Stendhalನ “The Scarlet and the Black” ಸ್ವಾರ್ಥಜೀವನದ ಚಿತ್ರಣ

Stendhalನ “The Scarlet and the Black” ಸ್ವಾರ್ಥಜೀವನದ ಚಿತ್ರಣ

“The Scarlet and the Black” ಸಾಮಾಜಿಕ ಸ್ಥಾನಮಾನ ಗಳಿಸಲು ಹೋರಾಡುವ ಕಾರ್ಮಿಕ ವರ್ಗದ ಯುವ ತರುಣನೊಬ್ಬನ ಬದುಕಿನ ಪಯಣ ಹಾಗೂ ಸ್ವಾರ್ಥಭರಿತ, ಬೂಟಾಟಿಕೆಯ ಲೆಕ್ಕಾಚಾರದ ಜಗತ್ತಿನಲ್ಲಿ ಭಾವನಾತ್ಮಕ ವ್ಯಕ್ತಿಯ ಜೀವನದ ಆಗುಹೋಗುಗಳ ಸುಂದರ ನಿರೂಪಣೆ ಈ ಕಾದಂಬರಿ. ಆ ಕಾಲದ ಪ್ರೆಂಚ್ ಜನಮಾನಸದ ವಿಸ್ತೃತ ಚಿತ್ರಣದಂತಿದೆ. ಆ ಕಾಲದ ಪ್ರಸ್ತುತತೆಯೊಂದಿಗೆ ಮಾನವ ಸಹಜ ರಾಗದ್ವೇಷಗಳು, ಮುಂದಿನ ಕಾಲಕ್ಕೂ ಸಂಗತವಾದ ಆಯಾಮಗಳಿಂದ ಇಂದಿಗೂ ಆ ಕೃತಿ ಮೌಲ್ಯಭರಿತವೆನಿಸುವುದು. “The truth in all its harshness”

Dabus ನದಿಯ ದಂಡೆಯ ಮೇಲಿರುವ Verrieres ಎಂಬ ಪ್ರೆಂಚ ನಗರ. ಸಾ ಮಿಲ್ ಗಳಿಂದ ಕೂಡಿದ ಸಂಪತ್ಭರಿತ ನಗರ. ಅಲ್ಲಿಯ Julien ಪುಸ್ತಕದ ಗೀಳು ಬೆಳೆಸಿಕೊಂಡ ಯುವಕ. ತರುಣನಾದರೂ ಲ್ಯಾಟೀನ್ ಬೈಬಲ ಕುರಿತ ಆತನ ಜ್ಞಾನ ಎಲ್ಲರನ್ನು ದಿಗ್ಭ್ರಮೆಗೊಳಿಸುವಂತಹುದು, ಆದರೆ ಆತನ ತಂದೆಗೆ ಇದಾವುದು ಇಷ್ಟವಿಲ್ಲ. ಮಗನಿಂದ ಸಂಸಾರ ಜವಾಬ್ದಾರಿಗೆ ಹಣಕಾಸಿನ ಸಹಾಯವಾಗುತ್ತಿಲ್ಲ ಎಂದು ಚಿಂತಿಸುತ್ತಿರುವಾಗಲೇ ಮೇಯರ್ M.de Renal ಜೂಲಿಯನ್‌ನನ್ನು ತನ್ನ ಮಕ್ಕಳಿಗೆ ಟ್ಯೂಟರ್ ಆಗಿ ಬರುವಂತೆ ಕೇಳಿಕೊಳ್ಳುತ್ತಾನೆ. ತನ್ನ ಮಕ್ಕಳಿಗೆ ಲ್ಯಾಟಿನ್ ಶಿಕ್ಷಣ ಕೊಡಿಸುವ ಆಶಯದಿಂದ ಕಾರ್ಪೆಂಟರ್ ಸೋರೆಲ್‌ನ ಮಗ ಜೂಲಿಯನ್‌ನ್ನು ನೇಮಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಊಟ ವಸತಿ ಬಟ್ಟೆ ಜೊತೆಗೆ ೪೦೦ ಪ್ರಾಂಕುಗಳ ವೇತನವನ್ನು ನಿಗದಿಗೊಳಿಸುತ್ತಾನೆ. ಹೀಗಾಗಿ ಸೊರೆಲ್ ಸಂತಸಗೊಂಡಿದ್ದಾನೆ. ಆದರೆ ಬರಬರುತ್ತ ಜೂಲಿಯನ್‌ನ ಸಹೃದಯತೆ, ಮೃದುಮಾತು, ನಯವಿನಯ ಸೂಕ್ಷ್ಮಮನಸ್ಸು ಮೇಯರ್‌ನ ಪತ್ನಿ Mme.Renal ಳನ್ನು ಆತನತ್ತ ಆಕರ್ಷಿಸುತ್ತವೆ. ಕ್ರಮೇಣ ಆತನ ಮನಸ್ಸು ಆಕೆಯೆಡೆಗೆ ಸೆಳೆಯುತ್ತದೆ. ಅಲ್ಲೊಂದು ಬಂಧವೂ ಬೆಳೆದು ಸಂಬಂಧ ಗಟ್ಟಿಗೊಳ್ಳುತ್ತದೆ. ಆದರೆ ಅದೇ ಮನೆಯಲ್ಲಿರುವ ಎಲಿಸಾ ಎಂಬ ಮನೆಕೆಲಸದಾಕೆ ಕೂಡಾ ಆತನತ್ತ ಆಕರ್ಷಿತಳಾಗಿ ಮದುವೆಯಾಗುವ ಬಯಕೆಯನ್ನು ಒಡತಿಯಲ್ಲಿ ತಿಳಿಸುತ್ತಾಳೆ. ಮತ್ತು ತನಗೆ ಸಹಾಯ ಮಾಡುವಂತೆ ಕೋರುತ್ತಾಳೆ. ಆದರೆ ಜೂಲಿಯನ್ ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ. Mme.Renal ಖುಷಿಯಾಗುತ್ತಾಳೆ. ಮನೆಯಲ್ಲಿಲ್ಲದ ಸಮಯದಲ್ಲಿ ಇವರಿಬ್ಬರ ಪ್ರೇಮ ಪ್ರಣಯಗಳು ಸಾಂಗವಾಗಿ ಸಾಗುತ್ತಿರುವಾಗಲೇ ಎಲಿಸಾ ಈ ವಿಚಾರ ತಿಳಿದು ಕುಪಿತಳಾಗಿ ಈ ಅನೈತಿಕತೆಯ ವಿಚಾರವನ್ನು ರೇನಲ್‌ನ ಕಡುವೈರಿ M.Velemod ಗೆ ತಿಳಿಸುತ್ತಾಳೆ. ಮೇಯರ್ M.de Renal ಬರುವ ಅನಾಮಧೇಯ ಪತ್ರ ಈ ವಿಚಾರವನ್ನು ಸ್ಪಷ್ಟಗೊಳಿಸುತ್ತಲೂ ಜೂಲಿಯನ್ Verrieres ಬಿಟ್ಟು ಸೆಮಿನರಿಯೊಂದಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಅಲ್ಲಿಯೂ ಕ್ಷುಲಕ ಕಪಟದ ರಾಜಕೀಯ ದಿಂದ ರೋಸಿಹೋಗಿ ಗೆಳೆಯ ಪಿರಾಡನೊಂದಿಗೆ ಪ್ಯಾರಿಸ್‌ಗೆ ಬರುತ್ತಾನೆ. ಅಲ್ಲಿ ಶ್ರೀಮಂತ Marquis de la moleಗೆ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾನೆ. ಅಲ್ಲಿ ಜೂಲಿಯನ್ ತನ್ನ ಬಹುದಿನದ ಕನಸಿನ ಬದುಕನ್ನು ಬಹುಮಟ್ಟಿಗೆ ಗಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಮೆಟ್ರೋಪೊಲಿಟನ್ ವ್ಯವಸ್ಥೆಯ ಐಶಾರಾಮದ ಹೊಸ ವ್ಯಕ್ತಿಯಾಗಿ ರಾಜಕೀಯದ ದಾರಿಯಲ್ಲಿ ಹೆಜ್ಜೆಯಿಡುತ್ತಾನೆ.

ಅಲ್ಲಿಯೂ ಆತನ ಬಹುದೊಡ್ಡ ವಿಜಯವೆಂದರೆ Marquis de la moleಯ ೧೮ರ ಹರೆಯದ ಮಗಳು ಮೆಟಿಲ್ಡಾಳೊಂದಿಗಿನ ಪ್ರೇಮ ಸಂಬಂಧ. ವಿಭಿನ್ನವಾದ ಭ್ರಮೆಯನ್ನು ಪ್ರೇಮದ ವಿಷಯದಲ್ಲಿ ಹೊಂದಿದ ಮೆಟಿಲ್ಡಾಳ ಕನಸಿನ ಹೀರೋನ ತಲಾಷೆಯಲ್ಲಿರುತ್ತಾಳೆ. ಜೂಲಿಯನ್‌ನಲ್ಲಿ ಆ ಗುಣಲಕ್ಷಣಗಳ ಗುರುತಿಸಿ ಅವನನ್ನೇ ಮದುವೆಯಾಗುವ ಇಂಗಿತವನ್ನು ತಂದೆಗೆ ತಿಳಿಸುತ್ತಲೂ ತಂದೆ ಜೂಲಿಯನ್‌ನ ಪೂರ್ವಾಪರಗಳ ಶೋಧನೆಗೆ ತೊಡಗಿದಾಗ ಜೂಲಿಯನ್ನಗೆ Mme.Renal ಳೊಂದಿಗಿನ ಸಂಬಂಧದ ಹಿಂದಿನ ಸಂಗತಿಗಳು ಹೊರಬರುತ್ತವೆ. Mme.Renal ಜೂಲಿಯನ್‌ನೊಬ್ಬ ಹೃದಯಹೀನನೆಂದು ಜರಿದು ಪತ್ರ ಬರೆಯುತ್ತಾಳೆ. ಇದರಿಂದ ಮದುವೆ ನಿಂತುಹೋಗುತ್ತದೆ ಕುಪಿತನಾದ ಜೂಲಿಯನ್ ಅದೊಂದು ದಿನ ಚರ್ಚಿನಲ್ಲಿ ಪ್ರಾರ್ಥಿಸುತ್ತಿದ್ದ Mme.Renal ಳನ್ನು ಶೂಟ್ ಮಾಡುತ್ತಾನೆ. ಪ್ರಾಣಾಂತಿಕ ಅಪಾಯಕ್ಕೊಳಗಾದ ಆಕೆ ಆಸ್ಪತ್ರೆ ಸೇರಿದರೆ ಜೂಲಿಯನ್ ಜೈಲು ಸೇರುತ್ತಾನೆ. ಆತನ ಸ್ನೇಹಿತರು ಆತನ ಸಹಾಯಕ್ಕೆ ನಿಂತರೂ ಈಗಾತ ಅವೆಲ್ಲವನ್ನೂ ನಿರಾಕರಿಸುತ್ತಾನೆ. ಆತನಿಗೆ ಮರಣದಂಡನೆಯ ಶಿಕ್ಷೆಯಾಗುತ್ತದೆ. ಸ್ವಲ್ಪ ಸಮಯದಲ್ಲಿ Mme.Renal ಕೂಡ ಸತ್ತು ಹೋಗುತ್ತಾಳೆ. ಮೆಟಿಲ್ಡಾ ತನ್ನ ಅದ್ಭುತ ರೋಮ್ಯಾಂಟಿಕ ಕಲ್ಪನೆಯಂತೆ ತನ್ನ ಪ್ರೇಮಿ ಜೂಲಿಯನ್‌ನ ಕತ್ತರಿಸಿದ ಶಿರವನ್ನು ತನ್ನ ಕೈಯಾರೆ ಮಣ್ಣು ಮಾಡುತ್ತಾಳೆ.

ಕಾದಂಬರಿಯ ಪಾತ್ರಗಳು ಕಾಲ್ಪನಿಕ ಜೀವಿಗಳು, ಭ್ರಮಾದೀನ ಜಗತ್ತಿನ ಕೂಸುಗಳು. ವಾಸ್ತವಕ್ಕಿಂತ ರೋಮಾಂಚಿಸುವ ಊಹೆಯಲ್ಲಿ ತೇಲುತ್ತ ವಾಸ್ತವಕ್ಕೂ ಅದೇ ಕೀರಿಟ ತೋಡಿಸುವ ಪ್ರಯತ್ನ ಮಾಡುತ್ತಾರೆ.

ನಾಯಕ ಜೂಲಿಯನ್ ಸೂಕ್ಷ್ಮ ಮನಸ್ಥಿತಿಯ ಸಂವೇದನಾಶೀಲ ವ್ಯಕ್ತಿ. ತನ್ನ ಪ್ರಾಯದ ಎಲ್ಲ ಹುಡುಗರಿಗಿಂತ ಭಿನ್ನ. ಆತನಲ್ಲಿರುವ ಕ್ಲಾಸ್ ವಿಕನೆಸ್ ಕೀಳಿರಿಮೆಯಿಂದ ಆ ಬದುಕನ್ನು ಮೀರಿ ಉನ್ನತ ಸಾಮಾಜಿಕ ಸ್ಥಾನಕ್ಕಾಗಿ ಒತ್ತಾಸೆಯಿಂದ ಪ್ರಯತ್ನಿಸುತ್ತ ಬುದ್ದಿಜೀವಿಗಳ ಸಮೂಹದಲ್ಲಿ ಗುರುತಿಸಿಕೊಳ್ಳುವ ಇರಾದೆಯಿಂದ ಭಿನ್ನವಾಗಿ ತೊಡಗಿಸಿಕೊಳ್ಳುತ್ತಾನೆ. ಉಚ್ಚ ಕುಲೀನ ಮನೆತನದ ಹೆಣ್ಣುಗಳ ಸಂಬಂಧ ಬೆಳೆಸಿಕೊಳ್ಳುವಲ್ಲಿ, ಮನೆಗೆಲಸದ ಎಲಿಸಾಳನ್ನು ತಿರಸ್ಕರಿಸುವಲ್ಲಿ ಕೂಡ ಆಂತರ್ಗತ ಕೀಳಿರಿಮೆ ಸ್ಪುಟವಾಗುತ್ತದೆ. ಆದರೂ ಕೊನೆಯಲ್ಲಿ ತನ್ನೆಲ್ಲಾ ನೋವು ನಿರಾಶೆಗಳ ನಡುವೆಯೂ ಧೃಡ ಮನಸ್ಕನಾಗಿ ತನ್ನನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ, ಸ್ನೇಹಿತರ ಯಾವ ಸಹಾಯವನ್ನೂ ಯಾಚಿಸದೇ ಸಾವನ್ನೂ ಸ್ವೀಕರಿಸಲು ಸಿದ್ಧನಾಗುವುದು ಆತನ ಅಸಾಮಾನ್ಯ ಭಾವ ಸೂಕ್ಷ್ಮತೆಗೆ ಕುರುಹು. ಹೀಗಾಗಿ ಶೇಕ್ಸಪಿಯರ್ ಕಲ್ಪನೆಯ ಹ್ಯಾಪಿ ಪ್ಯು ಉದ್ದಿಪನ ಗೊಂಡಿದೆ.

Stendhal ಮೊದಲ ಹೆಸರು Marie Henri Beyle. ೧೭೮೩ ಜನವರಿ ೨೩ರಂದು ಫ್ರಾನ್ಸಿನ ಗ್ರೆನೊಬಲ್ ದಲ್ಲಿ ಜನಿಸಿದ ಅನೂಹ್ಯವಾದ ಫ್ರಾನ್ಸಿನ ಬದುಕಿನ ಮೂಲ ಹಾಗೂ ಸಂಕೀರ್ಣ ಸಂಗತಿಗಳ ಮೇಲೆಯೇ ಕೃತಿ ರಚಿಸಿದ ೧೯ನೇ ಶತಮಾನದ ಸಾಹಿತಿಗಳಲ್ಲಿ ಇತ ಪ್ರಮುಖ. ಆತನ ಪ್ರಸಿದ್ಧ ಕಾದಂಬರಿಗಳು”The Scarlet and the Black” “The Charter house of Parma”. ತಂದೆ ಗ್ರೆನೊಬಲ್ ನ ಹೈಕೋರ್ಟ ನಲ್ಲಿ ಬ್ಯಾರಿಸ್ಟರ ಆಗಿದ್ದ. ತಾಯಿಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದ ಏಕಾಂತತೆ, ತಂದೆಯ ಮೇಲಿನ ಅಸಂತೃಪ್ತಿ ಆತನನ್ನು ಬಾಲ್ಯದಲ್ಲಿ ಬಹುವಾಗಿ ಕಾಡಿತ್ತು. ಪ್ರೇಮದ ಕೊರತೆ ಮನೆಯಲ್ಲಿಯ ಉಸಿರುಗಟ್ಟಿಸುವ ಕಟ್ಟುಪಾಡಿನ ಶಿಸ್ತು ಆಹ್ಲಾದರಹಿತ ಬದುಕು ಆತನನ್ನು ನೋಯಿಸಿದ್ದವು. ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯ ಮತ್ತು ಗಣಿತದಲ್ಲಿ ಆಸಕ್ತಿಹೊಂದಿದ್ದ. ೧೭೯೯ರಲ್ಲಿ ಶಿಕ್ಷಣದ ನೆವಮಾಡಿ ಗ್ರೆನೊಬಲ್ ಬಿಟ್ಟು ಆತ ಪ್ಯಾರಿಸ್‌ಗೆ ಬಂದ. ಮನೆಯ ಕಟ್ಟುನಿಟ್ಟಾದ ನಿಯಮಬದ್ಧತೆ ತಂದೆಯ ಖಡಕ್ ನಿರ್ಧಾರಗಳಿಂದ ರೋಸಿಹೋಗಿದ್ದ ಸ್ಟ್ಯಾಂಡಲ್ ಇವೆಲ್ಲವೂಗಳಿಂದ ಪಾರಾಗಿ ತಾನೊಬ್ಬ ನಾಟಕಕಾರನಾಗಬೇಕೆಂಬ ಗುಪ್ತ ಆಕಾಂಕ್ಷೆಯನ್ನು ಮೂರ್ತರೂಪಕ್ಕೆ ತರಲು ಪ್ಯಾರಿಸ ಸರಿಯಾದ ಸ್ಥಳವೆಂದು ನಿರ್ಧರಿಸಿದ. ಆದರೆ ಅದಕ್ಕೂ ಮುಖ್ಯವಾಗಿ ಇಟಲಿಯ ಪ್ರೆಂಚ್ ಮಿಲಿಟರಿ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇಟಲಿಯ ಆತನ ಮೇಲೆ ಅಳಿಸಲಾಗದ ಪ್ರಭಾವ ಬೀರಿತ್ತು. ಮಿಲನ್ ನಗರವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಆತ ಆ ಸಮಯದಲ್ಲಿ ಜರ್ಮನಿ, ಆಸ್ಟ್ರಿಯಾ ಮುಂತಾದ ದೇಶಗಳ ಬಗ್ಗೆ ತಿಳಿದುಕೊಳ್ಳಲು ಹಾಗೆ ನೆಪೋಲಿಯನ್ ಆಡಳಿತದ ಒಳಹೊರಗನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯ್ತು. ಸ್ಟೆಂಡಲ್ ಮಾರ್ಚ ೨೩ ೧೮೪೨ರಲ್ಲಿ ಪ್ಯಾರಿಸನಲ್ಲಿ ಮರಣ ಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇನು ಹುಳು
Next post ವಿಲ್ ಪವರ್

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys