Henry Devid Thoreau-ನ ಸರಳ ಜೀವನದ ಸಾರ-Walden

Henry Devid Thoreau-ನ ಸರಳ ಜೀವನದ ಸಾರ-Walden

ಹಾವರ್ಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ Henry Devid Thoreau ಅಮೇರಿಕಾದ ಮಹಾನ್ ತತ್ವಜ್ಞಾನಿ, ಕವಿ. ೧೮೧೭ ಜುಲೈ ೧೨ರಂದು ಯು.ಎಸ್ ನ ಮೆಸಾಚುಸೆಟ್ಸನ ನಲ್ಲಿ ಜನನ.ಇತನ “Walden” ಎಂಬ ಕೃತಿ ವಿವರಣಾತ್ಮಕ ಪ್ರಬಂಧಗಳ ಸಂಕಲನವಾಗಿದ್ದು ಅಮೇರಿಕನ್ ಸಾಹಿತ್ಯಲ್ಲಿ ಒಂದು ಶ್ರೇಷ್ಟ ಕೃತಿ ಎನಿಸಿಕೊಂಡಿದೆ.`Walden’ Thoreau ನ ವೈಯಕ್ತಿಕ ಪ್ರಾಮಾಣಿಕ ಅನುಭವಗಳ ದಾಖಲೆ. ಪ್ರಕೃತಿಯೊಂದಿಗಿನ ಅನುಬಂಧದ ವಿವರಣಾತೀತ ಬದುಕಿನ ಸಾರವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾನೆ. ನಿಸರ್ಗದೊಂದಿಗೆ ಬೆರೆತ ಬದುಕು ಅದರಲ್ಲಿಯ ಆನಂದ ಹಾಗೂ ಕಟ್ಟುಪಾಡು ಬಂಧನಗಳ ಯಾಂತ್ರಿಕ ಬದುಕುಗಳ ಚಿತ್ರಣವನ್ನು ಇಲ್ಲಿ ನೀಡುತ್ತಾನೆ. ಮನುಷ್ಯ ಮತ್ತು ನಿಸರ್ಗದ ನಡುವಿನ ಸಹಬಂಧಗಳ ಬಗ್ಗೆ ಮಾತನಾಡುತ್ತದೆ. ಆಧುನಿಕ ಮಾನವ ಕೇಂದ್ರಿತ ಸಿದ್ದಾಂತಕ್ಕೆ ಭಿನ್ನವಾದ ನಿಸರ್ಗಕೇಂದ್ರಿತ ಸಿದ್ದಾಂತವನ್ನು ಪ್ರಸ್ತುತಪಡಿಸುತ್ತಾನೆ. ಭಾರತೀಯ ಗ್ರಂಥಗಳಾದ ಭಗವದ್ಗೀತೆ, ಉಪನಿಷದ್ಗಳಿಂದ ಪ್ರಭಾವಿತನಾಗಿದ್ದ ಇತ ವಾಲ್ಡನ್ ನಲ್ಲಿ ಹರಿವಂಶ ಹಾಗೂ ಭಗವದ್ಗೀತೆ, ಉಪನಿಷತ್ತುಗಳ ಹಲವಾರು ಉಲ್ಲೇಖಗಳನ್ನು ನೀಡಿದ್ದಾನೆ. ಹಿಂದೂ ತತ್ವಜ್ಞಾನಿಗಳಂತೆ Thoreau ಸರಳ ಜೀವನ ಹಾಗೂ ಉದ್ದಾತ್ತ ವಿಚಾರಗಳಿಗೆ ಮಹತ್ವ ನೀಡುತ್ತಾನೆ.

Thoreau `Walden’ನಲ್ಲಿ ಎರಡು ವರ್ಷ ಹಾಗೂ ಎರಡು ತಿಂಗಳು ಕಳೆಯುತ್ತಾನೆ. ಆದರೆ ಪ್ರಬಂಧ ಒಂದೇ ವರ್ಷದ ಕಾಲಚಕ್ರದ ಹಿನ್ನೆಲೆಯಲ್ಲಿ ಬರೆಯಲ್ಪಟ್ಟಿದೆ. ಪ್ರಾರಂಭದಲ್ಲಿ ತನ್ನ ನಗರ ಜೀವನ ಬಿಟ್ಟು ನಿಸರ್ಗದಾನುಭೂತಿಗಾಗಿ ಕಾಡಿಗೆ ಹೋಗುತ್ತಾನೆ. ಪುನಃ ಕೊನೆಯಲ್ಲಿ ಕಾಡನ್ನು ಬಿಟ್ಟು ತನ್ನ ನಾಡಿಗೆ ಹಿಂದಿರುಗಿ ಬರುತ್ತಾನೆ. ಅನ್ವೇಷಣೆಗಳು ಮೇಲ್ಪದರದಲ್ಲಿ ಪ್ರಾರಂಭವಾಗಿ ತಳದತ್ತ ಸಾಗುತ್ತವೆ. ವಾಲ್ಡನ್‌ನ ಹೃದಯ ಭಾಗವನ್ನು ಸರೋವರದ ಮೂಲಕ ಸಾಗುತ್ತಾನೆ. ಬೇಸಿಗೆಯ ಆ ದಿನಗಳು ಕೊಳದ ಮೇಲ್ಭಾಗವನ್ನು ಬರಡು ಗೊಳಿಸಿವೆ. ಆದರೆ ಒಳಭಾಗ ಮಾತ್ರ ನೀರಿನಿಂದ ತುಂಬಿದೆ. ಪುನಃ ಹೊಸ ವಸಂತ ಹೊಸ ಬದುಕು ನಿಸರ್ಗಕ್ಕೆ. ಅಂತೆ ಲೇಖಕ ಕೂಡ ತನ್ನ ಸೊಸಾಯಿಟಿಗೆ ಮರಳುತ್ತಾನೆ ಹೊಸ ದೃಷ್ಟಿ ಹೊಸ ಶಕ್ತಿಯೊಂದಿಗೆ. ಹೀಗೆ ಆತನ ಜರ್‍ನಿ ಎಲ್ಲಿಂದ ಪ್ರಾರಂಭವಾಗಿತ್ತೋ ಅಲ್ಲಿಗೆ ಬಂದು ತಲಪುತ್ತದೆ. ವಾಲ್ಡನ್ ಕೃತಿ ಲೇಖಕ ದೈವದೊಂದಿಗೆ ಸಮೀಕರಿಸಿಕೊಳ್ಳುವ ಪ್ರಯತ್ನಕ್ಕೆ ಸಂಕೇತವಾಗಿ ನಿಲ್ಲುತ್ತದೆ. ಒಬ್ಬ ಅನುಭಾವಿಯಾಗಿಯೂ ಚರ್‍ಚ್, ಧಾರ್ಮಿಕ ಸಮ್ಮಿಲನ, ಹಾಡು ಇತ್ಯಾದಿಗಳ ಬಗ್ಗೆ ತೀರ ಆಸಕ್ತನಾಗಿರಲಿಲ್ಲ. ಬೈಬಲ್‌ನಲ್ಲಿ ಅಂತಹ ಒಲವುಳ್ಳವನಾಗಿರಲಿಲ್ಲ. ಆದರೆ ಗ್ರೀಕ, ಭಾರತ, ಇಜಿಪ್ತ, ಪರ್ಶಿಯನ್ ತತ್ವಜ್ಞಾನದಲ್ಲಿ ಆಸಕ್ತಿಹೊಂದಿದ್ದು ದೈವಸಾಂಗತ್ಯ ವ್ಯಕ್ತಿಯ ಅಂತರ್ಗತ ಸಂವೇದನೆಗಳಿಂದ ಮಾತ್ರ ಎಂಬ ಸತ್ಯ ನಂಬಿದ್ದ. ದೈವಸಾಕ್ಷಾತ್ಕಾರ ಅಂತಃಚಕ್ಷುವಿಗೆ ಮಾತ್ರ ಸಿಗುವಂತಹುದು.

ವಾಲ್ಡನ್ ಕೃತಿಯನ್ನು ಅತಿ ಉತ್ಕಟತೆಯಿಂದ ಬರೆಯುತ್ತಾನೆ. ತಾನೇಕೆ Concord ಬಿಟ್ಟು ಕಾಡಿಗೆ ಹೋದೆನೆಂಬುದನ್ನು ಸ್ಪಷ್ಟಪಡಿಸುತ್ತಾನೆ. ಸಂಕಲನದ ಮೊದಲ ಅಧ್ಯಾಯ Economy. ಬದುಕಿನಲ್ಲಿ ಎದುರಾಗುವ ಸಂದರ್ಭಗಳು ಮತ್ತು ಆ ಹಂತದ ಸರಿಯಾದ ಸಮಯೋಚಿತವಾದ ನಿರ್‍ಧಾರಗಳು ಒಬ್ಬ ವ್ಯಕ್ತಿಗೆ ಬದುಕಿನ ನಿರ್ದಿಷ್ಟ ಕೊನೆಯ ಸತ್ಯ ತಿಳಿಯಲು ಸಹಕರಿಸುತ್ತವೆ. ಮನುಷ್ಯನ ಪಾರಮಾರ್ಥಿಕ ಸಾಧನೆಯಲ್ಲಿ ಬಹುಮುಖ್ಯ ತೊಡರುಗಳೆಂದರೆ ಆತನ ಐಹಿಕ ಲಾಲಸೆಗಳ ಲೋಲುಪತೆ. ಮನುಷ್ಯ ಮೂಲತಃ ಪ್ರಾಣಿ. ಆದ್ದರಿಂದ ಪ್ರಾಣಿ ಸಹಜವಾದ ಬಯಕೆಗಳ ಇಡೇರಿಸಿಕೊಂಡ ಮೇಲಷ್ಟೇ ತನ್ನೊಳಗಿನ ಸ್ವಂಶಕ್ತಿಯ ದರ್ಶನ ಪಡೆಯಬಲ್ಲ. ಬಹಳಷ್ಟು ಜನ ಪ್ರಾಪಂಚಿಕ ಬದುಕಿಗೆ ಸೀಮಿತವಾಗಿರುವರು. ಅವರ ಒಳಗಣ್ಣು ಕುರುಡಾಗಿಯೇ ಇರುವುದು. ಅದು ನಿಸರ್ಗದ ಶ್ರೇಷ್ಟತೆಯ ಅರಿಯುವುದಿಲ್ಲ. “The mass of men lead lives of quiet desperation” ಹೀಗಾಗಿ ಎಲ್ಲ ಇದ್ದು ಅಂತರ್ಗತ ಹತಾಶೆ ಮನುಷ್ಯನ ಕಾಡುತ್ತದೆ. ನಾವು ಅಸಂತೋಷಿಗಳಾಗಿ ಆಶಾಭಗ್ನರಾಗಿ ಇರಲು ಕಾರಣ ನಮಗೆ ಸರಳ ಬದುಕಿಗೆ ಬೇಕಾಗುವ ಸಾಮಾನ್ಯ ಅವಶ್ಯಕತೆಗಳು ಹಾಗೂ ಐಶಾರಾಮಿ ಬದುಕು. ಇವುಗಳ ನಡುವಿನ ಅಂತರ ಅರಿಯದೇ ಇರುವುದು ಹಾಗೂ ನಿಸರ್ಗ ಮತ್ತು ನಮ್ಮನ್ನು ಅರಿಯದೇ ಬದುಕುವುದೇ ಆಗಿದೆ. ಆಶೆಗಳನ್ನು ಮಿತಗೊಳಿಸಿಕೊಳ್ಳಬೇಕು. ಅದು ನಮ್ಮನ್ನು ಆಂತರ್ಯದಿಂದ ಶ್ರೀಮಂತಗೊಳಿಸುತ್ತದೆ. ಆದರೆ ಹೇಳುವಂತೆ ಮನುಷ್ಯನ ಐಶಾರಾಮದ ಹಾಗೂ ಶ್ರೀಮಂತ ಬದುಕಿನ ವ್ಯಾಮೋಹ ಆತನನ್ನು ಯಂತ್ರಗಳ ಗುಲಾಮನನ್ನಾಗಿ ಮಾಡುತ್ತದೆ. ನಾವು ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟುತ್ತಾ ನಮಗರಿವಿಲ್ಲದೇ ನಮ್ಮ ಸಮಾಧಿಯನ್ನು ತೋಡಿಕೊಳ್ಳುತ್ತಿದ್ದೇವೆ ಎನ್ನುತ್ತಾನೆ. ಥೊ ನ ಪ್ರಕಾರ ಎಕೊನಮಿ Economy ಎಂದರೆ ಅರ್ಥಶಾಸ್ತ್ರದ ಬಯಕೆ ಅಥವಾ ಬಡತನದ ವ್ಯಾಖ್ಯಾನವಲ್ಲ. ಬದಲಿಗೆ ಬದುಕಿನ ಪ್ರಾಯೋಗಿಕತೆಗಳು ಮತ್ತು ವ್ಯಕ್ತಿಗತ ನಿಯಂತ್ರಣ.

ಅಧ್ಯಾಯ “Where I Lived, and What I Lived for” ಹೇಳುತ್ತಾನೆ ಎಚ್ಚರವಾಗಿರುವುದೆಂದರೆ ಬದುಕುವುದು. ಅರೆ ಎಚ್ಚರವಾಗಿರುವವರನ್ನು ತಾನು ಕಂಡಿಲ್ಲ. ತಾನು ಕಾಡಿನ ಬದುಕನ್ನು ಆಯ್ದುಕೊಂಡ ಕಾರಣ ಬದುಕಿನ ನಿಜ ಅಗತ್ಯಗಳ ಅರಿಯಲು ಎಂದು ಹೇಳುತ್ತಾನೆ.

Economy ಮತ್ತು Shelter ನಲ್ಲಿ ಪ್ರಶ್ತುತ ಪಡಿಸುವ ಸಂಗತಿಗಳು ಆಧುನಿಕರೆನಿಸಿಕೊಂಡ ನಮಗೆ ನಿಜ ಪಾಠ ವೆನಿಸುತ್ತವೆ. ಆತ ವಾಲ್ಡನ್‌ನ ಆ ಕುಠೀರದಲ್ಲಿ ಸಂಪೂರ್ಣ ಸ್ವತಂತ್ರ. ತಾನಾರಿಗೂ ತಲೆ ಬಾಗಬೇಕಿಲ್ಲ. ಅವನ ಆ ಆಶ್ರಯಗುಡಿಸಲು ಸರ್ವರಿಗೂ ತೆರೆದ ಮನೆ. ಯಾರಾದರೂ ಬರಬಹುದು ಹೋಗಬಹುದು. ನಿಸರ್ಗದೊಂದಿಗೆ ಆತನ ಸಂಬಂಧ ಅಪ್ಯಾಯಮಾನ. ವಾಲ್ಡನ್ ಪೊಂಡಿನ ನ ಆ ಏಕಾಂತ ಕುಠೀರದಲ್ಲಿ ಬೀಸಿ ಬರುವ ಗಾಳಿಯು ಸ್ವರ್ಗೀಯ ಸಂಗೀತವನ್ನು ತೇಲಿ ತಂದಂತೆ ಅನಿಸುತ್ತದೆ. ಸೃಷ್ಠಿಯ ಉತ್ಕೃಷ್ಟತೆಯನ್ನು ವೀಕ್ಷಿಸುತ್ತಾ ಆತನಿಗೆ ತನ್ನ ಬದುಕು ಹೊಸತಾದಂತೆನಿಸುತ್ತದೆ. ಗಾಳಿಯ ಹಾಡು, ಹಕ್ಕಿಯ ಹಾಡು, ಜೊತೆಯಲ್ಲಿ ಸರೋವರದ ಗೆಳೆತನ ಆತನ ಬದುಕಿಗೆ ಇನ್ನಿಲ್ಲದ ಬಣ್ಣ ತುಂಬುತ್ತದೆ. ತೃಪ್ತ ಭಾವದ ಆ ಬದುಕು ನಾಗರಿಕ ಬದುಕಿಗಿಂತ ಎಷ್ಟೋ ಪಾಲು ಉತ್ತಮವೆನಿಸುತ್ತದೆ. ಮುಂದಿನ `Reading’ ಪ್ರಬಂಧದಲ್ಲಿ ವಾಲ್ಡನ್‌ನಲ್ಲಿ ಬದುಕುವ ಇನ್ನೊಂದು ಪ್ರಮುಖ ಲಾಭವನ್ನು ಉದಾಹರಿಸುತ್ತಾನೆ. “Reading is a difficult task, to read well, that is to read true books in a true spirit, is a noble exercise” ಆತನ ಓದಿಗೆ ಅಲ್ಲಿ ಯಾರಿಂದಲೂ ಭಂಗವಿಲ್ಲ. ಆತನ ಸಿಂಪಲ್ ಮನೆ ಯಾವ ವಿಶ್ವವಿದ್ಯಾಲಯಕ್ಕಿಂತ ಕಡಿಮೆಯಿಲ್ಲದ ಜ್ಞಾನವನ್ನು ಓದುವ ಅವಕಾಶವನ್ನು ಆತನಿಗೆ ಒದಗಿಸುತ್ತದೆ.

`Soltitude’ಹಾಗೂ `Visitor’ ಪ್ರಬಂಧಗಳಲ್ಲಿ ಸಾಮಾಜಿಕ ವಿಮುಖತೆಯ ಉಪಯೋಗವನ್ನು ಅರಹುತ್ತವೆ. ನಿಸರ್ಗದ ಜೊತೆಗಿನ ಬಾಂಧವ್ಯ ನಮ್ಮೆಲ್ಲ ಏಕಾಂಗಿತನ ಹಾಗೂ ಹೆದರಿಕೆಯನ್ನು ದೂರ ಮಾಡುತ್ತದೆ. ಮಾನವ ಸಂಬಂಧಗಳ ಬೆಸುಗೆ ಮತ್ತು ಭಿನ್ನತೆ ಯಶಸ್ಸು ಮತ್ತು ವಿಫಲತೆಗಳ ಆಧರಿಸಿದೆ. ಆದರೆ ಇಲ್ಲಿ ಹಾಗಿಲ್ಲ. `The Bean Field’, `The Pond’ ಇತ್ಯಾದಿಗಳು ಕೂಡ ಪ್ರಕೃತಿಯೊಂದಿಗಿನ ಅನುಬಂಧದ ಸಾರವನ್ನು ಕೇಂದ್ರವಾಗಿ ಬಣ್ಣಿಸುತ್ತವೆ. ಹೀಗೆ ವಾಲ್ಡನ್ ಪುನಃ ವಸಂತ ಋತುವಿನ ಆಗಮನದೊಂದಿಗೆ ನಿಸರ್‍ಗ ಹೊಸ ಬದುಕಿಗೆ ತೆರೆದುಕೊಳ್ಳುವ ಚಿತ್ರಣದೊಂದಿಗೆ ಕೊನೆಗೊಳ್ಳುತ್ತದೆ. ಸುಮಾರು ೧೮ ಪ್ರಬಂಧಗಳ ಸಂಗ್ರಹವಾದ ವಾಲ್ಡನ್ ಆತನ ಅನುಭವ ಕಥನ ಸಾರ. ಎಮರಸನ್ ಟ್ರಾನ್ಸೆಡೆಂಟಲಿಸಂನಿಂದ ಪ್ರಭಾವಿತನಾಗಿದ್ದ ಇತ ಮಾರ್ಚ ೬ ೧೮೬೨ರಲ್ಲಿ ತೀರಿಕೊಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಮದ ಗಾಳಿ ಬೀಸುವಾಗ ಕೋಲೇ
Next post ಸರಕಾರಿ ಕಛೇರಿ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…