ಇಂದು ನಿನ್ನೆಯಂತಿಲ್ಲ
ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ್ಲಾ ಅತ್ತರಿನ ಪರಿಮಳ ಬಿಟ್ಟು. ರಮಜಾನ್ ದಿನದ ಸಿರ್ಕುರಮಾ ಘಮಘಮಲು ನಮ್ಮನೆಯಲ್ಲೂ ತುಂಬಿಕೊಳ್ಳುತ್ತಿತ್ತು. ಬಂಡಿಹಬ್ಬದ ಬೆಂಡು ಬತ್ತಾಸು, ಕಜ್ಜಾಯಗಳೆಲ್ಲ ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು. […]