ನಾನೆ ಪಾರ್‍ವತಿ ನಾನೆ ಗಿರಿಜೆ

ನಾನೆ ಪಾರ್‍ವತಿ ನಾನೆ ಗಿರಿಜೆ
ಶಿವ ಸಮರ್‍ಪಣೆ ಕೊಡುಶಿವಾ
ನಾನೆ ಗೌರಿ ಗಂಗೆ ಶೈಲಜೆ
ಶುಭ ಸಮರ್‍ಪಣೆ ಪಡೆಶಿವಾ

ನೀನೆ ಸದ್ಗುರು ನೀನೆ ಶಿಕ್ಷಕ
ನೀನೆ ನಂಬಿದ ವಲ್ಲಭಾ
ನೀನೆ ಆತ್ಮಾರಾಮ ಪ್ರಿಯಕರ
ನೀನೆ ತ್ರಿಭುವನ ವರಪ್ರಭಾ

ಕೋ ಸಮರ್‍ಪಣೆ ಆತ್ಮ ತರ್‍ಪಣೆ
ನಾನೆ ವಧುವಿನ ದಕ್ಷಿಣೆ
ಪರಮ ಪಾವನ ನನ್ನ ಜೀವನ
ನೀನೆ ನನ್ನಯ ರಕ್ಷಣೆ

ನನ್ನ ಜೀವನದುಸಿರು ಉಸಿರಿಗು
ನಿನ್ನ ಹೆಸರನೆ ಉಸಿರುವೆ
ಆತ್ಮ ಶಾಂತಿಯ ವಿಶ್ವಶಾಂತಿಯ
ಜಗದ ಜಗಲಿಗೆ ಸಾರುವೆ
ವಿಶ್ವಸುಂದರ ಮಾಡುವೆ
ನಿನ್ನ ಹಾಡನೆ ಹಾಡುವೆಽಽಽ
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂದಿಗ್ಧಗಳ ಮೀರುವತ್ತ ನಿಸಾರ್ ಕಾವ್ಯ
Next post ಹಿತ್ತಲ ತುಳಸಿ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…