಲಿ ನಿಮ್ಮ ತಾಯಿ ಅಪ್ಪಣೆಯಾಗುವವರೆಗೂ ನಾವು ನಿನ್ನ ಜೊತೆಯಲ್ಲಿರುತ್ತೇವೆ. ಆಮೇಲೆ ನೀನು ನಮ್ಮ ಜೊತೆಯಲ್ಲಿರುವಂತೆ ಇಲ್ಲಿ ಬಾ. ನರಸಿಂಹಯ್ಯನವರೇ, ನೀವು ದಂಪತಿಗಳು ಅಪ್ಪಣೆ ಕೊಡಿ. ಇವನಿಗೊಂದು ಸಂಸ್ಕಾರ ಮಾಡುತ್ತೇವೆ.” ಇಬ್ಬರೂ ಕೀಲು ಬೊಂಬೆಗಳಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡು ಆಗಬಹುದು” ಎಂದರು. ಸನ್ಯಾಸಿಗಳು ಹುಡುಗನ ತಲೆಯ ಮೇಲೆ ಕೈಯಿಟ್ಟರು. “ಏನಾಗುತ್ತಿದೆ?” ಎಂದು ಕೇಳಿದರು. ಹುಡುಗನು ಒಂದು ಗಳಿಗೆ ತನ್ನಲ್ಲಿ ಆಗುತ್ತಿರುವ ಕಾವ್ಯವನ್ನು ನೋಡಿ, ಅದರ ಸುಖವನ್ನು ಅನುಭವಿಸಿ, “ಸಣ್ಣನೆ ಸೋನೆ ಮಳೆ ಮೇಲೆ ಉದುರುತ್ತಿದೆ. ಅದು ಮೈಯೆಲ್ಲ ವ್ಯಾಪಿಸಿ, ಬಹು ಸುಖಪಡಿಸುತ್ತಿದೆ” ಎಂದನು. “ಹುಬ್ಬಿನ ನಡುವೆ ಮನಸ್ಸಿಟ್ಟು ಆ ಸುಖದ ಮಧ್ಯೆ ಏನಿದೆ ನೋಡು.” “ಅಲ್ಲೊಂದು ನೀಲಿಯ ಬೆಳಕಿದೆ.” ಅದನ್ನು ನೋಡಿ, ಅದಕ್ಕೆ ಪಂಚೋಪಚಾರ ಪೂಜೆಮಾಡು, ಯಾವಾಗಲೂ ದರ್ಶನ ಕೊಡುತ್ತಿರಬೇಕೆಂದೂ ಕೇಳಿಕೊ.” ಹುಡುಗನು ಎದ್ದು ನಮಸ್ಕಾರ ಮಾಡಿದನು. ಇದು ಯಾರಿಗೂ ಕಾಣದ್ದು ನನಗೆ ಕಂಡಿತು ಎಂದುಕೊಳ್ಳಬೇಡ. ಎಳ್ಳುಎಳ್ಳಿನಲ್ಲಿಯೂ ಎಣ್ಣೆ ಇರುವಂತೆ ಇದು ದೇಹದೇಹದಲ್ಲೂ ಇದೆ, ಬೇಕೆಂದವರಿಗೆಲ್ಲ ಕಾಣುತ್ತದೆ. ದಿನವೂ ಸಾವಿರ ಗಾಯತ್ರಿ ಮಾಡು, ತಂದೆತಾಯಿಗಳ ಮಾತು ವೇದವಾಕ್ಯವೆಂದು ನಡೆದುಕೊ, ಇನ್ನು ಹತ್ತುವರ್ಷ ಅವರಲ್ಲಿ ಇದ್ದು ಓದನ್ನೆಲ್ಲಾ ಪೂರೈಸು. ಮುಂದಿನ ಮಾತು ಆಮೇಲೆ. ನರಸಿಂಹಯ್ಯ, ಈ ನಮ್ಮ ವಸ್ತು ನಿಮ್ಮಲ್ಲಿ ಇರಲಿ, ನಿಮಗೆ ಮಗನಿಗೆ ಏನೇನು ಓದಿಸಬೇಕು ಎಂದು ತೋರಿದರೆ ಅದನ್ನೆಲ್ಲ ಓದಿಸಿ, ಖರ್ಚಿನ ವಿಚಾರ ಯೋಚಿಸಬೇಡಿ, ಇಕೋ, ತಕ್ಕೊಳ್ಳಿ.
ಐದು ಸಾವಿರ ರೂಪಾಯಿ ಇದೆ. ಇದು ಬೀಜಧನ. ಇದು ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ ಬೆಳೆಯಲಿ, ತಾಯಿ, ನಿಮಗೆ ಇನ್ನು ಮೂರು ಒಡವೆ ಸಿಕ್ಕುವವರೆಗೂ ಈ ಒಡವೆ ನಮ್ಮದಾಗಿ ನಿಮ್ಮಲ್ಲಿರಲಿ. ನಿಮ್ಮ ಸಂತೋಷ ದಿನದಿನಕ್ಕೂ ಬೆಳೆಯಲಿ, ಹಾಲುಕ್ಕಿದ ಹಾಗೆ ಉಕ್ಕಲಿ, ಏನು ರಾಯರೇ? ತಾವೇನೂ ಮಾತೇ ಆಡಲಿಲ್ಲವಲ್ಲ?” “ನಮ್ಮ ಮಗ ಬಂದಾಗಲೇ ಬಾ ಬರಬೇಕಿತ್ತು ಅಂತ ಈಗ ಒದ್ದಾಡುತ್ತಿದ್ದೇನೆ. ಏನು ಹೇಳಿ?” “ನೀವು ಮಂಜುನಾಥನ ಸೇವೆ ಆಗಲೇ ಮಾಡಿದ್ದರೆ ಆಗಲೇ ಬರುತ್ತಿದ್ದಿರಿ. ಆಯಿತು, ಈಗಲಾದರೂ ಬಂದರಲ್ಲ, ತಿರುಪತಿಗೂ ಹೋಗಿ ಬಂದು ಸುಖವಾಗಿದ್ದು ಬಿಡಿ ರಾಯರೆ?” “ಆದೀತು ಮಾರಾಯರೇ ನಮ್ಮ ವೀಣಾ ಸುಖವಾಗಿರಬೇಕು.” “ವೀಣಾ ಅಂತ ಹೆಸರಿಟ್ಟಿದ್ದೀರಿ. ಏನಮ್ಮ ವೀಣೆ ನುಡಿತಿದ್ದರೆ ಸುಖವೋ? ಮೂಲೆಯಲ್ಲಿ ಮುಸುಕಿ ಹಾಕಿಕೊಂಡು ಕೂತಿದ್ದರೆ ಸುಖವೋ?” “ಮುಸುಕಿ ಹಾಕಿಕೊಂಡಿದ್ದರೆ ಅದಕ್ಕೆ ಸುಖ. ನುಡೀತಿದ್ದರೆ ಇತರರಿಗೆ ಸುಖ. “ನಿನಗೆ ಹೇಗೆ ಇರಬೇಕು ಎಂದಾಶೆ?” “” “ನುಡಿದು ಸುಖಪಡಿಸಿ, ಸುಮ್ಮನಾಗಿ, ಪೂಜೆ ಮಾಡಿಸಿಕೊಳ್ಳಬೇಕು.” “ಆ ಬುದ್ಧಿ ನೋಡಿದಿರಾ? ಹೌದು. ಹೊಸಯುಗದ ಹೆಣ್ಣು ನುಡೀಬೇಕು. ಸುಖಪಡಿಸಬೇಕು. ಸುಮ್ಮನಾಗಬೇಕು. ಪೂಜೆ ಮಾಡಿಸಿಕೊಳ್ಳಬೇಕು. ಆಗಲಮ್ಮ ಅಷ್ಟೂ ಆಗಲಿ, ಯಾರ ರುಣ ಎಷ್ಟೆಷ್ಟು ತಂದಿದ್ದೀಯೊ ಅಷ್ಟು ಕೊಟ್ಟು ಕೊನೆಗೆ ಪೂಜೆಮಾಡಿಸಿಕೊಳ್ಳುವವಳೇ ಆಗು’ ಎಂದು ಎಲ್ಲರನ್ನೂ ಬೀಳ್ಕೊಂಡರು. ಗೌಡನೂ ಮಲ್ಲಮ್ಮನೂ ಇನ್ನೂ ನಿಂತಿದ್ದರು. ಯಿತು. “ಏನು ಗೌಡರೆ?” “ಏನು ಹೇಳಲಿ, ಬುದ್ಧಿ, ಇವೊತ್ತಿನ ಮಾತು ಕೇಳಿ ಗಂಗೆಯಲ್ಲಿ ಮಿಂದಾಗಾ “ಎಲ್ಲಾ ನಿಮ್ಮ ಪುಣ್ಯ. ನೀವು ಆ ಭಾರಿ ಹಣ ಕೊಡದಿದ್ದರೆ ಇದೆಲ್ಲಿ ಸಾಧ್ಯವಾಗುತ್ತಿತ್ತು? ಮುಖ್ಯ ನಿಮಗಿಂತ ನಿಮ್ಮ ಹೆಂಡತಿ, ನಮ್ಮ ತಾಯಿ, ಮಲ್ಲಮ್ಮನ ಪುಣ್ಯ ದೊಡ್ಡದು. ಏನು ತಾಯಿ, ಮಗನ್ನ ಕೊಂಡುಕೊಂಡೆ, ಆದರೆ ಮಗ ಸನ್ಯಾಸಿ. “” ಮಲ್ಲಮ್ಮ ಕಣ್ಣೀರು ಚೆಲ್ಲಾಡಲು ಸೆರಗಿಂದ ಒರಸಿಕೊಂಡು, “ಅಪ್ಪಾ, ನಾ ನಿನ್ನ ಮಗಳಾದೆ. ನನ್ನ ಉದ್ದಾರ ಮಾಡಿದೆ. ನನ್ನ ದೊರೆ. ನನಗೆ ಮಕ್ಕಳಿಲ್ಲ, ನಾನು ಬಂಜೆ ಅನ್ನೋ ದುಕ್ಕ ಉಕ್ಕುತ್ತಿತ್ತು ಅದು ತಪ್ಪಿದೆ. ನನ್ನ ಗಂಡನಿಗೆ ಮಗನಾಗಲಿ, ನಿನ್ನ ಹರಕೆ ನಿಜವಾಗಲಿ, ಆ ಮಗನೇ ನನಗೂ ಗತಿಕಾಣಿಸಲಿ,” ಎಂದು ನಮಸ್ಕಾರ ಮಾಡಿದಳು. ಗೌಡನು “ಪರಶಿವನೇ ಈ ರೂಪವಾಗಿ ಬಂದಾಗದೆ. ಏಕೆ ಇದ್ದುದೆಲ್ಲಾ ಕೊಟ್ಟು ಜೋಗಿಯಾಗಿ ಇವನ ಹಿಂದೆ ಹೋಗಬಾರದು?” ಎಂದು ಯೋಚಿಸುತ್ತಿದ್ದನು.
ಕೂಡಲೇ ಸನ್ಯಾಸಿ “ಅದೆಲ್ಲಾ ಕೂಡದು. ಮಲ್ಲಮ್ಮನ ಮನಸ್ಸು ನೋಯದಂತೆ ಮನೆವಾಳತನ ನಡೆಸಿಕೊಂಡು, ಹಾದಿಬೀದಿ ಹಿಡಿದು ಬಂದ ಜೋಗಿ ಜಂಗಮರಿಗೆ ಹಿಟ್ಟುರೊಟ್ಟಿ ಆದರಿಸಿದರೆ ಶಿವನ ಕೈಲಾಸ ನಿಮ್ಮ ಮನೆ ಬಾಗಿಲಿಗೆ ಬರುತದೆ ಗೌಡರೆ!” ಎಂದರು. ಗೌಡನು ಏನೋ ಮನಸಿನಲ್ಲಿ ಹಾಗೇ ಆಗಲಿ ಬದ್ಧಿ” ಎಂದು ಕೈಮುಗಿದನು. “ನಮ್ಮ ಕೆಲಸವಾಯಿತು. ನಾವು ನಾಳೆ ಮುಂದಕ್ಕೆ ಹೊರಡೋಣವೋ?” “ನರಸಿಂಹಯ್ಯನವರು ಎರಡು ದಿನ ಇರುತ್ತಾರೆ. ಅಲ್ಲದೆ, ತಾವು ಹೇಳಿದ್ದ ವಾಯಿದೆಗೆ ಇನ್ನೂ ಎಂಟು ದಿನ ಇದೆ.’ “ಆಗಲಿ, ಇನ್ನೆಂಟು ದಿನದಲ್ಲಿ ಕಳೆದುಹೋಗುವುದೇನು?”
*****
ಮುಂದುವರೆಯುವುದು
















