Home / Hanneradumath

Browsing Tag: Hanneradumath

ಪಂಚಪೀಠದ ಗುರುವು ನಕ್ಕರೆ ಪೃಥ್ವಿ ಕುಲುಕುಲು ನಗುವದು ಮಳೆಯು ಸುರಿವುದು ಹೊಳೆಯು ಹರಿವುದು ಬೆಳೆಯು ಲಕಲಕ ಹೊಳೆವುದು ॥ ಇವರೆ ಸ್ಥಾವರ ಇವರೆ ಜಂಗಮ ಇವರೆ ಮುಕ್ತಿಯ ಮಹಿಮರು ಇವರೆ ವಿಶ್ವದ ಶಾಂತಿ ದೂತರು ಶಿವನ ಪ್ರೀತಿಯ ಕೊಡುವರು ॥ ಪಂಚ ಗುರುಗಳು ಎ...

ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ...

ಎಲ್ಲಿ ಬಡತನ ಉಂಟು ಹಸಿದ ಕ೦ಬನಿಯುಂಟು ಅಲ್ಲಿ ಇರುವನು ನೋಡು ಗುರುರೇಣುಕಾ ಮುರುಕು ಗುಡಿಸಲ ಬಳಿಗೆ ಹರಕು ಬಟ್ಟೆಯ ಒಳಗೆ ಮಾರುವೇಷದಿ ಬರುವ ವರರೇಣುಕಾ ॥ ಎಲ್ಲಿ ದಲಿತರ ನೋವು ಬಿದ್ದ ಬಡವರ ಕೂಗು ಓಯೆಂದು ಬಂದಾನು ಗುರು ರೇಣುಕಾ ಮಲ್ಲಯುದ್ಧವು ಬೇಡ ಘ...

ಪಂಚಗುರುಗಳು ಮಿಂಚಿ ಬಂದರು ಜ್ಯೋತಿ ಜಂಗಮವಾದರು ಪಂಚತತ್ವಕೆ ಪಂಚಪೀಠಕೆ ಪ೦ಚ ಧ್ವಜವನ್ನು ಹಿಡಿದರು ಶಾಂತಿ ಪ್ರೀತಿ ತ್ಯಾಗ ನೀತಿ ಮನುಜ ಸಂಸ್ಕೃತಿ ಮೆರೆದರು ದಾಳಿ ಇಟ್ಟಾ ಹಾಳು ಗೂಳಿಯ ಕಾಳ ಕತ್ತಲೆ ಕಳೆದರು ಆದಿಜ್ಯೋತಿರ್ಲಿಂಗ ಪೀಠದ ಅಮರ ಮಂತ್ರವ ಕ...

ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ ಪಂಚಗುರುಗಳ ಗಾನ ಗುರುಸ೦ಗಮಾ ಗಗನ ಸಾಲದು ಗುರುವೆ ಕಡಲು ಸಾಲದು ಗುರುವೆ ಪರಮ ಪ೦ಚಾಚಾರ್ಯ ಶಿವಸಂಗಮಾ ।। ಕಮಲ ಮಲ್ಲಿಗೆ ನೀವೆ ವಿಮಲ ಸಂಪಿಗೆ ನೀವೆ ಹೂವಿಗಿಂತಲು ಹೂವು ನಿಮ್ಮಮಿಲನ ಲಿಂಗದೊಲವೇ ಒಲವು ಲಿಂಗ...

ಗೆಳತಿ ಬಾರೆ ಎಂಥ ಚಲುವಾ ಇಂಥ ಕೆಲಸಾ ಮಾಡಿದಾ ತೂಗು ಮ೦ಚಾ ಹೂವು ಕಟ್ಟಿ ನನ್ನ ತೂಗಿ ಓಡಿದಾ ।। ೧ ।। ಬಳಿಗೆ ಬಂದಾ ಬಂದನೆಂದಾ ಮಟಾಮಾಯವಾದನೆ ನನ್ನ ಕೊಂದು ಕೂಗಿ ನಕ್ಕು ಕಡೆಗೆ ಕಾಣದಾದನೆ ।। ೨ ।। ಸುಟ್ಟ ಮೇಲೆ ಕಟ್ಟ ಕಡೆಗೆ ಕೊಚ್ಚು ಕೊಸರು ಹೋಯಿತ...

ಒಂದಂಕಿ ಗೊಳಗೊಳಕಿ ಯಾಡಂಕಿ ಮುಳಗಳಿಕಿ ಮೂರಂಕಿ ಮುತ್ತೈದಿ ಕೇಳು ಗುರುವೆ ನಾಕ೦ಕಿ ನೆಲ್ಲಕ್ಕಿ ಐದ೦ಕಿ ಪಲ್ಲಕ್ಕಿ ಪಂಚಲಿಂಗದ ಪಾದಾ ತೋರು ಗುರುವೆ ಸರದಾರ ದೊರಿಸಾಮಿ ಮುಕ್ಕಣ್ಣ ಗುರುಸಾಮಿ ಎಲ್ಲಿ ಬಿಟ್ಟೆಲ್ಲೀಗೆ ಪಾರೋತಿನಾ ಚಿನ್ನಿ ಸಕ್ಕರಿ ಚಲುವಿ ಚ...

ಗುರುಯೋಗಿ ಶಿವಯೋಗಿ ಹರಯೋಗಿ ಶಿವತಂದೆ ನೀಬ೦ದ ಈ ಭುವನ ಕೋಟಿಲಿ೦ಗಾ ನೀನಿಟ್ಟ ಹೆಜ್ಜೆಯಲಿ ಕೈಲಾಸ ಕುಣಿದಾವು ವೇದ ಆಗಮ ಲಾಸ್ಯ ವಿಶ್ವಲಿಂಗಾ ನೋಡಿಲ್ಲಿ ಗುಳೆಯೆದ್ದು ಓಡ್ಯಾವು ಹೆಗ್ಗೂಳಿ ಶಿವಶಿವಾ ಓಂ ನಮೋ ನಮಃ ಶಿವಾಯಾ ಬಂತಯ್ಯಾ ಶಿವರಾತ್ರಿ ಹೋತಯ್ಯ...

ಗುರುವೆ ಶರಣು ಅರುಹೆ ಶರಣು ಲಿಂಗ ಸಾಗರ ಅನುಪಮಾ ಹಾಲು ಸಾಗರಕಿಂತ ಮೇಲು ಲಿಂಗ ಸಾಗರ ನಿರುಪಮಾ ದೇಹವೆಂಬಾ ಜಡದ ಡೋಣಿಗೆ ಗುರುವು ಹುಟ್ಟನು ಹಾಕಿದಾ ಅರುಹು ನೀಡಿದ ಗುರಿಯ ತೋರಿದ ದೂರ ಕಡಲಿಗೆ ದೂಡಿದಾ ತೆರೆಯ ಮೇಲೆ ತೆರೆಯ ಘರ್ಜನೆ ಭರತಿ ಓಟಿಯ ಅಬ್ಬರ...

ಕಂಡೆ ಕಂಡೆ ಕನಸು ಕಂಡೆ ದೇವಗುರುವು ಕರೆದನು ಬಾಳೆಹಳ್ಳಿ ಬನದ ಒಳಗೆ ಹೊಳೆವ ರತುನ ಕೊಟ್ಟನು ಎಂಥ ಚಂದ ಚಲುವ ರತುನಾ ಆತ್ಮಮಥನವಾಯಿತು ನೋಟ ನಿಲಿಸಿ ನೋಡುವಾಗ ಮಂತ್ರವಾಕ್ಯ ಅರಳಿತು ಕಾಲ ಕಲ್ಪ ಸೃಷ್ಟಿ ಚಕ್ರ ಎಲ್ಲ ರತುನ ತೋರಿತು ದೇವ ಮನುಜ ಸಕಲ ರಾಜ್...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...