ವಚನ ವಿಚಾರ – ಆಸೆ ರೋಷ

ವಚನ ವಿಚಾರ – ಆಸೆ ರೋಷ

ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು
ನೋಡಾ
ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು
ಗೊಹೇಶ್ವರ

ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೋದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು.

ನಮ್ಮ ಎಲ್ಲ ಕೋಪಕ್ಕೆ ನಮ್ಮೊಳಗಿನ ಆಸೆಯೇ ಕಾರಣವಲ್ಲವೆ? ನಮ್ಮೊಳಗೆ ನಾವು ಬೆಳೆಸಿಕೊಂಡ ಆಸೆಗೆ ಧಕ್ಕೆ ಬಂದಾಗ ಕೋಪ, ರೋಷಗಳು ಮೂಡುತ್ತವೆ. ಹಾಗೆ ಹುಟ್ಟಿದ ರೋಷ ಅತೃಪ್ತವಾದ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆಸೆಯಿಂದ ಕೋಪ, ಕೋಪದಿಂದ ಆಸೆ ಪರಸ್ಪರ ಬೆಳೆಯುತ್ತ ಹೋಗುತ್ತವೆ.

ದೇವರನ್ನು ನಮ್ಮಿಂದ ಬೇರೆಯಾದ ಒಂದು ಶಕ್ತಿ ಎಂದು ಸಾಮಾನ್ಯವಾಗಿ ತಿಳಿಯುತ್ತೇವೆ. ಹಾಗೆ ನಾವು ಬೇರೆ ಎಂಬ ಪ್ರತ್ಯೇಕತೆಯ ಭಾವ ಇರುವುದರಿಂದಲೇ ನನಗೆ ಅದು “ಬೇಕು” ಎಂಬ ಆಸೆ ಮತ್ತು ಸಿಗಲಿಲ್ಲವೆಂಬ ರೋಷ ಹುಟ್ಟುತ್ತವೆ. ಆಸೆ ರೋಷಗಳಿಂದ ನಾವು ನಮ್ಮ ಸುತ್ತಲವರಿಂದಲೂ ನಮ್ಮ ಕಲ್ಪನೆಯ ದೇವರಿಂದಲೂ ಬೇರೆಯಾಗುತ್ತ ದೂರವಾಗುತ್ತ ಹೋಗುತ್ತೇವೆ.

ಆಸೆಬುರುಕರನ್ನೂ ಕೋಪಿಷ್ಠರನ್ನೂ ನಾವು ದೂರವಿಡಲು ಬಯಸುವುದಿಲ್ಲವೇ? ಹಾಗೆಯೇ ದೇವರು ಕೂಡ ಆಸೆ ರೋಷಗಳು ಇರುವ ವ್ಯಕ್ತಿಗಳನ್ನು ದೂರವಿಡುತ್ತಾನೆ. ಆಸೆ ರೋಷಗಳನ್ನು ನೀಗಿಕೊಂಡಾಗ ವಿಶ್ವದ ಶಕ್ತಿಯೊಡನೆ ಐಕ್ಯ ಸಾಧ್ಯವಾಗುತ್ತದೆ ಎಂಬುದು ಅಲ್ಲಮನ ಮಾತು. ದೇವರನ್ನು ನಿರ್ಗುಣ ಅನ್ನುವುದುಂಟಲ್ಲವೆ? ಯಾಕೆಂದರೆ ದೇವರಿಗೆ ಆಸೆಯೂ ಇರಲಾರದು, ರೋಷವೂ ಇರಲಾರದು. ಇವೆರಡೂ ಗುಣಗಳನ್ನು ಇಲ್ಲವಾಗಿಸಿಕೊಂಡು ನಮ್ಮನ್ನು ನಾವು ಮಗುಗೊಳಿಸಿ ಕೊಂಡರೆ ಅದೇ ದೈವತ್ವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಿಕ್ಷುಕಿ
Next post ಸಂಕ್ರಮಣ ಕಾಲ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…