ಅದೊಂದು ವಿಚಿತ್ರ ಸ್ಪರ್ಧೆ, ಚೆನ್ನಾಗಿ ಅಳುವವರು ಯಾರು? ಚೆನ್ನಾಗಿ ನಗುವವರು ಯಾರು? ಎಂದು ಸಭೆಯಲ್ಲಿ ಘೋಷಿಸಿದರು. ಹಲವಾರು ಜನರು ಹತ್ತಾರು ವಿಧದಲ್ಲಿ ಅತ್ತು ಪ್ರದರ್ಶಿಸಿದರು. ಕೆಲವರು ಕಣ್ಣೀರಿಟ್ಟರು. ಕೆಲವರು ಕಣ್ಣೀರಿಲ್ಲದೆ ಶಬ್ದದಲ್ಲಿ ಗೊಳೋ ಎಂದು ಅತ್ತರು. ಇನ್ನೊಂದು ಗುಂಪಿಗೆ ನಗುವಿನ ಸ್ಪರ್ಧೆ ಇಡಲಾಯಿತು. ಅವರು ಹೊಟ್ಟೆ ಬಿರಿಯುವಂತೆ ಹಲ್ಲು ಕಿರಿದು ಗಹಗಹಿಸಿ ನೂರಾರು ವಿಧದಲ್ಲಿ ನಕ್ಕರು. ಸ್ಪರ್ಧೆಯಲ್ಲಿ ಒಂದು ತಿರುವು ಬಂತು, ನಗುವರು ಅಳುವ, ಅಳುವವರು ನಗುವ ಸ್ಪರ್ಧೆ ಪ್ರಾರಂಭವಾಯಿತು. ನಕ್ಕವರೆಲ್ಲಾ ನಗುತ್ತಾ ಅತ್ತರು. ಅತ್ತವರೆಲ್ಲಾ ಅಳುತ್ತಾ ನಕ್ಕರು. ನೋಡಿದವರು, ತೀರ್ಪುಗಾರರು ಹೇಳಿದ್ದು “ಹುಟ್ಟುಗುಣ ಸುಟ್ಟರು ಹೋಗದು” ಎಂದು.
*****