Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಅಕ್ಟೋಬರ್ ೧, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಅಕ್ಟೋಬರ್ ೧, ೧೯೪೨

ಪ್ರೀತಿಯ ಕಿಟಿ,

ನಿನ್ನೆ ನನಗೆ ನಿಜಕ್ಕೂ ಆಘಾತವಾಗಿತ್ತು. ಸುಮಾರು ಎಂಟು ಗಂಟೆಗೆ ಒಮ್ಮೇಲೆ ಕರೆಗಂಟೆ ಜೋರಾಗಿ ಸದ್ದಾಯಿತು. ಖಂಡಿತ ಯಾರಾದರೂ ಬಂದಿರಬೇಕೆಂದು ನಾನು ಊಹಿಸಿದೆ. ನಾನು ಯಾರಿರಬಹುದೆಂದು ಊಹಿಸಿರಬಲ್ಲೇ ಎಂಬುದನ್ನು ನೀನು ಕಲ್ಪಿಸಿಕೊಳ್ಳುವೆಯಾ? ಅದ್ಯಾರೋ ಪೋಸ್ಟ ಮ್ಯಾನ್ ಅಥವಾ ಚಿಂದಿ ಆಯುವವರಿರಬಹುದೆಂದು ಯಾರೋ ಹೇಳಿದ ಮೇಲೆ ನಾನು ತಣ್ಣಗೆ ಕುಳಿತೆ.

ಇಲ್ಲಿಯ ದಿನಗಳು ಸ್ತಬ್ಧವಾಗಿ ಕಳೆದುಹೋಗುತ್ತಿವೆ. ಕ್ರೇಲರ್‌ರಿಗೆ ಅಡುಗೆಯವನಾಗಿ ಲೆವಿನ್ ಎಂಬ ಕೆಮಿಸ್ಟ ಹಾಗೂ ಔಷಧ ವಿತರಣೆಗಾರ ಕೆಲಸ ಮಾಡುತ್ತಾರೆ. ಅವರಿಗೆ ಈ ಸಂಪೂರ್ಣ ಕಟ್ಟಡದ ಸಂಪೂರ್ಣ ಮಾಹಿತಿ ಇರುವುದರಿಂದ ಅವರೆಲ್ಲಾದರೂ ಈ ಹಳೆಯ ಪ್ರಯೋಗಾಲಯದಲ್ಲಿ ತಮ್ಮ ತಲೆಯನ್ನು ಇಣುಕಿ ಹಾಕಿದರೆ ಎಂಬ ಭಯ ನಮ್ಮದು. ಅದಕ್ಕಾಗಿಯೇ ನಾವೆಲ್ಲ ಇಲಿಗಳಷ್ಟು ಸ್ತಬ್ಧ. ಮೂರು ತಿಂಗಳ ಹಿಂದೆ ಕೂತಲ್ಲಿ ಕೂರದ ಪಾದರಸದಂತೆ ಚುರುಕಾಗಿದ್ದ ಆನ್ ಹೀಗೆ ಗಂಟೆಗಟ್ಟಲೇ ಕುಳಿತಲ್ಲೇ ಕುಳಿತಿರಬಹುದೆಂದು ಯಾರೂ ಊಹಿಸಿರಲಿಲ್ಲ. ಮತ್ತೇನು ಹೆಚ್ಚಿಗೆ ಸಾಧ್ಯವಿತ್ತು?

೨೯ನೇ ತಾರೀಖು ಶ್ರೀಮತಿ ವ್ಯಾನ್ಡ್ಯಾನ್‌ರ ಬರ್ತಡೇ. ಅದನ್ನು ವೈಭವದಿಂದ ಆಚರಿಸಲು ನಮ್ಮಿಂದ ಸಾಧ್ಯವಿರಲಿಲ್ಲ. ಹಾಗಾಗಿ ಸಣ್ಣದೊಂದು ಪಾರ್ಟಿಯನ್ನು ಆಕೆಯ ಹೆಸರಿನಲ್ಲಿ ಇಟ್ಟುಕೊಂಡೆವು ಅದರೊಂದಿಗೆ ವಿಶೇಷವಾಗಿ ಚೆಂದದ ಊಟ. ಅವರಿಗೆ ಕೆಲವು ಉಡುಗೊರೆಗಳು ಮತ್ತು ಹೂ ಬೊಕೆಗಳು ನೀಡಿದೆವು. ಅದರಲ್ಲಿ ಕೆಂಪು ಬಣ್ಣದ ಗಿಡವೊಂದನ್ನು ಅವರು ಗಂಡನಿಂದ ಪಡೆದರು. ಅದೊಂದು ಕೌಟಂಬಿಕ ಸಂಪ್ರದಾಯವೆನ್ನಿಸುತ್ತದೆ. ಶ್ರೀಮತಿ ವ್ಯಾನ್ಡ್ಯಾನ್‌ರ ಬಗ್ಗೆ ಹೇಳಬೇಕೆಂದರೆ ಅದಕ್ಕೂ ಮುಂಚೆ ಸ್ವಲ್ಪ ಸಂಭಾಳಿಸಿಕೊಳ್ಳುವೆ, ನಿನಗಿದನ್ನು ಹೇಳಲೇಬೇಕು. ಆದೇ ಅವರು ಆಗಾಗ ಡ್ಯಾಡಿಯೊಂದಿಗೆ ಮೋಜು ಮಾಡಲು ಪ್ರಯತ್ನಿಸುವುದನ್ನು ನೋಡಿದರೆ ನನಗೆ ವಿಪರೀತ ಕಿರಿಕಿರಿಯಾಗುತ್ತದೆ. ಆಗಾಗ ಡ್ಯಾಡಿಯ ಮುಖ ಮತ್ತು ತಲೆಯ ಮೇಲೆ ಮೊಟಕುವುದು, ತನ್ನ ಸ್ಕರ್ಟನ್ನು ಸುಖಾಸುಮ್ಮನೇ ಮೇಲಕ್ಕೆ ಎಳೆದಂತೆ ಮಾಡುವುದು ಹೀಗೆ ನಾಟಕ ಮಾಡುತ್ತ ಪಿಮ್‌ನ ಗಮನವನ್ನು ಸೆಳೆಯಲು ಪ್ರಯತ್ನಿಸುವುದು, ಹೀಗೆ ಏನೆಲ್ಲಾ ಮಾಡಿದರೂ ಪುಣ್ಯಕ್ಕೆ ಪಿಮ್ ಅದನ್ನು ಆಕರ್ಷಣೆಯೆಂದಾಗಲೀ ಇಲ್ಲ ತಮಾಷೆಯೆಂದಾಗಲೀ ಗ್ರಹಿಸಲೇ ಇಲ್ಲ. ಹಾಗಾಗಿ ಅವರೆಂದೂ ಆ ಚೆಂಡಾಟಕ್ಕೆ ಮುಂದಾಗಲಿಲ್ಲ. ಮಮ್ಮಿ ಎಂದೂ ವ್ಯಾನ್ಡ್ಯಾನ್ ಅಂಕಲ್‌ರ ಜೊತೆ ಹಾಗೆ ನಡೆದುಕೊಂಡಿಲ್ಲ. ಹೀಗೆಂದು ನಾನು ಶ್ರೀಮತಿ ವ್ಯಾನ್ಡ್ಯಾನ್‌ರ ಮುಖಕ್ಕೆ ಹೊಡೆದಂತೆ ಹೇಳಿಯೂ ಬಿಟ್ಟೆ.

ಆಗಾಗ ಪೀಟರ್ ತನ್ನ ಚಿಪ್ಪಿನಿಂದ ಹೊರಬರುತ್ತಾನೆ. ಆಗ ಸ್ವಲ್ಪ ತಮಾಷೆಯಾಗಿರುತ್ತದೆ. ನಮ್ಮಿಬ್ಬರಲ್ಲಿ ಯಾವಾಗಲೂ ಒಂದು ಸಾದೃಶ್ಯತೆ ಇದೆ. ಎಲ್ಲರೂ ಅದನ್ನು ನೋಡಿ ಸಂತೋಷ ಪಡುವರು. ಅದೆಂದರೆ ನಾವಿಬ್ಬರೂ ಚೆನ್ನಾಗಿ ಬಟ್ಟೆ ಧರಿಸುವುದರಲ್ಲಿ ಪ್ರವೀಣರು. ಆತ ಶ್ರೀಮತಿ ವ್ಯಾನ್ಡ್ಯಾನ್‌ರ ಒಂದು ತೀರಾ ಚಿಕ್ಕದಾದ ಬಟ್ಟೆಯೊಂದನ್ನು ತೊಟ್ಟುಕೊಂಡು ಬಂದರೆ, ನಾನು ಆತನ ಸೂಟು ತೊಟ್ಟಿದ್ದೆ. ಆತ ಹ್ಯಾಟ್ ಹಾಕಿಕೊಂಡಿದ್ದ. ನಾನು ಕ್ಯಾಪ್ ಧರಿಸಿದ್ದೆ. ದೊಡ್ಡವರೆಲ್ಲ ನಮ್ಮನ್ನು ನೋಡಿ ಬಿದ್ದು ಬಿದ್ದು ನಕ್ಕರು. ನಾವು ಕೂಡಾ ಅವರಷ್ಟೇ ಮಜಾ ಅನುಭವಿಸಿದೆವು. ಎಲಿ ವೊಸನ್‌ಳು ಮಾರ್‍ಗೊಟ್‌ಳಿಗೆ ಮತ್ತು ನನಗೆ ಬಿಜೆನ್‌ಕಾರ್ಫನಿಂದ ಹೊಸ ಸ್ಕರ್ಟ ತಂದಿದ್ದಳು. ಬಟ್ಟೆ ಗೋಣಿಚೀಲದಂತೆ ಬಹಳ ಒರಟಾಗಿತ್ತು.. ಕ್ರಮವಾಗಿ ಒಂದಕ್ಕೆ ೨೪ ಫ್ಲಾರಿನ್ಸ್ ಗಳು ಇನ್ನೊಂದಕ್ಕೆ ೭.೫೦ ಫ್ಲಾರಿನ್ಸ್. ಎಂಥೆಂಥ ವ್ಯತ್ಯಾಸಗಳನ್ನು ಯುದ್ಧದ ಮೊದಲು ನೋಡಬಹುದು ನೋಡು?

ಇನ್ನೊಂದು ಚೆಂದದ ಸಂಗತಿ ಎಂದರೆ ನಾನ್ಯಾವತ್ತೂ ನನ್ನತನವನ್ನು ಕಾಪಾಡಿಕೊಳ್ಳುವೆ. ಎಲಿ ವೊಸನ್ ರಹಸ್ಯ ಶಾಲೆಯ ಮೂಲಕ ದೂರಶಿಕ್ಷಣದ ಶಾರ್ಟಹ್ಯಾಂಡ್ ಕೋರ್ಸಿಗೆ ಮಾರ್‍ಗೊಟ್, ಪೀಟರ್ ಮತ್ತು ನನಗೆ ವ್ಯವಸ್ಥೆ ಮಾಡಿದ್ದಾಳೆ. ಮುಂದಿನ ವರ್ಷಕ್ಕೆ ನಾವೆಷ್ಟು ನಿಪುಣರಾಗುವೆವು ಎಂಬುದನ್ನು ನೀನೇ ನೋಡುವಿಯಂತೆ. ಸಂಕೇತದಲ್ಲಿ ಬರೆಯುವುದು ಯಾವುದೇ ವಿಚಾರದ್ದಾಗಿದ್ದರೂ ಬಹಳ ಮಹತ್ವದ್ದು.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...