Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ ೯, ಜುಲೈ ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ ೯, ಜುಲೈ ೧೯೪೨

ಪ್ರೀತಿಯ ಕಿಟಿ,

ಬೇಕಾಬಿಟ್ಟಿಯಾಗಿ ಒಂದೊಂದು ಶಾಲಾ ಕೈಚೀಲ ಮತ್ತು ಶಾಪಿಂಗ್ ಬ್ಯಾಗುಗಳಲ್ಲಿ ಎಲ್ಲ ರೀತಿಯ ಸಾಮಾನುಗಳನ್ನು ತುರುಕಿಸಿಕೊಂಡು ನಾನು, ಡ್ಯಾಡಿ ಮತ್ತು ಮಮ್ಮಿ ಸುರಿಯುತ್ತಿರುವ ಮಳೆಯಲ್ಲಿಯೇ ನಡೆದೆವು.

ದಾರಿಯುದ್ದಕ್ಕೂ ಕೆಲಸಕ್ಕೆ ಹೊರm ಜನರ ಕರುಣೆಯ ನೋಟಗಳು ಎದುರಾದವು. ನಮಗೆ ಲಿಫ್ಟ್ ಕೊಡಲಾಗದ ಪರಿಸ್ಥಿತಿಗೆ ಅವರ ಮುಖದಲ್ಲಿಯ ಅಸಹಾಯಕತೆಯನ್ನು ನೀನು ಕಾಣಬಹುದಿತ್ತು. ಆಡಂಬರದ ಹಳದಿ ನಕ್ಷತ್ರಗಳು ಎಲ್ಲವನ್ನು ಹೇಳುತ್ತಿದ್ದವು.

ನಾವು ದಾರಿಯಲ್ಲಿ ಸಾಗುತ್ತ ಡ್ಯಾಡಿ, ಮಮ್ಮಿ ನಮ್ಮ ಯೋಜನೆಯನ್ನು ಸವಿಸ್ತಾರವಾಗಿ ಹೇಳಿದರು. ಕೆಲವು ತಿಂಗಳುಗಳ ಕಾಲ ನಮ್ಮ ಎಲ್ಲ ಸಾಮಾನು ಸರಂಜಾಮುಗಳು ಮತ್ತು ಜೀವನಾವಶ್ಯಕಗಳು ಸಾಧ್ಯವಾದಷ್ಟು ದೂರ ಸಾಗಿಸಲಾಗಿತ್ತು. ಅವೆಲ್ಲವೂ ನಮ್ಮ ಸಮ್ಮತಿಯ ಮೇರೆಗೆ ಆಗಿದ್ದು, ನಮ್ಮ ಜುಲೈ ೧೬ರ ಗುಪ್ತವಾಸಕ್ಕೆ ತಕ್ಕ ಮಟ್ಟಿಗೆ ನಮಗೆ ಸಹಾಯವಾಗುತ್ತಿದ್ದವು. ಈ ಯೋಜನೆ ಕಾಲ್ ಅಪ್ ಕಾರಣ ತ್ವರಿತವಾಗಿ ಆಗಬೇಕಿತ್ತು. ಹಾಗಾಗಿ ನಮ್ಮ ಕ್ವಾರ್ಟರ್ಸನ್ನು ಈ ಮೊದಲೇ ಸರಿಯಾಗಿ ಜೋಡಿಸಿಕೊಳ್ಳಲಾಗಿರಲಿಲ್ಲ. ಇದ್ದುದರಲ್ಲಿಯೇ ಉತ್ತಮವಾಗಿ ಮಾಡಿಕೊಳ್ಳಬೇಕಿತ್ತು. ನಮ್ಮ ಅಡಗು ತಾಣ ಬೇರಲ್ಲೂ ಆಗಿರದೇ ನನ್ನ ತಂದೆಯ ಕಚೇರಿಯ ಕಟ್ಟಡವೇ ಆಗಿತ್ತು. ಹೊರಗಿನವರಿಗೆ ಆ ಸ್ಥಳ ಇರುವುದು ತಿಳಿಯುವುದು ಕೂಡಾ ತೀರಾ ಕಷ್ಟ. ಮುಂದೆ ಆ ಬಗ್ಗೆ ಹೇಳುವೆ. ಡ್ಯಾಡಿ ಪರವಾಗಿ ಕೆಲಸ ಮಾಡಲು ಬಹಳ ಜನರಿರಲಿಲ್ಲ. ಕ್ರಲರ್, ಕೂಫಸ್, ಮೇಪ್ ಮತ್ತು ಇಪ್ಪತ್ಮೂರು ವರ್ಷದ ಟೈಪಿಸ್ಟಳಾದ ಎಲಿ ವೊಸನ್ ಇವರಿಗೆಲ್ಲ ನಾವು ಬರುವುದು ತಿಳಿದಿತ್ತು. ಆದರೆ ಗೋದಾಮಿನಲ್ಲಿ ಕೆಲಸ ಮಾಡುವ ಎಲಿ ವೊಸನ್ ತಂದೆ, ಮತ್ತು ಇಬ್ಬರು ಹುಡುಗರಿಗೆ ಈ ವಿಚಾರ ತಿಳಿದಿರಲಿಲ್ಲ.

ಆ ಕಟ್ಟಡ ಹೇಗಿತ್ತೆಂದು ವಿವರಿಸುವೆ.

ನೆಲ ಮಹಡಿಯಲ್ಲಿ ಸರಕುಗಳನ್ನು ಸಂಗ್ರಹಿಸುವ ದೊಡ್ಡ ಉಗ್ರಾಣವಿದೆ. ಮನೆಯ ಮುಂಬಾಗಿಲು ಉಗ್ರಾಣದ ಬಾಗಿಲಿನ ಪಕ್ಕಕ್ಕಿದೆ. ಮತ್ತು ಮುಂಬಾಗಿಲ ಒಳಗಿರುವ ಇನ್ನೊಂದು ಬಾಗಿಲು ಮಾಳಿಗೆಯ ಮೆಟ್ಟಿಲುಗಳ [A] ಕಡೆಗೆ ಕರೆದೊಯ್ಯುತ್ತದೆ.

ಮೆಟ್ಟಿಲುಗಳ ತುದಿಯಲ್ಲಿ ಇನ್ನೊಂದು ಬಾಗಿಲಿದ್ದು ಹಿಮಚ್ಛಾದಿತ ಗ್ಲಾಸ್ ಕಿಟಕಿಗಳ ಹೊಂದಿದ್ದು, ಅದರ ಮೇಲೆ ಆಫೀಸ್ ಎಂದು ಕಪ್ಪು ಅಕ್ಷರಗಳಲ್ಲಿ ಬರೆದಿತ್ತು. ದೊಡ್ಡ, ಬೆಳಕಿನಿಂದ ಕೂಡಿದ, ಭರ್ತಿಯಾಗಿರುವ ಅದೇ ಮುಖ್ಯ ಆಫೀಸಾಗಿತ್ತು. ಎಲಿ ವೊಸನ್, ಮೇಪ್, ಕೂಫಸ್ ಇವರೆಲ್ಲ ಅಲ್ಲಿಯೇ ದಿನದ ಹೊತ್ತು ಕೆಲಸ ಮಾಡುತ್ತಿದ್ದರು. ವಾರ್ಡರೋಬ್ ಮತ್ತು ದೊಡ್ಡ ದೊಡ್ಡ ಕಪಾಟುಗಳನ್ನು ಹೊಂದಿದ ಸಣ್ಣ ಡಾರ್ಕರೂಮ್ ಕತ್ತಲೆಯಿಂದ ಕೂಡಿದ ಎರಡನೇ ಆಫೀಸಿನ ಕಡೆ ಕರೆದೊಯ್ಯುತ್ತದೆ. ಕ್ರೇಲರ್ ಮತ್ತು ವ್ಯಾನ್ಡ್ಯಾನ್ ಅಲ್ಲಿ ಕುಳಿತಿರುತಿದ್ದರು . ಈಗ ಕೇವಲ ಕ್ರೇಲರ್ ಮಾತ್ರ ಅಲ್ಲಿರುತ್ತಾರೆ. ಪ್ಯಾಸೇಜ್ ಮೂಲಕ ಹೋದರೆ ಕ್ರೇಲರ್‌ರ ಆಫೀಸನ್ನು ಮುಟ್ಟಬಹುದು, ಆದರೆ ಅದು ಹೊರಗಿನಿಂದ ತೆಗೆಯಲಾಗದ ಕೇವಲ ಒಳಗಿನಿಂದ ಮಾತ್ರ ತೆಗೆಯಬಹುದಾದ ಗಾಜಿನ ಬಾಗಿಲಿನ ಮುಖಾಂತರ ಹೋದರೆ ಮಾತ್ರ.

ಮುಂದೆ ಕ್ರೇಲರ್ ಆಫೀಸಿನಿಂದ ಹೊರಟರೆ ಉದ್ದಕ್ಕೆ ಚಾಚಿದ ಕೋಲ್ ಸಂಗ್ರಹಣಾ ಉಗ್ರಾಣವಿದೆ. ಮೇಲಕ್ಕೆ ನಾಲ್ಕು ಹೆಜ್ಜೆ ಹೋದರೆ ಇಡೀ ಕಟ್ಟಡವನ್ನು ಕಾಣಬಹುದಾದ ಶೋರೂಮ್. ಪ್ರೈವೇಟ್ ಆಫೀಸು, ಕತ್ತಲು, ಸುಂದರವಾದ ಪೀಠೋಪಕರಣಗಳು, ನೆಲಹಾಸು, ಜಮಖಾನೆಗಳು, ರೇಡಿಯೋ, ಸ್ಮಾರ್ಟ ಲ್ಯಾಂಪು, ಎಲ್ಲವೂ ಸಖತ್ತಾಗಿವೆ.

ಮುಂದಿನ ಬಾಗಿಲಿರುವಲ್ಲಿ ಇರುವ ಆ ಕೋಣೆಯಲ್ಲಿ ಒಂದು ಬಿಸಿ ನೀರಿನ ನಲ್ಲಿ ಮತ್ತು ಗ್ಯಾಸ್ ಸ್ಟೋವ್ ಇದೆ. ಮುಂದಿನ ಬಾಗಿಲು W.C.[ಸಂಡಾಸ್ ಕಮ್ ಬಾತರೂಮ] ಅದೇ ಮೊದಲ ಮಹಡಿ.

ಕಟ್ಟಿಗೆಯ ಮೆಟ್ಟಿಲುಗಳು ಕೆಳ ಮೆಟ್ಟಿಲುಗಳ ಪ್ಯಾಸೇಜನ್ನು ಮುಂದಿನ ಮಹಡಿಗೆ ಕೊಂಡ್ಯೊಯ್ಯುತ್ತವೆ. [B]

ತುದಿಯಲ್ಲಿ ಸಣ್ಣದೊಂದು ಇಳಿದಾಣವಿದೆ. ಪ್ರತಿ ಇಳಿದಾಣದ ಕೊನೆಯಲ್ಲಿ ಬಾಗಿಲಿದೆ. ಎಡದ್ದು ಮನೆ ಮುಂದಿನ ಗೋದಾಮು ಹಾಗೂ ಮಾಳಿಗೆಗೆ ಕರೆದೊಯ್ಯುತ್ತದೆ. ಅವುಗಳಲ್ಲಿ ಒಂದು ಕಡಿದಾದ ಡಚ್ ಶೈಲಿಯ ಮೆಟ್ಟಿಲು, ಇನ್ನೊಂದು ಬಾಗಿಲುಗಳ ಪಕ್ಕದಲ್ಲಿದ್ದು ಸೀದಾ ಹೊರ ಓಣಿಗೆ ತೆರೆದುಕೊಳ್ಳುತ್ತವೆ.[C]

ಬಲಗೈಯಲ್ಲಿ ತೆರೆವ ಬಾಗಿಲು ನಮ್ಮನ್ನು [Secret Annexe] ಸೀದಾ ಗುಪ್ತಗೃಹದ ಕೋಣೆಗೆ ಕರೆದೊಯ್ಯುತ್ತದೆ. ಸಾದಾ ಬಣ್ಣಗೆಟ್ಟ ಬಾಗಿಲ ಹಿಂದೆ ಅಷ್ಟೊಂದು ಕೋಣೆಗಳಿರಬಹುದೆಂದು ಯಾರೊಬ್ಬರೂ ಊಹಿಸಲಾರರು. ಬಾಗಿಲ ಮುಂದೆ ಸಣ್ಣದೊಂದು ಮೆಟ್ಟಿಲು ಇದೆ. ಅದರ ಮೂಲಕ ನೀವು ಒಳಗೆ ಹೋಗಬಹುದು.

ಪ್ರವೇಶ ದ್ವಾರದ ವಿರುದ್ಧ ದಿಕ್ಕಿಗೆ ಕಡಿದಾದ ಮೆಟ್ಟಿಲುಗಳಿವೆ. ಎಡಕ್ಕೆ ಇರುವ ಸಣ್ಣ ಕಾಲುದಾರಿ ನಿಮ್ಮನ್ನು ಕೋಣೆಯೊಂದಕ್ಕೆ ಕರೆದೊಯ್ಯುತ್ತದೆ. ಅದು ಫ್ರಾಂಕ್ ಕುಟುಂಬದ ಬೆಡ್ ಕಮ್ ಸಿಟ್ಟಿಂಗ್ ರೂಮ್. ನಂತರದ ಬಾಗಿಲು ಮತ್ತೊಂದು ಚಿಕ್ಕ ಕೋಣೆಗೆ ಕರೆದೊಯ್ಯುತ್ತದೆ. ಅಲ್ಲಿ ಫ್ರಾಂಕ್ ಕುಟುಂಬದ ಇಬ್ಬರು ಎಳೆಯ ಹುಡುಗಿಯರ ಓದುವ ಮತ್ತು ಮಲಗುವ ಕೋಣೆ.

ಬಲದಿಕ್ಕಿಗೆ ಕಿಡಕಿಗಳಿಲ್ಲದ ಸಣ್ಣ ಕೋಣೆಯಿದೆ. ಅದು ವಾಸ್ ಬೆಸಿನ್ ಮತ್ತು ಸಣ್ಣ ಸಂಡಾಸ್ ಕಮ್ ಬಾತರೂಮ್ [W.C] ಕಂಪಾರ್‍ಟಮೆಂಟ್‌ನ್ನು ಹೊಂದಿದ್ದು ಅಲ್ಲಿರುವ ಇನ್ನೊಂದು ಬಾಗಿಲು ಕೂಡಾ ನನ್ನ ಮತ್ತ ,ಮಾರ್‍ಗೊಟ್‌ಳ ಕೋಣೆಗೆ ತೆರೆದುಕೊಳ್ಳುತ್ತದೆ. ನೀವು ಮೆಟ್ಟಿಲ ಏಣಿ ಏರಿ ಮೇಲಕ್ಕೇನಾದರೂ ಹೋಗಿ ಬಾಗಿಲು ತೆರೆದರೆ ನಿಮಗೆ ಅಚ್ಚರಿ ಹುಟ್ಟಿಸುವಂತಹ ಕಾಲುವೆಯ ಪಕ್ಕ ಇರುವ ಹಳೆಯ ಮನೆಯಂತಹ ದೊಡ್ಡ ಬೆಳಕಿನ ಕೋಣೆ ಇರುವುದು.

ಈ ಕೋಣೆಯಲ್ಲಿ ಗ್ಯಾಸ್ ಸ್ಟೋವ್ [ಅದು ಪ್ರಯೋಗಾಲಕ್ಕೆ ಬಳಕೆಯಾಗುತ್ತಿತ್ತು] ಮತ್ತು ಸಿಂಕ್ ಇದೆ. ಅದು ವ್ಯಾನ್ಡ್ಯಾನ್ ದಂಪತಿಗಳಿಗೆ ಅಡುಗೆ ಕೋಣೆ, ಅಲ್ಲದೇ ಲಿವಿಂಗ್ ರೂಮ್, ಡೈನಿಂಗ್ ಕೋಣೆ, ಸಣ್ಣ ಅಡುಗೆ ಕೋಣೆ ಇರುವುದು.

ಒಂದು ಅತಿ ಚಿಕ್ಕ ಜಗಲಿಯ ಕೋಣೆ ಪೀಟರ್ ವ್ಯಾನ್ಡ್ಯಾನ್‌ನ ಅಪಾರ್ಟಮೆಂಟಾಗಿದೆ. ಕೆಳಗಿನ ಇಳಿದಾಣದಲ್ಲಿ ದೊಡ್ಡ ಅಟ್ಟವಿದೆ. ನಾನೀಗ ಇಡೀ ಸುಂದರವಾದ ಸಿಕ್ರೆಟ್ ಎನೆಕ್ಷ್‌ನ್ನು ನಿನಗೆ ಪರಿಚಯಿಸಿದ್ದೇನೆ.

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...