William Blake ಕಾವ್ಯಸಿದ್ಧಿಯ ಕಲಾಕಾರ

William Blake ಕಾವ್ಯಸಿದ್ಧಿಯ ಕಲಾಕಾರ

ವಿಲಿಯಂ ಬ್ಲೇಕ್ ರೋಮ್ಯಾಂಟಿಸಿಸಂನ ಆದ್ಯ ಹಾಗೂ ಪ್ರಮುಖ ಕವಿ. ಆದಾಗ್ಯೂ ಅನುಭಾವ ಹಾಗೂ ಸಚಿತ್ರ ಅಭಿವ್ಯಕ್ತಿಯಿಂದ ಸಶಕ್ತ ಸಾಹಿತ್ಯ ಆತನದು. ಆ ಮೂಲಕ ಕಾವ್ಯವನ್ನು ಪರಿಣಾಮಕಾರಿಗೊಳಿಸುತ್ತಾನೆ. ಪ್ರಾಣಿ ಪ್ರೀತಿ, ವಿವಿಧ ಆಯಾಮ ಹಾಗೂ ಪೃಕ್ರಿಯೆಗಳ ಮೂಲಕ ಜನಸಾಮಾನ್ಯನ ಗುರುತಿಸುವಿಕೆ, ಮನುಷ್ಯರಹಿತ ಜಗತ್ತು, ನೈಸರ್ಗಿಕ ಆರಾಧನೆ ಇವೆಲ್ಲವೂ ಬ್ಲೇಕನ ರೋಮ್ಯಾಂಟಿಸಿಸಂನ ಲಕ್ಷಣಗಳೆನ್ನಬಹುದು.

ಬ್ಲೇಕ್‌ನ ಕವಿತೆಗಳಲ್ಲಿ ಎರಡು ಪ್ರಮುಖ ವಿಸ್ತಾರಗಳ ಕಾಣಬಹುದು. ಆತ ಎರಡು ಮುಖ್ಯ ಪಟ್ಟಿಗಳಲ್ಲಿ ಕಾವ್ಯ ರಚಿಸಿರುವುದು. “Songs of experience” ಮತ್ತು “Songs of innocence”. “Songs of innocence” ಹೆಸರಿಗೆ ತಕ್ಕಂತೆ ಮೊದಲ ಗತಿ ಮಾನವನ ಅಧಃಪತನದ ಮುನ್ನಿನ ಸ್ಥಿತಿಗತಿಗಳ ಪ್ರಸ್ತುತ ಪಡಿಸುತ್ತದೆ. ಅದರಲ್ಲಿಯ ಮಗು, ಆಡು, ಕುರಿಮರಿ, ಹೂ ಇವೆಲ್ಲವೂ ನಿಷ್ಕಪಟತೆಗೆ, ಕೋಮಲತೆಗೆ, ಮುಗ್ಧತೆಗೆ ಸಂಕೇತಗಳಾಗಿ ನಿಲ್ಲುತ್ತವೆ. ಇದು ಸಂಪೂರ್ಣವಾಗಿ ಮಗುವಿನ ಮುಗ್ಧತೆಯ ಜಗತ್ತು. ಸಂತೋಷ ಆನಂದ, ಹುರುಪುಗಳಿಂದ ಕೂಡಿದ ಮಾರ್ದವ ಜಗತ್ತು.

ಅದೇ Songs of Experience ಎಂಬಲ್ಲಿ ಅದು ಶೋಷಣೆ, ಸಾಮಾಜಿಕ ಅನ್ಯಾಯ, ಭ್ರಷ್ಟತೆ, ಅನಿಷ್ಟಗಳು, ರೋಗಗ್ರಸ್ತ ಮನಸ್ಸನ್ನು ಪರಿಚಯಿಸುತ್ತದೆ. ಇಲ್ಲಿ ಕವಿ ಬಳಸುವ ಸಂಕೇತಗಳಾದ ಹಾವು ಮುಳ್ಳುಗಳು, ಮಸಣ, ರಕ್ತ, ಭರ್ಚಿ, ಇವೆಲ್ಲವೂ ಪ್ರೌಢ ಲೋಕದ ಕಪಟತೆ, ದುಷ್ಟತೆಗೆ ಸಂಕೇತಗಳಾಗುತ್ತವೆ. “The Tiger” ಬ್ಲೇಕನ ಅಪೂರ್ವ ಕಾವ್ಯ ಕುಸುಮ. ಇದಾತನ ಎರಡನೇಯ ಕಾವ್ಯ ಸಂವೇದನೆ Songs of experience ಕಾವ್ಯ ಸಂಪುಟದಲ್ಲಿದೆ. ಪ್ರೌಢ ಜಗತ್ತಿನ ಅನಿಷ್ಟತೆ, ದುಷ್ಟತನವನ್ನು ಪ್ರತಿನಿಧಿಸುವ ಸಂಕೀರ್ಣ ಕವನ. ಸಂಕೇತಗಳ ಮೂಲಕವೇ ಕಾವ್ಯ ವಿಶಿಷ್ಟ ಅಭಿವ್ಯಕ್ತಿಯನ್ನು ಮೂಡಿಸುತ್ತದೆ. ಪ್ರಕೃತಿಯ ಸಂಗತಿಗಳನ್ನೇ ಸಂಕೇತಗಳಾಗಿ ಬಳಸುತ್ತಾನೆ ಕವಿ.
ಈ ಕವನದಲ್ಲಿ ಟೈಗರ [ಹುಲಿ] ಮತ್ತು ಲ್ಯಾಂಬ್[ಕುರಿಮರಿ]ಗಳನ್ನು ಪ್ರತಿಮೆಗಳಾಗಿ ಬಳಸಿ ವಿರುದ್ಧ ಸ್ವಭಾವದ, ದೈಹಿಕತೆಯ, ವಿರುದ್ಧ ಪ್ರವೃತ್ತಿಯ ಇವೆರಡೂ ಭೀನ್ನ ಸ್ವಭಾವಗಳಾದ ಸಬಲತೆ ಮತ್ತು ಅಸಹಾಯಕತೆಗಳ ಸೃಷ್ಟಿಸುತ್ತ ಪರಮಾತ್ಮನ ಕುಶಲ ಕೈ ಮತ್ತು ಕಣ್ಣಗಳು ಮಾರ್ಮೀಕತೆಯ ಚಿತ್ರಣ ಕೊಡುತ್ತಾನೆ.

ಕವಿತೆ ಮೂರು ಹಂತಗಳಲ್ಲಿದೆ. ಮೊದಲ ನುಡಿ ಟೈಗರ ಭೌತಿಕ ಶರೀರವನ್ನು ಚಿತ್ರಿಸುತ್ತದೆ. ಇಲ್ಲಿಯೂ ಎರಡು ಭಿನ್ನ ವಿಚಾರಗಳ ವಿಶದೀಕರಿಸುವಲ್ಲಿ ಆಳವಾದ ಕಾರಣ ನೀಡುತ್ತಾನೆ. ರಾತ್ರಿಯ ಕಗ್ಗತ್ತಲೆಯಲ್ಲಿ ಪಂಜಿನ ಜ್ವಾಲೆಯಂತೆ ಉರಿಯುವ ಅದರ ಕಣ್ಣುಗಳು, ಸೃಷ್ಟಿಯ ಅಗಾಧ ವೈಚಿತ್ರ್ಯವಾಗಿ ಶಕ್ತಿಶಾಲಿ ಪ್ರತೀಕವಾಗಿ ಬರುತ್ತಲೇ, ಅದರ ಕೈ ಕಾಲು ಹೃದಯ ಬಡಿತ ಅದ ಸೃಷ್ಟಿಸಿದ ಭಗವಂತನ ಭಯಾನಕ ನಿಗೂಢ ಕಲಾತ್ಮಕತೆ ವಿವರಿಸುತ್ತ ನಿಸರ್ಗದ ರುಧ್ರ ರಮಣೀಯತೆಯ ಸಾಕ್ಷೀಕರಿಸಿದ ದೇವನನ್ನು ಪ್ರಸ್ನಿಸುತ್ತಾನೆ. ಎರಡನೇಯ ಆಯಾಮದಲ್ಲಿ ಟೈಗರನ ದೈವಿಕ ಮೂಲವನ್ನು ಉಲ್ಲೇಖಿಸುತ್ತದೆ. ಕೊನೆಯಲ್ಲಿ ಸಕಾರಾತ್ಮಕ ಅಲಂಕಾರಿಕ ನಿಲುವು ವ್ಯಕ್ತಗೊಂಡಿದೆ. ದೇವನ ಅದೇ ಕೈಗಳು ಲ್ಯಾಂಬನಂತಹ ದುರ್ಬಲ ಜೀವಿಯನ್ನು ಸೃಷ್ಟಿಸಿರುವುದು ಯಾಕೆ? ಎಂಬ ಪ್ರಶ್ನೆ. “Did he who made the lamb make thee”. ಲ್ಯಾಂಬ್ [ಕುರಿಮರಿ] ಮುಗ್ಧತೆಯ ಸಾಂಪ್ರದಾಯಿಕ ಲಾಂಛನ. ಬೈಬಲನ ಹೊಸ ಒಡಂಬಡಿಕೆಯಂತೆ ಕ್ರೀಸ್ತನನ್ನು ದೇವನ ಪ್ರೀತಿಯ ಕುರಿಮರಿ ಎಂದು ಮನುಕುಲದ ಪಾಪಕ್ಕಾಗಿ ತನ್ನನ್ನು ತ್ಯಾಗ ಮಾಡಿಕೊಂಡ ಚೇತನವಾಗಿದ್ದಾನೆ. ಕವಿಯ ಪ್ರಶ್ನೆ. ಅಂದರೆ ನಿಸರ್ಗದ ನಿಗೂಢತೆಯೂ ಕವಿತೆಯಲ್ಲಿ ಪದರ ಪದರವಾಗಿ ಬಿಚ್ಚಿಕೊಳ್ಳುತ್ತದೆ. ಕೆಲವು ವಿಮರ್ಶಕರ ಪ್ರಕಾರ ಕವನ ೧೮ ನೇ ಶತಮಾನದಲ್ಲಿ ಇಂಗ್ಲೆಂಡಿನ ಉಂಟಾದ ವ್ಯಾಪಕ ಕೈಗಾರೀಕರಣ, ಬಂಡವಾಳಶಾಹಿತ್ವ, ಕೊಳ್ಳುಬಾಕ ಸಂಸ್ಕೃತಿ ಧಾರ್ಮಿಕ ಏಕಸಾಮಿತ್ವ ಇವೆಲ್ಲ ವ್ಯವಸ್ಥೆಯ ಸೂಚ್ಯತೆಯನ್ನು ಬಿಂಬಿಸುತ್ತದೆ. ಒಂದು ಮುಖದಲ್ಲಿ ಟೈಗರನ ದುಷ್ಟತೆ, ಭಯಾನಕತೆಗಳ ಪಡಿಮೂಡಿಸುತ್ತ ಆ ಮೂಲಕ ಜಗತ್ತಿನಲ್ಲಿ ತಾಂಡವವಾಡುತ್ತಿರುವ ಅನಿಷ್ಟಗಳ ಪ್ರತಿನಿದಿಸುತ್ತದೆ. ಅದಲ್ಲದೇ ಸೃಷ್ಟಿಕರ್ತನ ಅಸೀಮ ಸಾಮರ್ಥ್ಯ, ಅಗ್ನಿಯ ಪ್ರಜ್ಞೆಯೊಂದಿಗೆ ಸ್ಪುಟಗೊಳ್ಳುತ್ತದೆ. ದೇವನ ಸೃಷ್ಟಿಯ ವೈವಿಧ್ಯತೆಯನ್ನು, ಆತನ ಗಣಿಸಲಾಗದ ಅಪಾರತೆಯನ್ನು, ತನ್ನ ಸೃಷ್ಟಿಯ ಸಕಲ ಚರಾಚರಗಳಲ್ಲಿ ಆತನ ಗಾಢ ಪ್ರೀತಿಯನ್ನು ಕವನ ಅಭೂತವಾಗಿ ವ್ಯಕ್ತಪಡಿಸುತ್ತದೆ. ಸದ್ಭುದ್ದಿ, ದುರ್ಬುದ್ಧಿ, ಸಜ್ಜನ ದುರ್ಜನ, ಇವೆಲ್ಲವೂ ಪರಮಾತ್ಮನ ಲೀಲೆಯ ಸೃಜನತೆಯೇ ಆದರೂ ಪ್ರೀತಿ, ದ್ವೇಷ, ಭಯ ಇಂತಹ ಪರಸ್ಪರ ಭಿನ್ನ ಸಂವೇದನೆ ಸ್ವಭಾವಗಳ ಔಚಿತ್ಯವನ್ನು ಪ್ರಶ್ನಿಸುತ್ತದೆ ಕವನ.

“What immortal hand or eye.
Could frame thy fearful symmetry”
ಸೃಷ್ಟಿಕರ್ತ ಕಲಾಕಾರ ಅದ್ವಿತೀಯ ಧೈರ್ಯಸ್ಥ. ಭಯಾನಕತೆ ಮತ್ತು ಪ್ರೇಮಮಯ ಮೃದುತ್ವ ಇವೆರಡೂ ಆತನ ಕಲೆ ಎಂಬ ತಾತ್ಪರ್ಯದೊಂದಿಗೆ ಆಶಾವಾದ ಕಂಗೊಳಿಸುತ್ತದೆ.

ಆತನ ಇನ್ನೊಂದು ಕವನ “The School Boy” ವಿಲಿಯಂ ಬ್ಲೇಕ್ ತನ್ನ ಶಾಲಾ ದಿನಗಳ ನೆನೆದು ಬರೆಯುತ್ತಾನೆ. ಎರಡು ಕಲ್ಪನೆಗಳಲ್ಲಿ ಕವಿತೆ ಕಟ್ಟಿದ್ದು ಕವಿ ಬೇಸಿಗೆಯ ಮುಂಜಾನೆಯ ತನ್ನ ರಸವತ್ತಾಧ ಅನುಭವಗಳ ಆಹ್ಲಾದತೆಯನ್ನು ಅತ್ಯಂತ ಆಪ್ತವಾಗಿ ಸಂಭ್ರಮಿಸಿದರೆ ಅದೇ ಮುಂಜಾನೆ ಎದ್ದು ಯಾಂತ್ರಿಕ ಕಲಿಕೆಯ ಕೇಂದ್ರವಾದ ಶಾಲೆಗೆ ಹೋಗಲು ತನಗಿದ್ದ ಅನಾಸಕ್ತಿ, ನಿರುತ್ಸಾಹವನ್ನು ವೇದನೆಯೊಂದಿಗೆ ನಿವೇದಿಸುತ್ತಾನೆ. ಹೆತ್ತವರು ಚಿಗುರುವ ತಮ್ಮ ಕುಡಿಗಳ ಸೃಜನಶಿಲತೆಯ ಬಾಲ್ಯದಲ್ಲಿಯೇ ಧಮನಿಸಿದರೆ ಅದು ತಾನಾಗಿ ಸ್ವತಂತ್ರ ಗಿಡವಾಗಿ ಬೆಳೆಯಲಾಗದು ಎಂಬ ಸಂದೇಶ ಸಾರುತ್ತದೆ ಈ ಕವನ.

“ವಸಂತ ಕಾಲದ ನಸುಕಿನಲ್ಲಿ ಬೇಗನೆ ಏಳಲು ನನಗಿಷ್ಟ. ಪ್ರಕೃತಿಯ ಮಡಿಲಲ್ಲಿ ಹಕ್ಕಿಗಳು ಹಾಡುತ್ತವೆ. ಅನತಿ ದೂರದಲ್ಲಿ ಬೇಟೆಗಾರನೊಬ್ಬನ ಕೊಂಬಿನ ಸದ್ದು ಕೇಳಿ ಬರುತ್ತದೆ. ಬಾನಾಡಿಗಳೊಂದಿಗೆ ನನ್ನ ಹಾಡು, ಆಹಾ! ಎಂತಹ ಮಧುರ ಬಾಂದವ್ಯ”
ಆದರೆ But to go to school on a summer morn
O! it drives all joy away
Under a cruel eye outworn”
ವಸಂತದ ಬೆಳಗು ಶಾಲೆಗೆ ಹೋಗುವುದೆಂದರೆ ನನ್ನೆಲ್ಲಾ ಹುರುಪು ಸಂತೋಷಗಳ ಆ ನೆನಕೆ ಕಳೆದುಬಿಡುತ್ತದೆ. ಉಸಿರುಗಟ್ಟಿಸುವ ಕ್ರೂರ ಕಣ್ಣುಗಳ ಮೇಲ್ವಿಚಾರಣೆಯಲ್ಲಿ ದಿನವೀಡಿ ಬಳಲಿ, ನಡಗುತ್ತಾ ನಿಟ್ಟುಸಿರು ಬಿಡುತ್ತಾ ಕಾಲ ಕಳೆಯುವ ತಾನು ಪುಸ್ತಕಗಳಲ್ಲಾಗಲಿ ಶಾಲೆಯಲ್ಲಾಗಲಿ ಬೋಧಿಸುವ ಪಾಠಗಳಲ್ಲಾಗಲಿ ಸಂತಸ ಪಡಲಾರೆ ಎಂದು ನುಡಿಯುತ್ತಾನೆ.

ಸ್ವತಂತ್ರವಾಗಿ ಹಾರಿಕೊಂಡು ಸಂತಸ ಪಡಬೇಕಾದ ಪಕ್ಷಿಯನ್ನು ಪಂಜರದಲ್ಲಿಟ್ಟು ಬಂಧಿಯಾಗಿಸಿದರೆ ಅದು ಹೇಗೆ ತಾನೇ ಹಾಡೀತು? ಉತ್ಸಾಹದ ಚಿಲುಮೆಯಂತಹ ಪುಟ್ಟ ಮಗುವನ್ನು ಭಯಬೀತ ಶಿಸ್ತುಭರಿತ ಔಪಚಾರಿಕ ಶಿಕ್ಷಣ ಎಂಬ ಸೆರೆಮನೆಯಲ್ಲಿ ತುಂಬಿ ಒತ್ತಾಯದ ಜ್ಞಾನದ ಹೇರಿಕೆ ಹಾಕಿದರೆ ಅದು ಹೇಗೆ ತಾನೆ ಶಿಕ್ಷಣವನ್ನು ಆನಂದಿಸಲು ಸಾಧ್ಯವೆಂದು ಪ್ರಶ್ನಿಸುತ್ತಾನೆ. “ಓ, ತಂದೆ ತಾಯಿಗಳೇ, ಮೊಗ್ಗು ತರಿದು, ಹೂಗಳ ಕಿತ್ತು, ಎಳೆಯ ಬಳ್ಳಿಯ ಮುರಿದು ಬತ್ತಲಾಗಿಸಿದರೆ ವಸಂತ ಕಾಲ ಹೇಗೆ ಬಂದೀತು? ಎಂದು ಮುಗ್ಧ ಮಗು ಪ್ರಶ್ನಿಸುತ್ತದೆ” ಮಕ್ಕಳ ವಿದ್ಯಾವಂತರನ್ನಾಗಿಸುವ ಹಂಬಲ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವ ಗಡಿಬಿಡಿಯಲ್ಲಿ ಅವರ ನೈಜ ಸತ್ವವನ್ನು ನಾಶಮಾಡುತ್ತಿದ್ದೇವೆ. ರಚನಾತ್ಮಕತೆಯನ್ನು ಬರಡುಮಾಡುತ್ತಿದ್ದೇವೆ. ಎಂಬ ಧ್ವನಿ ಇಲ್ಲಿ ಬಿಂಬಿತವಾಗಿದೆ.

ವಿಲಿಯಂ ಬ್ಲೇಕ್ ೧೭೫೭ ನವೆಂಬರ ೨೮ರಂದು ಲಂಡನ್ನಿನ ಸೋಹಿಯೋದಲ್ಲಿ ಜನಿಸಿದ. ಶಾಲಾ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ ಈತ ಕವಿಯಷ್ಟೇ ಅಲ್ಲ ಅದ್ಭುತ ಕಲಾಕಾರ ಕೂಡ. The Tiger ಹಾಗೂ The School Boy ಈ ಎರಡು ಕವನಗಳು ಆತನ Songs of experienceನ ಕಾವ್ಯ ಸಂಪುಟದಿಂದ ಆಯ್ದುಕೊಂಡಿದೆ. Poetical Sketches[1783] Songs of Innocence[1789] Marriage of Heaven and Hell [1790] Songs of experience[1794] ಮುಂತಾದ ಸಂಕಲನಗಳ ರಚಿಸಿದ ಬ್ಲೇಕ್ ರೋಮ್ಯಾಂಟಿಕ ಕವಿಗಳಲ್ಲಿ ಅಗ್ರಗಣ್ಯ. ಊಹೆ, ಭಾವಾವೇಶ, ಉನ್ಮಾದಗಳ ಬೇರುಳ್ಳ ಉನ್ಮೀಲಿತ ಕವನಗಳು ರೋಮ್ಯಾಂಟಿಸಿಸಂನ ಬಳಿವಳಿಗಳು. ಭೌದ್ಧಿಕತೆಗಿಂತ ಭಾವೋದ್ದೀಪಿತ ಕಲಾತ್ಮಕತೆಯಿಂದ ಬರೆಯಬಲ್ಲ ಕ್ರಾಂತಿ. ಕ್ಲಾಸಿಸಿಸಂನ[ಸಾಂಪ್ರದಾಯಿಕ, ಶಾಸ್ತ್ರೀಯ] ಹಿಡಿತದಿಂದ ಹೊರಬಂದ ಸಂಪೂರ್ಣ ಸ್ವಯಂ ಅನುಭವ ಅನುಭಾವಗಳು ಈ ಕಾಲದ ಕೊಡುಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾನ್‌ ಕೊಂಡ ಕೃಷ್ಣನ್
Next post ಸಂಬಂಧಗಳು

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys