ರೊಟ್ಟಿ ಬರಬೇಕು ಹೀಗೆ
ಹಸಿವಿನೆದೆ ಕರಗುವ ಹಾಗೆ
ಕರಗಿದ್ದು ನೀರಾಗಿ
ನೀರಾಗಿದ್ದು
ಮನ ತಣಿಸುವ ಹಾಗೆ
ತಣಿಸಿದ್ದು ಹಸಿವಿಡೀ
ಆಕ್ರಮಿಸುವ ಹಾಗೆ
ಆಕ್ರಮಿಸಿದ್ದು ಆವರಿಸಿ
ಹಸಿವಿನೊಳಗೇ ರೊಟ್ಟಿ
ಆವಿರ್ಭವಿಸಿ ಪಲ್ಲವಿಸುವ ಹಾಗೆ
ಅಲ್ಲಿಯವರೆಗೂ ಹೀಗೇ
ಹದಗೊಳ್ಳುತ ಪದವಾಗುವ
ಕಾಯಕ ರೊಟ್ಟಿಗೆ.
*****