೧ ಜೀಯಾ ಹೀಗೆ ನಿನ್ನ ಮುಂದೆ ಒಳಗಿನದೆಲ್ಲ ಸುರಿದು ಖಾಲಿಯಾಗಿ ನಿಂತುದು ಅದೆಷ್ಟನೆಯ ಸಲವೋ ಲೆಕ್ಕವಿಟ್ಟಿರಬಹುದು ನೀನು. ಮತ್ತೆ ಮತ್ತೆ ನನ್ನ ತುಂಬುವವನು ಕರುಣಾಳು ನೀನೇ ತಾನೇ? ಅಬ್ಬರದ ಶರಧಿಯಲಿ ಅಲೆವ ಮೀನು ನಾನು...
ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ...
ಹೆಜ್ಜೆ-೧ ಅವನ ದೃಢ ವಿಶಾಲ ಪಾದದ ಮೇಲೆ ಪುಟ್ಟಾಣಿ ಹುಳು ಅಂಗುಲಂಗುಲ ಏರಿ ಪುಟ್ಟ ಪಾದವನೂರಿ ಅತ್ತಿಂದಿತ್ತ ಜೀಕುತ್ತಾ ಜೋಕಾಲೆ. ಅವನ ಪಾದದ ಮೇಲೆ ಅದರ ಪದತಳ. ಒಂದಿಂಚೋ ಎರಡಿಂಚೋ ಮೂರೋ ತಗುಲದೇ ಬಿಟ್ಟೂ...
ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ ಕರುಳಿನಾಳಕ್ಕಿಳಿದು...
ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ...