“ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ
ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದಯೆಯಿಟ್ಟು ಆ ಬಗ್ಗೆ ತಾವು ತಮ್ಮ ಅನುಭಾವಪೂರಿತ ವಾಕ್ಯಗಳನ್ನು ಕೇಳಿಸಬೇಕೆಂದು ಬಿನ್ನಯಿಸುತ್ತೇನೆ” ಎಂದು ಜಂಗಂಳಿಯೊಳಗಿನ ಜೀವವೊಂದು ಕೇಳಿಕೊಂಡಿತು.

ಪದ್ಧತಿಯಂತೆ ಪೂರ್ವಶರಣನು ಜಗಜ್ಜನನಿಯ ಅಡಿದಾವರೆಗಳಿಗೆ ಮನದಲ್ಲಿಯೆ ವಂದಿಸಿ ತನ್ನ ನಿರರ್ಗಳನಾದ ವಾಣಿಯನ್ನು ಅರುಹಲು ಆರಂಭಿಸಿದನು.

“ಮರಣವೆಂದರೆ ಸರ್ವನಾಶವಲ್ಲ; ಒಂದರಿಂದ ಇನ್ನೊಂದರ ಮಾರ್ಪಾಡು. ಮರಣವು ನವಜನ್ಮದ ತಾಯಿ; ನವಜೀವನದ ಬಸಿರು; ಮುಂದುವರಿಯುವ ಜೀವನಕ್ಕೆ ಹೊಸ ಏರ್ಪಾಡು; ಮರಣದಿಂದ ಹಳೆಯ ಭೂಮಿಕೆಯ ಸೀಮೆದಾಟಿ, ಹೊಸಸೀಮೆಯಲ್ಲಿ ಕಾಲಿರಿಸಿಸುವ ಎತ್ತಗಡೆ.

ಪ್ರಾಣಕ್ಕೂ ದೇಹಕ್ಕೂ ಇರುವ ಬೆಸುಗೆಯನ್ನು ಬಿಡಿಸುವ ಕೆಲಸವು ಮರಣದಿಂದ ಉಂಟಾಗುತ್ತದೆ. ಅದರಿಂದಲೇ ನೋವು ವೇದನೆಗಳುಂಟಾಗುವವು. ಹಣ್ಣಿದ ಜೀವನವು ಆ ಬೆಸುಗೆಯನ್ನು ಹಗುರಾಗಿ ಬಿಡಿಸುಪುದು. ಬೆಸಗೆ ಬಿಡಿಸುವಾಗ ಕಸುಕುಬಾಳು ಅಸವಿಸಿಗೊಳ್ಳುತ್ತದೆ.

ಬದುಕಿರುವಾಗ ಸಿದ್ಧಿಸದ ಹೊಸಬಾಳು ಮರಣದಿಂದ ಪ್ರಾಪ್ತವಾಗಲಿರುವದರಿಂದ ಅದರ ರಹಸ್ಯವನ್ನು ಅರಿತವರು ಮರಣವನ್ನು ಮಾನವಮಿ ಯೆಂದು ಹೆಸರಿಸಿದ್ಧಾರೆ.

ಮಾನವಮಿಯೊಂದು ವೀರರಹಬ್ಬ. ವೀರರು ಉತ್ಸಾಹದಿಂದ ಸೀಮೋಲ್ಲಂಘನ ಮಾಡುವ ಉತ್ಸಾಹದ ಹಬ್ಬವೇ ಮಾನವಮಿ. ಮರಣವೂ ಮಾನಮಿಯಂತೆಯೇ ಉತ್ಸಾಹಕರವಾಗಿದೆ. ವೀರರಿಗೆ ಉಲ್ಲಾಸಕರವೂ ಆಗಿರುವದರಿಂದ ಅವರು ಮರಣಕ್ಕೆ ಅಂಜುವದಿಲ್ಲ. ಅಳುಕುವದಿಲ್ಲ; ಎದೆಗೆಡುವದಿಲ್ಲ; ಎದೆಯೊಡಕೊಳ್ಳುವದಿಲ್ಲ. ಕೆಚ್ಚಿದೆಯಿಂದ ಮರಣನನ್ನು ಸ್ವಾಗತಿಸುತ್ತಾರೆ; ಅಪ್ಪಿಕೊಳ್ಳುತ್ತಾರೆ; ಬೆಂಬಳಿಸುತ್ತಾರೆ.

ಮರಣವು ದೇಹಕ್ಕೆ ಮಾತ್ರ; ಪ್ರಾಣವು ಹಾರುತ್ತದೆ; ಮನವು ಜಾರುತ್ತದೆ. ದೇಹವು ಕಳಚಿದರೆ, ದೇಹಿಯು ಹೊಸದೇಹವನ್ನು ಧಾರಣಮಾಡುತ್ತಾನೆ. ಮರಣಕ್ಕೆ ದೇಹ ಬಿಡುವುದದು ಅನ್ನುತ್ತಾರೆ. ಅದು ನಿರ್ಯಾಣ
ಮಹೋತ್ಸವವೆನಿಸುತ್ತದೆ. ಅಂತ್ಯವಿಧಿಯು ಸ್ಮಶಾನಯಾತ್ರೆಯೆನಿಸುತ್ತದೆ. ಆದ್ಧರಿಂದ ಅದು ಅನಿಷ್ಟ ಹೇಗೆ? ಅರಿಷ್ಟ ಹೇಗೆ? ಅದು ಆಮಂಗಲವಲ್ಲ; ಮಂಗಲಕರ.

ಹಳೆಯ ರೂಢಿಗಳನ್ನು ಕಳೆದುಕೊಳ್ಳಲು ಒಪ್ಪದ ದೇಹಕ್ಕೆ ಮರಣವು ಅನಿವಾರ್ಯವಾಗಿರುತ್ತದೆ. ಹಳೆಯ ರೂಢಿಗಳನ್ನು ಕಳಚಿಹಾಕಿ ಹೊಸರೂಢಿಗಳನ್ನು ಅಳವಡಿಸಿಕೊಳ್ಳಬಲ್ಲ ಶರೀರಕ್ಕೆ ಮರಣದ ಅಗತ್ಯವೆನಿಸುನದಿಲ್ಲ. ಮಂಗಲಕರವೂ ಉತ್ಸಾಹದಾಯಕವೂ ನವಜನ್ಮದಾಯಕವೂ ಆದ ಮರಣವು ಒಮ್ಮೆ ಬರಲೇಬೇಕಲ್ಲವೆ? ಹುಟ್ಟು ಒಂದು ತುದಿಯಾದರೆ ಜೀವನಕ್ಕೆ ಸಾವು ಇನ್ನೊಂದು ತುದಿ. ಹುಟ್ಟು ಸಾವಿನ ಕೈಹಿಡಕೊಂಡೇ ಸಾಗಿರುತ್ತದೆ. ಹುಟ್ಟಿದವರಿಗೆ ಸಾವು ತಪ್ಪದ ನಿಷಯ. ಜೀವಿಯು ಮರಣವ ಬಾಯಲ್ಲಿಯೇ ಬಾಳುತ್ತಿರುತ್ತಾನೆ. ಆದ್ಧರಿಂದಲೇ ಸತ್ಪುರುಷರು ಮರಣವನ್ನು
ಬೇಕೆಂದು ಬರಮಾಡಿಕೊಳ್ಳುವದಿಲ್ಲವಾದರೂ, ಬಂದ ಮರಣಕ್ಕೆ ಒಲ್ಲೆನೆನ್ನದೆ ಎದುರುಗೊಳ್ಳುತ್ತಾರೆ.

ಮರಣವು ಜೀವನಕ್ಕೆ ಮಹಾಭಯಂಕರವಾದರೂ, ಒಮ್ಮೊಮ್ಮೆ ಅರ್ಥ ಹಾನಿಯು ಮರಣಕ್ಕಿಂತ ಭಯಂಕರವೆನಿಸುತ್ತದೆ. ಮಾನಹಾನಿಯು ಇನ್ನೊಮ್ಮೆ ಮರಣಕ್ಕಿಂತ ತೀರ ಭಯಂಕರವೆನಿಸುತ್ತದೆ. ಅರ್ಥಹಾನಿ-
ಮಾನಹಾನಿಗಳನ್ನು ತಸ್ಬಿಸುವುದಕ್ಕಾಗಿ ಎಷ್ಟೋಸಾರೆ ಮರಣವೇ ಒಳ್ಳೆಯ ದೆಂದು ಅದಕ್ಕೆ ಶರಣುಹೋಗುವ ಜನರನ್ನು ಕಂಡಿದ್ದೇವೆ. ಅವರು ಬರಮಾಡಿಕೊಳ್ಳುವುದು ಸಹಜಮೃತ್ಯುವಲ್ಲ, ದುರ್ಮರಣ.

ದುರ್ಮರಣದಿಂದ ಬೇರೆಹಾನಿಗಳನ್ನು ತಪ್ಪಿಸಿಕೊಂಡವರು ಬೇರೊಂದು ಜನ್ಮತೊಡದೆ ಇರಲಾರರು. ಬೇರೆಯ ಜನ್ಮದಲ್ಲಾದರೂ ಹಿಂದಿನ ಹಾನಿಗಳನ್ನು ಅವರು ಎದುರಿಸಲೇಬೇಕಾಗುತ್ತದೆ. ಎದುರಿಸಿ ಹೋರಾಡಿ ಜಯಿಸುವುದೇ ಜೀವನಿಗೆ ಕರ್ತವ್ಯವಾಗಿರುವದಲ್ಲದೆ ಧರ್ಮವೂ ಆಗಿರುತ್ತದೆ. ಹೋರಾಡುವುದಕ್ಕೆ ಬಲಕೇಳಬೇಕಲ್ಲವೆ, ಹೋರಾಟ ತಪ್ಪಲೆಂದು ಹಾರಯಿಸ ಕೂಡದು.

ನಿಜವಾಗಿ ಮರಣವೆಂದರೇನು? ಚಂದ್ರನಿಂದ ತೂರಿದ ಬೆಳದಿಂಗಳು ಚಂದ್ರನಲ್ಲಿ ಬೆರೆತಂತೆ. ಬಿಸಿಲು ಸೂರ್ಯನಲ್ಲಿ ಸಮರಸನಾದಂತೆ. ಕಡಲಿನಿಂದ ಉಗಿಯಾಗಿ ಏರಿ, ಮಳೆಯಾಗಿ ಇಳಿದು, ಹೊಳಿಯಾಗಿ ಹರಿದು, ಜಲನಿಧಿಗೆ ಬೆರೆದು ಹೋಗುಪುದೇ ನೀರಿನ ಹುಟ್ಟುಬಾಳು; ಸಾವುಗಳ ಸಂಕೇತ.

ಅಯ್ಯಾ, ಚಂದ್ರನಿಂದಾದ ಕಲೆ ಚಂವ್ರನ ಬೆರಸಿ ಚಂದ್ರನಾದಂತೆ.
ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ.
ಅಗ್ನಿಯಿಂದಾದ ಕಾಂತಿ ಅಗ್ನಿಯ ಬೆರಸಿ ಅಗ್ನಿಯಾದಂತೆ
ದೀಪದಿಂದಾದ ಬೆಳಕು ದೀಪವ ಬೆರಸಿ ದೀಪವಾದಂತೆ
ಸಮುದ್ರದಿಂದಾದ ನದಿ ಸಮುದ್ರವ ಬೆರಸಿ ಸಮುದ್ರವೇ ಆದಂತೆ
ಪರಶಿನ ನಿರವಯ ಶೂನ್ಯಮೂರ್ತಿ ಸಂಗನಬಸವಣ್ಣನ
ಚಿದ್ರೂಪ ರುಚಿತೃಪ್ತಿಯೊಳಗೆ ಶುದ್ಧ-ಸಿದ್ಧ -ಪ್ತಸಿದ್ಧನಾಗಿ ಜನಿಸಿ
ಮತ್ತೆಂದಿನಂತೆ ಗುಹೇಶ್ವರಲಿಂಗಪ್ರಭು ಎಂಬ
ಉಭಯನಾಮವಳಿದು, ಸತ್ತು .ಚಿತ್ತಾನಂದ
ನಿತ್ಯಪರಿಪೂರ್ಣ ಅವಿರಳ ಪರಶಿವ
ಶೂನ್ಯಮೂರ್ತಿ ಸಂಗನಬಸನಣ್ಣನ ಜಿದ್ರೂಪು
ರುಚಿತೃಪ್ತಿ ಪಾದೋದಕ-ಪ್ರಸಾದವಪ್ಪುದು ತಪ್ಪದು
ನೋಡಾ ಚೆನ್ನಬಸವಣ್ಣ.

ಇದನ್ನರಿತವರು ಸಾವಿಗೆ ಸಾನೆನ್ನುವದಿಲ್ಲ;’ ಸಾವಿಗೆ ಭಯಪಡುವದಿಲ್ಲ; ಸಾವಿಗೆ ಸಂಕಟಪಡುವದಿಲ್ಲ. ”  ಸಾವುನೋವಿನ ನೆಲೆಯಲ್ಲಿ; ಸಾವು ಕಂಗೆಡಿಸುನ ಕತ್ತಲೆಯಲ್ಲಿ” ಎಂದು ಅವರ ನಂಬಿಗೆ. ಅವರು ಸಾವಿಗೀಡಾಗುವ
ಮರ್ತ್ಯರಲ್ಲ. ಅವರಿಗೆ ಮರಣವು ಮುಂದುಗೆಡಿಸುವ ವಿಧಾನವಲ್ಲ. ಅಂತೆಯೇ ಅವರು ಮರಣಕ್ಕೆ ಮಾನವಮಿ ಎಂದರು. ತಿರುಗಿ ಕೇಳಿದರೆ ಮರಣವೇ ಮಾನವಮಿ ಎಂದರು. ಮಾನವಮಿಯ ಹಬ್ಬಕ್ಕೂ ಮಾನವಮಿಯೆಂದು
ಉತ್ಸಾಹಕೊಡುವರೋ ಇಲ್ಲವೋ. ಅದರೆ ಮರಣನೆಂಬ ಮಾನವಮಿಗೆ ಮಾತ್ರ ಉತ್ಸಾಹತೊಡುವರು; ಉಲ್ಲಾಸಪಡುವರು.

ಎಮ್ಮವರಿಗೆ ಸಾವಿಲ್ಲ, ಎಮ್ಮವರಿಗೆ ಸಾವನರಿಯರು.
ಸಾವೆಂಬುದು ಸಾವಲ್ಲ.
ಅಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ
ಬೇರೆ ಮತ್ತೊಂದೆಡೆ ಇಲ್ಲ.
ಕೂಡಲಸಂಗಮವೇವರ ಶರಣ ಸೊಡ್ಣಲಬಾಚರಸನು
ನಿಜಲಿಂಗದ ಒಡಲೊಳಗೆ ಬಗೆದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು.

ಈ ವಿಧಾನವು. ಸಾವಲ್ಲವೆನ್ನುವುದಕ್ಕೆ ಒಪ್ಪದಿದ್ದರೆ ಬಿಡಲಿ. ಅದಕ್ಕೆ ಸಾವು ಅಂದರೆ ತಪ್ಪೂ ಆಲ್ಲ. ಆದರೆ ವ್ರತಭಂಗಪು ಸಾಯುವದಕ್ಕಿಂತ ಕಡೆ. ಧ್ಯೇಯವಾದಿಯು ಹಳೆಯ ರೂಢಿಗಳನ್ನು ಕೊಂದುಹಾಕಿ, ಹೊಸರೂಢಿ ಗಳನ್ನು ಅಳವಡಿಸಿಕೊಂಡು ಜೀವಿತದಲ್ಲಿಯೇ ಮರಣವನ್ನಪ್ಪಿ ಜೀವಿತಲ್ಲಿಯೇ ನವಜನ್ಮವನ್ನು ತೊಡುವನು. ಅದೊಂದು ಜೀವಿತಮರಣ. ವೃತಭಂಗವು ಸಹ ಜೀವಿತಮರಣದಂತೆ ತೋರುಗಡೆಯಲ್ಲಿ ಕಾಣಿಸಿಕೊಂಡರೂ ಅದಕ್ಕೆ ಮರಣವೊಂದೇ ಫಲಪರಿಣಾಮ. ಆದರೆ ನವಜನ್ಮ ಪ್ರಾಪ್ತಿಯಾಗದು. ನವಜನ್ಮವನ್ನು ತಂದುಕೊಡದ ಜೀನಿತಮರಣಪು ಬರಡುಮರಣನೇ ಸರಿ. ನವಜನ್ಮದಾಯಿಯಾದ ಜೀವಿತಮರಣಗಳು ಒಂದಲ್ಲ, ಎರಡಲ್ಲ ಹತ್ತುಬಂದರೂ ಸಂತೋಷವೇ; ಪ್ರಯೋಜನಕರವೇ. ಆದರೆ ನವಜನ್ಮದ ಗಂಧವನ್ನು ಸಹ ಸೋಂಕಿ
ಸದ ಬರಡು ಮರಣಕ್ಕೆ ಸಮಾನವಾದ ವ್ರತಭಂಗಪು ಎಂದಿಗೂ ಒದಗಬಾರದು. ಸಾವಿಗೆ ಸಾವೆನ್ನದ ಸಜ್ಜನರು, ಮರಣಕ್ಕೆ ಸೊಪ್ಪುಹಾಕಾಕದ ಸತ್ಪುರುಷರು, ಬಾಳನ್ನು ಕೊನೆಗಾಣಿಸುವ ವ್ರತಭಂಗಕ್ಕೆ ಮಾತ್ರ ಸಾವು ಸಾವೆಂದು ಚದರಿಯೋಡುವರು. ಮರಣ ಮರಣವೆಂಮ ಹೆದರಿ ಮುದುರಿ ಬೀಳುವರು. ಬರಡು
ಮರಣವೋ ಜೀವಿತ ಮರಣವೋ ಎಂಬುದರ ಮೇಲಿಂದ ಬಾಳಿನ ಪರೀಕ್ಷೆಯಾಗಬಲ್ಲದು. ಶರಣನ ಪರೀಕ್ಷೆ ಮರಣದಲ್ಲಿ. ಮರಣದ ಸುಂಕದ ಕಟ್ಟೆ ದಾಟದ ಮೇಲೆಯೇ ನಿರಾತಂಕವಾವ ನಿರಾಯಾಸವಾದ ಪ್ರಯಾಣಪು ಆರಂಭವಾಗುತ್ತದೆ. ಸಾವು ತಪ್ಪದಂತೆ, ವ್ರತಭಂಗದ ಸಾನಿನಬಾಯಿಗೆ ಬೀಳಬಹುದೇ?

ಎಂದಿಗೂ ಸಾವು ತಪ್ಪದೆಂದರಿದು, ಮತ್ತೆ
ವ್ರತಭಂಗಿತನಾಗಿ,
ಅಂದಿಗೆ ಸಾಯಲೇತಕ್ಕೆ ?
ನಿಂದೆಗೆಡೆಯಾಗದ ಮುನ್ನವೇ ಅಂಗವ ಹಾರೆ
ಚಿತ್ತ ನಿಜಲಿಂಗವನೆಯ್ದಿ, ಮನಕ್ಕೆ
ಮನೋಹರ ಶಂಬೇಶ್ವರ ಲಿಂಗವ ಕೂಡಿ.

ಮರಣವು ಅನಿವಾರ್ಯವಾಗಿದ್ಧರೂ ಆದು ಬರುವ ಕಾಲಕ್ಕೇ ಬರುವದು. ದುರ್ಮರಣನೇ ಇರಲಿ, ಮೃತ್ಯು ಸನ್ನಿಹಿತನೇ ಇರಲಿ-ಯಾವುದು ಬಂದರೂ ಬೇಕಾದಾಗ ಬರುವದಿಲ್ಲ. ಹುಟ್ಟಿದವನಿಗೆ ಸಾವು ತಪ್ಪದೆಂದು, ಹುಟ್ಟಿದ ಕೂಡಲೇ ಸಾವನ್ನು ನೆನೆಸುತ್ತ, ಸಾವಿಗಾಗಿ ಹೆದರಿ-ಬೆದರುತ್ತ ಎದೆಯೊಡಕೊಂಡು ಅರೆಜೀವಿಯಾಗಿಯೋ ನಿರ್ಜೀವಿಯಾಗಿಯೋ ಜೀವಹಿಡಿದು ಕೊಂಡು ಇರುವುದು ಬದುಕೂ ಅಲ್ಲ, ಬಾಳುವೆಯೂ ಅಲ್ಲ. ಇದ್ಧಂತೆಯೂ ಅಲ್ಲ, ಸತ್ತಂತೆಯೂ ಅಲ್ಲ. ಸಾವಿನಿಂವ ಸತ್ತವರಿಗಿಂತ ಸಾವಿಗಂಜಿಯೇ ಸತ್ತವರು ಬಹುಜನರು. ಹುಟ್ಟುಸಾವುಗಳು ಬಾಳಿನ ಎರೆಡು ಸೆರೆಗುಗಳು.
ಹುಟ್ಟುವ ಗಡಬಿಡಿ ಮುಗಿದು, ಸಾವು ಬರುವ ವರೆಗಿನ ವಿಸ್ತಾರವಾದ ಬದುಕು ಸಾವಿನಂಜಿಕೆಯಲ್ಲಿ ಕರಗಬಾರದು; ಕೊರಗಬಾರದು. ಹುಟ್ಟಸಿದವನು ಹುಟ್ಟುವಾಗ ಆಯಷ್ಯವೊಂದನ್ನು ಬೇರೆ ಕೊಟ್ಟಿರುತ್ತಾನೆ. ಆ ಆಯಷ್ಯವೇ
ಬಾಳು-ಬದುಕಿನ ಸಡಗರ. ಅದು ಮುಗಿಯದೆ ಸಾವು ಸುಳಿಯಲಾರದು; ಮರಣ ಬರಲಾರದು. ಮರಣದೇವತೆ ಕಣ್ಣುಹೊರಳಿಸಿದರೆ, ಆಯುಷ್ಯದ ತಾಮ್ರಪಟವಿದ್ಧವನು ಅದಕ್ಕೆ ಸೋತು ಎರಗಲಾರನು; ಒರಗಲಾರನು.
ಕೊಲುವೆನೆಂಬ ಭಾಷೆ ದೇವನದಿದ್ದರೂ ಗೆಲುವೆನೆಂಬ ನುಡಿ ಭಕ್ತನಿಗಿರಬೇಕಾಗುತ್ತದೆ. ಹುಟ್ಟಿಸಿದ ಮಾತ್ರಕ್ಕೆ ಕೊಲ್ಲಲಿಕ್ಯಾಗುತ್ತದೆಯೇ?

ಅರ್ಥಹಾನಿಗೆ ಹಿಂಜರಿಯದಿದ್ದರೆ, ಮಾನಹಾನಿಗೆ ಬೆಂದೋರದಿದ್ದರೆ
ಮರಣದ ಬೆದರಿಕೆ ಹಾಕುವುದಕ್ಕೂ ಲೋಕವು ಹಿಂದು ಮುಂದು ನೋಡುವ
ದಿಲ್ಲ. ಹುಟ್ಟಿಸಿದವನಿಗೆ ಹೆದರದ ಬಂಟನು,ಹುಟ್ಟಾ ಮರಣಾಧೀನನಾದವನಿಗೆ
ಬೆದರುವನೇ? ಲೋಕನಿಂದೆಗೆ ಬೇಚ್ಚುವನೇ? ನಿಂದಿಸಿದವರನ್ನು ತಂದೆಯೆಂದು
ಕರೆಯುವವನಿಗೆ ಲೋಕನಿಂದೆಯ ಬೆದರಿಕೆಯೇನು? ಬಯ್ದವರನ್ನು ಬಂಧುಗ
ಳೆಂದು ಕೆರೆಯಲು ಸಿದ್ಧನಾದವನನ್ನು ಲೋಕದ ಹೀನನುಡಿಯ ಗಸಣೆ
ಯೇನು? ನಿಂದೆ-ಬಯ್ಗಳಿಂದ ಆತ್ಮಕಲ್ಯಾಣನನ್ನೇ ಸಾಧಿಸುತ್ತಲಿರುವ ಮಹಾ
ಮಹಿಮರಿಗೆ ಅಂಜಿಕೆಯಿನ್ನೆಲ್ಲಿಂದ ಬರಬೇಕು? ಹೊಗಳಿಕೆಯನ್ನು ಹೊನ್ನ
ಶೂಲವೆಂದು ಬಗೆದು ಜೀವಕಳಕೊಳ್ಳುವರೇ ಹೊರತು, ತೆಗಳಿಕೆಗೆ ತಲೆತಗ್ಗಿಸಿ
ಅರೆಜೀವಿಯಾಗತಕ್ಕವರಲ್ಲ. ನಿಂದೆಯೆಂದರೆ ಅವರ ಪಾಲಿಗೆ ಬೆಳೆಯುವ ಪಯ
ರಿನ ಕುಡಿಕತ್ತರಿಸುವ ಕ್ರಿಯೆ. ಕುಡಿಕತ್ತರಿಸುವುದರಿಂದ ಆ ಗಿಡವು ಹರವಾಗಿ
ಪಸರಿಸುತ್ತದೆ. ಅಗಲನಾಗಿ ಬೆಳಯುತ್ತದೆ. ಅದು ಆತ್ಮಕಲ್ಯಾಣವಲ್ಲದೆ
ಇನ್ನೇನೂ ಅಲ್ಲವೆಂದು ಭಾವಿಸಿದವನೇ ಗಟ್ಟಿಗೊಂಡ ಪಯರು. ಆದಕ್ಕೆ
ಸಾವಿಲ ಕೇಡಿಲ್ಲ.

ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಗ್ಯತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲೇತಕೋ ಲೋಕವಿಗರ್ಭಣೆಗೆ?
ಅಳಕಲೇತಕೋ ಕೂಡಲಸಂಗಮದೇವಾ
ನಿಮಗಾಳಾಗಿ.

ಆಯುಷ್ಯದ ತಾಮ್ರಪಟ ಹಿಡಕೊಂಡಿದ್ಧರಿಂದ ಸಾವಿನ ಆಂಜಿಕೆ ಕಳೆದಿರುತ್ತದೆ. ಸಾವಿನ ಅಂಜಿಕೆ ತಪ್ಪಿದ ಬಾಳು, ವೀರಬಾಳು; ಉಜ್ವಲಬಾಳು, ಮಿಂಚಿನಬಾಳು. ಆಯುಷ್ಯವನ್ನು ಮಾತ್ರ ನೆಚ್ಚಿಕೊಂಡಿರುವದರಿಂದ ಅಂಥ ಬಾಳು ಪ್ರಾಪ್ತವಾಗದು. ಮರಣವೂ ಅಷ್ಟೇ ವ್ರಯೋಜನಕರವೆಂದು ಮನವರಿಕೆ ಯಾದವನ ಬಾಳು ವೀರಬಾಳು, ಉಜ್ವಲಬಾಳು ಆಗಬಹುದು. ಮರಣವು ವಿಂಧ್ಯದಿಂದ ಕುಂಜರಕ್ಕೆ ಕಳಿಸಿದ ಮಮತೆಯ: ಕರೆಯೆಂಮ ಭಾವನೆತಳೆದವನ ಬಾಳು ಮಿಂಚಿನಬಾಳು, ಬೆಳಕಿನಬಾಳು ಆಗಬಹುದು. ಅಂಥವನು ನಾಳೆಯೆಂದರೆ ಹಾಳೆನ್ನುವನು, ಇಂದಿಗಿಂತ ಈಗಲೇ ಮಿಗಿಲೆನ್ನುವನು. ಕಲ್ಯಾಣಕ್ಕೆ ಕೈಯೊಡ್ಡುವಾಗ ಅಷ್ಟೇ ಈ ವಿಚಾರವಿರುವದಿಲ್ಲ. ಮಂಗಲಕ್ಕೆ ಮೈಯೊಡ್ಡುವಾಗಷ್ಟೇ ಈ ಭಾವನೆಯನ್ನು ತಳೆಯುವನೆಂದಲ್ಲ. ಉರಿಬಂದರೂ ಸರಿ, ಸಿರಿಬಂದರೂ ಸರಿ. ತಂದೆಯ ಕೊಡುಗೆ ಏನಿದ್ಧರೂ ಪ್ರಸಾದವೇ ಸರಿ ಅವನಿಗೆ.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು, ಇದರಾರಳಕುವರು?
ಜಾತಸ್ಯಮರಣಂ ಧೃವಂ ಎಂಬುದಾಗಿ.
ನಮ್ಮ ಕೂಡಲಸಂಗಮದೇವ ಬರೆದ ಬರಹ
ತಸ್ಬಿಸುವರೆ ಹರಿಬ್ರಹ್ಮಾದಿಗಳವಲ್ಲ.

ಮಾನವನು ಮರಣಾಧೀನನೇ ಅಹುದು. ಹುಟ್ಟಿದಂದಿನಿಂದ ನಿಮಿಷ ನಿಮಿಷದಲ್ಲಿಯೂ ಸಾವಿನ ಕಡೆಗೇ ಹೊರಟಿರುವುದೂ ನಿಜ. ಆಯುಷ್ಯ ಗಟ್ಟಿಯಿದ್ಧರೆ ಅವನ್ನು ಕೊಟ್ಟವನು ಸಹ ಕಸಗೊಳ್ಳಲಾರನು. ಮಾನಹಾನಿ
ಯಂಥ ಮರಣಕ್ಕೀಡಾಗುವುದನ್ನ್ನೂ, ಅರ್ಥಹಾನಿಯಂಥ ಸಾವಿಗೆ ತುತ್ತಾಗುವುವನ್ನೂ ತಸ್ತ್ರಿಸಿಕೊಳ್ಳುವದಕ್ಕೆ ಸಾಧ್ಯವಿದೆ. ಮರಣವೇ ಮಾನವಮಿಯೆಂಬುದು ರಕ್ತಗುಣವಾಗಿರಲೂ ಸಾಧ್ಯವಿದೆ. ವ್ರತಭಂಗದಂಥ ಅಪಮೃತ್ಯುವಿನಿಂದ ಹರದಾರಿ ದೂರ ಉಳಿಯಬಲ್ಲ ಎದೆಗಾರರೂ ಇದ್ಧಾರೆ. ಆಯುಷ್ಯತೀರಿದ ಬಳಿಕ ಬರುವ ಮರಣದಿಂದಲೇ ಇಂದಿನ ವರೆಗೆ ಸತ್ತವರಿದ್ದಾರೆಂದು ಭಾವಿಸುವುದು ತಪ್ಪು. ಮರಣಕ್ಕೆ ಅಂಜಿ ಸತ್ತವರ ಲೆಕ್ಕವಿಲ್ಲ. ಮರಣವನ್ನು ನೆನೆದು ಸತ್ತವರಿಗೆ ಅಳತೆಯಿಲ್ಲ. ಕಾರಣವಿಲ್ಲವೆ ಮರಣವನ್ನು ಬರಮಾಡಿಕೊಂಡು ಜೀವ ಕಳಕೊಂಡವರ ಎಣಿಕೆಯಿಲ್ಲ. ಜೀವಿತದಲ್ಲಿ ಯಾರ ಯಾರ ಸಲುವಾಗಿಯೋ ಏತೇತಕ್ಕೋ ಜೀವವನ್ನು ಸಣ್ಣಾಗಿ ಆರೆದು, ನುಣ್ಣಾಗಿ ತಿಕ್ಕಿ ಸವೆದು ಮರಣಾಧೀನರಾದವನರ ಸಂಖ್ಯೆಯೂ ಸಣ್ಣದಿಲ್ಲ. ಮೃತ್ಯುವಿನಿಂದ ಮರಣಹೊಂದಿದವರಿಗಿಂತ ಮೃತ್ಯುವಿನ ಛಾಯೆಯಿಂದ ಜೀವಬಿಟ್ಟಿವರೇ ಎಲ್ಲರೂ. ನಿಜವಾಗಿ ಮರಣದಿಂದ ಸತ್ತವರು ತೀರಕಡಿಮೆ. ತಿನ್ನುವಾಶೆ
ಹೆಚ್ಚಾಗಿ ಜೀವ ತೆಯ್ದುಕೊಂಡವರುಂಟು. ಆಶೆಯಿಂದ ಹೆಚ್ಚು ತಿಂದು ಜೀವಸಾಕಾದವರುಂಟು. ಚೆಂತೆಯಲ್ಲಿ ಕರಗಿ ಹೋದವರಂತೆ,ಬಯಕೆಯಲ್ಲಿ ಕೊರಗಿ ಹೋದವರೂ ಬಹುಜನರುಂಟು. ಹೆಣ್ಣಿಗಾಗಿ ಹಾಳಾದ ಜೀವಗಳೂ ಮಣ್ಣಿ
ಗಾಗಿ ಹೋಳಾದ ಜೀವಗಳೂ ಅಡಿಗಡಿಗೆ ನೋಡಸಿಗುತ್ತವೆ.

ಆಶೆಗೆ ಸತ್ತುದು ಕೋಟಿ, ಅಮಿಷಕ್ಕೆ ಸತುದು ಕೋಟಿ.
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ, ನಿನಗಾಗಿ ಸತ್ತವರನಾರನೂ ಕಾಣೆ.

ಗುಹೇಶ್ವರನಿಗಾಗಿ ಸಾಯನಿಂತವರು ಕಾಣಸಿಗುವ್ರದೇ ಕಷ್ಟ. ಅಮೃತ ಸರೋವರದಲ್ಲಿ ಮುಳುಗುಹಾಕಿದವರಿಗೆ ಉಸಿರುಗಟ್ಟುವುದೇ? ಅವನು ನೀರು ಕುಡಿದಂತೆ ಅಮೃತ ಕುಡಿಕುಡಿದು ಹೊಟ್ಟಿಯುಬ್ಬಿ ಸತ್ತುಹೋಗುವನೇ?
ಪರಮೇಶ್ವರನಿಗಾಗಿ ಪ್ರಾಣವನ್ನು ತೆತ್ತವನು ಸತ್ತುಕೆಡುವ ಮರ್ತ್ಯನಲ್ಲ. ಅವನು ಚಿರಂಜೀವಿ. ಅವನು ಶಾಶ್ವತವಾಗಿ ಬದುಕಬಲ್ಲವನು. ಅವನು ನಿರಂತರನಾಗಿ ಬಾಳುವವನು. ಅವನ ಹೆಸರು ಸಹ ಯುಗಯುಗಗಳ ಆಯುಷ್ಯವನ್ನು ಪಡೆದು ಬಂದಿರುತ್ತದೆ. ಅವನ ನೆನಿಕೆ ಮಾತ್ರದಿಂದ ಮರಣವು ಮುಮ್ಮೂರು ಹಾರಿ ಆಚೆಯಲ್ಲಿ ನಿಲ್ಲುತ್ತದೆ.

ಕೂಡಲಸಂಗನ ಕೂಸಿಗೆ ಅನಂತ ಆಯುಷ್ಯ. ಅನಂತ ಆಯುಷ್ಯವನ್ನು ಹೊತ್ತ ನವಜನ್ಮಬರುವದು ಏತರಿಂದ? ದೇವನಿಗಾಗಿ ಸಾಯನಿಲ್ಲುವದರಿಂದ. ಬ್ರಹ್ಮನು ಆರುಕೋಟಿ ಸಾರೆ ಹುಟ್ಟಿ ಆರುಕೋಟಿ ಸಾರೆ ಸತ್ತರೆ, ನಾರಾಯಣ
ನಿಗೆ ಒಂದು ದಿನ ಮಾತ್ರನೆಂದೂ, ನಾರಾಯಣನು ಕೋಟಿಸಾರೆ ಹುಟ್ಟಿ ಕೋಟಿ ಸಾರೆ ಸತ್ತರೆ, ರುದ್ರನಿಗೆ ಕಣ್ಣೆವೆ ಹಳಚಿದಂತಾಗುವದೆಂದೂ ಅಂಥ ರುದ್ರಾವತಾರಗಳು ಹಲವು ಆಗುವಷ್ಟರಲ್ಲಿ ನಮ್ಮ ಕೂಡಲಸಂಗಮದೇವ ಏನೆಂದು
ಅರಿಯನೆಂದೂ ಹೇಳುವನು. ಅನಂತ ಆಯುಷ್ಯದ ಚಿರಂಜೀವನು ಯಾರು? ದೇವನಿಗಾಗಿ ಸಾಯನಿಂತವನು!”

ಜಗಜ್ಜನನಿಯೂ ತನ್ನೊಳಗೆ ಉಕ್ಕಿಬರುನ ಅಕ್ಕರತೆಯನ್ನು ಬಿಗಿಹಿಡಿದು, ವಿಷಯದ ಪೂರ್ತಿಪಾಠವನ್ನು ಕೊಟ್ಟುದು ಹೇಗೆಂದರೆ-
“ಮಕ್ಕಳೇ, ಗುರುಳೆ ಒಡೆಯುವುದಲ್ಲದೆ, ನೀರು ಒಡೆಯದು. ಗುರುಳೆಗೆ ನೀರು ತಾಯಿ. ನೀರಿಗೆ ಗುರುಳಿ ಶಿಶು. ನೀರು ಬೇರೆ ನಾನು ಬೇರೆ ಎಂದು ಗುರುಳೆ ತಿಳಕೊಳ್ಳುವ ವರೆಗೆ ಮಾತ್ರ ಮರಣವೂ ಇರಬಲ್ಲದು; ಮರಣ ಭಯವೂ ಇರಬಲ್ಲದು. ಉದ್ದಗಲವಾಗಿ ಹರಡಿ ನಿಂತ ಮಹಾಜಲಧಿಯೇ ತನ್ನ ತಾಯೆಂದು ತಿಳಿದರೆ ಗುರುಳೆ ಮರಣಾಧೀನವಲ್ಲ; ಚಿರಂಜೀವಿ! ನಿಜವಾಗಿಯೂ ಚಿರಂ-ಜೀವಿ!!”

***

Latest posts by ಸಿಂಪಿ ಲಿಂಗಣ್ಣ (see all)