ರೂಪ ಹಾಸನ

ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****

Read More

ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ… ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****

Read More

ಪ್ರಿಯ ಸಖಿ, ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿತ್ತು. ಆದರೆ ಕಾಲಕ್ರಮೇಣ ಇಡೀ ವಿಶ್ವವೇ ಅರ್ಥ ಸಂಸ್ಕೃತಿಯೆಡೆಗೆ ಮುಖಮಾಡಿ ನಿಂತಾಗ ಇನ್ನಿತರ ತಾತ್ವಿಕ, ನೈತಿಕ ಮಾನವೀಯ

Read More

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****

Read More

ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ

Read More

ಹಸಿವೆಗೆ ಬೇಕಾದಾಗ ಬೇಕೆಂದಂತೆಲ್ಲಾ ರೊಟ್ಟಿ ಹೊಂದಿಕೊಳ್ಳುವುದು ಅಲಿಖಿತ ನಿಯಮ. ಹಸಿವಿನಿಂದ ರೊಟ್ಟಿಯೂ ಅದನ್ನೇ ಬಯಸಿದರೆ….. ಶಾಂತಂಪಾಪಂ ಅದು ಅನಿಯತ. *****

Read More

ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****

Read More