ಸರ್ದಾರ್: "ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ..." ವ್ಯಕ್ತಿ: "ಅವಳು ನನ್ನ ಮಗಳು.." ಸರ್ದಾರ್: "ನೀವು ಅವರ ತಂದೆಯಾ?" ವ್ಯಕ್ತಿ: "ಅಲ್ಲ ತಾಯಿ" *****
ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ - "ಅಮೇರಿಕಾ ಎಷ್ಟು ತಾಸು ಪ್ರಯಾಣ". ರಿಸೆಪ್ಷನಿಸ್ಟ್ ಹೇಳಿದಳು "ಒಂದು ತಾಸು" ಸರ್ದಾರ ಹೇಳಿದ- "ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ" *****
ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು. ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ.. ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು "ಬೇಕಿತ್ತಾ" *****
ರೋಗಿ: "ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್ತಾ ಇದೆ" ಡಾಕ್ಟ್ರು: "ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು" *****
೮೦ರ ದಶಕದಲ್ಲಿ "ಮನೆಗೆ ಮೂರು ಮಕ್ಕಳು ಸಾಕು" ೯೦ರ ದಶಕದಲ್ಲಿ "ಆರತಿಗೊಂದು ಕೀರ್ತಿಗೊಂದು" ೨೦೦೦ ದಲ್ಲಿ "ಮನೆಗೊಂದು ಮಗು, ಮನೆ ತುಂಬಾ ನಗು" ಮುಂದೆ "ದಾರಿಗೊಂದು ದೀಪ.. ಬೀದಿಗೊಂದು ಪಾಪ" *****
ಗುಂಡನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಮೂರು ಮಕ್ಕಳು ತೆಳ್ಳಗೆ ಬೆಳ್ಳಗ್ಗಿದ್ದರೆ ನಾಲ್ಕನೇ ಮಗ ಕುಳ್ಳಗೆ ಕಪ್ಪಗಿತ್ತು. ಗುಂಡ ಕೇಳಿದ - "ನಿಜ ಹೇಳೆ, ನಾಲ್ಕನೇ ಮಗ ನಿಜವಾಗ್ಲೂ ನನ್ನವನೆ? ಹೆಂಡ್ತಿ ಹೇಳಿದ್ಲು -...