ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ
ಟೊಂಟೊಂಗಿ ಹಾರ್‍ಯಾವೆ ಕೋಡಂಗಿ
ಹೊಳೆಹಳ್ಳ ಹರಿದಾವೆ ಸುಳಿಗೂದ್ಲ ಕರದಾವೆ
ಕಚ್ಯಾವೆ ಗಲ್ಲಾವ ಬೋರಂಗಿ ||೧||

ಕುಡದಾಳ ಕುಣದಾಳ ಮಣವಾಳ ಗಿಣಿನಾರಿ
ಉಟಸೀರಿ ಗೂಟಕ್ಕ ಹಾಕ್ಯಾಳ
ಸಿಂಬಿ ತುರುಬಾ ಬಿಚ್ಚಿ ಕೊಂಬಿರೆಂಬಿಯ ಬಿಚ್ಚಿ
ಎದಿಗುಂಡ ಕಲ್ಲಂಗ್ಡಿ ಒಗದಾಳ ||೨||

ಬಂದೋರು ನೂರ್‍ಮಂದಿ ತಿಂದೋರು ಮೂರ್‍ಮಂದಿ
ಹುಚನಾಯಿ ಆಗ್ಯಾವೆ ಪ್ಯಾಪ್ಯಾರೆ
ಫಿರ್ರೆಂದು ಬಂದಾಕಿ ಘರ್ರೆಂದು ಹೋದಾಕಿ
ಮೆಣಸಿಂಡಿ ಆಗ್ಯಾರೆ ಮ್ಯಾಮ್ಯಾರೆ ||೩||

ತಂಬಾಕು ತಿಂದಾಕಿ ತೂಬಾಕಿ ಹೊಡೆದಾಕಿ
ಎಲ್ಹೋತ ನಗಿಗಲ್ಲ ನೆಗ್ಹೋತ
ಕೆಂಪಾನ ತೊಡಿಯಾಕಿ ಕೆಂಪಿಂಡಿ ತುಟಿಯಾಕಿ
ಗೂರ್‍ಹೋಗಿ ಗೋರಿಯ ನರಿಯಾತ ||೪||
*****