
ಕಣ್ಮಸಕು
ಅಬ್ಬಬ್ಬಾ! ಏನು ಆ ಬಿಸಿಲು-ಏನು ಆ ಉರಿ! ಉರಿಯೆಂದರೆ ಆ ಬೇಸಿಗೆಯ ಮಧ್ಯಾಹ್ನದ ಬಿಸಿಲೇ ಮೈಗೊಂಡು ಉರಿಯಲಗಿನಂತೆ ಹೊಳೆಯುತ್ತಿತ್ತು. ಝಳಪಿಸುತ್ತ ಮುಗಿಲ ಮನೆಗೆ ತಿವಿಯುವ ಆ ಮೊನೆಯಾದ ಜ್ವಾಲೆಗಳೆಂಥವು! ಇಪ್ಪತ್ತು ಮಾರು ದೂರ ನಿಂತರೂ ಕಡಿದು ಹಾರಿಬರುವ ಆ ಜ್ವಾಲೆಯ ಶಿಖೆಗಳೇನು! ಅದನ್ನಾರಿಸಲಿಕ್ಕೆ ನೆರೆದ ಸಾವಿರಾರು ಜನರ ದಟ್ಟಣೆ ಎಷ್ಟು!! ಉಣ್ಣುವ ಹೊತ್ತು ಆದರೂ ಉಣ್ಣದೇ […]